ಭಾವ ಭೈರಾಗಿ

ಕವಿತೆ | ಒಬ್ಬ ರಂಗಕರ್ಮಿ ಕಮ್ಯುನಿಸ್ಟನಿಗೆ

Published

on

  • ಮೂಲ : ಬೆರ್ಟೋಲ್ಟ್ ಬ್ರೆಕ್ಟ್ |ಅನುವಾದ: ಶಾ. ಬಾಲುರಾವ್

ಕೋಟಿನ ಗುಂಡಿತೂತಲ್ಲೊಂದು ಹೂ ಸಿಕ್ಕಿಸಿ
ಕುರ್ಫುಸ್ಟೆರ್ನ್ ಡಾಮ್ ಮಹಾಮಾರ್ಗದಲ್ಲಿ ಹೊರಟ
ಈ ಯುವಕನಿಗೆ ಜಗತ್ತು
ಶೂನ್ಯವೆನಿಸುತ್ತದೆ.
ಕಕ್ಕಸ್ಸಿನಲ್ಲಿ ಕೂತಾಗ
ಅದು ಸ್ಪಷ್ಟವಾಗುತ್ತದೆ:
ಅವನು ಶೂನ್ಯದಲ್ಲಿ ಹೇಲುತ್ತಿದ್ದಾನೆ.

ಅವರಪ್ಪ ಮಾಡಿದ್ದಕ್ಕೆಲ್ಲ
ಬೇಸತ್ತು
ಅವನು ಕೆಫೆಗಳನ್ನು ಹೊಲಸೆಬ್ಬಿಸುತ್ತಾನೆ
ದಿನಪತ್ರಿಕೆಗಳ ಹಿಂದಿನಿಂದ ನಸುನಗುತ್ತಾನೆ.
ಅದು ಅವನೇ,
ಈ ಜಗತ್ತನ್ನು ತುಳಿದುಹಾಕುವವನು
ತೊಪ್ಪೆಗುಂಡಿಯನ್ನು ತುಳಿದಂತೆ.

ತಿಂಗಳಿಗೆ ಮೂರು ಸಾವಿರ ಮಾರ್ಕು ಕೊಟ್ಟರೆ
ಜನತೆಯ ದುಃಖಕಷ್ಟಗಳನ್ನು
ರಂಗಕ್ಕೆ ತರಲು ಅವನು ಸಿದ್ಧ
ದಿನಕ್ಕೆ ಮೂರು ಮಾರ್ಕಾದರೆ
ಜಗತ್ತಿನ ಅನ್ಯಾಯಗಳನ್ನು
ಆಡಿಸಿ ತೋರಿಸುತ್ತಾನೆ.

(ಬೆರ್ಟೋಲ್ಟ್ ಬ್ರೆಕ್ಟ್ ಎಂಬತ್ತು ಕವಿತೆಗಳು, ಅನುವಾದ: ಶಾ.ಬಾಲುರಾವ್. ಈ ಪುಸ್ತಕದಿಂದ ಕವಿತೆಯನ್ನು ಆಯ್ಜೆಮಾಡಿಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version