Connect with us

ದಿನದ ಸುದ್ದಿ

ಕೊರೋನಾ ತಂದಿದೆ ಆಪತ್ತು; ತಲ್ಲಣಗೊಂಡಿದೆ ಮಕ್ಕಳ ಜಗತ್ತು..!

Published

on

ಹೋಯ್ತಾ ಕೊರೋನಾ..? ಶಾಲೆಗೆ ಹೊರಡೋಣ..?

  • ವಿ.ಕೆ.ಕುಮಾರಸ್ವಾಮಿ, ಶಿಕ್ಷಕರು, ರಾಮನಗರ

ಮ್ಮಾ ನನ್ ಲಂಚ್ ಬಾಕ್ಸ್ ಎಲ್ಲಿ? ನನ್ ಡ್ರಾಯಿಂಗ್ ಬುಕ್ ಎಲ್ಲೋಯ್ತು? ಅಯ್ಯೋ ಲೇಟ್ ಆಯ್ತು, ವ್ಯಾನ್ ಬಂದೇಬಿಡ್ತು ಅಮ್ಮಾ, ಲೇ ಪುಟ್ಟಾ ನೆನ್ನೆ ಮಿಸ್ಸು ಕನ್ನಡ ಹೋಮ್‍ವರ್ಕ್ ಕೊಟ್ಟಿದ್ರಲ್ಲಾ ಅದನ್ನ ಕಂಪ್ಲೀಟ್ ಮಾಡಿದ್ಯೇನೋ? ಲೋ ಸಾಗರ್ ಬಿಡೋ ಇವತ್ತು ಫಸ್ಟ್ ಪೀರಿಯಡ್ ಪಿ.ಟಿ ಇದೆ, ಚೆನ್ನಾಗಿ ಆಟ ಆಡೋಣ ಆಮೇಲೆ ಮಿಕ್ಕಿದ್ದು ನೋಡ್ಕಳಣ! ಅಬ್ಬಾ! ಮಕ್ಕಳ ಲೋಕ ಅದೆಷ್ಟು ಚೆಂದ ಅಲ್ವಾ. ಹೀಗಿದ್ದ ಮಕ್ಕಳ ಆಟ ಪಾಠಗಳ ತುಂಟಾಟಕ್ಕೆ ಇಂದು ಕೊರೋನಾ ಹೆಮ್ಮಾರಿ ಬ್ರೇಕ್ ಹಾಕಿರುವುದು ವಿಷಾದನೀಯ.

ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಮಕ್ಕಳ ಮನದ ತುಂಬಾ ಮೋಡ ಕವಿದ ವಾತಾವರಣ ಆವರಿಸಿದ್ದು ಖಿನ್ನತೆ, ಮಾನಸಿಕ ಅಸಮತೋಲನ, ವರ್ತನೆಯಲ್ಲಿ ಬದಲಾವಣೆ, ಮೊಬೈಲ್ ಗೀಳು ಹೆಚ್ಚಾಗಿ ಅವರ ಬದುಕು ಬಿರುಗಾಳಿಗೆ ಸಿಕ್ಕ ನಾವೆಯಂತೆ ಉಯಿಲಾಡುತ್ತಿದೆ. ಈ ಬಗ್ಗೆ ಇಲ್ಲೊಂದು ಅವಲೋಕನ..

