ದಿನದ ಸುದ್ದಿ

‘ಸಿಯೋಲ್‌ ಜಾಗತಿಕ ಸಮ್ಮೇಳನ’ಕ್ಕೆ ತರಳಬಾಳು ಶ್ರೀ ಜಗದ್ಗುರುವರ್ಯರು

Published

on

ಸುದ್ದಿದಿನ, ಸಿರಿಗೆರೆ: ದಕ್ಷಿಣ ಕೋರಿಯಾದ ಸಿಯೋಲ್‌ನಲ್ಲಿ ‘ಶಾಂತಿ, ಸದೃಢತೆ ಮತ್ತು ಮಾನವೀಯ ಸಂಬಂಧಗಳ ಅಭಿವೃದ್ಧಿ’ ವಿಷಯ ಕುರಿತು ಆಯೋಜಿಸಿರುವ ಜಾಗತಿಕ ಸಮ್ಮೇಳನದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಯೂನಿವರ್ಸಲ್‌ ಪೀಸ್‌ ಫೌಂಡೇಷನ್‌ ಆಯೋಜಿಸಿರುವ ಈ ಸಮ್ಮೇಳನ ಫೆ.7ರಿಂದ 11 ರವರೆಗೆ ನಡೆಯಲಿದ್ದು, ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಸರ್ಕಾರಿ ಸೇವೆ ಸಲ್ಲಿಸಿದವರು, ರಾಜಕೀಯ ಮುತ್ಸದ್ಧಿಗಳು, ಧಾರ್ಮಿಕ ಮುಖಂಡರು, ಮಹಿಳಾ ಪ್ರತಿನಿಧಿಗಳು ಹಾಗೂ ನಾಗರಿಕ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ.

ಸಮಾವೇಶದ ಬಳಿಕ ದಕ್ಷಿಣ ಕೋರಿಯಾ ದೇಶದ ಪ್ರಮುಖರು, ಸರ್ಕಾರದ ಪ್ರತಿನಿಧಿಗಳು ಮತ್ತು ಚಿಂತಕರೊಡನೆ ಸಂವಾದ ನಡೆಯಲಿದ್ದು ತರಳಬಾಳು ಶ್ರೀಗಳು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಅಲ್ಲದೆ ಫೆ.10 ರಂದು ಸಿಯೋಲ್‌ನಲ್ಲಿ ಯೂನಿವರ್ಸಲ್‌ ಪೀಸ್‌ ಫೌಂಡೇಷನ್‌ ಸಂಸ್ಥಾಪಕರ ದಿನಾಚರಣೆ ನಡೆಯಲಿದ್ದು, ಆ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version