ರಾಜಕೀಯ

ಬ್ರೇಕಿಂಗ್: ಇಂದು ತೆಲಂಗಾಣ ವಿಧಾನಸಭೆ ವಿಸರ್ಜನೆ?

Published

on

ಸುದ್ದಿದಿನ ಡೆಸ್ಕ್: ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಚಂದ್ರಶೇಖರ್ ರಾವ್ ಅವರು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದು, ತೆಲಂಗಾಣ ವಿಧಾಸಭೆಯು ಅವಧಿಗೂ ಮುನ್ನವೇ ವಿಸರ್ಜನೆಯಾಗಲಿದೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

ಹೈದರಾಬಾದ್‍ನ ಪ್ರಗತಿ ಭವನದಲ್ಲಿ ಸಚಿವ ಸಂಪುಟ ಸಭೆಯನ್ನು ಗುರುವಾರ ಮಧ್ಯಾಹ್ನ 3.30ಕ್ಕೆ ನಿಗದಿಮಾಡಲಾಗಿದ್ದು, ಕೆಸಿಆರ್ ಅವರ ನಿಲುವು ಏನೆಂಬುದು ಇನ್ನು ಸ್ಪಷ್ಟವಾಗಿಲ್ಲ. ಸಭೆಯಲ್ಲಿ ಎಲ್ಲ ಶಾಸಕರು, ಸಚಿವರು ಹಾಜರಾಗಬೇಕೆಂದು ಸೂಚನೆ ಬಂದಿದೆ. ಸೆಪ್ಟೆಂಬರ್ 4ರಂದು ಟಿಆರ್‍ಎಸ್ ಪಕ್ಷ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಪೂರೈಕೆಯಾಗಿದೆ.

Read This: ರಾಜಕೀಯ ವಿವಾದೋದ್ಯಮ: ಪ್ರತಿರೋಧದ ಹಾದಿ

2019ರ ಮೇನಲ್ಲಿ ಟಿಎಸ್‍ಆರ್‍ನ ಅಧಿಕಾರಾವಧಿ ಮುಗಿಯಲಿದೆ. ಆದರೆ, ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ. ಅಂದರೆ ಲೋಕಸಭೆ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆಯಲಿದೆ.

Leave a Reply

Your email address will not be published. Required fields are marked *

Trending

Exit mobile version