ಹಿರಿದಾಗುತ್ತಿದೆ ಶೈಕ್ಷಣಿಕ ಅಂತರ

ಪ್ರಸ್ತುತ ಸಂದರ್ಭದಲ್ಲಿ ಇಡೀ ಶೈಕ್ಷಣಿಕ ಚಟುವಟಿಕೆಗಳು ನಿಂತುಹೋಗಿದ್ದು, ಕಳೆದ ಮೂರು ತಿಂಗಳಿಂದ ಮಕ್ಕಳ ಕಲಿಕೆಯ ಅಂತರ ಹಿರಿದಾಗುತ್ತಿದೆ. ಈಗಾಗಲೇ ಕೊರೋನಾ ಎಂಬ ವಿಷ ಕ್ರಿಮಿ ತನ್ನ ಬಾಹುಗಳನ್ನು ವಿಸ್ತಾರವಾಗಿ ಚಾಚುತ್ತಿರುವುದರಿಂದ, ಮಕ್ಕಳ ಸುರಕ್ಷತೆಯೊಂದಿಗೆ ಶಾಲೆಗಳ ಆರಂಭ ಅಷ್ಟು ಸುಲಭದ ಮಾತಲ್ಲ. ಈ ಸಂಬಂಧ ಸರ್ಕಾರ ಅಥವಾ ಪೋಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅದು ಮಕ್ಕಳ ಮೇಲೆ ನೇರ ಶಿಕ್ಷಣ ಪದ್ಧತಿಯಷ್ಟು ತೀವ್ರ ಪರಿಣಾಮ ಬೀರದಿರುವುದು ಆತಂಕದ ಸಂಗತಿಯಾಗಿದೆ.

ಬಹುತೇಕ ಇಂದಿನ ಮಕ್ಕಳಲ್ಲಿ ಕಾಡುತ್ತಿರುವ ತಾತ್ಕಾಲಿಕ ನೆನಪಿನ ಶಕ್ತಿಯ ಪರಿಣಾಮವಾಗಿ, ಮಕ್ಕಳನ್ನು ಈ ಮೊದಲಿನ ಸಹಜ ಸ್ಥಿತಿಗೆ ತರುವುದು ತೀರಾ ಪ್ರಾಯಾಸದ ಕೆಲಸವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ದುಸ್ತರವಾಗುತ್ತಿದ್ದು, ಇದು ಶೈಕ್ಷಣಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಕೊರೋನಾ ಹೋಯ್ತಾ? ಶಾಲೆಗೆ ಆರಂಭವಾಯ್ತಾ? ಎಂಬುದು ಇಂದು ಏನೂ ಅರಿಯದ ಮುಗ್ಧ ಮಕ್ಕಳನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಹೀಗೆ ಕೊರೋನಾ ಮಧ್ಯದಲ್ಲಿ ಅಡಕತ್ತರಿಗೆ ಸಿಕ್ಕಂತಾಗಿರುವ ಮಕ್ಕಳ ಬದುಕು ನಿಜಕ್ಕೂ ತಲ್ಲಣಗೊಂಡಿದೆ.

ಸಾಮಾಜೀಕರಣಕ್ಕೆ ಬ್ರೇಕ್

ಮಕ್ಕಳನ್ನು ಸಾಮಾಜೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಕುಟುಂಬದಷ್ಟೇ, ಶಾಲೆ, ನೆರೆಹೊರೆ ಹಾಗೂ ಸಮಕಾಲೀನ ವಯೋಮಾನದವರ ಪಾತ್ರವೂ ಸಹ ಹಿರಿದಾಗಿದೆ. ಆದರೆ ಕೊರೋನಾ ವಿಷ ಪೀಡೆ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿರುವುದರಿಂದ, ಅವರು ಮನೆಯಿಂದ ಹೊರಗೆ ಬಾರದಂತಾಗಿ ಖಿನ್ನತೆ ಹೆಚ್ಚಾಗುತ್ತಿದೆ.

ಇದರಿಂದ ಅವರಲ್ಲಿ ವಯೋ ಸಹಜ ಮಾನಸಿಕ ಬೆಳವಣಿಗೆ ಕ್ಷೀಣಿಸುತ್ತಿದ್ದು, ವರ್ತನೆಯಲ್ಲಿ ವಿಭಿನ್ನ ಬದಲಾವಣೆಗಳು ಕಂಡು ಬರುತ್ತಿದೆ. ನಿತ್ಯವೂ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮಕ್ಕಳ ಲೋಕ ಇಂದು ಮಂಕಾಗುತ್ತಿದೆ. ಹೀಗಾಗಿ ಸಾಮಾಜೀಕರಣ ಪ್ರಕ್ರಿಯೆ ತಡವಾಗುವುದರ ಜೊತೆಗೆ, ಅವರ ಭವಿಷ್ಯವೂ ಸಹ ಡೋಲಾಯಮಾನವಾಗುತ್ತಿದೆ.

