ಭಾವ ಭೈರಾಗಿ
ಕವಿತೆ | ಮೂ(ಲ)ಕ ವೇದನೆ
- ರಚೀ ನೇಸರ ಚೀಳಂಗಿ, ಚಿತ್ರದುರ್ಗ
ಬಳಲುತ್ತಿದ್ದರೂ ದೇಹ
ಬಿಡದೇ ಬೆಂಬತ್ತಿದೆ ಮೋಹ
ಹಣದಾಸೆಯೋ
ಸ್ಥಾನದಾಸೆಯೋ
ಈ ಭರತದೋಳು ಬಿಟ್ಟರೆ
ಬೇರಾರೂ ಇಲ್ಲ ನನ್ನ ವಿನಹ
ಸುಕ್ಕು ಮಡಿಕೆ ಬಿದ್ದು
ಸೊಕ್ಕು ಎಗರಿ ಎದ್ದು
ಬೀರುತ್ತಿದೆ
ಚೀರುತ್ತಿದೆ
ಸತ್ಯದ ಕೂಗು ಮುಚ್ಚಲು
ಮಿಥ್ಯದ ಸಾಗು ಆರ್ಭಟಿಸಲು
ಮಾತಿನಲ್ಲೇ ಮಂತ್ರ
ತಿಳಿಯದಾಗದ ತಂತ್ರ
ಚಿಗುರುತ್ತಿದೆ
ಬೆಳೆಯುತ್ತಿದೆ
ಕಪ್ಪಿನಲ್ಲಿ ಬಿಳುಪು
ಕಾಲ ಸ್ತಬ್ಧ ಕಪ್ಪು
ಸಗಣಿಯ ಹುಳು
ಎರೆಮಣ್ಣಿನ ಹುಳು
ಓಂಕಾರಿಸುತ್ತಿದೆ
ಝೇಂಕರಿಸುತ್ತಿದೆ
ಪಸರಿಸಿದೆ ದುರ್ವಾಸನೆ
ಕುಸಿದಿದೆ ಸುವಾಸನೆ
ಮೀರಿದೆ ಕಾಲ
ಸ್ತುತಿ ಬದಲಾಗಲ್ಲ
ಸಮಯ ಬೇಕು
ಬದಲಾಗಬೇಕು
ಕಾಯುವ ತಾಳ್ಮೆಯಲ್ಲಿ
ತನ್ನ ತಪ್ಪಿನ ಅರಿವಿನಲ್ಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243