ಭಾವ ಭೈರಾಗಿ

ಕವಿತೆ | ಪತ್ತೆ

Published

on

  • ಎ.ಕೆ. ರಾಮಾನುಜನ್

ಮೊಹಲ್ಲದಿಂದ
ಬೀದಿಗೆ
ಬೀದಿಯಿಂದ
ಮನೆಗೆ
ಮನೆಯಲ್ಲಿ
ನನ್ನ ವರೆಗೆ

ಪೋಲೀಸು ನಾಯಿ
ಕೈತಪ್ಪಿದ ಖೈದಿಯ
ಹಳೆಯ ಜೈಲು ವಾಸನೆ ಹಿಡಿದು
ಮೂಸಿ ಅರಸಿದ
ಹಾಗೆ

ಪರವೂರಿನ ಹಳೆಯ ಸ್ನೇಹಿತ
ಅಪರಿಚಿತರನ್ನು ಕೇಳಿ ಕೇಳಿ
ವಿಳಾಸ
ಪತ್ತೆ ಹಚ್ಚಿದ ಹಾಗೆ

ನನ್ನೊಳಗೆ
ನಿನ್ನ ನಿರಂತರ ತನಿಖೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version