/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಭದ್ರಾವತಿಯ ಅರೆಕೆರೆಯಲ್ಲಿ ಇಂದು ಸಂಜೆ ಮೇಳೈಸಲಿದೆ ತರಳಬಾಳು ಜಾನಪದ ಸಿರಿ 2018 ರ ಸಾಂಸ್ಕೃತಿಕ ಸಂಜೆ

Published

on

ಸುದ್ದಿದಿನ ಡೆಸ್ಕ್ : ಬಹು ನಿರೀಕ್ಷೆಯ ಹೊಸ ಆಯಾಮದೊಂದಿಗೆ, ಮತ್ತೊಷ್ಟು ಬದಲಾವಣೆಗಳನ್ನು ಮೈ ತುಂಬಿಕೊಂಡು,ಸಾಂಸ್ಕೃತಿಕ ಕನ್ನಿಕೆಯ ಕುವರಿಯಂತಿರುವ “ತರಳಬಾಳು ಜಾನಪದ ಸಿರಿಸಂಭ್ರಮ” 350 ಮಕ್ಕಳು ಸಂಭ್ರಮ ಮತ್ತು ಅಪರಿಮಿತ ಉತ್ಸಾಹದಿ ಜಾನಪದ ಲೋಕಕ್ಕೆ ಸರ್ವರನ್ನು ಕರೆದೊಯ್ಯಲು ಸಜ್ಜಾಗಿದ್ದಾರೆ. ಕಳೆದ ವರ್ಷದ ಅಭೂತಪೂರ್ವಯಶಸ್ಸಿನ ಮಜಲು ಏರಿ ರಾಜ್ಯ, ಹೊರ ರಾಜ್ಯಗಳ ಎಲ್ಲಾ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಭ್ರಮದ ಸ್ಮರಣೀಯ ಸ್ವರ್ಗ ಸೃಷ್ಟಿಸಿ ಎಲ್ಲರ ಜನಮಾನಸದಿ ಮೆಚ್ಚುಗೆ ಗಳಿಸಿದ ಜಾನಪದ ಸಿರಿ ಸಂಭ್ರಮ ಈ ವರ್ಷದ ಪ್ರದರ್ಶನ ನೀಡಲು ಸನ್ನದ್ದವಾಗಿದೆ.

ಹಲವಾರು ಪ್ರದರ್ಶನಗಳ ಸಾರ್ಥಕ ಅಭಿನಯದ ಮೂಲಕ ಜನ ಮನ್ನಣೆಗಳಿಸಿರುವ ಸಿರಿ ಸಂಭ್ರಮದ ಮುಖ್ಯ ಉದ್ದೇಶವೇ ಆಧುನಿಕತೆಯ ಭರಾಟೆಯ ನಾಗಲೋಟದ ಈ ಕಾಲದಲ್ಲಿ ನಮ್ಮ ಪೂರ್ವಜರ ಸೃಷ್ಟಿ ಮತ್ತು ಸಂಸ್ಕೃತಿಯ ಸೃಜನಶೀಲ ಸಾಂಸ್ಕೃತಿಕ ಜಾನಪದೀಯ ಕಲಾ ಪ್ರಕಾರಗಳು ನಶಿಸಿ ಹೋಗುತ್ತಾ ಇತಿಹಾಸದ ಗರ್ಭಕ್ಕೆ ದಾಖಲಾಗುವ ಅಪಾಯಕಾರಿ ಬೆಳವಣಿಗೆಯನ್ನು ತಡೆಯುವ ಸಾಂಸ್ಕೃತಿಕ ಕೈಂಕರ್ಯವಾಗಿದೆ.

ಜತನಿಂದ ಜೊತೆಗಿದ್ದ ಕಲಾ ಸೊಬಗನ್ನು ನಮ್ಮ ಯುವ ಜನಾಂಗಕ್ಕೆ ಪರಿಚಯಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಹಂಚುವ ಆಶಯದಿ ಬೀಜಾಂಕುರವಾಗಿದ್ದೇ ” ತರಳಬಾಳು ಜಾನಪದ ಸಿರಿ ಸಂಭ್ರಮ “. ಕಳೆದ 6 ದಶಕಗಳಿಂದಲೂ ಶರಣ ಸಾಹಿತ್ಯ, ವಚನ ಪ್ರಸಾರ, ನಾಟಕಗಳ ರಚನೆ ಪ್ರದರ್ಶನ, ವೀರಗಾಸೆ ಸ್ಪರ್ಧೆ, ಭಜನೆ ಮೇಳಾ,ಸೋಬಾನೆ ಪದ ಸ್ಪರ್ಧೆ ಹೀಗೆ ಸಾವಿರಾರು ಕಾರ್ಯಕ್ರಮಗಳ ಮೂಲಕ ದೇಶದಾದ್ಯಂತ ಕನ್ನಡ ನಾಡಿನ ಸಾಂಸ್ಕೃತಿಕ ಸೊಬಗನ್ನು ದೇಶದಾದ್ಯಂತ ಪ್ರದರ್ಶಸಿ ಅರ್ಥಪೂರ್ಣ ಶರಣ ಸಂದೇಶ ಸಾರಿದ ಹಿರಿಮೆಯ ಹೆಗ್ಗಳಿಕೆ ತರಳಬಾಳು ಕಲಾಸಂಘಕ್ಕಿದೆ.

ಪರಮ ಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಸಾಂಸ್ಕೃತಿಕ ಸಂಕಲ್ಪದ ಆಶಯ ಮತ್ತು ದಿವ್ಯ ಮಾರ್ಗದರ್ಶನದಂತೆ ನವ ಮನ್ವಂತರದ ಹೊಸತನವೆಂಬಂತೆ ತರಳಬಾಳು ಕಲಾಸಂಘ ಕಳೆದ ವರ್ಷದಿಂದ ಜಾನಪದ ಸಿರಿ ಸಂಭ್ರಮದ ಹೆಸರಲ್ಲಿ ಸಂಸ್ಕೃತಿಯ ರಾಯಭಾರಿಯ ಸ್ಥಾನವನ್ನು ತುಂಬಲು ಯಶಸ್ವಿಯಾಗಿ ದಾಟಿ ಎರಡನೇ ವರ್ಷದಲ್ಲೂ ಈಗಾಗಲೇ ಹತ್ತಾರು ಪ್ರದರ್ಶನ ನೀಡಿರುವ ತಂಡ ಇಂದು ದಿನಾಂಕ ಸಂಜೆ ಉಕ್ಕಿನ ನಗರಿ ಭದ್ರವಾತಿ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿನ ಶ್ರೀ ಅರೆಕಲ್ಲಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಜೆ 6.00ಗಂಟೆಗೆ ಜರುಗಲಿದೆ. ಜಾನಪದ ಕಲಾ ಪ್ರಕಾರಗಳ ಮೂಲಕ ಸ್ವರ್ಗ ಸೃಷ್ಟಿಸುವ ನಮ್ಮ 350 ಮಕ್ಕಳ ಶ್ರಮದ ಸಾಕ್ಷಾತ್ಕಾರವು 25 ನೃತ್ಯ ವೈವಿಧ್ಯಗಳಲ್ಲಿ ಅವಿರ್ಭವಿಸಲಿದೆ. ಅಪರೂಪದ ಈ ಸಾಂಸ್ಕೃತಿಕ ಸಂಜೆಗೆ ನಿವೆಲ್ಲಾ ಸಾಕ್ಷಿಯಾಗಬೇಕೆಂಬ ಅಪೇಕ್ಷೆ ನಮ್ಮದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version