ಭಾವ ಭೈರಾಗಿ

ಕವಿತೆ | ಪುಟಿನ್ ಗೊಂದು ಪತ್ರ

Published

on

  • ರಮೇಶ್ ಎನ್ ಜೆ, ಮೈಸೂರು

ನಾವು ಬರಲಾಗುವುದಿಲ್ಲ ನಿನ್ನ ಹತ್ತಿರ
ಏಕೆಂದರೆ ನಮ್ಮಿಬ್ಬರ ನಡುವೆ ಯಾರದೋ ಇಲ್ಲಿ ಕುತಂತ್ರ
ಬಿಡಿಸಲಾಗುತ್ತಿಲ್ಲ ನನಗೆ ತಿಳಿದಂತೆ ಅದರ ಸೂತ್ರ
ಬಿಡಿಸಬೇಕೆಂದರೆ ಮೊದಲು ನಾವು ಆಗಬೇಕು
ಯುದ್ಧದಿಂದ ಮುಕ್ತ ಸ್ವಾತಂತ್ರ.

ಯುದ್ಧದಿಂದ ಎಲ್ಲೆಲ್ಲೂ ನರಕ ನಾಕಾ
ಇನ್ನೂ ಏಕೆ ಗೊತ್ತಿಲ್ಲವೇ ನಿನಗೆ ಮುಗಿದ ಮೇಲೆ ಅಲ್ಲಿ ಎಲ್ಲವೂ ಸ್ಮಾರಕ ಅಂತಹ ಹೆಸರು ನಿಮಗೆ ಬೇಕಾ ಯಾಕೆಂದರೆ ಯಾವ ಗಿಡ ಪಕ್ಷಿಗಳಲ್ಲೂ
ಅಷ್ಟೇ ಅಲ್ಲ ಕ್ರಿಮಿಕೀಟಗಳನ್ನು ಸೃಷ್ಟಿ ಕೊಳ್ಳಲಾಗುವುದಿಲ್ಲ ಅದರದರ ನಾಕ ಯುದ್ಧ ನೀನು ಅದು ನರಕ ಬಾಕ.

ಮೊದಲು ಯುದ್ಧವನ್ನು ನಿಲ್ಲಿಸುವ ಮಾನವ ಪ್ರಭು ಏಕೆಂದರೆ ಯುದ್ಧದಲ್ಲಿ ಗೆದ್ದವನಿಗೆ ಮೊದಲು ಖಾಲಿ ಚೊಂಬು ಆಮೇಲೆ ಸೋತವನಿಗೆ ವೀರಮರಣ ವೆಂಬ ತುಂಬು ಒಂದಂತೂ ಸತ್ಯ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬುದನ್ನು ಮೊದಲು ನೀನು ನಂಬು.

ನಾವು ಮಾಡುತ್ತಾ ಇರುವುದು ಯುದ್ಧ ಅಲ್ಲವೇ ಅಲ್ಲ ನಿಜ ನಮ್ಮಲ್ಲಿ ಇರುವುದೊಂದೇ ವ್ಯಾಮೋಹವೆಂಬ ಕಣಜ ನಾವು ಬಿತ್ತುತ್ತಾ ಇದ್ದೇವೆ ಅದರದೇ ಆದ ಬೀಜ
ಇನ್ನೂ ಸೂರ್ಯ ಚಂದ್ರನ ಬಿಂಬ ಅಲ್ಲಿ ಇನ್ನೂ ಇರುವುದಿಲ್ಲ ತೇಜ ಏಕೆಂದರೆ ಸೂರ್ಯ ಚಂದ್ರನ ಕಿರಣಗಳನ್ನು ಹೊರಸೂಸುವ ವಿಷದ ವಿಕಿರಣವೇ ಇನ್ನೂ ಅಲ್ಲಿ ಸಹಜ.

ನೀನು ಹದ್ದುಮೀರಿ ಬಂದೆ ಸರಹದ್ದನ್ನು ಸುಮ್ಮನಿರದೆ ಸೃಷ್ಟಿಸುತ್ತದೆ ಇಲ್ಲಿ ಬಂದು ರಕ್ತ ಕಸಾಯಿಖಾನೆ ನೀನು ಸೃಷ್ಟಿಸಿಕೊಳ್ಳಲು ಇಚ್ಛೆ ಪಡುತ್ತಾ ಇದ್ದೀಯೇನೋ ಒಂದು ಇತಿಹಾಸವನ್ನೇ ಅದು ಹೇಗೆ ಸಾಧ್ಯ ದೂರದಿಂದ ನನಗೆ ಅನಿಸುತ್ತಿದೆ ನೀನೇ ಅಳಿಸುತ್ತಾ ಇದ್ದೀಯಾ ನಿನ್ನ ವಂಶಾವಳಿಯನ್ನೇ.

