Connect with us

ದಿನದ ಸುದ್ದಿ

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ವಿವಿಧ ಯೋಜನೆಯಡಿ ಸಾಲ ಸೌಲಭ್ಯ : ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್: ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮವು 2024-25ನೇ ಸಾಲಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ) ಗಳಡಿಯಲ್ಲಿ ಸೌಲಭ್ಯ ಪಡೆಯಲು (ವಿಶ್ವಕರ್ಮ, ಉಪ್ಪಾರ, ಅಂಬಿಗ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳನ್ನು ಹೊರತುಪಡಿಸಿ) ಉಳಿದ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಗೆ ಸೇರಿದ ಮಡಿವಾಳ ಮತ್ತು ಅದರ ಉಪಜಾತಿಗಳ ನಿರುದ್ಯೋಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆನ್ನು ಸೀಡ್ ಮಾಡಿರಬೇಕು. ಒಂದು ಕುಟುಂಬದ ಒಬ್ಬರಿಗೆ ಮಾತ್ರ ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜ ಸಲ್ಲಿಸುವಂತಿಲ್ಲ. 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಆಸಕ್ತರು ಸೇವಾಸಿಂಧು https://sevasindhu.karnataka.gov.in/Sevasindhu/Kannada?ReturnUrl=%2F ಅಥವಾ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾಕೇಂದ್ರಗಳಲ್ಲಿ ದಾಖಲೆಗಳ ಸಹಿತ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://kmmd.karnataka.gov.in/ ರಲ್ಲಿ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಭಾಗ್ಯನಿಲಯ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ, ದೂ.ಸಂ.: 08182-229634 ನ್ನು ಸಂಪರ್ಕಿಸುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಇಟ್ಟುಕೊಂಡವನ ಜೊತೆ ಸೇರಿ, ಕಟ್ಟಿಕೊಂಡನಿಗೆ ಚಟ್ಟಕಟ್ಟಿದ ನೀಲಮಣಿ ಅಂಡ್ ಗ್ಯಾಂಗ್

Published

on

  • ಗಿರೀಶ್ ಕುಮಾರ್ ಗೌಡ

ಸುದ್ದಿದಿನ,ಬಳ್ಳಾರಿ: ಅಪ್ಪ, ಮಕ್ಕಳು, ತಾಯಿ, ಮಗ, ಗಂಡ, ಹೆಂಡ್ತಿ ಯಾವ ಸಂಬಂಧಕ್ಕೂ ಬೆಲೆಯೇ ಇಲ್ಲ. ಯಾಕೆಂದರೆ ರಕ್ತ ಸಂಬಂಧಿಕರೇ ರಣ ರಾಕ್ಷಸರಾಗುತ್ತಿದ್ದಾರೆ. ತಾಳಿ ಕಟ್ಟಿದ ಗಂಡನನ್ನೆ ಕೊಂದು ಮಲಗಿಸುವ ಹಂತಕ್ಕೆ ಬಂದಿದ್ದಾರೆ. ಇಂತ ದುರ್ಘಟನೆ ಗಣಿನಾಡು ಬಳ್ಳಾರ ನಗರದಲ್ಲಿ ನಡೆದಿದೆ.

ಜೀವಕ್ಕಿಂತ ಹೆಚ್ಚು ಪ್ರೀತಿಸುವ ಗಂಡನಿದ್ದ ಮುದ್ದಾದ ಮೂರು ಜನ ಮಕ್ಕಳಿದ್ದರು. ಈ ಆಂಟಿಗೆ ಸಣ್ಣ ಸಣ್ಣ ಹುಡುಗರ ಮೇಲೆ ಕಣ್ಣು, ಇತ್ತ ಗಂಡನಿದ್ದರು ತನ್ನ ಶ್ಯಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನಿಗೆ ಸೆರಗು ಹಾಸುತಿದ್ದಳು, ಇದು ಪಾಪದ ಗಂಡನಿಗೆ ಗೊತ್ತಾಗುತ್ತಿದ್ದಂತೆ ಗಂಡನಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿ ಬಿಟ್ಲು ಗಂಡ ಈ ಮಿಟುಕುಲಾಡಿಯ ರಂಗೀನಾಟಗಳನ್ನು ಕಣ್ಣು ತುಂಬಾ ನೋಡಿ ಕುಡಿತಕ್ಕೆ ದಾಸನಾದ.

