ಭಾವ ಭೈರಾಗಿ
ಕವಿತೆ | ಬರಲಿ ಮತ್ತೊಮ್ಮೆ..!
- ರಂಜಿತ ಹರಲೀಪುರ
ಅದೊಂದು ಕಾಲವಿತ್ತು ಎಲ್ಲೆಂದರಲ್ಲಿ ಗಿಡಮರ,
ಎಲ್ಲೆಂದರಲ್ಲಿ ಪಕ್ಷಿ ಸಂಕುಲ,
ಕಾಲ ಕಾಲಕ್ಕೆ ಬೀಳುತ್ತಿದ್ದ ಮಳೆರಾಯನ
ಕೃಪೆಯಿಂದ ಸಾಗುತಿತ್ತು ರೈತನ
ನೆಮ್ಮದಿಯ ಜೀವನ.
ಪರಿಶುದ್ಧ ವಾಯುವಿಗಾಗಿ ಹಂಬಲಿಸುವ
ಕಾಲ ಇದಾಗಿದೆ,
ದೊಡ್ಡ ದೊಡ್ಡ ಗಿಡಮರಗಳ ಉರುಳಿಸಿ
ಡಾಂಬರ್, ಕಾಂಕ್ರೀಟ್ ನಂತಹ ಉದ್ದಗಲದ
ರಸ್ತೆಗಳು ನಿರ್ಮಾಣಗೊಂಡಿವೆ,
ಮುಗಿಲೆತ್ತರದ ಟೆಲಿ ಟವರ್ ಗಳಿಂದ
ಪಕ್ಷಿ ಸಂಕುಲದ ನಷ್ಟ ಉಂಟಾಗಿದೆ.
ಕೃತಕ ವನ ನಿರ್ಮಿಸಿ ನೆಮ್ಮದಿಯ
ಹುಡುಕುವ ಕಾಲ ಇದಾಗಿದೆ,
ಪ್ರಕೃತಿಯ ಸಮತೋಲನಕ್ಕಾಗಿ ಮನುಷ್ಯ
ಹೋರಾಡುವಂತಾಗಿದೆ.
ಪ್ರಕೃತಿಯು ಮನುಷ್ಯನೊಂದಿಗೆ ಮುನಿಸಿಕೊಂಡು
ಒಮ್ಮೊಮ್ಮೆ ಸಿಡುಕುತ್ತಿದೆ,
ಒಮ್ಮೊಮ್ಮೆ ರಾಜಿಯಾಗುತ್ತಿದೆ.
ಬರಲಿ ಮತ್ತೊಮ್ಮೆ ಅಂತದ್ದೊಂದು
ನೆಮ್ಮದಿಯ ಕಾಲ,
ಅಚ್ಚ ಹಸಿರಿನ ಪರಿಸರದ ಮಡಿಲಲ್ಲಿ
ವಾಸಿಸುವ ನೆಮ್ಮದಿಯ ಸುಂದರ ಕಾಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243