ದಿನದ ಸುದ್ದಿ

ಕವಿತೆ | ಏಜಾಕ್ಸ್ ಸಿಂದೂ ನೆಲದಲಿ ಪ್ರವೇಶಿಸಿದ ಪ್ರೇತ..!

Published

on

  • ಟಿ.ಎಸ್. ರಾಜೇಂದ್ರ ಪ್ರಸಾದ್, ದಾವಣಗೆರೆ

ಏಜಾಕ್ಸ್
ಯಾರ ಕಲ್ಪನೆಯ ಕೂಸು ನೀನು
ಸಿಂದೂನೆಲ ಪ್ರವೇಶಿಸಿದ ಪ್ರೇತ ನರರಾಕ್ಷಸ
ಕೆಲವು ಗಂಡಸರ ಸಂವೇದನೆಯಲ್ಲೇಕೆ ನುಸುಳಿದ್ದೀಯಾ?
ಅಸಂಗತ ಬಂಧನ ಬೆಸೆಯುವ ಆಸೆಗಳಿಗೇಕೆ ಮುನ್ನುಡಿ ಬರೆದಿರುವೆ?

ಅಪ್ಪಮಗಳ, ತಾಯಿ ಮಗನ, ಅಕ್ಕ ಅಣ್ಣನ ತಮ್ಮತಂಗಿಯ
ಕರುಳುಬಳ್ಳಿಗಳನ್ನೇಕೆ ಚಿವುಟಿರುವೆ
ಮನೋವ್ಯಾಕುಲನೇ,
ವಿಕೃತಿಕಾಮಿಯೇ ಬಹುಕೃತ ದೋಷಿಯೇ
ಸಿಂದೂನೆಲ ಸಂಸ್ಕೃತಿಯನ್ನೇಕೆ ಸುಡುತಿರುವೆ?
ದುರುಳ ದುಶ್ಯಾಸನ, ದುರ್ಯೋಧನ, ಕೀಚಕ,
ರಾವಣ, ಕಂಸರ ಸಂತತಿ ಉಲ್ಬಣಿಸುತ್ತಲೇ
ಅಮಾಯಕ ಹೆಂಗಸರ ಕಣ್ಣಿರುಗಳಿಗೇಕೆ
ಮತ್ತೆ ನದಿಗಳನು ಕೂಡಿಸುತ್ತಿರುವೆ?

ಇನ್ನೆಷ್ಟು ನಿನ್ನ ವಿಕೃತ ಲೋಲು ಸುಟ್ಟುಕೊಳ್ಳಬೇಕು
ಕೆಟ್ಟ ನಿನ್ನ ಆಸೆಗಳ ಬೀಜಗಳನ್ನೇಕೆ ಇಲ್ಲಿ ನೆಟ್ಟಿರುವೆ.
ಎಷ್ಟೋ ದ್ರೌಪದಿ, ಸೀತೆಯರು
ಬಳಲಿದ್ದಾರೆ ಕಣ್ಣೀರುಗಳಿಂದ!
ಗAಡಸಿನ ಕುಲಕೆ ಅಪವಾದ
ಧರ್ಮಯೀನ ಕಟುಕನಾಗಿ
ವಿಕಟಕಾಮಿ
ಮತಿಗೆಟ್ಟ ಮೃಗವಾಗಿ
ಅಟ್ಟಹಾಸಗೈಯುತ್ತಿರುವ ಏಜಾಕ್ಸ್
ನಿನ್ನ ಪ್ರೇತವೇಕೆ ರುದ್ರನಾಟ್ಯವಾಡುತಿದೆಯಿಲ್ಲಿ!

ಎದೆಯೊಳಗೆ ಅವ್ಯಕ್ತ ಶೋಕ ಸಮುದ್ರ
ಎದುರಿಸಲಾರದ ಅಸಹಾಯಕತೆ ಕರುಳುಬಂಧ !
ಕುಂದಿಸಲಾರದ ಕುದಿ ಕೆನತವಿದೆ
ಎಷ್ಟೋ ರಾತ್ರಿ ಭೀಕರ ನರಳುತ್ತಿವೆ
ಕುತ್ತಿಗೆಯೊಳಗೆ ಕಟ್ಟಿಕೊಂಡ ಅಳುವಿನ ಬಣವೆಗಳಿವೆ !
ನಿನಗೆ ಗೊತ್ತಿಲ್ಲ
ಪ್ರತಿಕ್ಷಣ ಹತ್ತಿ ಉರಿಯುತಿವೆ ನಿನ್ನಂತಹ ಗಂಡರ ರಕ್ಕಸತನಕೆ!
ಎಷ್ಟೋ ಹೆಣ ನೇಣುಹಗ್ಗದಲಿ ನೇತಾಡುತಿವೆ
ಎಷ್ಟೋ ಹೆಣ ವಿಷಪ್ರಾಸನದಲಿ ಮಲಗಿವೆ
ಹೆಣ ಹೂಣಲು ನಿರ್ಲಕ್ಷಿಸುವ ನೆಲದಲಿ
ಏಜಾಕ್ಸ್ ತೊಲಗು ಮತ್ತೆ ನುಸುಳದಿರು ಹಸುಳೆಯರ ಜೀವನದಲಿ!