ಅಂಟಿಗೆ ಹುಡುಗರ ಸಹವಾಸ

ಈ ಕಥೆಯ ಸುಪುನಾಥಿಯೇ ಈ ನೀಲವೇಣಿ, ಈಕೆಯ ತವರು ಮನೆ ಬಳ್ಳಾರಿಯ ರಾಣಿತೋಟ. ಗಂಡ ವೆಂಕಟೇಶನದ್ದು ಸಿರುಗುಪ್ಪ ತಾಲೂಕಿನ ಕೊಂಚಗೇರಿ ಗ್ರಾಮ, ಈ ನೀಲವೇಣಿ ಮದುವೆಯಾದ ಬಳಿಕ ವೆಂಕಟೇಶನನ್ನು ಮನೆ ಅಳಿಯನಾಗಿ ಮಾಡಿಕೊಂಡಿದ್ದರು. ವೆಂಕಟೇಶ ಬಳ್ಳಾರಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ತನ್ನ ಸಂಸಾರದ ನೊಗ ಹೊತ್ತಿದ್ದ, ಹಾಗೋ ಹೀಗೋ ಎರಡು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ.

ಅಂಟಿಗೆ ಆನಂದ ಮೇಲೆ ಪುಲ್ ಲವ್

ಈ ನೀಲವೇಣಿಯ ರಂಗೀನಾಟ ಕಣ್ಣಾರೆ ನೋಡಿ ವೆಂಕಟೇಶ ಕುಡಿತಕ್ಕೆ ದಾಸನಾಗಿ ಹೆಂಡತಿ ನೀಲವೇಣಿಗೆ ಆಗಾಗ ಬೈಯೋದು ಕಿರುಕುಳ ನೀಡೋದು ಮಾಡ್ತಿದ್ದ, ಕುಡಿತಕ್ಕೆ ದಾಸನಾದ ಗಂಡ ಹೂವಿನ ವ್ಯಾಪಾರ ಸರಿಯಾಗಿ ಮಾಡುತ್ತಿರಲ್ಲಿಲ್ಲ. ನೀಲವೇಣಿ ಗಂಡನನ್ನು ದಿನ ನಿನ್ನ ಕಾಟ ನನಗೆ ಸಾಕಾಗಿ ಹೋಗಿದೆ ನೀನು ನಿನ್ನ ತಾಯಿ ಮನೆಯಲ್ಲೆ ಇರುವಂತೆ ಹೇಳಿ ಗಂಡನನ್ನು ಕೊಂಚಗೇರಿಗೆ ಕಳುಹಿಸಿದ್ದಾಳೆ. ಇತ್ತ ನೀಲವೇಣಿ ಹೂವಿನ ವ್ಯಾಪಾರ ಬಿಟ್ಟು ಶ್ಯಾಮಿಯಾನ ಅಂಗಡಿ ಇಟ್ಟುಕೊಂಡಿದ್ದಾಳೆ. ಶ್ಯಾಮಿಯಾನ ಅಂಗಡಿ ಅಂದ ಮೇಲೆ ಕೆಲಸ ಮಾಡುವವರು ಬೇಕಲ್ಲ? ಕೆಲಸಕ್ಕೆಂದು ಆನಂದ್ ಎಂಬ ಯುವಕನನ್ನು ನೇಮಿಸಿಕೊಂಡು ಶ್ಯಾಮಿಯಾನ ಅಂಗಡಿ ನಡೆಸಿಕೊಂಡು ಬಂದಿದ್ದಾಳೆ. ಶ್ಯಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುವ ಆನಂದನ ಜೊತೆ ಈ ನೀಲವೇಣಿಗೆ ಸಲುಗೆಯಾಗಿ ಪ್ರೇಮಾಂಕುರವಾಗಿದೆ. ಈ ಆನಂದನ ಜೊತೆ ಈ ಆಂಟಿಗೆ ಫುಲ್ ಲವ್ ಆಗಿದೆ ಇವರಿಬ್ಬರ ಸರಸ ಸಲ್ಲಪಗಳನ್ನ ಪತಿರಾಯ ವೆಂಕಟೇಶ್ ನೋಡಿ ಕುಡಿತಕ್ಕೆ ದಾಸನಾಗಿದ್ದಾನೆ.

