ಭಾವ ಭೈರಾಗಿ
ಕವಿತೆ | ಮಾಯಾಲೋಕ
- ವಿಜಯ್ ನವಿಲೇಹಾಳ್
ಮಾಯಾಲೋಕದಲ್ಲಿ
ಮನಸಿಗೆ ಬಣ್ಣ ಹಚ್ಚಿ
ನಟಿಸುವವರು
ನಂಬಿದವರ ಮನೆಗೆ
ಬೆಂಕಿಹಚ್ಚಿ ತಮ್ಮ ಮನೆಯಲ್ಲಿ
ಅನ್ನ ಬೇಯಿಸಿಕೊಂಡು
ಆರಾಮಾಗಿ ಉಂಡು ಮಲಗುತ್ತಿದ್ದಾರೆ.
ಮುಖಕ್ಕೆ ಬಣ್ಣ ಹಚ್ಚಿ ನಟಿಸುವವರು
ತುತ್ತು ಅನ್ನಕ್ಕಾಗಿ;
ಕೊಂಚ ಮಲಗುವ ಜಾಗಕ್ಕಾಗಿ
ಬೀದಿಬೀದಿ ಸುತ್ತುತ್ತಿದ್ದಾರೆ.
ಇಲ್ಲಿಹಚ್ಚಿಕೊಳ್ಳುವ ಬಣ್ಣಕ್ಕಿಂತ
ಬಣ್ಣ ಹಚ್ಚಿಕೊಳ್ಳುವ ಮನುಷ್ಯರು
ತುಂಬಾ ವಿಭಿನ್ನವಾಗಿ ಕಾಣಿಸುತ್ತಾರೆ.
ಬಣ್ಣಗಳಲಿ ಬಂಧಿಯಾಗಿರುವ
ಮನಸು ಮುಖಗಳ ಭಾವನೆಗಳಿಗೆ
ಸ್ಪಂದಿಸುವ ನಾವುಗಳು ಬದಲಾಗಬೇಕು
ಆಗ ತಾನೆ ಈ ಸಮಾಜ ಬದಲಾಗಲು ಸಾಧ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243