ಭಾವ ಭೈರಾಗಿ
ಕವಿತೆ | ವಿಶ್ವ ರತ್ನ ಜೈಭೀಮ
- ಬಸವರಾಜ್.ಹೆಚ್.ಹೊಗರನಾಳ
ವಿಶ್ವಕ್ಕೊಂದು ರತ್ನವಾದೆ ವಿಶ್ವದ ಹಣೆಬರಹವನ್ನೇ
ಬರೆದ ವ್ಯಕ್ತಿಯಾದೆ
ತಿಳಿಯದ ಜನರಿಗೆ ತಿಳುವಳಿಕೆ ನೀ ನಿಡಿದೆ
ನಿನ್ನನ್ನೇಕೆ ಭೇದಿಸುವರೋ ಈ ಮೂರ್ಖ ಜನರು
ಮರಳಿ ಬಾ ಧರೆಗೆ ಜೈ ಭೀಮ
ಸಾಗರಕ್ಕೊಂದು ಅಲೆಯಂತೆ ಗ್ರಹಗಳಿಗೊಂದು ಸೂರ್ಯನಂತೆ
ನೀಲಿ ಆಕಾಶದಲ್ಲಿ ನಕ್ಷತ್ರದಂತೆ
ಕಾಣದ ಕಗ್ಗತ್ತಲಲ್ಲಿ ವಜ್ರದಂತೆ
ಹರಿಯುವ ನೀರಿನಲ್ಲಿ ಚಲಿಸುವ ಮೀನಾಗಿ
ಮರಳಿ ಬಾ ಧರೆಗೆ ಜೈ ಭೀಮ
ಶಿಕ್ಷಣಕ್ಕೊಂದು ಬೆನ್ನೆಲುಬಾಗಿ ನೀತಿಗೊಂದು ನಿಷ್ಠೆಯಾಗಿ
ನಿನ್ನ ನಂಬಿದ ಜನರಿಗೆ ನೀ ಮಾರ್ಗಸೂಚಿಯಾಗಿ
ನೀ ಹಾಕಿದ ಭಿಕ್ಷೆಗೆ ಭಾಜನರಾಗಿರುವ ನಾವ್ಗಳಿಗೆ
ಮತ್ತೊಮ್ಮೆ ಮಿಂಚಿನ ಓಟದಂತೆ ಸಿಡಿಲಿನ ಶಬ್ದದಂತೆ
ಮರಳಿ ಬಾ ಧರೆಗೆ ಜೈ ಭೀಮ
ಸುದ್ದಿದಿನ.ಕಾಂ|ವಾಟ್ಸಾಪ್|9980346243