ಪ್ಲಾನ್ ಮಾಡಿದ ನೀಲಮಣಿ ಅಂಡ್ ಗ್ಯಾಂಗ್

ಈ ಗಂಡನ ಪ್ರತಿ ದಿನದ ಕಿರುಕುಳ ತಾಳಲಾರದೆ, ಪ್ರಕರಣದ ಆರೋಪಿ 2 ಆನಂದನ ಜೊತೆ ಸೇರಿ ಗಂಡನಿಗೆ ಬುದ್ದಿ ಕಲಿಸಲು ಪ್ಲಾನ್ ಮಾಡಿದ್ದಾಳೆ. ಈ ಆನಂದನಿಗೆ ಹೇಳಿ ಗಂಡ ವೆಂಕಟೇಶನಿಗೆ ರಿಪೇರಿ ಮಾಡಿಸಲು ಹಣ ಕೊಟ್ಟು ಕಳುಹಿಸಿದ್ದಾಳೆ. ಕರ್ಚಿಗೆ ಅಂತ ಪಡೆದ ಹಣದಲ್ಲಿ ಆನಂದ್, ಮಹಮ್ಮದ್ ಗೌಸ್, ಶಿವಶಂಕರ್ ಅಲಿಯಾಸ್ ಚಿರು, ಮಹಮ್ಮದ್ ಸಾಹೀದ್ ಅಲಿಯಾಸ್ ಜಂಗ್ಲಿ, ಷಷಾವಲಿ ಅಲಿಯಾಸ್ ದುದ್ದು, ಮಹಮ್ಮದ್ ಶರೀಫ್, ಮಹಮ್ಮದ್ ಆಸೀಫ್, ಮಹಮ್ಮದ್ ಸೋಹೆಲ್ ಸೇರಿ ಮಧ್ಯೆ ಹಾಗೂ ಗಾಂಜಾ ನಶೆಯಲ್ಲಿ ವೆಂಕಟೇಶನಿಗೆ ಕಟ್ಟಿಗೆ, ಮಚ್ಚು, ಕಲ್ಲಿನಿಂದ ತಲೆಗೆ ಹಣೆ ಎದೆ ಬೆನ್ನು ಹಾಗೂ ಸಿಕ್ಕ ಸಿಕ್ಕಲ್ಲಿ ಹೊಡೆದ ತೀವ್ರ ಗಾಯಗೊಸಿದ ಪರಿಣಾಮ ಸ್ಥಳದಲ್ಲೆ ವೆಂಕಟೇಶ ಪ್ರಾಣ ಬಿಟ್ಟಿದ್ದಾನೆ.

ಹೆಡೆಮುರಿ ಕಟ್ಟಿದ ಬಳ್ಳಾರಿ ಖಾಕಿ

ಏಪ್ರಿಲ್‌ 04 ಶುಕ್ರವಾರ ದಂದು ಬೆಳಂಬೆಳಿಗ್ಗೆ ನಗರದ ಕಣೇಕಲ್ಲು ಬಸ್ ನಿಲ್ದಾಣ ಬೊಮ್ಮನಹಾಳ್ ರಸ್ತೆಯ ಅಲ್ಟ್ರಾಗೇಟ್ ಬಳಿಯ ಕೆ.ಟಿ.ಪ್ರಜ್ವಲ್ ಕಾಟನ್ ಇಂಡಸ್ಟ್ರಿ ಮುಂದೆ ಕೊಲೆ ಮಾಡಲಾಗಿತ್ತು.ಈ ಕುರಿತು ಬ್ರೂಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕೊಲೆ ನಡೆದ 24 ಗಂಟೆಯಲ್ಲೆ ಎಲ್ಲಾ 9 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.

