ಭಾವ ಭೈರಾಗಿ

ಕವಿತೆ | ಕ್ಷಮೆ ಕೇಳಿಬಿಡು

Published

on

ವ್ಯಂಗ್ಯಚಿತ್ರ : ಪಿ.ಮೊಹಮ್ಮದ್
  • ಹಿಂದಿ ಮೂಲ: ಶಕ್ತಿ ಪ್ರಕಾಶ್, ಕನ್ನಡಕ್ಕೆ: ಹಜ಼ರತ್ ಅಲಿ ಉಜ್ಜಿನಿ

ಹಾಗೆಯೇ ಸುಮ್ಮನೆ ಹೇಳುತ್ತಿಲ್ಲ ನಿನಗೆ
ಕ್ಷಮೆ ಕೇಳು ಎಂದು,
ಅಯ್ಯಾ ನಿನಗೆಯೇ ಹೇಳುತ್ತಿರುವುದು
ಕ್ಷಮೆ ಕೇಳಿಬಿಡು

ನಮ್ಮೆದುರಿಗಿಲ್ಲವೇ ಆ ಘನ ಹೊತ್ತಿಗೆ, ನಮಗೂ ಅನಿಸುತ್ತಿದೆ ಮತ್ತೆ ಪಂಚಾಯಿತಿದಾರರು ಹೇಳುತ್ತಿರುವರು
ಕ್ಷಮೆ ಕೇಳಿಬಿಡು

ಕ್ಷಮೆ ಕೇಳಿದೆಯೇಅಲ್ಲವೇ ನಮ್ಮವರು ವೀರರಾದದ್ದು, ಸಾಯುವವರೆಗೆ ಸುಪ್ಪತ್ತಿಗೆಯಲ್ಲಿ ಬದುಕಲು ಪೆನ್ಷನ್ ಪಡೆದಿದ್ದು, ನೀನು ನಿನಗಾಗಿ ಒಂದಷ್ಟು ಲಾಭವನ್ನು ಅಳೆದು ನೋಡು
ಕ್ಷಮೆ ಕೇಳಿಬಿಡು

ಪಾಪಕ್ಕೆ ಅಪರಾಧಿಯಷ್ಟೇ ಅಲ್ಲ ಸುಮ್ಮನಿರುವ ಸಭಗನದೂ ಪಾಲಿದೆ, ಆಗತಾನೆ ಸಂಭವಿಸಿತು ಪಾಪ
ಕ್ಷಮೆಕೇಳಿಬಿಡು

ದಂಡಕಟ್ಟಿಯು ರಾತ್ರಿ ನಿದ್ರೆ ಬಾರದ ಬಹಳಷ್ಟು ಸಂಭವಗಳುಂಟು, ಮತ್ತೆ ಮುಂಜಾನೆದ್ದು ಜಪ ಮಾಡೋಣವಂತೆ
ಕ್ಷಮೆಕೇಳಿ ಬಿಡು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version