ದಿನದ ಸುದ್ದಿ
ಉಕ್ರೇನ್ – ರಷ್ಯ ಸಮರ | ಮಗನ ಸಾವಿಗೆ ಸರ್ಕಾರವೇ ಕಾರಣ : ಮೃತ ವಿದ್ಯಾರ್ಥಿ ನವೀನ್ ತಂದೆ

ಸುದ್ದಿದಿನ,ಹುಬ್ಬಳ್ಳಿ: ರಾಯಭಾರಿ ಕಚೇರಿಗೆ ನಮ್ಮ ಮಗ ಪೋನ್ ಮಾಡಿದರೂ ಅಲ್ಲಿಂದ ಯಾವುದೇ ರೀತಿಯ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ ಎಂದು ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ತಂದೆ ಶೇಖರಗೌಡ ಎಂದು ಗದ್ಗದಿಸಿದರು.
ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಮಗನ ಜೊತೆಗೆ ಬೆಳಗ್ಗೆ 10 ಗಂಟೆಗೆ ಮಾತನಾಡಿದ್ದೇನೆ. ನಂತರ ಫೋನ್ ಮಾಡಿದಾಗ ರಿಂಗ್ ಆಯಿತು, ಆದರೆ ಕರೆ ಸ್ವೀಕರಿಸಲಿಲ್ಲ. ಇದಾದ ಕೆಲವೇ ಗಂಟೆಯಲ್ಲಿ ನಮ್ಮ ಮಗನ ಸಾವಿನ ಸುದ್ದಿಯನ್ನ ರಾಯಭಾರಿ ಕಚೇರಿ ತಿಳಿಸಿತು. ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ. ನಮ್ಮ ಮಗ ರಾಯಭಾರಿ ಕಚೇರಿಗೆ ಪೋನ್ ಮಾಡಿದ್ರೆ ಅಲ್ಲಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ.
ಅಲ್ಲಿಂದ ಪ್ರತಿಕ್ರಿಯೆ ಬಂದಿದ್ದರೆ ನಮ್ಮ ಸಾಯುತ್ತಿರಲಿಲ್ಲ. ನಾವು ನಮ್ಮ ಮಗನನ್ನ ಕಳೆದುಕೊಂಡಿದ್ದೇವೆ. ನಮಗಾದ ಸ್ಥಿತಿ ಬೇರೆ ಪೋಷಕರಿಗೆ ಆಗೋದು ಬೇಡ. ಆ ಮಕ್ಕಳನ್ನಾದ್ರೂ ಸರ್ಕಾರ ಸುರಕ್ಷಿತವಾಗಿ ಕರೆತರಲಿ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಳ್ಳಾರಿ ಕಿಷ್ಕಿಂದ ವಿಶ್ವವಿದ್ಯಾಲಯದಲ್ಲಿ ಹಗಲು ದರೋಡೆ ; ಹಣ ಕೊಡದಿದ್ರೆ ಪರೀಕ್ಷೇಲಿ ಫೇಲ್ ..! ವಿದ್ಯಾರ್ಥಿಗಳ ಗೋಳು ಕೇಳೋರ್ ಯಾರು..? ಓದಿ ಈ ಸ್ಟೋರಿ..!

- ವಿಶೇಷ ವರದಿ : ಗಿರೀಶ್ ಕುಮಾರ್, ಬಳ್ಳಾರಿ
ಸುದ್ದಿದಿನಡೆಸ್ಕ್:ಗಣಿನಾಡು ಬಳ್ಳಾರಿ ನಗರದ ಕಿಷ್ಕಿಂದ ವಿಶ್ವವಿದ್ಯಾಲಯ ಆರಂಭವಾಗಿ ಎರಡು ವರ್ಷ ಕಳೆದಿಲ್ಲ, ಆಗಾಲೇ ವಿದ್ಯಾರ್ಥಿಗಳಿಗೆ ಡೋನೇಷನ್ ಹಾವಾಳಿ, ಚನ್ನಾಗಿ ಪರೀಕ್ಷೆ ಬರೆದರು, 4-5 ಪುಟಗಳ ಮೌಲ್ಯಮಾಪನ ಮಾಡದೇ ಇರೋದ್, ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಯ ನಕಲು ಪ್ರತಿ ಕೇಳಿದರೇ ಕೊಡಲ್ಲ ಎನ್ನುವ ಬಹು ದೊಡ್ಡ ಆರೋಪ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಂದ ಕೇಳಿಬಂದಿದೆ.
ಹಾಜರಾತಿ 85 ಶೇಕಡ ಏಕೆ..?
