ಭಾವ ಭೈರಾಗಿ

ಕವಿತೆ | ಬುದ್ಧನ ಗೆಲ್ಲುವ ಪರಿ

Published

on

  • ಎಸ್. ರಾಜುಕವಿ ಸೂಲೇನಹಳ್ಳಿ

ಸಂಸ್ಕಾರ ಎದೆಯೊಳಗಿದ್ದರೂ ತವಕವೇ
ಬಾಲ್ಯದಿ ಕಂಡ ಕಾಸಿಲ್ಲದಿದ್ದರೂ ಸುಖವಿತ್ತು
ಮತ ಪಂಥಗಳ ಗೊಡವೆ ತಿಳಿಯುತ್ತಿರಲ್ಲ
ಜ್ಞಾನ ಧಾರೆ ಎರೆಯುವ ಮಹಾತ್ಮರು
ಸಕಲ ವಿಧ್ಯೆ ಕಲಿಸಿದಾತರು ಮರೆಯಲಾರೆ.

ಸಮಾಜದ ಹಲವು ಮುಖ ಚಿಗುರುತ್ತಾ
ಇಂದೆನೆಗೆ ಗೋಚರ ಆದೊಡೆ ವಿಸ್ಮಯ
ಬುದ್ಧನ ತತ್ವಗಳು ಕೈ ಬೀಸಿ ಕರೆಯುತ್ತಿವೆ
ಎನ್ನ ತುಂಬೆಲ್ಲ ಓಲೆಯ ಸಾಕ್ಷಾತ್ಕಾರ
ಒಳ್ಳೆತನ ಎನ್ನೊಡಲ ಮಹತ್ವ ಸಂಕೇತ.

ಬುದ್ಧ ಕಂಡ ಆ ಬದುಕು ಮರೀಚಿಕೆ
ಎತ್ತ ಸಾಗುತ್ತಿದೆ ನಮ್ಮೆಲ್ಲರ ಗುರಿಯಿರದ
ನಿಶ್ಚಲ ಅರಿವಿರದ ಆಧುನಿಕ ತಂತ್ರಜ್ಞಾನ
ಸೋಗಿನಲಿ ಕಳೆವ ಕ್ಷಣಗಳು ಯಾರನ್ನು
ಗೆಲ್ಲಲಿಲ್ಲ ಸ್ವಾರ್ಥದ ಮಡುಗೆ ಸಾಗರದಂತಿದೆ.

ನೈತಿಕತೆ ಹೆಸರಲ್ಲಿದೆ, ಬದ್ದತೆ ಕಣ್ಮರೆಯಾಗಿಹೆ
ಪ್ರಾಮಾಣಿಕತೆ ಕಥೆಗಳಲ್ಲಿವೆ ಶಿಸ್ತು ಬರಹದೊಳಗಿರೆ
ನೀತಿ ಸಾಲಿನಲ್ಲಿರೆ ಹೃದಯ ಕೊರಗುವುದರಲ್ಲಿದೆ
ಸಂಭಂಧ ಅಂತಸ್ತಿನ ಸಂಗಡ ರಾಜಿಯಾಗಿರೆ
ಪ್ರೀತಿ ಸಂತೆಯೊಳಗಣ ವಸ್ತುವಾದೊಡೆ.

ಮನವು ಬೆಳೆಯಲಾರದೆ ಕಳೆಯುತ್ತಿದೆ
ಬುದ್ದಿಗೂ ಮಂಕು ಬಡಿದಿರೆ ಕನಸು ನಶ್ವರ
ಬಾಳಲ್ಲಿ ಬೆಳಕಿಲ್ಲ ಬರೀ ಮೋಸದ ಕತ್ತಲೆ
ದೌರ್ಜನ್ಯ, ಅಧಿಕಾರ, ಹಣ, ಇವೇ ಪ್ರಮುಖ
ಇನ್ನಾದರೂ ನಾ ಬುಧ್ಧನ ಮನ ಗೆಲ್ಲಲು
ಆಗದ ತಿದ್ದುಪಡಿ ತರಲಾಗದ ಸ್ಥಿತಿ ಎನ್ನದು.

(ಎಸ್. ರಾಜುಕವಿ ಸೂಲೇನಹಳ್ಳಿ, ಕಾದಂಬರಿಕಾರರು,
ಮೊ:9741566313)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version