ಭಾವ ಭೈರಾಗಿ
ಕವಿತೆ | ಅನುಭವ
- ಸಿದ್ಧಲಿಂಗಪಟ್ಟಣಶೆಟ್ಟಿ
ಮಲಗಿತ್ತು ನೋವಿನ ಕೂಸು ಹೂವ ಹಾಸಿಗೆಯಲ್ಲಿ
ರಮ್ಯ ಕಾವ್ಯದ ಎಲ್ಲ ಲಕ್ಷಣಗಳುಳ್ಳ ಮುಖ
ನವ್ಯತೆಯ ರೋಮಾಂಚ ಅಧರಪುಟ. ನಗೆಯಲ್ಲಿ
ಬಂಡಾಯ ಚಂಡಿಕೆ ಬಿಟ್ಟು ಮಂತ್ರ ಸೂಸುವ ಸುಖ.
ಯಾರದೋ ಕೂಸು. ಆದರೂ ಕೂಸು, ಮಾತನಾಡಿಸಬೇಕು. ಸಂಬಂಧಗಳು ಸೂಕ್ಷ್ಮ. ಕೆಡದಿರಲಿ. ಯಾಕಂದರೆ
ಕಲಿ ಕಾಲ, ಎಲ್ಲರಲಿ ಮಧುರ ಬಾಂಧವ್ಯ ಲೇಸು ತೋರಿಸುವುದಕ್ಕಾದರೂ ಸರಿ, ಹರಿದಿರಲಿ ಕಣ್ಣಿನ ಪೊರೆ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ನುಡಿದವರ ಅನುಭವ. ಪ್ರತಿಯೊಂದು ಅನುಭವ ಹೊಸದರ ಮುಂದೆ ಹಳೆಯ ಶವ ವ್ಯಕ್ತಿ ಬೆಳೆದಂತೆ ಶಕ್ತಿ ಬದಲಾದಂತೆ ಬದುಕು ಬೆಳಕಿನ ಬುಗ್ಗೆ. ಯಾರು ಬೇಕಾದರೂ ಎಷ್ಟಾದರೂ ಬಯಸಿ ಹಾಕಲಿ ಲಗ್ಗೆ.
ಒಂದೊಂದು ಹೆಜ್ಜೆ ಮುನ್ನಡೆದು ಕಂಡೆ ಅಳುತಿತ್ತು ಹೂವು ಎದೆಯ ಅಳುಕಿನ ಗೋಡೆಯನ್ನೇರಿ ನಗುತಿತ್ತು ನೋವು.
(‘ಕನ್ನಡ ಸಾನೆಟ್ ಸಂಗ್ರಹ‘ ಪುಸ್ತಕದಿಂದ ‘ಸಿದ್ಧಲಿಂಗಪಟ್ಟಣಶೆಟ್ಟಿಯವರ ‘ಅವುಭವ‘ ಸಾನೆಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪುಸ್ತಕದ ಸಂಪಾದಕರು : ಎಚ್.ಎಸ್.ವೆಂಕಟೇಶಮೂರ್ತಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243