ಭಾಮಿನಿ
ನನ್ನಪ್ಪ ಎಂದರೆ..!
ಅಪ್ಪ ಎನ್ನುವ ಎರಡಕ್ಷರದ ಪದ ನನ್ನಲ್ಲಿ ಭರವಸೆ, ಆಸಕ್ತಿ, ಹುರುಪು, ಸ್ಪೂರ್ತಿಯ ಸೆಲೆ, ಮೂಡುತ್ತದೆ. ಕಲ್ಪನಾ ಲೋಕವನ್ನು ಕಣ್ಣೆದುರಿಗೆ ತರಬಲ್ಲ ಸಾಹುಕಾರ. ಆದರೆ ಕೆಲವು ಬಾರಿ ಕೋಪ, ಮುನಿಸು, ಆತಂಕ, ಭಯ ಮೂಡಿಸುತ್ತದೆ. ಅಪ್ಪನ ಮೇಲೆ ಕೋಪ ಇದೆ.
ಅದು ಹತ್ತನೇ ತರಗತಿ ಇರುವಾಗಲೇ ಶುರುವಾಗಿದೆ. ಕಾರಣಯಿಷ್ಟೇ ಹತ್ತನೇ ತರಗತಿ ಮುಗಿದ ಮೇಲೆ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡು, ಹೇಸರಾಂತ ವೈದ್ಯೆಳಾಗಬೇಕು ಎನ್ನುವ ನನ್ನ ಆಸೆಗೆ ಸಹಕರಿಸಲಿಲ್ಲ ಎನ್ನುವುದಕ್ಕೆ ಇಂದಿಗೂ ಸಹ ಪ್ರತಿಯೊಂದು ವಿಷಯಗಳಿಗೂ ಕೋಪ, ಮುನಿಸು, ಜಗಳ ಮಾಡುತ್ತೇನೆ. ಅಪ್ಪನ ಎದುರು ಜಗಳ ಮಾಡುತ್ತೇನೆ. ನಂತರ ನನ್ನಷ್ಟಕ್ಕೆ ನಾನೆ ಪಶ್ಚಾತ್ತಾಪ ಪಟ್ಟುಕೊಳ್ಳುತ್ತೇನೆ.
ಅಪ್ಪನಿಗೆ ಎದುರು ವಾದಿಸುವೆಯಲ್ಲ ನಿನಗೇನು ಹಕ್ಕಿದೆ? ಅವರು ನಿನಗಾಗಿ ಎಷ್ಟೇಲ್ಲಾ ತೊಂದರೆಗಳನ್ನು ಅನುಭವಿಸಿದ್ದಾರೆ ಎನ್ನುವ ಪರಿವಿಲ್ಲ ನಿನಗೆ ಎಂದು ಬೈದುಕೊಳ್ಳುತ್ತೇನೆ. ಆದರೆ ಅಪ್ಪನಿಗೆ ಯಾರಾದರು ಎನಾದ್ರು ಅಂದರೆ ಸಹಿಸಲಾರೆ. ಅಪ್ಪನ ಕೆಲವು ನಿಯಮಗಳನ್ನು ಪಾಲಿಸುತ್ತಿರುವೆ. ಆದರೆ ಅದನ್ನು ಅಪ್ಪನಿಗೆ ತಿಳಿಯಲು ಬೀಡುವುದಿಲ್ಲ ಏಕೆಂದರೆ ನಾನೇಕೆ ಅಪ್ಪನ ಮಾತು ಕೇಳಲಿ ಎನ್ನುವ ಅಹಃ ಬರುತ್ತದೆ. ಆದರೆ ನನ್ನ ಅಹಂಅನ್ನು ಹಿಡಿತದಲ್ಲಿ ಇಟ್ಟುಕೊಂಡಿರುವೆ.