ಮೊಬೈಲ್ ಬಳಕೆಯಿಂದ ಆಪತ್ತು

ಮನೆಯಲ್ಲೇ ಉಳಿದುಕೊಂಡಿರುವ ಕೋಟ್ಯಂತರ ಮಕ್ಕಳು ಇಂದು ಕಾಲ ಕಳೆಯಲೆಂದೋ ಅಥವಾ ಆನ್‍ಲೈನ್ ತರಗತಿಗಳಿಗೆಂದೋ ಮೊಬೈಲ್ ಮೊರೆ ಹೋಗಿದ್ದಾರೆ. ಆದರೆ ಭಾರತದಲ್ಲಿನ ಬಹುಪಾಲು ಪೋಷಕರ ಅನಕ್ಷರತೆ ಸಮಸ್ಯೆಯಿಂದಾಗಿ ತಮ್ಮ ಮಕ್ಕಳು ಮೊಬೈಲ್‍ನ್ನು ಸರಿಯಾದ ಉದ್ದೇಶಕ್ಕೆ ಬಳಸುತ್ತಿದ್ದಾರೆಯೇ ಎಂಬುದನ್ನು ತಿಳಿಯುವುದರಲ್ಲಿ ವಿಫಲತೆ ಎದುರಾಗಿದೆ.

ಇದರಿಂದ ಮಕ್ಕಳ ಮೇಲಿನ ಹಿಡಿತ ತಪ್ಪಿ, ಅವರ ಮನಸ್ಸು ವ್ಯಗ್ರವಾಗಿ ವಿವಿಧ ಸೈಬರ್ ಕ್ರೈಮ್‍ಗಳತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ ಪ್ರತಿದಿನ ಗೇಮ್ ಆಡಲು, ಚಾಟ್ ಮಾಡಲು ಇನ್ನಿತರ ಉದ್ದೇಶಗಳಿಗಾಗಿ ದೀರ್ಘಾವಧಿಯವರೆಗೆ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಇದು ತೊಡಕಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳ ಮೇಲೆ ಆಘಾತಕಾರಿ ಪರಿಣಾಮಗಳು ಸೃಷ್ಟಿಯಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.

ಮೌಲ್ಯಗಳ ಕುಸಿತ

ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬಹುತೇಕ ಇಂದಿನ ಡಿಜಿಟಲ್ ಯುಗದ ಮಕ್ಕಳು ಪೋಷಕರ ಮಾತಿಗೆ ಮನ್ನಣೆ ನೀಡುವುದು ಕಡಿಮೆಯೇ. ಮನೆಯಲ್ಲೇ ಉಳಿದ ಮಕ್ಕಳ ಮನಸ್ಸು ದಿಕ್ಕು ತಪ್ಪಿದಂತಾಗಿ, ಅವರಲ್ಲಿ ತೀವ್ರತರ ಮಾನಸಿಕ ಅಸಮತೋಲನ ಉಂಟಾಗುತ್ತಿದೆ. ಇದರಿಂದ ಪೋಷಕರು ಮಕ್ಕಳಿಗೆ ಏನು ಹೇಳಿದರೂ ಅದು ತಪ್ಪೇ ಎಂಬಂತಾಗುತ್ತಿದೆ.

ಸುಮಾರು ಮಕ್ಕಳು ತಮ್ಮ ಪೋಷಕರ ವಿರುದ್ಧ ವಾಗ್ವಾದಕ್ಕೆ ಇಳಿಯುತ್ತಿರುವುದು, ಆತ್ಮಹತ್ಯೆ ಬೆದರಿಕೆಗಳನ್ನು ಒಡ್ಡುತ್ತಿರುವುದು, ತಮ್ಮ ವಯೋಮನಕ್ಕೆ ಮೀರಿದ ಭಾಷೆಯ ಬಳಕೆ, ಮಾನಸಿಕ ಸಂಘರ್ಷಗಳು, ಮಾನಸಿಕ ಕ್ಷೋಭೆ, ಇವುಗಳಿಂದಾಗಿ ಮಕ್ಕಳಲ್ಲಿರಬೇಕಾದ ನಿರೀಕ್ಷಿತ ಮೌಲ್ಯಗಳು ಕ್ಷೀಣಿಸುತ್ತಿವೆ. ಅತಿಯಾದ ಟಿ.ವಿ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಅತ್ಯಂತ ಕ್ಷಿಷ್ಟಕರವಾಗುತ್ತಿದೆ. ಇವಿಷ್ಟೇ ಅಲ್ಲದೆ ಪೌಷ್ಟಿಕಾಂಶಗಳ ಕೊರತೆ, ಕೌಟುಂಬಿಕ ದೌರ್ಜನ್ಯಗಳು, ಬಲವಂತದ ದುಡಿಮೆ, ಮುಂತಾದ ಸಮಸ್ಯೆಗಳು ಮಕ್ಕಳಲ್ಲಿ ತಲೆದೋರುತ್ತಿದೆ.

