ಭಾವ ಭೈರಾಗಿ
ಒಂದು ಹುಡುಗಿಯ ಕತೆ
- ಬಂಜಗೆರೆ ಜಯಪ್ರಕಾಶ
ಕೈಗೆ ಬಳೆ ಕಾಲಿಗೆ ಚೈನು
ಎದೆಗೆ ಕಟ್ಟು
ದ್ರಾಕ್ಷಿ ಕಣ್ಣಿನ ಹುಡುಗಿ
ನನ್ನ ಕನಸುಗಳಲ್ಲಿ ಬಿಕ್ಕುತ್ತಾಳೆ
ನೋವು ಸರಳುಗಳಿಂದ ನೇಯ್ದ
ನಗುವ ಪಂಜರದಲ್ಲಿ ಹುಡುಗಿ
ಬಾಗಿಲಿಗಾಗಿ ತುಳಿದಾಡುತ್ತಾಳೆ
ಪೆಠಾರಿ ಪಾತ್ರೆಗಳಿಗೆ
ಎಡವಿಕೊಂಡು ಹುಡುಗಿ
ನನ್ನ ನೆನಪಿನ ಕಫದೊಳಗೆ
ರಕ್ತದ ಗೆರೆಯೆಳೆಯುತ್ತಾ ಅಡ್ಡಾಡುತ್ತಾಳೆ
ನಾನು ಇಂದ್ರ ರಾಮಚಂದ್ರ
ಅವಳು ಅಹಲ್ಯೆ
ಪ್ರೇಮ ಸೂರ್ಯನಿಗೆ
ಕಣ್ಣೀರಿನ ಆರ್ಘ್ಯ.
(ಚಿಂತಕ ಬಂಜಗೆರೆ ಜಯಪ್ರಕಾಶ ಅವರ ‘ ಬಂಜಗೆರೆ ಈವರೆಗಿನ ಕವಿತೆಗಳು’ ಪುಸ್ತಕದಿಂದ ‘ ‘ಒಂದು ಹುಡುಗಿಯ ಕತೆ’ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು 2015 ರಲ್ಲಿ ಪ್ರಕಟಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243