Connect with us

ದಿನದ ಸುದ್ದಿ

ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಕೇಂದ್ರೀಯ ಸೈನಿಕ ಮಂಡಳಿಯು ಭಾರತೀಯ ಸೇನೆಯ ಜೆ.ಸಿ.ಓ ರ್ಯಾಂಕ್‍ವರೆಗಿನ ಅಥವಾ ವಾಯು ಸೇನೆ, ನೌಕಾ ಸೇನೆಯ ತತ್ಸಮಾನ ರ್ಯಾಂಕ್‍ವರೆಗಿನ ಮಾಜಿ ಸೈನಿಕರ ಮಕ್ಕಳು, ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.60 ಕ್ಕಿಂತ ಅಧಿಕ ಅಂಕಗಳನ್ನು ಪಡೆದು, ಇಂಜಿನಿಯರಿಂಗ್, ಮೆಡಿಕಲ್ ಮತ್ತು ಇತರೆ ವೃತ್ತಿಪರ ಶಿಕ್ಷಣದಲ್ಲಿ ಪದವಿ ವ್ಯಾಸಂಗಕ್ಕಾಗಿ 2024-25ನೇ ಸಾಲಿನಲ್ಲಿ ಪ್ರವೇಶಾತಿ ಪಡೆದು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಪ್ರಧಾನ ಮಂತ್ರಿ ಶಿಷ್ಯವೇತನ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ನವೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸತ್ಕದ್ದು. ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಸೈನಿಕ ಮಂಡಳಿಯ ಜಾಲತಾಣ HTTPS://ONLINE.KSB.GOV.IN ಅಥವಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ದೂ. ಸಂ.: 08182-220925 ನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಎ. ಹಿರೇಮಠ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮುಂದಿನ 5 ದಿನ ಗುಡುಗು ಸಹಿತ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

Published

on

ಸುದ್ದಿದಿನಡೆಸ್ಕ್:ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ. ಇಂದು ಧಾರವಾಡ, ತುಮಕೂರಿನಲ್ಲಿ ಸಾಧಾರಣ ಮಳೆಯಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಇದೇ 16ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ದಾವಣಗೆರೆ | ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು : ನೀಲಾನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ

Published

on

ಸುದ್ದಿದಿನ,ದಾವಣಗೆರೆ:ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಮತ್ತು ನೀಲಾನಹಳ್ಳಿ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಎರಡನೇ ದಿನದ ಎನ್.ಎಸ್.ಎಸ್.ಶಿಬಿರದ ಕಾರ್ಯಕ್ರಮ ಗುರುವಾರ (ಏ.10)ರಂದು ಜರುಗಿತು.

2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಪ್ರೊ. ಮಂಜುನಾಥ ಜಿ. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು, ಬಾಬಾಸಾಹೇಬ್ ಅಂಬೇಡ್ಕರ್ ಶತಮಾನೋತ್ಸವ ಪದವಿ ಕಾಲೇಜ್ ಹರಿಹರ, ಇವರು
“ಸಂವಹನ ಕೌಶಲ್ಯ ಹಾಗೂ ಎನ್. ಎಸ್. ಎಸ್. ಮತ್ತು ಯುವಜನತೆ” ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಧುಶ್ರೀನಿವಾಸ ಟಿ., ಕೆ.ಸಿ.ಎಸ್. ಸಹಕಾರ ಸಂಘಗಳ ಉಪ ನಿಬಂಧಕರು, ದಾವಣಗೆರೆ ಜಿಲ್ಲೆ, ಸಹಕಾರ ಸಂಘಗಳ ಮಹತ್ವ ಬಗ್ಗೆ ತಿಳಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳ ತಿಳಿಸಿದರು.

ಪ್ರೊ. ಮಾರುತಿ ಶಾಲೆಮನೆ, ಕಿರುಚಿತ್ರ ನಿರ್ದೇಶಕರು ಮತ್ತು ಕನ್ನಡ ಉಪನ್ಯಾಸಕರ ವಿಷಯ : ‘ಮಾನವೀಯತೆಯ ಮಹಾವೀರ’ ಕುರಿತು ಮಾತನಾಡಿದರು.

