ಭಾವ ಭೈರಾಗಿ

ಕವಿತೆ | ರಕ್ತ ನಮ್ಮದಾದರೇನು? ಅವರದಾದರೇನು?

Published

on

 

ರಕ್ತ ನಮ್ಮದಾದರೇನು? ಅವರದಾದರೇನು?
ಒಟ್ಟಿನಲ್ಲದು ಮನುಷ್ಯರದ್ದೇ.
ಯುದ್ಧ ಪೂರ್ವದಲ್ಲಾದರೇನು? ಪಶ್ಚಿಮದಲ್ಲಾದರೇನು?
ಒಟ್ಟಿನಲ್ಲಿ ಕುಸಿಯುವುದು ಶಾಂತಿನಿಕೇತನವೇ.

ಬಾಂಬುಗಳು ಮನೆಯ ಮೇಲೆ ಬಿದ್ದರೇನು?
ದೂರದ ಗಡಿಯಲ್ಲಾದರೇನು?
ಭೂಮಿಯ ಹೊಲಿಗೆಗಳು ಘಾಸಿಗೊಳ್ಳುತ್ತವೆ
ಬೆಂಕಿಬಿದ್ದ ಹೊಲ ನಮ್ಮದಾದರೇನು? ಅವರದಾದರೇನು?
ಸುಡುಬೆಂಕಿಗೆ ಸಕಲ ಜೀವಗಳು ತತ್ತರಿಸುತ್ತವೆ.

ಟ್ಯಾಂಕುಗಳು ಮುನ್ನುಗ್ಗಿದರೇನು?
ಹಿಂದೆ ಸರಿದರೇನು?
ಭೂತಾಯಿ ಒಡಲು ಬರಿದಾಗುತ್ತದೆ
ವಿಜಯದ ಸಂಭ್ರಮವಾದರೇನು? ಸೋಲಿನ ಸೂತಕವಾದರೇನು?
ಬದುಕು ಗೋರಿಯಲ್ಲಿ ಅವಿತು ಕಣ್ಣೀರಿಡುತ್ತದೆ.

ಯುದ್ಧವೇ ಸಮಸ್ಯೆಯಾಗಿರುವಾಗ
ಯುದ್ಧ ಹೇಗೆ ಸಮಸ್ಯೆಗಳ ಬಗೆಹರಿಸೀತು
ಇಂದು ರಕ್ತ ಮತ್ತು ಬೆಂಕಿಗಳ ಮಳೆ ಸುರಿಸುತ್ತವೆ
ನಾಳೆ ಹಸಿವು ಮತ್ತು ಕ್ಷಾಮಗಳು ಬೆಳೆಯುತ್ತವೆ
ಆದ್ದರಿಂದ ಸಜ್ಜನರೇ
ಯುದ್ಧವು ಹಿಂದೆ ಸರಿದು ಇಲ್ಲವಾದರೆ ಚಂದ
ನಮ್ಮ ನಿಮ್ಮ ಅಂಗಳದಲ್ಲಿ ದೀಪ ಬೆಳಗಿದರೆ ಚಂದ.

ಹಿಂದಿ ಮೂಲ : ಸಾಹಿರ್ ಲೂಧಿಯಾನ್ವಿ
ಅನುವಾದ : ಶಿವಸುಂದರ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version