-ವಿ.ಕೆ.ಕುಮಾರಸ್ವಾಮಿ,
ಬರಹಗಾರ, ಶಿಕ್ಷಕರು,
ವಿರುಪಾಪುರ, ಸುಗ್ಗನಹಳ್ಳಿ ಅಂಚೆ,
ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ – 561101
ಮೊ: 9113906120, 9740840678 (ವಾಟ್ಸಪ್)
ಇ ಮೇಲ್ : kumarvirupapura@gmail.com

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ

Published

on

  • ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ನಗರದ ಗೋಲ್ಡ್ ಸ್ಮಿತ್ ರಸ್ತೆಯ ಕುಂಬಾರ ಓಣಿ ಬಳಿಯ ವಾಸವಿ ಸ್ವಗೃಹ ಹೋಮ್ ನೀಡ್ ಎಂಬ ಅಂಗಡಿ ತೆರೆದು ಅಲ್ಲಿಗೆ ಬಂದ ಗ್ರಾಹಕರಿಂದ ಚೀಟಿ ರೂಪದಲ್ಲಿ ಹಣ ಪಡೆದು ತಿಂಗಳಿಗೆ ಶೇ.25 ರಷ್ಟು ಲಾಭ ನೀಡುವುದಾಗಿ ವಂಚಿಸುತ್ತಿದ್ದ ವಿಶ್ವನಾಥ ಎಂಬ ವ್ಯಕ್ತಿಯನ್ನು ಬ್ರೂಸ್ ಪೇಟೆ ಪೊಲೀಸರು ಬಂಧಿಸಿದ್ದರು.

ಚೀಟಿ ವ್ಯವಹಾರ ಮಾಡಿ‌ ಮೋಸ

ಗ್ರಾಹಕರಿಗೆ ತಾವು ಕೊಡುವ ಹಣಕ್ಕೆ ಲಾಭಾಂಶವನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣವನ್ನು ಪಡೆದು ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿದ್ದರು ಎಂದು ವಾಸವಿ ಸ್ವಗೃಹ ಹೋಮ್ ನೀಡ್ ಅಂಗಡಿಯ ಮಾಲಿಕ ಟಿ.ವಿಶ್ವನಾಥ(58)ರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿ 19,38,500 ರೂ. ಮತ್ತು ಗ್ರಾಹಕರು ಆಪಾದಿತನಿಗೆ ಹಣ ಕಟ್ಟುತ್ತಿದ್ದ ಬಗ್ಗೆ ಇದ್ದ ಚೀಟಿಗಳು ಹಾಗು ವ್ಯವಹಾರಕ್ಕೆ ಬಳಸುತ್ತಿದ್ದ ಸಲಕರಣೆ ವಶಪಡಿಸಿಕೊಂಡಿದ್ದರು.

