ಲೈಫ್ ಸ್ಟೈಲ್
ರೆಸಿಪಿ | ದಕ್ಷಿಣ ಕನ್ನಡದ ಸಾಂಪ್ರದಾಯಿಕ ಅಡುಗೆ ‘ಬಾಳೆಕಾಯಿ ಹಸಿ’ ; ನಾಲಗೆಗೆ ರುಚಿ, ದೇಹಕ್ಕೆ ತಂಪು..!
- ಶಶಿಕಲಾ ಸುನೀಲ್, ಗಾಯಕಿ, ಬೆಂಗಳೂರು
‘ಬಾಳೆಕಾಯಿ ಹಸಿ‘ ಇದು ದಕ್ಷಿಣ ಕನ್ನಡದ ಸಾಂಪ್ರದಾಯಕ ಅಡುಗೆ. ಪ್ರತಿನಿತ್ಯ ಬಳಸುವ ವಾಡಿಕೆ ಇಂದಿಗೂ ಇದೆ. ಇದೇ ವಿಧಾನ ಬಳಸಿ ಬೇರೆ ತರಕಾರಿಯೊಂದಿಗೂ ಮಾಡಬಹುದು. ಜೀರ್ಣ ಕ್ರಿಯೆಗೆ ಹಾಗೂ ದೇಹ ತಂಪಾಗಿಡಲು ಸಹಕಾರಿ.
ಬೇಕಾಗುವ ಸಾಮಗ್ರಿಗಳು
- ಬಾಳೆಕಾಯಿ
- ಮೊಸರು
- ಕಾಯಿತುರಿ – 4 ಸ್ಪೂನ್
- ಹಸಿಮೆಣಸಿನಕಾಯಿ – 3
- ಸಾಸಿವೆ – ಅರ್ಧ ಚಮಚ
- ಅರಿಶಿನ – ಚಿಟಕೆ
- ಈರುಳ್ಳಿ – 1(ಚಿಕ್ಕದು)
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಎಣ್ಣೆ – 1 ಚಮಚ
- ಇಂಗು – ಚಿಟಕೆ
- ಉಪ್ಪು ರುಚಿಗೆ
ಮಾಡುವ ವಿಧಾನ
ಅರ್ಧ ಪೀಸ್ ಬಾಳೆಕಾಯಿಯನ್ನು ಮೆತ್ತಗೆ ಬೇಯಿಸಿ ಸಿಪ್ಪೆ ತೆಗೆದು ಮ್ಯಾಷ್ ಮಾಡಿ. ಬೇಕಿದ್ದಲ್ಲಿ ಕುಕ್ಕರ್ ನಲ್ಲಿ ಒಂದು ವಿಶೆಲ್ ಕೂಗಿಸಿ. ಮಿಕ್ಸಿ ಜಾರಿಗೆ ಕಾಯಿತುರಿ, ಚಿಟಿಕೆ ಅರಿಶಿನ,ಹಸಿಮೆಣಸಿನಕಾಯಿ, ಕಾಲು ಚಮಚ ಸಾಸಿವೆ ಹಾಕಿ ರುಬ್ಬಿ ಮ್ಯಾಷ್ ಮಾಡಿದ ಬಾಳೆಕಾಯಿಗೆ ಹಾಕಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೊಸರು ಹಾಕಿ. ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಹಾಕಿ.ಚಪಾತಿ, ಅಕ್ಕಿ ರೊಟ್ಟಿ, ಅನ್ನ, ಮುದ್ದೆಯೊಂದಿಗೆ ಸವಿಯಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243