ಈ ಬಳ್ಳಾರಿ ಕಿಷ್ಕಿಂದ ವಿಶ್ವವಿದ್ಯಾಲಯದಲ್ಲಿ ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿ ಇರದೇ ಇರೋ ನಿಯಮಗಳು ಇಲ್ಲಿ ಇದೆ. ರಾಜ್ಯ ಮತ್ತು ದೇಶದ ವಿಶ್ವವಿದ್ಯಾಲಯಗಳಲ್ಲಿ ಪ್ರತಿಯೊಂದು ವಿದ್ಯಾರ್ಥಿಗೆ ಶೇಕಡ 75 ಹಾಜರಾಗಿ ಇದ್ದರೆ, ಈ ಕಿಷ್ಕಿಂದ ವಿಶ್ವವಿದ್ಯಾಲಯದಲ್ಲಿ 85 ಶೇಕಡಾ ಹಾಜರಾತಿ ಅಂತೆ, ಇಲ್ಲದಿದ್ದರೇ ದಂಡ ಹಾಕುತ್ತಾರೆ ಎನ್ನುವ ಆರೋಪ ಸಹ ಇದೆ. ಪರೀಕ್ಷೆ ಸಮಯದಲ್ಲಿ ದಂಡದ ಹಣ ನೀಡದಿದ್ದರೆ ಹಾಲ್ ಟಿಕೆಟ್ ಕೊಡಲ್ಲವಂತೆ.
ನಗದು ಹಣ 60 ಸಾವಿರ ಡೋನೆಷನ್ ನೀಡಲು ಒತ್ತಾಯ
ಕಿಷ್ಕಿಂದ ವಿಶ್ವವಿದ್ಯಾಲಯದಲ್ಲಿ ಓದುವ ವಿದ್ಯಾರ್ಥಿಗಳಿಗೆ 1 ಲಕ್ಷ 60 ಸಾವಿರ ಆನ್ ಲೈನ್ ಮೂಲಕ ಶುಲ್ಕ ಪಾವತಿ ಮಾಡಿಸಿಕೊಂಡು ನಂತರ ಪರೀಕ್ಷೆ ಹತ್ತಿರ ಬರುವ ಮುಂಚೆಯೇ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ 60 ಸಾವಿರ ನಗದು ರೂಪಾಯಿ ಹಣವನ್ನು ನೀಡಬೇಕೆಂದು ಒತ್ತಾಯ ಮಾಡುತ್ತಾರೆ, ಹಣ ಕಟ್ಟದಿದ್ದರೆ ಪರೀಕ್ಷೆಯಲ್ಲಿ ಅನುತ್ತಿಣಾ ಮಾಡುತ್ತಾರೆ ಎನ್ನುವ ಆರೋಪ ಇದೆ. ಒಂದು ಪರೀಕ್ಷೆ ಅನುತ್ತಿಣಾ ಹೊಂದಿದ್ದರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅದಕ್ಕೆ ಪ್ರತ್ಯೇಕವಾಗಿ ಹಣವನ್ನು ಕಟ್ಟಬೇಕು ಅದು ಸಹ ದುಬಾರಿ ಇದೆ. ಒಂದು ವಿಷಯಕ್ಕೆ ಒಬ್ಬ ವಿದ್ಯಾರ್ಥಿಗೆ 700 ರೂಪಾಯಿ ಪಾವತಿಸಬೇಕು.
ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ
ಕಿಷ್ಕಿಂದ ವಿಶ್ವವಿದ್ಯಾಲಯ ಆಗಿರುವುದರಿಂದ ಇಲ್ಲಯೇ ಪ್ರಶ್ನೆ ಪತ್ರಿಕೆ ತಯಾರಾಗುತ್ತದೆ ಹಾಗೇಯೇ ಇಲ್ಲಿಯ ಉಪನ್ಯಾಸಕರು ಮೌಲ್ಯಮಾಪನ ಮಾಡುತ್ತಾರೆ ಆದರೆ ಈ ಉಪನ್ಯಾಸಕರು ಮೇಲೆ ಆಡಳಿತ ಮಂಡಳಿ ವಿ.ವಿ ಒತ್ತಾಯ ಇದೆಯೇ ಎನ್ನುವ ಪ್ರಶ್ನೆ ಕಾಡುತ್ತದೆ.