ಗ್ಯಾನಪ್ಪ ನೀಟಿದ ದೂರಿನಿಂದ ಪೊಲೀಸರು ಎಂಟ್ರಿ

ಸಹಕಾರ ಸಂಘಗಳ ಸಹಾಯಕ ನಿಬಂಧಕ ಗ್ಯಾನಪ್ಪ ನೀಡಿದ ದೂರಿನನ್ವಯ ಕಳೆದ ಆರು ತಿಂಗಳಿಂದಲೂ ಸರ್ಕಾರದಿಂದ ಅಥವಾ ಮಂಜೂರು ಮಾಡುವ ಯಾವುದೇ ಪ್ರಾಧಿಕಾರದಿಂದ ಪೂರ್ವ ಮಂಜುರಾತಿ ಪಡೆಯದೇ ಗ್ರಾಹಕರಿಗೆ ಮೋಸ ಮಾಡುವ ದುರುದ್ದೇಶದಿಂದ, ಗ್ರಾಹಕರಿಂದ ಅನಧಿಕೃತವಾಗಿ ಚೀಟಿಯ ರೂಪದಲ್ಲಿ ನಗದು ಹಣವನ್ನು ಕಟ್ಟಿಸಿಕೊಂಡು ಹಣಕ್ಕೆ 25% ಹಣವನ್ನು ಬೋನಸ್ ರೂಪದಲ್ಲಿ ಕೊಡುವುದಾಗಿ ನಂಬಿಸಿ ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡುತ್ತಿದ್ದ ವಿಶ್ವನಾಥ ವಿರುದ್ಧ ಆರೋಪ ಕೇಳಿಬಂತು.ಆಗ ಪೊಲೀಸರು ಎಂಟ್ರಿ ಆಗಿದ್ದಾರೆ‌.ಗಣಿನಾಡು ಬಳ್ಖಾರಿ ನಗರದಲ ಇಂತ ವ್ಯವಹಾರಗಳು ಬಹಳ ನಡೆಯುತ್ತೇವೆ ನಿಧಾನಗತಿಯಲ್ಲಿ ಮೋಸ ಹೋದ ಮೇಲೆ ಬೆಳಕಿಗೆ ಬರುತ್ತವೆ.

ಮೋಸಕ್ಕೆ ಬಲಿಯಾಗುವ ಜನರು

ಗಣಿನಾಡು ಬಳ್ಳಾರಿ ನಗರದಲ್ಲಿ ಜನರು ಆಸೆ,ಅತಿಆಸೆಯಿಂದ ಬೇಗ ಹಣವನ್ನು ಸಂಪಾದನೆ ಮಾಡಬಹುದು ಎಂದು ಈ ಮಾರ್ಗಗಳನ್ನು ಅನುಸರಿಸ ಮೋಸ ಹೋಗುತ್ತಾರೆ. ಟಿ.ವಿಶ್ವನಾಥ ಗ್ರಾಹಕರೊಂದಿಗೆ ನಿಶ್ಚಿತ ಅವದಿಗೆ ನಿಯತಕಾಲಿಕ ಕಂತುಗಳ ರೂಪದಲ್ಲಿ ಹಣದ ನಿಶ್ಚಿತ ಹಣವನ್ನು ಕೊಡಲು ಒಪ್ಪಿ ಚೀಟಿ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು.ಆದರೆ ಸಾರ್ವಜನಿಕರಿಂದ ನೊಂದವರಿಂದ ದೂರ ಬಾರದ ಹಿನ್ನೆಲೆಯಲ್ಲಿ ಆತನಿಗೆ ವಿಚಾರಣೆ ಮಾಡಿ ಠಾಣಾ ಬೇಲ್ ನೀಡಿ ನೋಟಿಸ್ ಕೊಟ್ಟು ಕಳುಹಿಸಲಾಗಿತ್ತು.

ಪೊಲೀಸರ ಪಾತ್ರ ಏನು ?