ಇನ್ನೂ ನಿನ್ನ ಯುದ್ಧದ ಕಣಿವೆಯೊಂದು ಹಾಡಿದೆ ಹಾಡು ನಿನ್ನ ಯುದ್ಧದ ಭೋರ್ಗರೆತಕ್ಕೆ ಸೌರಮಂಡಲದ ಸೀಳಾಗಿದೆ ನೋಡು ನಾವು ನೀವು ಬದುಕುಳಿದರೂ
ಉಸಿರಾಡುವುದು ಇನ್ನೂ ಪಾಡು ಅದನ್ನು ನೀನು ಅರಿತರೂ ಯಾಕೆ ಇಂತಹ ಸೇಡು.

ಯುದ್ಧವನ್ನು ನಿಲ್ಲಿಸಲು ಮೊದಲು ಮಾತುಕತೆ ನಿಲ್ಲಿಸಿ ಮೌನ ಒಂದನ್ನೇ ಮಾತ್ರಾ ಸೃಷ್ಟಿಸಿ ನಿಮ್ಮ ಈ ಯುದ್ಧದ ಭೋರ್ಗರೆತಕ್ಕೆ ಮಗುವೊಂದು ಹುಟ್ಟಿ ತಾಯಿಯ ತೊಡೆಯ ಮೇಲೆ ನರಳಾಡುತ್ತಿರುವ ಮಗುವಿನ ರಕ್ತವು ಇನ್ನೂ ಹಸಿ ಇನ್ನೂ ನಿನಗೆ ಬೇಕೇ ಹಾಹಾಕಾರ ವೆಂಬ ಮಾನವನ ರಕ್ತದ ಶಾಖ ವೆಂಬ ಬಿಸಿ.

ಈಗಲಾದರೂ ಚಿಂತಿಸಿ ಯುದ್ಧವನ್ನು ಬಿಟ್ಟು ಮಂಥಿಸಿ ಮೊದಲು ನಿಮ್ಮ ನಿಮ್ಮ ದೇಶವನ್ನು ವೃದ್ಧಿಸಿ ಎಲ್ಲರೂ ಯುದ್ಧವಿಲ್ಲದ ಪ್ರಪಂಚವನ್ನೇ ಸೃಷ್ಟಿಸಿ.

ಯುದ್ಧ ಒಬ್ಬರಿಗೆ ಪ್ರತಿಷ್ಠೆಯ ಪ್ರತೀಕ ಇನ್ನೊಬ್ಬರಿಗೆ ತಮ್ಮ ಉಳಿಯುವಿಕೆಯ ಆತಂಕ ಆದರೂ ಇವೆರಡೂ ಮನುಕುಲವೇ ಕಳಂಕ ಆದುದರಿಂದಲೇ ನಮ್ಮ ನಿಮ್ಮ ಮನೆಯಲ್ಲಿ ಏಕೋ ಏನೋ ಈಗ ಎಲ್ಲೆಲ್ಲೂ ಸೂತಕ.

ಕೊನೆಯದಾಗಿ ಯುದ್ಧವನ್ನು ನಿಲ್ಲಿಸಲು ನನ್ನದೊಂದು ಹೃದಯ ಪೂರ್ವಕ ಮನವಿ ರಾಗ ದ್ವೇಷವನ್ನು ನಿಮ್ಮ ನಿಮ್ಮ ದೇಶ ದೇಹದಿಂದ ಗಟ್ಟಿಯಾಗಿ ದಯವಿಟ್ಟು ಕೊಡವಿ ಏಕೆಂದರೆ ನಮ್ಮ ನಿಮ್ಮ ಈ ಹುಚ್ಚಾಟಕ್ಕೆ ಹಸುಗೂಸು ಭೂಮಿತಾಯಿ ಆಗುತ್ತಲೇ ಇದ್ದಾಳೆ ಇನ್ನೂ ಬಡವಿ.

ಮೊದಲು ಮಾಡಿಕೊಳ್ಳಿ ಕದನವಿರಾಮ ಸ್ವಲ್ಪವಾದರೂ ನಿಶ್ಚಿಂತೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತವೆ ಹುಳು ಹುಪ್ಪಟಿ ಪಕ್ಷಿಧಾಮ ಆಗಲೂ ಉಣ್ಣಲಾಗದೆ ಸತ್ತರೆ ಹೋಮ ಇದ್ದರೆ ಪಕ್ಷಿಧಾಮ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version