ಭಾವ ಭೈರಾಗಿ
ಕವಿತೆ | ಕಲಿಯಲು ಮತ್ತು ಕಾರ್ಯೋನ್ಮುಖರಾಗಲು ಎದ್ದೇಳಿ
- ಸ್ವತಃ ಸಾವಿತ್ರಿ ಬಾಫುಲೆಯವರೇ ರಚಿಸಿದ ಒಂದು ಕವನ, ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ. ಈ ಕವಿತೆಯನ್ನು”ಕಬ್ಯ ಫುಲೆ” ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಪ್ರಕಟಣೆ: 1854
-ಸಾವಿತ್ರಿ ಬಾಫುಲೆ
ಕನ್ನಡಕ್ಕೆ : ಅಲೆಮಾರಿ
ಬಲಹೀನರೇ ಮತ್ತು ದಬ್ಬಾಳಿಕೆಗೊಳಪಟ್ಟವರೇ
ಎದ್ದೇಳಿ ನನ್ನ ಸೋದರರೇ
ಗುಲಾಮಗಿರಿಯ ಜೀವನದಿಂದ ಹೊರಬನ್ನಿರಿ
ಮನು-ಹಿಂಬಾಲಕ ಪೇಶ್ವೆಗಳು
ಸತ್ತು ತೊಲಗಿದರು
ಮನುವೇ ನಮಗೆ ಶಿಕ್ಷಣವನ್ನು
ನಿಷೇಧಿಸಿದ್ದು
ಜ್ಞಾನ ನೀಡುವ ಆಂಗ್ಲರು
ಬಂದಿರುವರು
ಕಲಿಯಿರಿ, ನಿಮಗೆ ಈ
ಸಹಸ್ರಮಾನದಲ್ಲೆ ಅವಕಾಶವಿರಲಿಲ್ಲ
ನೀವು ಕಲಿಯಿರಿ ಮತ್ತು
ನಿಮ್ಮ ಮಕ್ಕಳಿಗೆ ಕಲಿಸಿರಿ
ಜ್ಞಾನ ಪಡೆಯಿರಿ, ತಾರತಮ್ಯವನರಿಯಲು
ಜಾಣರಾಗಿರಿ.
ಮತ್ಸರದ ಕಿಡಿ ಉರಿಯುತ್ತಿದೆ
ನನ್ನ ಆತ್ಮದಲ್ಲಿ
ಅಳುತ್ತಿದೆ ಜ್ಞಾನಕ್ಕಾಗಿ
ಅದೇ ಎಲ್ಲವಾಗಿ
ಈ ಕೊಳೆತ ಗಾಯ
ಜಾತಿಯ ಗುರುತು
ಅಳಿಸುವೆ ಕಡೆಗೊಂದು ದಿನ
ನನ್ನ ಜೀವನದಲ್ಲಿ.
ಬಲಿರಾಜನ ರಾಜ್ಯದಲ್ಲಿ
ಜಾಗೃತರಾಗುವ
ನಮ್ಮ ಶ್ರೇಷ್ಠ ಬಾವುಟ
ಹಾರುತ್ತಿದೆ ಮತ್ತು ಪ್ರಜ್ವಲಿಸುತ್ತಿದೆ
“ಕಷ್ಟ ದೂರವಾಗಲಿ ಮತ್ತು
ಬಲಿ ರಾಜ್ಯ ಬರಲಿ”
ಎಂದು ನಾವು ಹೇಳುವ
ಏಳಿ, ಎದ್ದೇಳಿ ಮತ್ತು ಶಿಕ್ಷಿತರಾಗಿ
ಸಂಪ್ರದಾಯ ಮರಿಯಿರಿ
ಮುಕ್ತಿಯನ್ನು ಹೊಂದಿರಿ
ಬರುವೆವು ನಾವು ಒಟ್ಟಾಗಿ
ಮತ್ತು ಕಲಿಯುವೆವು
ರಾಜನೀತಿ-ಸರಿದಾರಿ-ಧರ್ಮವ
ನಿದ್ರಿಸದಿರಿ ಆದರೆ
ಊದಿರಿ ಕಹಳೆಯ
ಓ ಬ್ರಾಹ್ಮಣ, ಕಸಿವಿಸಿಯಾದೀಯ ಜೋಕೆ
ರಣಕಹಳೆ ಊದಿರಿ
ಬೇಗನೆ ಎದ್ದೇಳಿರಿ
ಕಲಿಯಲು ಎದ್ದೇಳಿ
ಮತ್ತು ಕಾರ್ಯೋನ್ಮುಖರಾಗಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243