ದಿನದ ಸುದ್ದಿ

ಸಿಹಿಮೂತ್ರ ರೋಗಿಗಳಿಗೆ ಇಲ್ಲಿವೆ ಕೆಲವು ಟಿಪ್ಸ್ ಗಳು

Published

on

ಸಿಹಿಮೂತ್ರ ರೋಗಿಗಳು ಪ್ರತಿದಿನ ಎರಡು ದಿನಗಳ ಕಾಲ ಕರಿಬೇವಿನ ಸೊಪ್ಪನ್ನು ಸೇವಿಸುವುದರಿಂದ ರೋಗವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಊಟದ ಜೊತೆ ಕರಿಬೇವಿನ ಸೊಪ್ಪು ಬಳಕೆ ಮಾಡುವುದರಿಂದ ಸಿಹಿಮೂತ್ರ ರೋಗ ಬರದಂತೆ ತಡೆಯಬಹುದು ಹೀಗೆ ಸಿಹಿ ಮೂತ್ರವನ್ನು ತಡೆಯಬಹುದು.ಆಲೂಗೆಡ್ಡೆಯ ಸೇವನೆಯಿಂದ ರೋಗ ಉಲ್ಬಣವಾಗುವುದು.ಅಕ್ಕಿಯಲ್ಲಿ ತಯಾರಿಸಿದ ಪದಾರ್ಥಗಳನ್ನು ಮಿತವಾಗಿ ಸೇವಿಸಬೇಕು.

ಖಾಲಿ ಹೊಟ್ಟೆಯಲ್ಲಿ ತಾಜಾ ಟೊಮೇಟೊ ರಸಕ್ಕೆ ಕಾಳು ಮೆಣಸಿನಪುಡಿ, ಉಪ್ಪು ಬೆರೆಸಿ ಕುಡಿಯುವುದರಿಂದ ಸಕ್ಕರೆ ರೋಗ ದೂರವಾಗುವುದು.ಹಾಗಲಕಾಯಿಯ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ದೂರವಾಗುವುದು.ನೇರಳೆ ಹಣ್ಣಿನ ಕಾಲದಲ್ಲಿ ನೇರಳೆ ಹಣ್ಣನ್ನು ಸೇವಿಸಿ ಇದರಿಂದ ಸಿಹಿ ಮೂತ್ರ ರೋಗ ಹತೋಟಿಯಲ್ಲಿಡುವುದು.ಪ್ರತಿನಿತ್ಯ ಅಮೃತಬಳ್ಳಿಯ ರಸವನ್ನು ಕುಡಿಯುವುದರಿಂದ ಸಿಹಿ ಮೂತ್ರ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.ಕಡಲೆಬೀಜದ ಸೇವನೆಯಿಂದ ಸಿಹಿ ಮೂತ್ರ ರೋಗವನ್ನು ಹತೋಟಿಯಲ್ಲಿಟ್ಟುಕೊಳ್ಳಲುಬಹುದು.ಸಕ್ಕರೆ ಕಾಯಿಲೆ ಪ್ರಾರ್ಥಮಿಕ ಹಂತದಲ್ಲಿರುವಾಗ ಒಂದು ಹಿಡಿ ಉದ್ದಿನ ಬೇಳೆಯನ್ನು ಮೊಳಕೆ ಕಟ್ಟಿ ಅದಕ್ಕೆ ಹಾಗಲಕಾಯಿ ರಸ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ವಾಸಿಯಾಗುವುದು.

ಮೆಂತ್ಯೆಯ ಸೇವನೆಯಿಂದ ಸಿಹಿ ಮೂತ್ರ ರೋಗವನ್ನು ದೂರ ಮಾಡಬಹುದು ಮೆಂತ್ಯ ದೋಸೆ, ಮೆಂತ್ಯ ಗೊಜ್ಜು ಮಾಡಿ ಸೇವಿಸಿ. ಸಿಹಿ ಮೂತ್ರ ರೋಗಿಗಳಿಗೆ ಬೆಟ್ಟದ ನೆಲ್ಲಿಕಾಯಿ, ಹಾಗಲಕಾಯಿ, ನೇರಳೆ ಹಣ್ಣಿನ ಚೂರ್ಣವನ್ನು ಮಾಡಿಟ್ಟುಕೊಳ್ಳಿ, ಪ್ರತಿನಿತ್ಯ ಒಂದು ಚಮಚದಂತೆ ಸೇವಿಸುವುದರಿಂದ ಸಿಹಿಮೂತ್ರ ರೋಗ ನಮ್ಮ ಕೈ ಮೀರಿ ಹೋಗುವುದಿಲ್ಲ.ಸಿಹಿಮೂತ್ರ ರೋಗ ಪ್ರಾರ್ಥಮಿಕ ಹಂತದಲ್ಲಿರುವಾಗ ಬೇವಿನ ಎಲೆಯನ್ನು ಬಿಡಿಸಿ ಶುಚಿಯಾಗಿ ತೊಳೆದುಕೊಂಡು ನೀರಿಗೆ ಹಾಕಿ ಕುದಿಸಿ ನೀರು ಒಂದು ಲೋಟಕ್ಕೆ ಬಂದ ನಂತರ ಕಷಾಯ ತಯಾರಾಗಿದೆ ಎಂದು ತಿಳಿದುಕೊಳ್ಳಬಹುದು, ತಣ್ಣಗಾದ ಕಷಾಯಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿ ಹೀಗೆ ಸುಮಾರು ಒಂದು ತಿಂಗಳ ಕಾಲ ಮಾಡಿ ಆಗ ರೋಗ ಉಲ್ಬಣಗೊಳ್ಳುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version