ನಿನ್ನ ಪರಿಣಯಕೆ ನನ್ನ ಕಣ್ಣ ಹನಿ !
ಕ್ಷಮಿಸುಬಿಡು ಹುಡುಗಿ, ನಿನ್ನ ವ್ಯಥೆಯ ಆಳದಲಿ
ಕತ್ತಲ ಕಥೆ ಬೆಳೆಯುತಿದೆ!
ಓದಬಲ್ಲೆ ನಿನ್ನ ಕಣ್ಣು ತುಳುಕಿಸುವ ನೋವಿನ
ಅಕ್ಷರ ಮಾತ್ರ!

ಹೆಣೆಯಲಾರೆ ಕಣ್ಣೀರು ಹಿಮಗಡ್ಡೆಗಳಡಿಯಲಿ
ಭೀರಕ ಕ್ಷಣಗಳನು!
ತೇವವಿಲ್ಲದ ಪದಗಳ ಪೋಣಿಸಲಾರೆ!

ಕೌರ್ಯ ಆಮಿಷ ಹಾವುಗಳಿಗೆ
ಪ್ರನೋಟ್ ಬರೆಯಲಾರೆ ಮಸಣದಲಿ !
ನಿನ್ನ ಪರಿಣಯಕೆ ಜಗದ ಕನಿಕರಕೆ
ಸೊರಗಿವೆ ಭಾವಹಕ್ಕಿ!

ಪ್ರತಿ ಅಕ್ಷರ ಕರುಳನು ಹಿಂಡುವ
ನಿನ್ನೊಂದಿಗೆ ತಬ್ಬಿಕೊಂಡು ಮಲಗಿದ ಶೋಕಬೆಟ್ಟ!
ಭೀಕರ ಮೌನ ಕಾಡ್ಗಿಚ್ಚಿನಲಿ
ಭಿಕಾರಿ ಬದುಕೊಳಗೆ ಭೂಪಂಕನ,
ಕಂಬನಿ ನದಿ ವಿಜೃಂಬಿಸಿವೆ!
ಕರುಳು ಕತ್ತರಿಸುವ ಮನುಕುಲ ಕಥೆ ನಿರಂತರ ಮರುಹುಟ್ಟುತ್ತಲೇ ಇವೆ!

ಕವಿ ಟಿ.ಎಸ್. ರಾಜೇಂದ್ರ ಪ್ರಸಾದ್

ಎದೆಸುಡುವ ಸತ್ಯ, ದಿಕ್ಕೆಡಿಸುವ ಮಿಥ್ಯ
ಹಗಲ ಸತ್ಯಕೆ ಸೂರ್ಯ ಚಂದ್ರನಕ್ಷತ್ರಾಧಿ ಕುಸಿದಿದ್ದಾರೆ!

ಸುಡುವ ವರ್ತಮಾನ ತಲ್ಲಣಿಸುತಿರಲು,
ಬಂಧನ ಜೀವನ್ಮರಣ ಬೇಯುತಿರಲು!
ಮೃಗೀಯ ಏಜಾಕ್ಸ್ನ ಪ್ರೇತ ಕುಣಿಯುತಿದೆ!

ಬದುಕೇ ಮೃಗಜಲ! ಹಾಲಾಹಲ! ಅಲ್ಲೂಲಕಲ್ಲೋಲ!
ಮಬ್ಬು ಮುಸುಕಿದೆ ಬೊಬ್ಬೆಯಿಟ್ಟು !
ಕದ್ದಿಂಗಳ ಕತ್ತಲು ಎಲ್ಲಿಹುದೋ ದಾರಿ!
ಕಬ್ಬಿಣ ಕೋಳ ತೋಳವಾಗಿ ನುಂಗುತಿರಲು
ಖೆಡ್ಡದಲಿ ಕೆಂಡ ನಿಗಿನಿಗಿಸಿ
ಮಗುಚಿ ಕಾರ್ಮೋಡ
ಕಳಚಿ ಆಗಸ
ಯಮ ನಿಂತಿರಲು ನಿನ್ನ ಮುಂದೆ
ನನ್ನ ಪ್ರಾರ್ಥನೆ ಇಷ್ಟೇ…..!
ಬರಬೇಕು ಕೃಷ್ಣ, ಕಥೆಗೊಂದು ಕೊನೆ
ಅವನ ಶ್ರೀಚಕ್ರಕೆ ದುರಳರ ಬಲಿ ಕೊಡಬೇಕು!
ಅಷ್ಟೇ..
ನಿನ್ನ ಪರಿಣಯಕೆ ನನ್ನ ಕಣ್ಣ ಹನಿ !

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version