ಭಾವ ಭೈರಾಗಿ
ಕವಿತೆ | ಯುಗಾದಿ
- ಯಶೋದ ಗಾಣಿಗ, ಗೃಹಿಣಿ ,ಕುಂದಾಪುರ
ಯುಗಾದಿ ಹಬ್ಬ ಬಂದಿತಮ್ಮ
ಮನೆಮನೆಗೆ ಹಬ್ಬ ತಂದಿತಮ್ಮ
ಸಡಗರ-ಸಂಭ್ರಮ ಬಂತಮ್ಮ
ಹೊಸವರುಷಕೆ ಕಾಲಿಟ್ಟಿತಮ್ಮ.
ಬೇವು-ಬೆಲ್ಲವನ್ನು ಸವಿಯುತ
ಮಕ್ಕಳು ಮನೆಮಂದಿ ಮೆಲ್ಲುತ್ತ
ಸಂತಸವ ನಾವು ಸಡಗರದತ್ತ
ಪ್ರಕೃತಿಯ ವಿಸ್ಮಯವುಎನ್ನುತ್ತ.
ತಳಿರು ತೋರಣದಿ ಅಲಂಕಾರಿಸಿ
ಮನೆಯ ಬಾಗಿಲ ಶೃoಗರಗೊಳಿಸಿ
ಮಾವಿನ ತುಂಬೆಲ್ಲ ಹಚ್ಚ ಹಸಿರು
ಹಬ್ಬದಿ ಮನೆಯಲ್ಲಿ ಶೋಭಿಸಿರು.
ಮಾವಿನ ಮರದಲ್ಲಿ ಚಿಗುರೆಲೆ
ಬೇವು ಕಹಿ ಆದರು ಸವಿಯುತ್ತಲೇ
ಚೈತ್ರದ ಚಿಗುರಿಂದು ಬಂದಮೇಲೆ
ಹರುಷದ ಹೊನಲು ಪದಮಾಲೆ.
- ಯಶೋದ. ಗಾಣಿಗ, ಕುಂದಾಪುರ ಇವರು,
ಕವನ, ಚುಟುಕು, ಹಾಯ್ಕು ವಾಟ್ಸಾಪ್ ಹಾಗೂ ಮುಖಪುಟದಲ್ಲಿ ಸಕ್ರಿಯರಾಗಿದ್ದಾರೆ. ಜನಮಿಡಿತ, ಸಂಪರ್ಕ ಸುಧಾ ಪತ್ರಿಕೆ, ನಯನ ಮಾಸ ಪತ್ರಿಕೆ ಗದಗ್, ಮೈಸೂರು ಭೇರ್ಯ ರಾಮ ಕುಮಾರ್ ಅವರ ದ. ರಾ. ಬೇಂದ್ರೆ ಯವರ ಪುಸ್ತಕ ದಲ್ಲಿ ನನ್ನ ಕವನ ಪ್ರಕಟವಾಗಿದೆ.500ಕ್ಕೂ ಹೆಚ್ಚು ಆನ್ಲೈನ್ ಸರ್ಟಿಫಿಕೇಟ್ ಗಳು ಬಂದಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243