ಜಿಲ್ಲಾ ಎಸ್ಟಿ ಡಾ.ಶೋಭಾರಾಣಿಯವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಕೆ.ಪಿ.ರವಿಕುಮಾರ್, ನಗರ ಡಿವೈಎಸ್ಪಿ ನಂದಾರೆಡ್ಡಿ, ಸೈಬರ್ ಠಾಣೆಯ ಡಿವೈಎಸ್ಪಿ ಸಂತೋಷ್ ಚವ್ಹಾಣ್ ನೇತೃತ್ವದಲ್ಲಿ ಬ್ರೂಸ್ ಪೇಟೆ ಪೋಲಿಸ್ ಠಾಣೆಯ ಸಿಪಿಐ ಮಹಾಂತೇಶ್ ರವರ ತಂಡ ಕಾರ್ಯಚರಣೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕನಗೊಂಡನಹಳ್ಳಿಗೆ 24/7 ನೀರು ಪೂರೈಕೆ | ಮಿತವಾಗಿ ಬಳಸಿ, ಭವಿಷ್ಯಕ್ಕೆ ಉಳಿಸಿ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ:ಶುದ್ದ ಕುಡಿಯುವ ನೀರು ಪೂರೈಕೆಯಿಂದ ನೀರಿನಿಂದ ಬರುವ ಅನೇಕ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ 24*7 ಕುಡಿಯುವ ನೀರು ಪೂರೈಕೆಯ ಗ್ರಾಮವನ್ನಾಗಿ ಕನಗೊಂಡನಹಳ್ಳಿ ಜಿಲ್ಲೆಯ ಎರಡನೇ ಗ್ರಾಮವಾಗಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಸೋಮವಾರ ದಾವಣಗೆರೆ ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಗ್ರಾಮೀಣ ನೀರು, ನೈರ್ಮಲ್ಯ ವಿಭಾಗ, ಜಲಜೀವನ್ ಮಿಷನ್, ಕರ್ನಾಟಕ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾರ್ಯಾಚರಣೆ ನಿರ್ವಹಣೆ ಸಾಂಸ್ಥೀಕರಣದ ಬಲವರ್ಧನೆ ಅಂಗವಾಗಿ 24*7 ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಿ ಸಮಾರಂಭದಲ್ಲಿ ಮಾತನಾಡಿದರು.

ನಿರಂತರ ಕುಡಿಯುವ ನೀರಿನ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುವ ಜೊತೆಗೆ ಶುದ್ದತೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದಾಗಿದೆ. ದಿನದ 24 ಗಂಟೆಗಳ ಕಾಲವೂ ನೀರು ಲಭ್ಯವಾಗುವುದರಿಂದ ಇದನ್ನು ಮಿತಬಳಕೆ ಮಾಡಿ ವ್ಯರ್ಥವಾಗಿ ಹೋಗುವ ನೀರನ್ನು ತಡೆಗಟ್ಟಬೇಕು. ಪಂಚಾಯಿತಿ ಹಾಗೂ ಗ್ರಾಮ ನೀರು, ನೈರ್ಮಲ್ಯ ಸಮಿತಿಯಿಂದ ಕಾಲಕಾಲಕ್ಕೆ ನೀರಿನ ಪರೀಕ್ಷೆ ನಡೆಸುವ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಆದ್ದರಿಂದ ಯಾರು ಸಹ ಮನೆಯಲ್ಲಿ ಹೆಚ್ಚಿನ ನೀರು ಸಂಗ್ರಹಣೆ ಮಾಡಿಕೊಂಡು ವ್ಯರ್ಥ ಮಾಡಬಾರದು. ನೀರು ಸಂಗ್ರಹ ಮಾಡಿಕೊಳ್ಳುವುದರಿಂದ ಡೆಂಗ್ಯೂ ಸೇರಿದಂತೆ ಇತರೆ ಕಾಯಿಲೆಗಳಿಗೂ ಕಾರಣವಾಗಬಹುದೆಂದು ಗ್ರಾಮಸ್ಥರಿಗೆ ತಿಳಿಸಿದರು.

