ಭಾವ ಭೈರಾಗಿ

ಕವಿತೆ | ನನ್ನ ನಲವಿನ ಬಳ್ಳಿ

Published

on

  • ಕೆ.ಎಸ್. ನಿಸಾರ್ ಅಹಮದ್

ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ ಲೋಕವೆ, ಹೀರದಿರು ದುಂಬಿಯೊಲು ಹೂವ; ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ ಚಣದೊಂದೆ ಕನಸಿದುವೆ, ಬೆರಸದಿರು ನೋವ.

ನನ್ನ ನಲವಿನ ಬಳ್ಳಿ ..

ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ ಪಲ್ಲವಿಸುತಿದೆ ಎದೆಯ ಚೈತ್ರದಂತೆ; ಇಂದು ನಾ ಮೈ ಮರೆತು ಒಲೆಯುವ ಸೊಗ ಬೆರೆತು, ಆಸೆಗಳ ಚಿವುಟದಿರು ಹಕ್ಕಿಯಂತೆ.

ನನ್ನ ನಲವಿನ ಬಳ್ಳಿ …

ಆಗಸಕೆ ಎಸೆದಿರುವ ಕಲ್ಲಿನಂತೇರುವೆನು, ಗಾಳಿಯಲಿ ತೇಲುವೆನು ಗಂಧದಂತೆ; ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲಿ ಬಿಟ್ಟುಬಿಡು ಈಗೆನ್ನ ಮುಕ್ತನಂತೆ.

ನನ್ನ ನಲವಿನ ಬಳ್ಳಿ …

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version