ಇನ್ನು ಮೂರು – ನಾಲ್ಕು ವರ್ಷ ಹೇಗೆ ? ಓದು ಪೂರ್ಣಗೊಳಿಸಬೇಕು ಅನ್ನೋ ಭಯ
ಈ ಕಿಷ್ಕಿಂದ ವಿಶ್ವವಿದ್ಯಾಲಯ ಬಳ್ಳಾರಿ ನಗರದಲ್ಲಿ ಹೊಸದಾಗಿ ಆರಂಭವಾಗಿದೆ. ಕಡಿಮೆ ಹಣ ಎಂದು ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಇನ್ನು ನಮ್ಮ ಮಕ್ಕಳು ವಿದ್ಯಾಭ್ಯಾಸ ಗತಿ ಹೇಗೆ ? ಎಂದು ಭಯದ ವಾತಾವರಣದಲ್ಲಿ ಇದ್ದಾರೆ.
10 ಲಕ್ಷ ಕಟ್ಟಿ ಹೋಗಿ ಎನ್ನುವ ವಿವಿಯ ಅಧಿಕಾರಿಗಳು
ಇನ್ನು ಈ ವಿಚಾರವಾಗಿ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರವೇಶ ಪಡೆದ ನೂರಾರು ವಿದ್ಯಾರ್ಥಿಗಳು ಈ ಡೋನೇಷನ್, ಶುಲ್ಕ, ಇನ್ನಿತರ ದಂಡಗಳನ್ನು ಪಡೆಯಲು ಹಾಗೂ ಹಗಲು ದರೋಡೆ ಮಾಡುತ್ತಿದ್ದಾರೆ. ವಿವಿ ಬಿಟ್ಟು ಹೋಗಲು ನಿಧಾರಿಸಿ ವಿದ್ಯಾರ್ಥಿಗಳಿಗೆ ಉಳಿದ ವರ್ಷದ 10 ಲಕ್ಷ ಹಣ ಕಟ್ಟಿ ಹೋಗಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಆರೋಪ ಸಹ ಇದೆ.
ಇನ್ನು ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ನಿಮ್ಮನೆಲ್ಲಾ ಫೇಲ್ ಮಾಡಿದರೇ ವಿಶ್ವವಿದ್ಯಾಲಯ ನಡೆಯೋದ್ ಹೇಗೆ ? ನಮಗೆ ಸಂಬಳ ಕೊಡೋರ್ ಯಾರು ? ಎಂದು ವಿದ್ಯಾರ್ಥಿಗಳಿಗೆ ಉತ್ತರಿಸಿದ್ದು ಸಹ ನಾಚಿಕೆಗೆಡಿನ ಸಂಗತಿಯಾಗಿದೆ. ಇನ್ನು ದುಡ್ಡು ಕೊಟ್ಟರೆ ಮಾತ್ರ ವಿದ್ಯಾರ್ಥಿಗಳು ಪಾಸು ಎನ್ನುವ ಮಾತು ಪೋಷಕರಿಂದ ಕೇಳಿಬಂದಿದೆ.
ಇನ್ನು ಪೋಷಕರು ಈ ಕಿಷ್ಕಿಂದ ವಿಶ್ವವಿದ್ಯಾಲಯ ಹೊಸದಾಗಿ ಆರಂಭಾಗಿದೆ, ಕಡಿಮೆ ಶುಲ್ಕ ಇದೆ ಎಂದು ಪ್ರವೇಶಾತಿ ಪಡೆದಿದ್ದಾರೆ ಆದರೆ ಈ ವಿವಿಯಲ್ಲಿ ನಿರಂತರವಾಗಿ ಪೋಷಕರಿಂದ ಹಣವನ್ನು ಕೀಳುತ್ತಿದ್ದಾರೆ. ಈಗಲಾದರೂ ಪೋಷಕರು ಹೆಚ್ಚೆತ್ತುಕೊಳ್ಳಬೇಕಿದೆ.
ಇನ್ನು ಈ ವಿಚಾರವಾಗಿ ದೂರವಾಣಿ ಕರೆ ಮಾಡಿ ಮಾತನಾಡಿದ ಕಿಷ್ಕಿಂದ ವಿಶ್ವವಿದ್ಯಾಲಯ ಅಮರೇಶಯ್ಯ ಅವರು ಇಲ್ಲ ನಮ್ಮಲ್ಲಿ ಹಾಗೇನು ನಡೆದಿಲ್ಲ, ಡೊನೆಷನ್ ತೆಗೆದುಕೊಳ್ಳುವುದಿಲ್ಲ, ವಿವಿಗೆ ಕಟ್ಟಿದ ಶುಲ್ಕ ನೇರವಾಗಿ ಪೋಷಕರಿಗೆ ಮೆಸೇಜ್ ಹೋಗುತ್ತದೆ ಎಂದರು.
ಇದರಲ್ಲಿ ಯಾರು ? ಸುಳ್ಳುರು ಎನ್ನುವ ಅಂಶ ಹೊರಗಡೆ ಬರಲಿ
ಇನ್ನು ಕಿಷ್ಕಿಂದ ಟ್ರಸ್ಟ್ ಮೌನಕ್ಕೆ ಜಾರಿದೆಯೇ ? ಕಾದು ನೋಡಬೇಕಿದೆ. ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ವಿವಿಯ ಕುಲಪತಿಯಾದ ಶ್ರೀ ರಾಜ್ಯಪಾಲರು ಯಾವ ? ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಹೊಸ ವಿಶ್ವವಿದ್ಯಾಲಯ ಆರಂಭವಾಗಿ ಅಭಿವೃದ್ಧಿ ಹೊಂದಬೇಕು ಹಾಗೂ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಅನುಕೂಲಕರವಾಗ ಬೇಕು ಎನ್ನುವುದು ನಮ್ಮ ಆಶಯ.
- ಆರಂಭದಲ್ಲಿ 1.65 ಲಕ್ಷ ಹಣ ಕಟ್ಟಿದ್ದೆವೆ, ಆದರೆ 60 ಸಾವಿರ ಡೋನೇಷನ್ ನಗದು ಹಣ ತಂದು ಕೊಡು ಅಂತ ಹೇಳ್ತಾರೆ, ಉತ್ತರ ಪತ್ರಿಕೆ ಸರಿಯಾಗಿ ಮೌಲ್ಯ ಮಾಪನ ಮಾಡೊಲ್ಲ, ಫೇಲ್ ಮಾಡ್ತಾರೆ, ಉತ್ತರ ಪತ್ರಿಕೆ ನಕಲು ಪ್ರತಿ ಕೇಳಿದ್ರೆ ಕೊಡೋದಿಲ್ಲ, ಮತ್ತೆ ಪರೀಕ್ಷೆ ಬರೆದಿದ್ದೆವೆ, 85 ರಷ್ಟು ಹಾಜರಾತಿ ಕಡ್ಡಾಯ ಎಂದು ಕಿಷ್ಕಿಂದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಅವರು ಪೋಷಕರು ಅವರಿಗೆ ಆದ ನೋವನ್ನು ಹೇಳಿಕೊಂಡಿದ್ದಾರೆ.
|ನೊಂದ ವಿದ್ಯಾರ್ಥಿಗಳು, ಪೋಷಕರು, ಬಳ್ಳಾರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ:ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಏಪ್ರಿಲ್ 24 ಮತ್ತು 25 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ತರಬೇತಿಯು ದಾವಣಗೆರೆ ಜಿಲ್ಲೆಯ ರೈತಿಗೆ ಮಾತ್ರ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಸ್ತಿ ಕಲಹವೇ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಗೆ ಕಾರಣವಾಯ್ತಾ..?

ಸುದ್ದಿದಿನಡೆಸ್ಕ್:ಭಾನುವಾರ ಹತ್ಯೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಹಿಂದೆ ಆಸ್ತಿ ಕಲಹವಿರಬಹುದು ಎಂಬ ಆರೋಪಗಳು ಕೇಳಿ ಬರುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಟ್ಯಂತರ ಮೌಲ್ಯದ ಭೂಮಿಯನ್ನು ಖರೀದಿ ಮಾಡಿದ್ದ ಅವರು ಅದನ್ನು ತಮ್ಮ ಸಹೋದರಿಯರ ಹೆಸರಿನಲ್ಲಿ ನೋಂದಾಯಿಸಿದ್ದರು. ಇದಕ್ಕೆ ಪತ್ನಿ ಪಲ್ಲವಿಯವರ ಆಕ್ಷೇಪ ಇತ್ತು ಎನ್ನಲಾಗುತ್ತಿದೆ.
ಆದರೆ ಆಸ್ತಿ ವಿವಾದವೇ ಎಲ್ಲದಕ್ಕೂ ಕಾರಣವಾಯ್ತಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಓಂ ಪ್ರಕಾಶ್ ಅವರು 2017 ರಲ್ಲಿ ನಿವೃತ್ತಿಗೊಂಡಿದ್ದರು. ನಿವೃತ್ತಿಗೂ ಮೊದಲು ಹಾಗೂ ನಂತರದಲ್ಲಿ ಅವರು ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಸ್ತಿ ಖರೀದಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ6 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ7 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ | ಮೌಲಾನಾ ಅಜಾದ್ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ ಕಾರ್ಯನಿರ್ವಹಣಾ ಸಮಿತಿ ರಚನೆ
-
ದಿನದ ಸುದ್ದಿ6 days ago
‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