ಜಿಲ್ಲೆಯಲ್ಲಿನ 100 ಗ್ರಾಮಗಳಲ್ಲಿ 24*7 ನಿರಂತರ ಕುಡಿಯುವ ನೀರು ಪೂರೈಕೆ ಮಾಡಲು ಗುರಿ ಹೊಂದಲಾಗಿದ್ದು ಬರುವ ಆಗಸ್ಟ್ ಒಳಗಾಗಿ ಈ ಎಲ್ಲಾ ಗ್ರಾಮಗಳಿಗೂ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ನ್ಯಾಮತಿ ತಾಲ್ಲೂಕಿನ ದಾನಿಹಳ್ಳಿ ಗ್ರಾಮ ಮೊದಲಾಗಿದ್ದು ಕನಗೊಂಡನಹಳ್ಳಿ ಜಿಲ್ಲೆಯ ಎರಡನೇ ಗ್ರಾಮವಾಗಿದ್ದು ಇದು ರಾಜ್ಯದಲ್ಲಿ 15 ನೇ ಗ್ರಾಮವಾಗಿದೆ ಎಂದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಇವರು ಮಾತನಾಡಿ ನೀರು ಮಿತವಾದ ಸಂಪತ್ತು, ನಮ್ಮ ಸ್ವಂತ ವಾಹನವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ನೀತಿಯಲ್ಲಿ ಮನೆಯ ಮುಂದಿನ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ನಲ್ಲಿ ಮುರಿದುಹೋದಲ್ಲಿ ಆಯಾ ಮನೆಯವರೇ ಖರೀದಿಸಿ ಅಳವಡಿಸಿಕೊಂಡು ನೀರು ವ್ಯರ್ಥವಾಗಿ ಹರಿಯದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ. ಬಾಟಲಿ ನೀರನ್ನು ಹೆಚ್ಚು ಉಪಯೋಗಿಸದೇ ನಿಮ್ಮ ಮನೆಗೆ ಪೂರೈಕೆ ಮಾಡುವ ಶುದ್ದ ಕುಡಿಯುವ ನೀರನ್ನೇ ಬಳಕೆ ಮಾಡಿರಿ, ಇದರಲ್ಲಿ ಹೆಚ್ಚು ಮಿನರಲ್ಸ್‍ಗಳಿರುತ್ತವೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಕನಗೊಂಡನಹಳ್ಳಿ ಗ್ರಾಮದಲ್ಲಿ 340 ನಲ್ಲಿಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ರೂ.97 ಲಕ್ಷ ವೆಚ್ಚ ಮಾಡಲಾಗಿದೆ. ಇಲ್ಲಿನ ನೀರನ್ನು 13 ವಿವಿಧ ಮಾದರಿಯಲ್ಲಿ ಆಗಿಂದಾಗ್ಗೆ ನೀರಿನ ಪರೀಕ್ಷೆ ಮಾಡಿ ಸರಬರಾಜು ಮಾಡಲಾಗುತ್ತದೆ. ಆದ್ದರಿಂದ ನೀರಿನ ಶುದ್ದತೆಯ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದ ಅವರು ನೀರು ನಿರ್ವಹಣೆಯನ್ನು ಸ್ವಸಹಾಯ ಗುಂಪುಗಳೇ ನಿರ್ವಹಣೆ ಮಾಡಲಿವೆ ಎಂದರು.

ವಿಶ್ವಬ್ಯಾಂಕ್ ಟಾಸ್ಕ್ ಪೋರ್ಸ್ ನ ಮರಿಯಪ್ಪ ಕುಳ್ಳಪ್ಪ, ಪೀಡ್ ಬ್ಯಾಕ್ ಸಂಸ್ಥೆ ಸಿಇಓ ಅಜಯ್ ಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾಕ್ಷಿ ಹಾಗೂ ವಿವಿಧ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ : ಅನುದಾನ ಬಿಡುಗಡೆಗೆ ಆರ್. ಅಶೋಕ್ ಒತ್ತಾಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ರಾಜ್ಯದ 31 ಜಿಲ್ಲೆಗಳ, ಒಟ್ಟು 6 ಸಾವಿರದ 380 ಗ್ರಾಮಗಳಲ್ಲಿ, ಗ್ರಾಮಸ್ಥರು ಕುಡಿಯುವ ನೀರಿನ ಬವಣೆ ಎದುರಿಸುತ್ತಿದ್ದು, ಗ್ರಾಮ ಪಂಚಾಯಿತಿಗಳು, ಅನುದಾನವಿಲ್ಲದೆ, ಸೊರಗುತ್ತಿವೆ ಎಂದು, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ, ಎಕ್ಸ್ ಮಾಧ್ಯಮದಲ್ಲಿ, ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕೂಡಲೇ, ಬರ ಪರಿಸ್ಥತಿ ಸಮೀಕ್ಷಿಸಿ, ಬರ ಪೀಡಿತ ತಾಲೂಕುಗಳನ್ನು ಘೋಷಿಸುವಂತೆ, ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ, ಎಲ್ಲ ಗ್ರಾಮ ಪಂಚಾಯಿತಿಗಳಿಗೆ, ಕೂಡಲೇ ತಲಾ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿ, ಬಿರು ಬೇಸಿಗೆಯಲ್ಲಿ, ಜನತೆಗೆ ಕುಡಿಯುವ ನೀರು ಖಾತ್ರಿ ಪಡಿಸುವಂತೆ, ಒತ್ತಾಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending