ಭಾವ ಭೈರಾಗಿ

ಕವಿತೆ | ನೀ ಬಿರುಸಾಗಿ ಬಾರದಿರು

Published

on

  • ನಾಗವೇಣಿ.ಈ

ಬಿರುಸಾಗಿ ನೀ ಬಾರದಿರು
ನಿನ್ನ ಪ್ರೀತಿಸುವವರು ನಾವೆಲ್ಲ
ನೀನು ತೋರಿದ ರೌದ್ರ ನಾಟ್ಯಕ್ಕೆ
ನಲುಗುತ್ತಿದೆ ಜಗವೆಲ್ಲ

ನೀ ಬರದೆ ನಿಲ್ಲಬೇಡ
ಬರುವ ಮುನ್ನ ನಿನ್ನ ಕರುಣೆ ತೋರ
ನೀ ಬಾರದಿದ್ದರು ನಲುಗುತ್ತವೆ
ಸಕಲ ಜೀವರಾಶಿ ಚರಾಚರ

ನೀ ಬಂದಾಗ ತೋರ ಬೇಡ
ನಿನ್ನೊಳಗಿನ ಅತಿತನವ
ನಿನ್ನ ನರ್ತನದ ಆವೇಶಕ್ಕೆ
ಭೂ ತಾಯಿಯು ಕಂಪಿಸಿದ್ದಾಳೆ

ನೀ ಬರುವ ಮುನ್ನ ಕಣ್ತೆರುದು ನೋಡ
ಇಲ್ಲಿ ತುತ್ತು ಅನ್ನಕ್ಕೂ ದಿನವಿಡಿ
ದಣಿವ ಹಸಿದೊಡಲುಗಳಿವೆ
ಮುರುಕಲು ಜೋಪಡಿಗಳಿವೆ

ಗೊತ್ತು ನಿನ್ನ ಕೋಪದ ಕಾರಣ
ಪ್ರಕೃತಿಯ ಕೊಂದವರ ಮೇಲಿನ
ನಿನ್ನೊಡಲ ಆರ್ತನಾದನ
ಆದರೆ ನಿನ್ನ ಕೋಪದ ಫಲವುಂಡವರವರಲ್ಲ

ಮತ್ತೇ ನೀ ಬರುವ ಮುನ್ನ
ಶಾಂತನಾಗಿ ಬಾರ
ಮನುಕುಲವ ಕ್ಷಮಿಸಿ
ನೀ ಮಳೆಯಾಗಿ ಬಾರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version