ನಂತರ ಉಪನ್ಯಾಸದ ಕಾರ್ಯಕ್ರಮವನ್ನು ಪ್ರೊ. ಸೌಮ್ಯ ಬಿ., ಎನ್.ಎಸ್.ಎಸ್ ಅಧಿಕಾರಿಗಳು, ಉಪನ್ಯಾಸಕರು, ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ದಾವಣಗೆರೆ. ಇವರು
ವಿಷಯ : ‘ಮಹಿಳೆ ಮತ್ತು ಸ್ವಾವಲಂಬನೆ’ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರೇಖಾ ಹೆಚ್.ಜಿ., ವಿಭಾಗದ ಮುಖ್ಯಸ್ಥರು ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ ವಿಭಾಗ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಡಿ.ಆರ್.ವಿಶ್ವನಾಥ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಹೊನ್ನಾಳಿ.
ನೀಲಾನಹಳ್ಳಿ ಗ್ರಾಮದ ಮುಖಂಡರಾದ ಸುಭಾಷ್ ಜೆ, ವಿರುಪಾಕ್ಷಪ್ಪ. ಕೆ. ಎನ್. ಡಿ.ರಾಜಪ್ಪ ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ವನ್ನು ಶಿಬಿರಾರ್ಥಿಗಳಾದ ಶ್ರೇಯಾ ಪ್ರಾರ್ಥಿಸಿದರು, ನಿರೂಪಣೆಯನ್ನು ನೇಹ, ಸ್ವಾಗತವನ್ನು ಸುಚಿತ್ರ ಹಾಗೂ ವಂದನಾರ್ಪಣೆಯನ್ನು ಆಕಾಶ್ ಮಾಡಿದರು.

ಎನ್.ಎಸ್ ಎಸ್. ಕಾರ್ಯಕ್ರಮದ ಅಧಿಕಾರಿಗಳಾದ ಪ್ರೊಫೆಸರ್ ಅಣ್ಣೇಶ್. ಪಿ ಮತ್ತು ಶ್ರೀಮತಿ ಅನುಷಾ. ಎಸ್. ಹೆಚ್. ಕಾರ್ಯಕ್ರಮವನ್ನು ನಿರ್ವಹಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕತೆ ಅಡಗಿದೆ : ಪ್ರೊ. ಮೋನಿಕಾ ರಂಜನ್

Published

on

ಸುದ್ದಿದಿನ,ಬಳ್ಳಾರಿ:ಜಾನಪದ ಆಚರಣೆಯಲ್ಲಿ ವೈಜ್ಞಾನಿಕ ಅಂಶಗಳು ಅಡಗಿದ್ದು, ಜನಪದ ಕಲೆಗಳು ಮನಸಿಗೆ ಮುದ ನೀಡುತ್ತವೆ ಎಂದು ಪ್ರಾಂಶುಪಾಲರಾದ ಪ್ರೊ.‌ಮೋನಿಕಾ ರಂಜನ್ ತಿಳಿಸಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ’ ಜಾನಪದ ಉತ್ಸವ – 2025 ‘ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿ ವೈವಿಧ್ಯಮಯವಾದ ಜನಪದ ಕಲೆಗಳಿವೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರದಾಗಬೇಕೆಂದರು.ಜಾನಪದ ಸಾಹಿತ್ಯವು ಜನಸಾಮಾನ್ಯರ ನಿತ್ಯ ಬದುಕಿನ ದರ್ಶನವಾಗಿದೆ. ಅವರ ನೋವು, ನಲಿವು,ಜೀವನ ವಿಧಾನ,ಸಂಸ್ಕೃತಿ ಎಲ್ಲವೂ ಅದರಲ್ಲಿ ಮಿಳಿತವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಸಾಹಿತಿ ಡಾ.ದಸ್ತಗೀರಸಾಬ್ ದಿನ್ನಿ ಆಧುನಿಕ ಜಗತ್ತಿನ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಕಲೆಗಳು ಇಂದು ನಶಿಸುತ್ತಿವೆ.ಯುವ ಮನಸ್ಸುಗಳಲ್ಲಿ ಜಾನಪದ ಸಾಹಿತ್ಯದ ಬಗೆಗೆ ಅರಿವನ್ನು, ಕಲೆಗಳ ಬಗೆಗೆ ಪ್ರೀತಿಯನ್ನು ಹುಟ್ಟಿಸುವುದು. ಮುಂದಿನ ತಲೆಮಾರಿಗಾಗಿ ಇದನ್ನು ದಾಟಿಸುವುದ ಈ ಕಾರ್ಯಕ್ರಮದ ಮೂಲ ಉದ್ದೇವಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ, ಜಾನಪದ ಸಾಹಿತ್ಯವು ಮಾನವೀಯ ಮೌಲ್ಯ, ನೀತಿ, ಆದರ್ಶ ಮುಂತಾದ ಗುಣಗಳನ್ನು ಕಟ್ಟಿಕೊಡುತ್ತದೆ. ಬಹಳ ಮುಖ್ಯವಾಗಿ ಜಾನಪದ ಆಟಗಳಿಂದ ಜನರಿಗೆ ಸಂತೋಷವಾಗುವುದರೊಂದಿಗೆ ದೈಹಿಕ ಶ್ರಮ ಕೂಡ ಆಗುತ್ತಿತ್ತು ಎಂದರು.

