ದಿನದ ಸುದ್ದಿ
ಸಿರಿಗೆರೆಯಲ್ಲಿ ಜಾನಪದ ಲೋಕ ಸೃಷ್ಟಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಸುದ್ದಿದಿನ ಡೆಸ್ಕ್ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಶ್ರದ್ಧಾಂಜಲಿ ಸಮಾರಂಭಕ್ಕೆ ನಿನ್ನೆ ಚಾಲನೆ ದೊರೆತಿದ್ದು. ಜಾನಪದ ಸೊಗಡಿನ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನದ ಆಕರ್ಷಣೆಗೆ ಕಾರಣವಾಗಿವೆ.ರಾತ್ರಿಯ ಕಾರ್ಯಕ್ರಮದಿ ಸಾವಿರಾರು ಶರಣ ಬಂಧುಗಳ ಮೆಚ್ಚುಗೆಗೆ ಪಾತ್ರವಾದ ಬಯಲು ಸೀಮೆಯ ಮಕ್ಕಳು ಕರಾವಳಿಯ ಯಕ್ಷಗಾನ ಕಲೆಯನ್ನು ಅತ್ಯಂತ ಸೊಗಸಾಗಿ ಸಾದರಪಡಿಸಿದ್ದು.ಇದರ ಜೊತೆ ವಚನ ಮತ್ತು ಜಾನಪದ ನೃತ್ಯಗಳು ಸಭಿಕರನ್ನು ಮಂತ್ರಮುಗ್ದರನ್ನಾಗಿಸಿದವು.
ಶಿವ ಶಿವ ಶಿವ ಎಂಬ ಮಂತ್ರವ ಜಗದೊಡನೇ ಹರಡಿ
ಶಿವಬಸವನೊಲುಮೆಯ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಶ್ರದ್ದಾಂಜಲಿ ಸಮಾರಂಭ ನಿನ್ನೆಯಿಂದ ಆರಂಭವಾಗಿದ್ದು. ಮಹಾಗುರುವಿನ ಐಕ್ಯಮಂಟಪದ ಆವರಣದಲ್ಲಿ ಪ್ರತಿದಿನ ಮುಂಜಾನೆ ಶಿವಮಂತ್ರಲೇಖನಕಾರ್ಯಕ್ರಮವನ್ನುಆಯೋಜಿಸಲಾಗಿದೆ.ನಿನ್ನೆಯ ಪ್ರಾತಃಕಾಲದಿ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಶಿವಮಂತ್ರಲೇಖನದ ಮೂಲಕ ಶಿವಸ್ತುತಿ ಧ್ಯಾನದ ಸಮಯದಿ ಕಂಡುಬಂದ ಮನೋಹರವಾದ ದೃಶ್ಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401