ಅಂತರಂಗ
ಕವಿತೆಯ | ಸಿದ್ದಪುರುಷನಿಗೊಂದು ನಮನ
ಎಲ್ಲಿ ಹೋದೆ
ಓ ಹೂ ಮನಸ್ಸೇ
ನಿನ್ನ ಕಾಣದ ಕಣ್ಗಳು
ಬಾಡಿದ ಪುಷ್ಪಗಳಾಗಿವೆ
ಓ ಚೈತನ್ಯವೇ ಮರೆಯಾದೆಯಾ?
ಕೋಟಿ ಹೃದಯದಲ್ಲಿ
ಆರದ ನಂದಾದೀಪವಾಗಿರುವೆ
ಇಹರು ನೋಡಿ ಕಲಿಯಬೇಕಿದೆ
ನಿನ್ನ ವ್ಯಕ್ತಿತ್ವದಾಭರಣವನು
ಯಾರು ತೊಡಲಾರರು
ಯಾರು ಅಲಂಕರಿಸಲಾರರು
ಸಿದ್ದರಲ್ಲಿ ನೀ ಸಿದ್ದಿಸಿಕೊಂಡ ವಿದ್ಯೆ
ಕಠಿಣ ಸಿದ್ದಿಯ ಪರಿಶ್ರಮವೇ ಅಹುದು
ನಾಳೆಯ ಬೇಳಗುವ ಸಹಸ್ರ ಸೂರ್ಯರ
ಆಶಾ ಕಿರಣವೇ ನೀನಾಗಿರುವೆ
ಇದ್ದಷ್ಟು ದಿನ
ಯಾರ ಉರಿಯ ನಾಲಿಗೆಗೂ ಸಿಗದ
ಜೇನಾದೆ
ಮತಬೇದವೆಂದು ನಿನ್ನ
ಮೈ ತಾಗಲಿಲ್ಲ
ಮೇಲುಕೀಳು ಅರಿಷಡ್ವರ್ಗಗಳನು
ಮೆಟ್ಟಿ ನಿಂತ
ನಿಜವಾದ ಸಿದ್ದಪುರುಷನು ನೀ
ಎಂಬ ಸತ್ಯವನ್ನು ಅರಿತ
ಯೋಗಿಯು ನೀನಾದೆ
ದ್ವೇಷ ಅಸೂಯೆ ಐಶ್ವರ್ಯಗಳು
ಸೋತು ನಿನ್ನ ಕಾಲ್ಕಣಗಳಾದವು
ಪ್ರೇಮ ಬಾಂದವ್ಯ ವಾತ್ಸಲ್ಯ
ಎಲ್ಲವೂ ನಿನ್ನ ವಿಭೂತಿಯಾದವು
ಸಿದ್ದರಲ್ಲಿ ನೀ ಸಿದ್ದಿಪುರುಷನೇ ಸೈ
ಸಿದ್ದಗಂಗಾ ಮಠದ
ಶಿವಶ್ರೇಷ್ಟನು ನೀ
ತ್ರಿವಿಧ ದಾಸೊಹಿ
ಅನಾಥರ ನಾಥ ನೀನು
ಇಷ್ಟಲಿಂಗ ಪೂಜೆಗೈವ ತಪೋಹಿನಿ
ಶತಾಯುಷಿಯಾಗಿ ಅನ್ನಯಜ್ಞಕೈಗೊಂಡ
ನಿತ್ಯ ದಾಸೋಹಿ
ಸಾವಿರ ಕುಮಾರರ ರತ್ನಗಳ ಒಡೆಯ
ನೀ ಶಿವಕುಮಾರ ಸ್ವಾಮೀಜಿ
ನಿಮಗಿದೊ ಕೋಟಿ ಕೋಟಿ ಪ್ರಣಾಮಗಳು.
-ಸಾಗರಿ(ಪುಷ್ಪಲತ)
ಸುದ್ದಿದಿನ.ಕಾಂ|ವಾಟ್ಸಾಪ್|9986715401