ವೇದಿಕೆ ಮೇಲೆ ಹಿರಿಯ ಸಹ ಪ್ರಾಧ್ಯಾಪಕ, ಜಾನಪದ ಉತ್ಸವ ಸಮಿತಿಯ ಸಂಚಾಲಕರಾದ ಡಾ. ಸಿ. ಎಚ್. ಸೋಮನಾಥ್, ಅಧ್ಯಾಪಕರಾದ ಡಾ. ಮಂಜುನಾಥ್, ಜಯಶ್ರೀ,
ಡಾ.ಪಂಚಾಕ್ಷರಿ, ಪಂಪನಗೌಡ, ಡಾ. ಗುರುಬಸಪ್ಪ, ಗ್ರಂಥಪಾಲಕ ಪ್ರಶಾಂತ, ಡಾ. ಟಿ. ದುರುಗಪ್ಪ, ಡಾ. ಕನ್ಯಾಕುಮಾರಿ, ಡಾ. ಪಲ್ಲವಿ, ಅಧೀಕ್ಷಕ ಯುವರಾಜ ನಾಯ್ಕ ಇದ್ದರು.

ಮೆರವಣಿಗೆ

ಜಾನಪದ ಮೆರವಣಿಗೆ ಕಾಲೇಜಿನಿಂದ ಆರಂಭವಾಗಿ ಸಂಗಮ್ ಚೌಕಿನವರೆಗೆ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳ ವೀರಗಾಸೆ, ಲಂಬಾಣಿ ನೃತ್ಯ,ಡೊಳ್ಳು ಕುಣಿತ,ಕಂಸಾಳೆ, ಕೋಲಾಟ, ಬಯಲಾಟ, ಮಣಿಪುರಿ ನೃತ್ಯ, ಯಕ್ಷಗಾನ ಕಲಾತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ನಂತರ ವೇದಿಕೆಯಲ್ಲಿ ವೈವಿಧ್ಯಮಯವಾದ ಕಲಾ ಪ್ರದರ್ಶನಗಳು ಗಮನ ಸೆಳೆದವು.

ದೇಸಿ ಅಡುಗೆ

ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸಪ್ಪ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ದೇಸಿ ಅಡುಗೆ ಅಧ್ಯಾಪಕರು, ಅತಿಥಿಗಳು, ವಿದ್ಯಾರ್ಥಿಗಳ ಪಾಲಕರು, ಭೋದಕರೇತ ಸಿಬ್ಬಂದಿಗಳ ಒಡಲು ತಣಿಸಿತು.
ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending