Connect with us

ದಿನದ ಸುದ್ದಿ

ಎಂಬ್ರಾಯ್ಡರಿ ಮತ್ತು ಆರಿ ವರ್ಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Published

on

ಫೋಟೋ | ವಿಜಿಯಾ ಶೆಟ್ಟಿ, ಮೇಕಪ್ ಆರ್ಟಿಸ್ಟ್, ಬೆಂಗಳೂರು

ಸುದ್ದಿದಿನ,ಬೆಂಗಳೂರು:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಎಂಬ್ರಾಯ್ಡರಿ, ಆರಿ ವರ್ಕ್ & ಫ್ಯಾಬ್ರಿಕ್ ಪೇಟಿಂಗ್ ಕುರಿತ 30 ದಿನಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 8 ಕೊನೆ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ದೂ.ಸಂ. 9740982585, 9380162042 ಗೆ ಸಂಪರ್ಕಿಸಬಹುದಾಗಿದೆ ಎಂದು ರುಡ್‍ಸೆಟ್ ಸಂಸ್ಥೆಯ ಶಾಖೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹೊಸ ಹಣಕಾಸು ವರ್ಷ ಆರಂಭ | ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ; ಇಲ್ಲದಿದ್ದರೆ ಭಾರೀ ದಂಡ

Published

on

ಸುದ್ದಿದಿನಡೆಸ್ಕ್:ಇಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದ್ದು, ಕೆಲವು ಪ್ರಮುಖ ತೆರಿಗೆ ಹಾಗೂ ಹಣಕಾಸು ಬದಲಾವಣೆಗಳು ಮತ್ತು ಕೆಲವು ನೀತಿ ಸುಧಾರಣೆಗಳು ಜಾರಿಗೆ ಬರಲಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಹೊಸ ಆದಾಯ ತೆರಿಗೆ ಸ್ಲ್ಯಾಬ್‌ಗಳು ಈ ಹಣಕಾಸು ವರ್ಷದಿಂದ ಅನ್ವಯವಾಗಲಿವೆ. ನಾಳೆಯಿಂದ, 12ಲಕ್ಷ ರೂಪಾಯಿ ಬಳ ಪಡೆಯುವ ವ್ಯಕ್ತಿಯು ಹೊಸ ತೆರಿಗೆ ವ್ಯವಸ್ಥೆ ಆರಿಸಿಕೊಂಡರೆ, ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಡಿಜಿಟಲ್ ಪಾವತಿಗಳು ಇಂದಿನಿಂದ ಹೊಸ ಬದಲಾವಣೆಯನ್ನು ಹೊಂದಿರುತ್ತವೆ. ದೀರ್ಘಕಾಲದ ನಿಷ್ಕ್ರಿಯ ಸ್ಥಿತಿಯಿಂದ ಇರುವ ಮೊಬೈಲ್ ಸಂಖ್ಯೆಗಳಿಗೆ ಯುಪಿಐ ಪಾವತಿ ಇರುವುದಿಲ್ಲ.

ಎಲ್ಲಾ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯವಾಗಲಿದೆ. ಒಂದು ವೇಳೆ ವಿಫಲವಾದರೆ ಬ್ಯಾಂಕ್ ಭಾರಿ ದಂಡ ವಿಧಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಏಪ್ರಿಲ್ 5 ಮತ್ತು 6 ರಂದು ಜಲಸಾಹಸ ಕ್ರೀಡೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಏಪ್ರಿಲ್ 5 ಮತ್ತು 6 ರಂದು ದಾವಣಗೆರೆ ಕೊಂಡಜ್ಜಿ ಕೆರೆಯಲ್ಲಿ ಜಲಸಾಹಸ ಕ್ರೀಡೆಯನ್ನು ಆಯೋಜಿಸಲಾಗಿದೆ.

ಜಲಸಾಹಸ ಕ್ರೀಡೆಯಲ್ಲಿ ಲೋಕಸಭಾ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸುವರು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭವಿಷ್ಯಕ್ಕಾಗಿ ಹೂಡಿಕೆಯ ಜ್ಞಾನ ಅವಶ್ಯಕ

Published

on

ಸುದ್ದಿದಿನ,ದಾವಣಗೆರೆ:ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆಯ ನಿರ್ಣಯ ಶಾಸ್ತ್ರ ವಿಭಾಗದ ವತಿಯಿಂದ ನಿರ್ಣಯ ಶಾಸ್ತ್ರ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಹೂಡಿಕೆ ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೂಡಿಕೆ ತಜ್ಞರಾದ ಎಂಜಲ್ ವನ್ನ ಆದಿತ್ಯ ಮತ್ತು ಅಶೋಕ್ ರಾಯಭಾಗಿ ಅವರು ವಿದ್ಯಾರ್ಥಿಗಳಿಗೆ ಹೂಡಿಕೆ ವಿಷಯದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮುಖ್ಯಸ್ಥರಾದ ವೆಂಕಟೇಶ್ ಬಾಬು ಎಸ್. ಅವರು ವಿದ್ಯಾರ್ಥಿಗಳಿಗೆ ಹೂಡಿಕೆಯ ಮಹತ್ವ ಮತ್ತು ಅದರ ಪ್ರಾಯೋಗಿಕ ಅಂಶಗಳ ಕುರಿತು ವಿವರಿಸಿದರು. ಅವರು ಹೂಡಿಕೆ ಹೇಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಹುದು ಮತ್ತು ಹೇಗೆ ಸ್ಮಾರ್ಟ್ ಹೂಡಿಕೆಗೆ ಮೊದಲ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಉದಾಹರಣೆಗಳ ಮೂಲಕ ವಿವರಿಸಿದರು.

ಎಂಜಲ್ ವನ್ನ ಆದಿತ್ಯ ಅವರು ಹೂಡಿಕೆಯ ವಿವಿಧ ಪ್ರಕಾರಗಳು, ಅದರ ಲಾಭ-ನಷ್ಟಗಳು ಮತ್ತು ಸರಿಯಾದ ಹೂಡಿಕೆ ತಂತ್ರಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಅವರು ನೈಜ ಜಗತ್ತಿನ ಉದಾಹರಣೆಗಳನ್ನು ನೀಡಿ, ಹೂಡಿಕೆಯಲ್ಲಿ ತಿಳಿವಳಿಕೆಯಿಂದ ನಿರ್ಧಾರ ಕೈಗೊಳ್ಳುವ ತಂತ್ರಗಳನ್ನು ವಿವರಿಸಿದರು.

ಅಶೋಕ್ ರಾಯಭಾಗಿ ಅವರು ಹೂಡಿಕೆ ಕ್ಷೇತ್ರದಲ್ಲಿ ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳು ಮತ್ತು ಅವುಗಳನ್ನು ತಪ್ಪಿಸುವ ವಿಧಾನಗಳ ಬಗ್ಗೆ ಮಾತನಾಡಿದರು. ಇಂದಿನ ಹೂಡಿಕೆ ಪ್ರವೃತ್ತಿಗಳು ಮತ್ತು ಮಾರುಕಟ್ಟೆಯ ಬದಲಾವಣೆಗಳ ಬಗ್ಗೆ ವಿವರಿಸುವ ಮೂಲಕ ಅವರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡಿದರು.

ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಭವಿಷ್ಯದ ಹಣಕಾಸು ನಿರ್ವಹಣೆಗೆ ಹಿತಕರ ಮಾಹಿತಿ ನೀಡಿದ್ದು, ಅವರು ಹೂಡಿಕೆ ಜಗತ್ತಿನಲ್ಲಿ ತಮ್ಮ ಮೊದಲ ಹೆಜ್ಜೆ ಇಡುವ ನೈಪುಣ್ಯವನ್ನು ಸಂಪಾದಿಸಲು ಪ್ರೇರೇಪಿಸಲಾಯಿತು. ಕಾರ್ಯಗಾರದಲ್ಲಿ ವಿಭಾಗದ ಎಲ್ಲಾ ಅಧ್ಯಾಪಕರೂ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending