ಭಾವ ಭೈರಾಗಿ

ಕವಿತೆ | ರಿವಾಯತ (ಮೊಹರಂ ಪದ)

Published

on

 

ಶರಣರು ಶಹೀದರಾದರು
ಯಝೀದ ಕುತಂತ್ರಕೆ
ಕರ್ಬಲ ಕಂಪಿಸಿತು
ಹಜರತ ಹುಸೇನರ ಬಲಿದಾನಕೆ

ನೆತ್ತರು ಹರಿಸಿದರು ನೆಲಕೆ
ಹಸುಗೂಸು ಅಸ್ಗರ ನೆತ್ತಿಹಾರಿದ್ದಿಲ್ಲ
ಮಮ್ಮಲ ಮರುಗಿತು ಭೂಮಿ ರಕ್ತ ಹೀರಲಿಲ್ಲ
ಕಿರುಚಿದರೂ ಗಂಟಲಿಗೆ ನೀರು ಸಿಗಲಿಲ್ಲ
ತಾಯಿಕರುಳಕಂಡು ಸೂರ್ಯಸ್ಥವಾಗಿತಲ್ಲ

ಹರಿಶಿಣ ಮೈಯ ಕಾಸೀಮ ನಡೆದ
ಕರ್ಬಲಕೆ ಜೀವ -ಜೀವದಾಕೆ ಕಬರಿಲ್ಲ
ಹಡೆದಾಕೆ ಅಪ್ಪಣೆ -ಕೈಹಿಡಿದಾಕೆ ಗಪ್ಪನೆ
ಧರ್ಮಯುದ್ಧಕೆ ಪ್ರಾಣ ಬಾಣಕೆ ನೆಟ್ಟು
ಮೈಯ ಹರಿಶಿಣ ಕೆಂಪಾತು ಮದುಮಗನ
ಬಿಟ್ಟ ಕಣ್ಣು ಬಿಟ್ಟಂಗ

ದೋ ರಕಾತ ನಮಾಜ ಯಝೀದ ಅವಾಜ
ಸಿಜದದಾಗ ಕತ್ತಿ ಹಿರಿದನು ಹಜರತ ಹುಸೇನರಿಗೆ
ಪ್ರಾಣ ಬಿಟ್ಟನು ಯಝೀದ ಜನರ ಕೈಯಾಗ
ಶರಣರು ಜೀವಂತ ಜನರ ಮನಸಿನಾಗ.

 -ಸನಾವುಲ್ಲ ನವಿಲೇಹಾಳ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version