ಭಾವ ಭೈರಾಗಿ
ಕವಿತೆ | ನಿನ್ನನ್ನೇಗೆ ದ್ವೇಷಿಸಲಿ..!?
- ಕೊಟ್ರೇಶ್ ಕೊಟ್ಟೂರು
ಓಹೋ ಈಗ ಅರ್ಥವಾಯಿತು
ನನ್ನನೇಕೆ ಕರೆಸಿದೆ ಎಂದು
ನನ್ನ ಪ್ರೀತಿ ಪಡೆಯಲೆಂದೇ,
ಇಲ್ಲ ಬಿಡು ಆಗಲೇ ಮಾರಾಟವಾಗಿದೆ
ನಿನ್ನೊಡಲ ಅಲೆಗಳ ಕೇಳು
ಅಂದು ನೀ ತಿರಸ್ಕರಿಸಿದ
ನೋವನ್ನೇಗೆ ಅನುಭವಿಸಿದೆ ಎಂದು
ಪರವಾಯಿಲ್ಲ ಬಿಡು
ಈಗ ಎಲ್ಲವೂ ಮುಗಿದು ಹೋದ
ಅಧ್ಯಾಯಗಳೇ ಓದಿದರೇನು ಹಿತ
ಅನುಭವಿಸಿದ ಕ್ಷಣಗಳೆಲ್ಲವನು
ಕಾಪಿಟ್ಟುಕೊಂಡಿರುವೆ ಹಾಗೇ
ಆದರೂ ಈಗ ಅರ್ಥಮಾಡಿಕೊಂಡದ್ದಕ್ಕೆ
ಕೊಂಚ ನಿರಾಳ ಭಾವ
ಧನ್ಯವಾದ ಹೇಳಲೇಬೇಕು
ಶತೃವನ್ನೂ ಪ್ರೀತಿಸುವವನು ನಾನು
ನಿನ್ನನ್ನೇಗೆ ದ್ವೇಷಿಸಲಿ
ದ್ವೇಷ ನಿನ್ನ ಗುಣವಾದರೆ
ಪ್ರೀತಿ ನನಗೆ ಸಿಕ್ಕ ವರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243