ಅಪ್ಪ ಸೇನೆಯಲ್ಲಿರುವಾಗ ಮದುವೆಯಾಗುತ್ತಾರೆ. ಮದುವೆಯಾದ ಎಂಟು ವರ್ಷಕ್ಕೆ ನಾನು ಹುಟ್ಟಿದೆ. ಹೆಣ್ಣಾದರೆ ಏನಾಯಿತು? ಅವಳಿಗೆ ನಾನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ಬೆಳೆಸುತ್ತೇನೆ ಎಂದು ಹೇಳುತ್ತಿದ್ದರಂತೆ. ಅದರಂತೆ ಇಂದು ನನಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಅವರ ಆಸೆಗಳನ್ನು ನೆರವೆರಿಸಲು ಸಾಧ್ಯವಾಗಲಿಲ್ಲ. ಇಪ್ಪತ್ತು ವರ್ಷಗಳ ಹಿಂದೆಯೇ ಅಪ್ಪನು ಸಹ ಅವರು ನನ್ನ ಬಗ್ಗೆ ಕಂಡ ಕನಸುಗಳನ್ನು ಪಾದದಡಿಯಲ್ಲಿ ಹಾಕಿದ್ದಾರೆ. ಏಕೆಂದರೆ ನನಗಿರುವ ಅನಾರೋಗ್ಯ ಸ್ಥಿತಿಯೆ ಕಾರಣವಾಯಿತು. ಅದರಿಂದ ಅಪ್ಪ-ಅಮ್ಮ ತುಂಬಾನೆ ನೊಂದಿದ್ದಾರೆ. ಇಂದಿಗೂ ಸಹ ತಂಗಿತಲೂ ಹೆಚ್ಚಾಗಿ ನನ್ನದೆ ಚಿಂತೆ ಅವರಿಗೆ ಕಾಡುತ್ತಿದೆ.
ನಾನು ಮನೆಯಿಂದ ಆಚೆ ಉಳಿದುಕೊಂಡು ವಿದ್ಯಾಭ್ಯಾಸ ಮಾಡಿ, ಉದ್ಯೋಗ ಮಾಡಿ ಸಮಾಜದಲ್ಲಿ ಒಂದು ನನ್ನದೆಯಾದ ಚಾಪು ಮೂಡಿಸಬೇಕು ಎನ್ನುವ ಆಸೆ ನನ್ನಲ್ಲಿ ಚಿಕ್ಕನಿಂದಲೂ ಮೊಳಕೆ ಒಡೆದಿತ್ತು. ಅದರಂತೆ ನನ್ನ ಕನಸಿನ ಬೆನ್ನು ಹತ್ತಿ ಸಮಾಜದಲ್ಲಿ ಒಂದು ನನ್ನದೆಯಾದ ಹೆಜ್ಜೆ ಗುರುತು ಮೂಡಿಸಲ್ಲು ಎಲ್ಲ ರೀತಿಯಲ್ಲು ಪ್ರಯತ್ನ ಮಾಡುತ್ತಿರುವೆ. ಆದರೂ ಸಹ ಕೆಲವು ಬಾರಿ ನನಗೆ ಇರುವ ಸಮಸ್ಯೆಗಳ ಕುರಿತು ಜೀವನದಲ್ಲಿ ಜಿಗುಪ್ಸೆ ಮೂಡಿ ಆತ್ಮ ಹತ್ಯೆಯ ಪ್ರಯತ್ನಗಳನ್ನು ಸಹ ಮಾಡಿರುವೆ. ಇದರಿಂದ ಅಪ್ಪನಿಗೆ ತುಂಬಾನೆ ನೋವು ಮಾಡಿರುವೆ.
ಆದರೆ ಇನ್ನೂ ಮುಂದೆ ಯಾವೆ ರೀತಿಯಾದ ತಪ್ಪು ಕಲ್ಪನೆಗಳು, ಅನಾಹುತಗಳು ಮಾಡಿಕೊಳ್ಳುವುದಿಲ್ಲ. ನಾನು ಅನಾರೋಗ್ಯದಿಂದ ಇದ್ದರೆ ಎನಾಯಿತು? ನನಗಿಂತಲೂ ಅನಾರೋಗ್ಯ, ಅಂಗವೈಕಲ್ಯದಿಂದ ಹಲವರು ಬಳಲುತ್ತಿದ್ದಾರೆ. ಅವರು ಸಹ ಸಾಧನೆ ಮಾಡಿದ್ದಾರೆ. ನಾನು ಏಕೆ ಅವರಂತೆ ಸಾಧನೆ ಮಾಡಬಾರದೇಕೆ ಎಂದು ಪ್ರಶ್ನಿಸಿಕೊಳ್ಳುತ್ತಾ ಇದ್ದಾಗ ನನಗೆ ಡೇವಿಡ್ ಹಾರ್ಟ್‍ಮೇನ್ ಎನ್ನುವ ಸಾಹಸಿ ಹುಡುಗನ ಜೀವನ ಆದರ್ಶವಾಗಿ, ಜೀವನಕ್ಕೆ ಸ್ಪೂರ್ತಿಯಾಗಿದೆ.
ಆ ಹುಡುಗ ಜೀವನದ ಒಂದು ಘಟನೆಯನ್ನು ಮಾತ್ರ ನಿಮ್ಮೆಲ್ಲರ ಮುಂದೆ ಇಡಲು ಇಷ್ಟ ಮಾಡುತ್ತೆನೆ. ಈತ ಹುಟಿನಿಂದಲೂ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ. ಸುಮಾರು ಹನ್ನೊಂದು ವರ್ಷದವನು ಇದ್ದಾಗ ಎರಡು ಕಣ್ಣುಗಳು ಶಾಸ್ವತವಾಗಿ ಕುಡುರಾಡವು. ಜೀವನವೆಲ್ಲ ಕತ್ತಲ್ಲೆ ಕಳೆಯಬೇಕಾಯಿತು. ಒಂದು ದಿನ ಆತ ತಂದೆ ಪ್ರೇಡ ಹಾರ್ಟ್‍ಮೇನ್‍ಗೆ ಅಪ್ಪ ನಾನು ಬೇಸ್‍ಬಾಲ ಆಡುತ್ತೇನೆ ಎಂದು ಹೇಳುತ್ತಾನೆ. ಆಗ ಅಪ್ಪ ಒಂದು ಕ್ಷಣ ಯೋಚಿಸಿ ಪ್ರಯತ್ನ ಪಡದೆ ಹೋರತು ಯಾವುದನ್ನು ಸಾಧಿಸಲು ಸಾದ್ಯವಿಲ್ಲ.
ಪ್ರಯತ್ನ ಪಡುತಿಯಾ ಎಂದು ಕೇಳಿದ. ನಂತರ ಸ್ವತಃ ಅಪ್ಪನೆ ಮುಂದೆ ನಿಂತು ತನ್ನ ಕುರುಡು ಮಗನಿಗೆ ಬೇಸ್‍ಬಾಲ ಕಲಿಸುತ್ತಾನೆ. ಹುಡುಗ ಹುಟ್ಟು ಕುರುಡನಲ್ಲ. ಈತ ಗಾಳಿಯಲ್ಲಿ ಶಬ್ದಮಾಡುತ್ತಾ ಬರುವ ಬಾಲ್‍ನ್ನು ಜೋರಾಗಿ ಹೋಡೆಯ ಬೇಕೆನ್ನುವ ಸಾಮಾನ್ಯ ಜ್ಞಾನ ತಿಳಿದುಕೊಂಡಿದ್ದ. ಆದರೆ ಈತನಿಗೆ ಕೆಲವು ಬಾರಿ ಕತ್ತಲೆ ಎನ್ನುವ ಜಗತ್ತು ಪ್ರಪಾತಕ್ಕೆ ತಳುತ್ತಿತ್ತು. ಆಗ ತಾಯಿ ಬಂದು ಮಗು ನಾನು ಇಲ್ಲೆ ಇದ್ದೇನೆ. ಹೇದರಬೇಡ ಎಂದು ಹೇಳುತ್ತಾ ದೈರ್ಯ ಹೇಳುತ್ತಿದ್ದಳು.
ಅವನ ಅಕ್ಕ ಬಾರ್ಬರಾ ಟಾಸ್ಕ್ ಮಾಸ್ಟರ್ ಆಗಿದ್ದಳು. ನಿನ್ನ ಕೆಲಸ ನೀನೆ ಮಾಡಿಕೋ ಅಂತ ಹೇಳುತ್ತಿದ್ದಳು. ಪ್ರಯತ್ನ ಮಾಡು ಎನ್ನುವ ತಂದೆ, ನಾನು ನಿನ್ನ ಜೋತೆಗೆ ಇರುವೆ ಹೆದರಬೇಡ ಎನ್ನುವ ತಾಯಿ, ನಿನ್ನ ಕೆಲಸ ನೀನೆ ಮಾಡಿಕೊ ಎನ್ನುವ ಅಕ್ಕ ಮೂರು ಜನ ಟೀಚರ್ಸ್‍ಗಳ ಕೈಯಲ್ಲಿ ಜೀವನ ಪಾಠ ಕಳಿತ.
ಡೇವಿಡ್ ಮುಂದೊಂದು ದಿನ ತನ್ನ 13ನೇ ವಯಸ್ಸಿನಲ್ಲಿ ನಾನು ಡಾಕ್ಟರ್ ಆಗ ಬೇಕು ಅಂಥ ಅಪ್ಪನೀಗೆ ತಿಳಿಸುತ್ತಾನೆ.
ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಾನೆ. ಮೊದಲು ಬ್ಲೈಂಡ್ ಸ್ಕೂಲ್ ಬಿಟ್ಟು ಪ್ರೌಡ ಶಾಲೆಗೆ ಸೇರಿಕೊಂಡ. ಅಪ್ಪ ಒಂದು ದಂಗಾಗುತ್ತಾನೆ. ಇವನಿಗೆ ಬೇಡ ಅಂಥ ಹೇಗೆ ಹೇಳೊದು ತಿಳಿಯದೆ ಸಂಬಂಧಿಕರು, ಹಾಗೂ ನಾನು ಸೇರಬೇಕು ಅಂದಿರುವ ಕಾಲೇಜಿನ ಲೇಕ್ಚರ್ ಕಡೆಯಿಂದ ಹೇಳಿಸಿದರು. ಆದರೆ ಆತ ಹೇಳತ್ತಾನೆ ಜೀವನದಲ್ಲಿ ಚಾಲೇಂಜ್‍ಗಳನ್ನೆ ತೆಗೆದುಕೊಳ್ಳದೆ ಇರುವವರೆ ನೀಜವಾದ ಅಂಗವಿಕಲರು. ನನ್ನಂತಹ ಅನೇಕ ಜನರಿಗೆ ಸ್ಪೂರ್ತಿಯಾಗುತ್ತೇನೆ ಎಂದನು. ನಗರದಲ್ಲಿರುವ ಪ್ರಸಿದ್ಧ ಮೇಡಿಕಲ್ ಕಾಲೇಜುಗಳ ಪೈಕಿ 10ಕಾಲೇಜುಗಳಿಗೆ ಅಪ್ಲೀಕೇಶನ್ ಹಾಕಿದ ಅದರಲ್ಲಿ ಎಂಟು ಕಾಲೇಜುಗಳು ತಿರಸ್ಕರಿಸಿದವು.
ತಾನು ನಂಬಿಕೆಯಿಟ್ಟುಕೊಂಡಿರುವ ಒಂಬತ್ತನೆ ಕಾಲೇಜು ಸಹ ಕೈಚಲ್ಲಿದಾಗ ಮೊದಲ ಬಾರಿಗೆ ಕಣ್ಣಂಚಲಿ ನೀರು ತುಂಬಿಕೊಂಡು ನಾಣು ಸೋತೆ ಅಂತ ತನ್ನ ಸ್ನೇಹಿತೆಯ ಕೈಹಿಡಿದು ಅಳುತ್ತಾನೆ. ಆದರೆ ಅವನಿಗೆ ಹತ್ತನೆ ಕಾಲೇಜಿನ ಕಮೀಟಿಯ ಸದಸ್ಯರ ಒಂದು ಮಾತಿನಿಂದ ಅವನಿಗೆ ಡಾಕ್ಟರ್ ಕಲಿಯಲು ಅವಕಾಶ ಸಿಕಿದನ್ನು ಅವನ ಅಕ್ಕ ಬಾರ್ಬರಾ ದುಖಃದಲ್ಲಿ ಕಾಲ್ ಮಾಡುತ್ತಾಳೆ. ಇನ್ನು ಅವನು ಡಾಕ್ಟರ್ ಓದಿದ್ದು ಒಂದು ತಪಸ್ಸು ಮಾಡಿದಂತೆ. ಅವನ ಪರೀಕ್ಷೆಯ ಪಲಿತಾಂಶ ನೋಡಿದಾ ಗೊತ್ತಾಯಿತು ಅವನು ಇಡೀ ಕಾಲೇಜಿಗೆ ಮೊದಲ ರ್ಯಾಂಕ್ ಬಂದಿದ್ದ.
ಅವನಿಗೆ ತರಬೇತಿ ನೀಡಿದ ಲೆಕ್ಚರ್ ಒಬ್ಬರು ಹೇಳತ್ತಾರೆ ಡೇವಿಡ್ ಸಾಮಾನ್ಯರ ಕಣ್ಣಿಗೆ ಅಸ್ಥವ್ಯಸ್ಥನಂತೆ ಕಂಡರು ಅವನು ಈ ಕಾಲೇಜಿನಲ್ಲಿರುವ ಕಾಲೇಜಿನಲ್ಲಿರುವ ಎಲ್ಲ ವೈದ್ಯರಿಂಗತಲೂ ಆರೋಗ್ಯವಂತನಾಗಿದ್ದಾನೆ. ಇವನ ಹತ್ತಿರ ಹೋಗು ರೋಗಿಗಳು ಯಾವುದೇ ಅವಮಾನ ಪಡದೇ ದೈರ್ಯವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು.
ಅಂತಹ ಕುರುಡು ವ್ಯಕ್ತಿ ಇಂತಹ ಅಭುತ್ವ ಪೂರ್ಣ ಸಾಧನೆ ಮಾಡಿರುವ ವ್ಯಕ್ತಿಯೇ ನಾನು ವೈದ್ಯೆ ಆಗಬೇಕು, ಸಮಾಜದಲ್ಲಿ ನನ್ನದೇಯಾದ ವಿಭಿನ್ನ ರೀತಿಯಲ್ಲಿ ಸಾಧನೆ ಮಾಡಬೇಕು ಎನ್ನುವ ಆಸೆ, ಕನಸಿಗೆ ರೇಕ್ಕೆ ಕಟ್ಟಿ, ಸ್ಪೂರ್ತಿಯಾದರು. ಈಗ ನನ್ನ ಆಸೆಗೆ ಅಪ್ಪ ಸಹಕರಿ ಉತ್ತಮ ಶಿಕ್ಷಣ ನೀಡುತ್ತಾರೆ. ಅವರ ಆಸೆ, ಕನಸ್ಸನ್ನು ಪೂರ್ತಿ ಮಾಡದೇ ಹೋದರು ಚಿಂತೆಯಿಲ್ಲ. ಅಪ್ಪನನ್ನು ಈ ಸಮಾಜದಲ್ಲಿ ತಲೆ ತಗ್ಗಿಸುವಂತಹ ಕೆಲಸ ಮಾಡದೇ, ಹೆಮ್ಮೆಯಿಂದ ಎದೆ ತಟ್ಟಿ ಹೇಳುವಂತೆ ಬದುಕುತ್ತೇನೆ.
ಐ ಲವ್ ಯು ಅಪ್ಪ
–ಕಾಂಚನ
ಸುದ್ದಿದಿನ.ಕಾಂ|ವಾಟ್ಸಾಪ್|9980346243