ಈ‌ ಹಿಂದೆ ಗಣಿನಾಡು ಬಳ್ಳಾರ ನಗರದ ವಿವಿಧ ಠಾಣೆಗೆ ಸಂಬಂಧಿಸಿದಂತೆ ಹಣಕಾಸಿನ ವಿಚಾರವಾಗಿ ಮೋಸ ಮಾಡಿದ ಘಟನೆಗಳು ನಡೆದಿದೆ. ಆದರೆ ಮೋಸ ಮಾಡಿದ ವ್ಯಕ್ತಿಗಳಿಂದ ಮೋಸಕ್ಕೆ ಒಳಗಾದ ಜನರಿಗೆ ಹಣವನ್ನು ಕೊಡಿಸಿಲ್ಲ ಎನ್ನುವ ಆರೋಪ ಸಹ ಇದೆ. ಇಲ್ಲಿ ಪೊಲೀಸ್ ಇಲಾಖೆಯ ಪಾತ್ರ ಏನು ? ಎನ್ನುವ ಅಂಶ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ.
ಬಳಿಕ ವಿಶ್ವನಾಥ ಗ್ರಾಹಕರಿಗೆ ಮೊನ್ನೆ ನಿಮ್ಮ ಹಣ ವಾಪಾಸ್ ಕೊಡುವೆ ಅಂಗಡಿ ಬಳಿ ಬನ್ನಿ ಎಂದಿದ್ದರು. ಆದರೆ ನಿನ್ನೆ ವಿಶ್ವನಾಥ ಅಂಗಡಿ ಬಳಿ ತೆರಳಿದ ನೂರಾರು ಗ್ರಾಹಕರಿಗೆ ಬಿಗ್ ಶಾಕ್ ಕಾದಿತ್ತು. ವಿಶ್ವನಾಥ ಎಸ್ಕೇಪ್ ಆಗಿದ್ದ ಇದನ್ನ ಕಂಡ ಗ್ರಾಹಕರು ಕಣ್ಣೀರಾಕಿ ಬ್ರೂಸ್ ಪೇಟೆ ಪೋಲಿಸ್ ಠಾಣೆ ಬಳಿ ಜಮಾಯಿಸಿದ್ದಾರೆ. ಪೋಲಿಸ ಮುಂದೆ ತಾವು ಕಟ್ಟಿದ ಹಣದ ಬಗ್ಗೆ ವಿವರಿಸಿ ಠಾಣೆಯಲ್ಲಿ ಒಬ್ಬರಾಗಿ ಬರೆಸುತ್ತ ನಿಂತಿದ್ದಾರೆ.

ಶಾಸಕ ಭರತ್ ರೆಡ್ಡಿ ಭರವಸೆ

ಎಲ್ಲರೂ ಕಟ್ಟಿದ ಹಣ ಎರಡು ಕೋಟಿ ದಾಟುವ ಸಂಭವವಿದೆ ಎನ್ನಲಾಗುತ್ತಿದೆ. ನೊಂದ ಜನ ಠಾಣೆಯಿಂದ ನಿನ್ನೆ ಮದ್ಯಾಹ್ನ ಶಾಸಕ ನಾರಾ ಭರತ್ ರೆಡ್ಡಿ ಕಛೇರಿಗೆ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಜನರು ಕಣ್ಣೀರು ನೋಡದ ಶಾಸಕರು ನಾನೇ ಠಾಣೆಗೆ ಬರುವೆ ಎಂದು ಹೇಳಿ ಮಂಗಳವಾರ ಸಂಜೆ ಶಾಸಕ ನಾರಾ ಭರತ್ ರೆಡ್ಡಿ ಬ್ರೂಸ್ ಪೇಟೆ ಠಾಣೆಗೆ ಭೇಟಿ ನೀಡಿ ನ್ಯಾಯ ಕೊಡಿಸಿ ಆರೋಪಿಯನ್ನು ಕೊಡಲೇ ಬಂಧಿಸಿ ಎಂದು ಇನ್ಸ್ ಪೆಕ್ಟರ್ ಮಹಾಂತೇಶ್ ಗೆ ಸೂಚಿಸಿ ಜನರಿಗೆ ಸಾಂತ್ವನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

ಜನರು ಬುದ್ಧಿವಂತರಾಗಿ

ಮನೆಯಲ್ಲಿ ಹಣ ಇದೆ ಎಂದು ಆಸೆ,ಅತಿಆಸೆಗೆ ಒಳಗಾಗದೇ ಗೊತ್ತಿಲ್ಲದ ಇರುವ ವ್ಯಕ್ತಿಗಳಿಗೆ ಕೊಟ್ಟಿ ಮೋಸ ಹೋಗಬಾರದು ಎನ್ನುವುದು ನಮ್ಮ ಆಸೆಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ‘ಕುವೆಂಪು ಓದು : ಕಮ್ಮಟ’ ; ಚರ್ಚೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು

