ಭಾವ ಭೈರಾಗಿ
ಕವಿತೆ | ಮೌನದ ಪಯಣ
ಮೌನಿಸು ಧ್ಯಾನಿಸು
ಮತ್ತೊಮ್ಮೆ
ದಯಮಾಡಿ ಮೌನಿಸು
ಹಿಂತಿರುಗಿ ನೋಡಿದಾಗ
ನಿನ್ನ ಹೆಜ್ಜೆಯ.
ಮತ್ತೆಂದೂ ಹಿಂದಿರುಗಿ ಹೋಗಲಾರದು
ನೆನಹುಗಳ ಸರಮಾಲೆಯಲ್ಲಿ
ಪೊಡಮೂಡುವ ನೀ ಪಾದಕಮಲಕ್ಕೆ
ನುಡಿಮುತ್ತ ನೀಡುವೆ.
ಮನದಲ್ಲಿ ಮೂಡುವ
ಭಾವದಲೆಗಳನ್ನೇರಿ ಬರಲು
ಸನಿಹಕ್ಕೆ ಸೆಳೆದಿದೆ ನಿನ್ನ
ಒಬ್ಬಳೆ ಕೂರಲಾರೆ
ಯಾರನೂ ಕೇಳಲಾರೆ
ನಿನ್ನಾತ್ಮದಾಲಿಂಗನಕ್ಕೆ
ಕಾದಿಹೆನು ಸಮ್ಮಿತಿಸು ಒಮ್ಮೆ.
ಮಗದೊಮ್ಮೆ ಮೌನಿಸು ಧ್ಯಾನಿಸುವೆಯಾ?
ನಿನ್ನಾತ್ಮದಾಲಿಂಗನಕ್ಕೆ ಕಾದಿಹೆನು
ನೇಹದ ಕರೆಗೋಗಟ್ಟು
ಮೂದಲಿಸದೆ ಪ್ರೇಮಿಸು ನೀನು
ಒಬ್ಬಳೆ ಕೂರಲಾರೆ
ಯಾರನೂ ಕೇಳಲಾರೆ.
–ಸಾಗರಿ (ಪುಷ್ಪಲತ)
ಸುದ್ದಿದಿನ.ಕಾಂ|ವಾಟ್ಸಾಪ್|9986715401