ದಿನದ ಸುದ್ದಿ

ವೈದ್ಯರಿಗೆ ಬ್ಲಾಕ್​ ಮೇಲ್​​ ಮಾಡ್ತಿದ್ದ ‘ಮೂವರು ವರದಿಗಾರರ’ ಬಂಧನ..!

Published

on

ಅರೆಸ್ಟ್ ಆಗಿರುವ ವರದಿಗಾರರು

ಸುದ್ದಿದಿನ,ವಿಜಯಪುರ : ನಗರದ ಖಾಸಗಿ ವೈದ್ಯರೊಬ್ಬರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟು 10 ಲಕ್ಷ ಹಣ ಪಡೆಯುವಾಗ ರೆಡ್​ ಹ್ಯಾಂಡ್​ಆಗಿ ವರದಿಗಾರರಾದ ಪ್ರಸನ್ನ ದೇಶಪಾಂಡೆ, ರವಿ ಬಿಸನಾಳ, ಬಸವರಾಜು ಅರೆಸ್ಟ್​ ಆಗಿದ್ದಾರೆ.

ಖ್ಯಾತ ವೈದ್ಯ ಡಾ.ವೋಸ್ವಾಲ್​​ ಅವರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಇವರು, ಸೋನೊಗ್ರಫಿ ಕ್ಲಿನಿಕ್ ವೈದ್ಯ ಕಿರಣ್​​​ ವೋಸ್ವಾಲ್​​ಗೆ ಬ್ಲ್ಯಾಕ್​ಮೇಲ್ ಮಾಡಿದ್ದರು. ಈ ವೈದ್ಯ ಲಿಂಗ ಪತ್ತೆ ಹಚ್ಚಿ ಸಾವಿರಾರು ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗಿದ್ದ ಆರೋಪ ಹೊತ್ತಿದ್ದಾರೆ.

ಈ ಮೂವರು ವರದಿಗಾರರ ಮೇಲೆ ಎಫ್​​ಐಆರ್​​ ದಾಖಲಿಸಿ ಆರೋಪಿಗಳ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ APMC ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾ ಎಸ್ಪಿ ಪ್ರಕಾಶ್ ಅಮೃತ್ ನಿಕ್ಕಂ ಅವರು ಮಾಹಿತಿ ನೀಡಿದ್ದಾರೆ.

ವೈದ್ಯರ ಮೇಲೆಯಾಕಿಲ್ಲ ಕೇಸ್..?

ಪೊಲೀಸರೇ ವರದಿಗಾರರ ಮೇಲೆ ಎಫ್​ಐಆರ್​​ ಹಾಕಿ ಅರೆಸ್ಟ್ ಮಾಡಿದ್ದು, ಆರೋಪ ಹೊತ್ತ ಡಾಕ್ಟರ್​​​ ಮೇಲೆ ಯಾಕೆ ಎಫ್​ಐಆರ್​​ ದಾಖಲಿಸಿಲ್ಲ. ಡಾ.ಕಿರಣ್​ ವೋಸ್ವಾಲ್​​​ ಮೇಲೆ ಲಿಂಗಪತ್ತೆಯ ಗಂಭೀರ ಆರೋಪ ಇದೆ.

ಲಿಂಗ ಪತ್ತೆ ಮಾಡಿ ನೂರಾರು ಹೆಣ್ಣು ಶಿಶುಗಳ ಹತ್ಯೆ ಆರೋಪ ಎದುರಿಸುತ್ತಿದ್ದಾರೆ.ವರದಿಗಾರರ ಮೇಲಿನ ಎಫ್​ಐಆರ್​​ ಅನ್ನು ನಾವು ಸ್ವಾಗತಿಸುತ್ತೇವೆ. ಗಂಭೀರ ಆರೋಪ ಹೊತ್ತಿರೋ ವೈದ್ಯರ ಮೇಲೆ ಎಫ್​​ಐಆರ್​​​ ಹಾಕದೇ ಇರೋದ್ಯಾಕೆ..? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version