Published

on

ಸುದ್ದಿದಿನ.ಚನ್ನಗಿರಿ: ಕನ್ನಡ ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಶ್ರೀ ಶಿವಲಿಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯಕ್ತ ಆಶ್ರಯದಲ್ಲಿ ಬುಧವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಮ್ಮಟದ ಉದ್ಘಾಟನೆಯನ್ನು ಪ್ರಾಂಶುಪಾಲ ಅಮೃತೇಶ್ವರ ಬಿ.ಜಿ, ಮಾಡಿದರು. ಸಂಚಾಲಕಿ ಭಾರತೀದೇವಿ ಹಾಗೂ ಸಾಹಿತಿ ಡಾ.ಎಚ್.ಟಿ.ಕೃಷ್ಣಮೂರ್ತಿ ಕಮ್ಮಟವನ್ನು ನಡೆಸಿಕೊಟ್ಟರು. 50 ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿ ಚರ್ಚೆನಡೆಸಿದರು.

ಪ್ರಾಂಶುಪಾಲರಾದ ಡಾ.ಬಿ‌.ಜಿ. ಅಮೃತೇಶ್ವರ ಅವರು ಕಮ್ಮಟ ದ ಅಧ್ಯಕ್ಷತೆವಹಿಸಿದ್ದರು. ಐ.ಕ್ಯು.ಎ.ಸಿ‌ ಸಂಚಾಲಕರಾದ ವಿಜಯ್ ಕುಮಾರ್ ಎನ್.ಸಿ, ಇಂಗ್ಲಿಶ್ ವಿಭಾಗದ ಮುಖ್ಯಸ್ಥ ರಾದ ಜಯಪ್ಪ.ಸಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರವಿ, ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್. ಹಾಗೂ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಶಕೀಲ್ ಅಹಮ್ಮದ್ ನಿರೂಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿಯುಸಿ : ಸೈನ್ಸ್ ಅಕಾಡೆಮಿ ಪದವಿಪೂರ್ವ ಕಾಲೇಜಿಗೆ ಶೇ.93.52 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ: 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜು, ದಾವಣಗೆರೆಯ ವಿದ್ಯಾರ್ಥಿಗಳು ಅತ್ಯತ್ತಮವಾದ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಕು.ಸುಷ್ಮಿತಾ ಕೆ.ಎಂ. ಒಟ್ಟಾರೆ 600 ಅಂಕಗಳಿಗೆ 574 ಅಂಕಗಳನ್ನು ಗಳಿಸಿ, 95.7% ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕು. ಆದ್ಯ ಎನ್. ಎಂ (569/600) 94.8%, ಫಲಿತಾಂಶದೊAದಿಗೆ ದ್ವಿತೀಯ ಸ್ಥಾನವನ್ನೂ, ಕು. ಮಧುಮಿತಾ ಎಂ. (568/600) 94.7% ತೃತೀಯ ಸ್ಥಾನವನ್ನೂ ಕು.ಡಿ.ಇ. ಸಂಜನಾ (567/600) 94.5%, ಹಾಗೂ ಕು.ಎಸ್.ಎ ರಾಹುಲ್ (566/600) 94.3% ಫಲಿತಾಂಶ ಪಡೆದು ಕ್ರಮವಾಗಿ ಕಾಲೇಜಿಗೆ ನಾಲ್ಕು ಹಾಗೂ ಐದನೇ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.

ಒಟ್ಟು ಕನ್ನಡ ಭಾಷಾ ವಿಷಯದಲ್ಲಿ 3 ವಿದ್ಯಾರ್ಥಿಗಳು, ಗಣಿತದಲ್ಲಿ 2 ವಿದ್ಯಾರ್ಥಿಗಳು, ಜೀವಶಾಸ್ತçದಲ್ಲಿ 1 ವಿದ್ಯಾರ್ಥಿ 100/100 ಅಂಕಗಳನ್ನು ಗಳಿಸಿರುತ್ತಾರೆ. ಒಟ್ಟಾರೆ 47 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ವಿದ್ಯಾರ್ಥಿಗಳು 149 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಒಟ್ಟಾರೆ ಕಾಲೇಜಿಗೆ 93.52 % ಫಲಿತಾಂಶ ಬಂದಿದ್ದು, ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending