Connect with us

ದಿನದ ಸುದ್ದಿ

ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಾನೂನು ಕ್ರಮ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Published

on

ಸುದ್ದಿದಿನ ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಹಾವಳಿ ಮಿತಿ ಮೀರಿದೆ. ಈ ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುತ್ತಿರುವವರನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಂದು ತಮ್ಮನ್ನು ಭೇಟಿ ಮಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಜತೆಗೂ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ.2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿತ್ತು. ಈ ಬಾರಿ ಕೂಡ ಅದೇ ತಂತ್ರವನ್ನು ರಾಜಕೀಯ ವಿರೋಧಿಗಳು ಅನುಸರಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಸಮೀಪ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಆರಂಭದಲ್ಲೇ ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಹಚ್ಚಿ, ಅವುಗಳ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ಬಿಳಿ ಜೋಳ ಖರೀದಿ

Published

on

ಸುದ್ದಿದಿನ,ದಾವಣಗೆರೆ:ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಬಿಳಿ ಜೋಳವನ್ನು ರೈತರಿಂದ ಖರೀದಿಸಲು ಅವಕಾಶ ಕಲ್ಪಿಸಿದೆ. ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿನ ಬಿತ್ತನೆ ಪ್ರಮಾಣ ಆಧರಿಸಿ ಭತ್ತ ಕ್ವಿಂಟಾಲ್‍ಗೆ ರೂ.2300 ಹಾಗೂ ಭತ್ತ ಗ್ರೇಡ್‍ಎ ರೂ.2320 ಗಳಂತೆ ಮತ್ತು ಹೈಬ್ರಿಡ್ ಜೋಳವನ್ನು ಪ್ರತಿ ಕ್ವಿಂಟಾಲ್‍ಗೆ ರೂ.3371/- ಹಾಗೂ ಮಾಲ್ದಂಡಿ ಜೋಳವನ್ನು ಕ್ವಿಂಟಾಲ್‍ಗೆ ರೂ. 3421/- ನಂತೆ ಯಾವುದೇ ವ್ಯತ್ಯಾಸಗಳಿಗೆ ಅವಕಾಶ ನೀಡದೆ ನೊಂದಣಿ ಮತ್ತು ಖರೀದಿಗೆ ಕ್ರಮವಹಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.

ಪ್ರಸಕ್ತ ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಮತ್ತು ಬಿಳಿಜೋಳ ಖರೀದಿಸಲು ಮಾರ್ಚ್ 15 ರಿಂದ ನೊಂದಣಿ ಪ್ರಕ್ರಿಯ ಪ್ರಾರಂಭಿಸಲಾಗಿದ್ದು, ಮೇ 31 ರವರೆಗೆ ನೊಂದಣಿ ಮತ್ತು ಖರೀದಿ ಪ್ರಕ್ರಿಯೆ ನಡೆಯಲಿದೆ. ಖರೀದಿ ಕೇಂದ್ರಗಳನ್ನು ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆರಂಭಿಸಲಾಗಿದೆ.

ರೈತರಿಂದ ಸಂಪೂರ್ಣ ಒಣಗಿದ ಹಾಗೂ ಎಫ್‍ಎಕ್ಯೂ ಗುಣಮಟ್ಟದ ಭತ್ತ ಮತ್ತು ಬಿಳಿಜೋಳ ಮಾದರಿಯನ್ನು ಪಡೆದು ನಿಗಧಿಪಡಿಸಿದ ಮಾನದಂಡಗಳಂತೆ ಗ್ರೇಡರ್ ಅಥವಾ ಆಸೇಯರ್‍ಗಳಿಂದ ದೃಢೀಕರಿಸಿದ ಗುಣಮಟ್ಟದ ಬಿಳಿ ಜೋಳವನ್ನು ಮಾತ್ರ ಖರೀದಿಸಲಾಗುತ್ತದೆ. ರೈತರ ಫ್ರೂಟ್ಸ್ ಐಡಿ ನೊಂದಣಿ ಕಡ್ಡಾಯವಾಗಿರುತ್ತದೆ.

ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಜೋಳ ಖರೀದಿಸಲಾಗುವುದು. ಪ್ರತಿ ರೈತರಿಂದ ಎಕರೆಗೆ 20 ಕ್ವಿಂಟಾಲ್‍ನಂತೆ ಗರಿಷ್ಠ 150 ಕ್ವಿಂಟಾಲ್ ಜೋಳ ಹಾಗೂ ಭತ್ತವನ್ನು ಎಕರೆಗೆ ಕನಿಷ್ಠ 25 ರಿಂದ ಗರಿಷ್ಠ 50 ಕ್ವಿಂಟಾಲ್‍ವರೆಗೆ ಖರೀದಿಸಲಾಗುವುದು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮರಿಹಾಳ್, ಆಹಾರ ನಿಗಮದ ಅಧಿಕಾರಿ ಶೃತಿ ಹಾಗೂ ಎಪಿಎಂಸಿ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತುಂಗಭದ್ರಾ ಬೋರ್ಡ್ ಅಧಿಕಾರಿಗಳ ಕಳ್ಳಾಟ : ಕಬ್ಬಿಣ ಕಳ್ಳತನ ಆರೋಪದಲ್ಲಿ ಕಣ್ಣಮುಚ್ಚಾಲೆ ಆಟ ; ಶಾಸಕರ ಹೆಸರು ಪ್ರಸ್ತಾಪ

Published

on

  • ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಬ್ರಿಡ್ಜ್ ನ ಕಬ್ಬಿಣ ಕಳವು ಠಾಣೆಗೆ ದೂರು ನೀಡಲು ಬಂದ ತುಂಗಭದ್ರಾ ಬೋರ್ಡ್ ಅಧಿಕಾರಿಗಳು, ಪೊಲೀಸರ ಮೇಲೆ ಗೂಬೆ ಕೂಡಿಸಿ ಪರಾರಿಯಾಗಿರುವ ದುರ್ಘಟನೆ ಗಣಿನಾಡು ಬಳ್ಳಾರಿ ನಗರದಲ್ಲಿ ನಡೆದಿದೆ.

ಬಳ್ಳಾರಿ ನಗರದ ಬೆಳಗಲ್ ರಸ್ತೆಯ ಡಿಸಿ ನಗರ ಪಕ್ಕದಲ್ಲಿರುವ ಒಂದು ಸಾರ್ವಜನಿಕರ ಬ್ರಿಡ್ಜ್ ಅನ್ನು ಈ ಹಿಂದೆ ಪಾಲಿಕೆಯಿಂದ ಅಗಲಿಕಾರಣ ಮಾಡಲಾಗಿದೆ ಎಂದು ತಿಳಿದಬಂದಿತ್ತು. ಈ ಬ್ರಿಡ್ಜ್ ತುಂಗಭದ್ರಾ ನಾಲೆಯ ಮೇಲೆ ಹಾರಿಹೋಗುವ ಬ್ರಿಡ್ಜ್ ಕಿಲೋಮೀಟರ್ 86ನಲ್ಲಿ ಬರುತ್ತದೆ ಈ ಬ್ರಿಡ್ಜ್ ಇರುವ ಕಬ್ಬಿಣವನ್ನು ಕಾಮಗಾರಿ ಮಾಡುವ ಸಂದರ್ಭದಲ್ಲಿ ಅಂದಾಜು 25 ರಿಂದ 30 ಟನ್ ಹೊಂದಿದೆ.

ಗಡಾರಿಗಳನ್ನು ತೆಗೆದು ಸೈಡಿಗೆ ಇಡಲಾಯಿತು. ಕೆಲವು ವರ್ಷಗಳದಿಂದ ಅಲ್ಲೇ ಇದ್ದ ಕಾರಣ ಅವುಗಳನ್ನು ತುಂಗಭದ್ರ ಬೋರ್ಡ್ ನ ಅಧಿಕಾರಿಗಳಾಗಲಿ , ಗೋದಾಮಿಗೆ ಹಾಕಿಕೊಳ್ಳದೆ ಸ್ಥಳದಲ್ಲೇ ಬಿಡಲಾಗಿತ್ತು, ಬಾರಿ ದೊಡ್ಡ ಮಟ್ಟದ ಕಬ್ಬಿಣ ಆಗಿರುವ ಹಿನ್ನೆಲೆ ಅದನ್ನು ಕ್ರೇನ್ ಮತ್ತು ಲಾರಿಗಳ ಮೂಲಕ ಮಾತ್ರವೇ ತೆಗೆದುಹಾಕಲು ಸಾಧ್ಯವಾಗುತ್ತದೆ. ಏಪ್ರಿಲ್ ಹನ್ನೊಂದು ಈ ಕಬ್ಬಿಣವನ್ನು ಎರಡು ಕ್ರೆನ್ ಮೂಲಕ ಲಾರಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಕಳವು ಮಾಡಿದ್ದಾರೆ ಎಂದು ಎಚ್.ಎಲ್.ಸಿ ತುಂಗಭದ್ರಾ ಬೋರ್ಡ್ ನ ಅಧಿಕಾರಿಗಳಾಗಿರುವ ಕೆಂಚಪ್ಪ, ಚೇತನ್ ಮುಂತಾದವರು ಭಾನುವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು.

ಹಲವಾರು ಗಂಟೆಗಳಿಂದ ಠಾಣೆಯಲ್ಲಿ ಕಾಯುತ್ತಿದ್ದೇವೆ ಪೊಲೀಸ ಅಧಿಕಾರಿಗಳು ಯಾರು ? ನಮ್ಮ ದೂರನ್ನು ತೆಗೆದುಕೊಳ್ಳುತ್ತಿಲ್ಲವೆಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನು ಚುಚ್ಚಿಕೊಂಡ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ಠಾಣೆಯಿಂದ ಹೋಗಿದ್ದ ಅಧಿಕಾರಿಗಳಿಗೆ ಅನೇಕ ಬಾರಿ ಪೋನ್ ಕಾಲ್ ಗಳನ್ನು ಮಾಡಿದ್ದಾರೆ. ದೂರ ನೀಡಲು ಬರಲೇ ಇಲ್ಲದೇ ಇರೋದ್ ದುರಂತ.

ರಾಜಕೀಯ ವ್ಯಕ್ತಿ ಮಧ್ಯ ಪ್ರವೇಶ

ಒಬ್ಬ ಪ್ರಭಾವಿ ರಾಜಕಾರಣಿ ಆಪ್ತ ಎನ್ನುವ ಶಶಿ ಈ ಕಬ್ಬಿಣ ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ತುಂಗಭದ್ರಾ ಬೋರ್ಡ್ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರ ನೀಡಲು ಬರೆದುಕೊಂಡು ಬಂದಿರುವ ಪತ್ರದಲ್ಲಿದೆ. ಈ ಕಬ್ಬಿಣವನ್ನು ಕಟ್ ಮಾಡಲು ಬಂದಿರುವ ಗ್ಯಾಸ್ ವೆಲ್ಡರ್ ಬಷೀರ್ ಅವರ ಮೇಲೆ ದೂರ ನೀಡಿದ್ದಾರೆ ಪತ್ರದಲ್ಲಿ, ಬಷೀರ್ ಅವರನ್ನು ತಂದು ಭಾನುವಾರ ಗ್ರಾಮೀಣ ಠಾಣೆಯಲ್ಲಿ ಕುಡಿಸಲಾಗಿತ್ತು. ಆದರೆ ಪೊಲೀಸರು ಏನ್ ? ಮಾಡಿದ್ದಾರೆ ಎನ್ನುವುದು. ಅಂದಾಜು ಈ ಕಬ್ಬಿಣ 8 ರಿಂದ 10 ಲಕ್ಷ ಮೌಲ್ಯವಾಗಿರುತ್ತದೆ ಎಂದು ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಗಳು ದೂರ ನೀಡಲು ಠಾಣೆಗೆ ಬಂದಿದ್ದು ಯಾಕೆ ?

ಪೊಲೀಸರು ದೂರು ತೆಗೆದುಕೊಂಡಿಲ್ಲ ಎಂದು ಸುಳ್ಳು ಹೇಳಿಕೆ ನೀಡಿ ಪರಾರಿ ಆಗಿದ್ದು ಏಕೆ ? ಎನ್ನುವುದು ಬೋರ್ಡ್ ಅಧಿಕಾರಿಗಳ ನಡೆ ಅನುಮಾನ ಉಂಟು ಮಾಡಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣ ಕಳುವು ಆಗಿದ್ದ ವಿಷಯ ಬೋರ್ಡ್ ನ ಕೆಂಚಪ್ಪ,ಚೇತನ್ ಇವರು ಮೇಲಿನ ಎಸ್,ಇ ಅವರಿಗೆ ಯಾವುದೇ ಮಾಹಿತಿ ನೀಡಲಿಲ್ಲ ಅನ್ನೋದು ಬೋಡ್ ಎಸ್.ಇ ಆಗಿರುವ ನಾಯಕ ಅವರು ದೂರವಾಣಿ ಮೂಲಕ ತಿಳಿಸಿದ್ದಾರೆ , ಇದರ ಪೂರ್ತಿ ಇವರುಗಳನ್ನು ಪಡೆದುಕೊಳ್ಳುತ್ತೇನೆ ಎಂದರು.

ಲಕ್ಷಾಂತರ ರೂಪಾಯಿ ಕಬ್ಬಿಣ ಕಳವು ಆಗಿದೆ ಎಂದು ಠಾಣೆ ಗೆ ಬಂದು ಡ್ರಾಮಾ ಮಾಡಿರುವ ತುಂಗಭದ್ರಾ ಬೋರ್ಡಿನ ಎಚ್,ಎಲ್, ಸಿ.ವಿಭಾಗದ ಅಧಿಕಾರಿಗಳ ಮೇಲೆ ಅನುಮಾನ ಮೂಡಿಸಿದೆ. ಇಲ್ಲವೇ ಪ್ರಭಾವಿ ರಾಜಕೀಯ ವ್ಯಕ್ತಿ ಭಯ ಬಿದ್ದು ಠಾಣೆಗೆ ದೂರು ನೀಡದೆ ಪಾರಾರಿಯಾದರೇ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತದೆ. ಇಷ್ಟು ದೊಡ್ಡ ಮಟ್ಟದ ಕಬ್ಬಿಣ ಕಳವು ಹಿಂದೆ ಅಧಿಕಾರಿಗಳ ಪಾತ್ರ ಇರಬಹುದು ಅನ್ನುವು ಇಲ್ಲಿನ ಸ್ಥಳೀಯರ ಗುಸು, ಗುಸು ಮಾಹಿತಿ ಆಗಿದೆ.

ಕಳ್ಳರ ಜೊತೆಗೆ ಕಳ್ಳರಾದ ತುಂಗಭದ್ರಾ ಬೋರ್ಡ್ ಸರ್ಕಾರಿ ಅಧಿಕಾರಿಗಳು

ಈ ಸ್ಟೋರಿಯಲ್ಲಿ ಬೋರ್ಡ್ ಅಧಿಕಾರಿಗಳು ಮತ್ತೊಂದು ಡ್ರಾಮಾ ಸೃಷ್ಟಿಸಿ ಕಳುವಾಗಿರುವ ಕಬ್ಬಿಣ 30 ರಿಂ 40 ಟನ್ ಸೋಮವಾರ 11 ಗಂಟೆಗೆಲ್ಲ ತುಂಗಭದ್ರಾ ಬೋರ್ಡ್ ಗೋದಾಮಿಗೆ ತಂದು ಹಾಕುತ್ತಾರೆ ಎಂದು ಕಳುವು ಮಾಡಿರುವರ ಮೂಲಕ ತಿಳಿದಿದೆ ಎಂದರು.

ಹಿಂದೆ ರಾಜಕಾರಣಿಗಳ ಹಸ್ತಕ್ಷೇಪವಿದೆ ಎಂದು ಕೆಲವರ ಮುಂದೆ ದೂರವಾಣಿಗಳಲ್ಲಿ ಮಾತನಾಡಿದ್ದಾರೆ ಅಧಿಕಾರಿಗಳು ಎನ್ನುವದು ಕೂಡ ಕೇಳಿಬಂದಿದೆ. ಇದೇ ತಿಂಗಳು 11ರಂದು ಕಬ್ಬಿಣ ಕಳೆವಾಗುತ್ತದೆ 13 ರಂದು ಠಾಣೆಗೆ ದೂರು ನೀಡಲು ಬರುತ್ತಾರೆ ಅಷ್ಟರಲ್ಲಿ ಕಬ್ಬಿಣ ವಾಪಸ್ ಬರುತ್ತದೆ ಎಂದು ಅಧಿಕಾರಿಗಳು ಆಡಿರುವ ಡ್ರಾಮಾ ಮೇಲು ನೋಟಕ್ಕೆ ಕಂಡು ಬರುತ್ತದೆ, ಈ ಕಬ್ಬಿಣದಲ್ಲಿ ಅಧಿಕಾರಿಗಳಿಗೆ ಏನಾದ್ರೂ ಕೈವಾಡ ವಿತ್ತಾ ಇವರಿಗೆ ತಲುಪ ಬೇಕಾಗಿರುವ ಹಣ ತಲುಪಿಲ್ಲವೇ ಇದರಿಂದ ಠಾಣೆಗೆ ದೂರು ನೀಡಲು ಬಂದಂತೆ ಡ್ರಾಮ ಮಾಡಿ ಪೊಲೀಸ್ ರ ಇಲಾಖೆ ಮೇಲೆ ಗೂಬೆ ಕೂಡಿಸಿರುವುದು ಅಪಹಾಸ್ಯಕ್ಕೆ ಗುರಿಯಾದರು. ಇದರ ಅಸಲಿ ಕಥೆ ಏನು ಅನ್ನವುದು ಬಹಿರಂಗ ಆಗಬೇಕಾಗಿದೆ.
ಇಲ್ಲಿ ತುಂಗಭದ್ರಾ ಬೋರ್ಡ್ ಅಧಿಕಾರಿಗಳೆ ಕಳ್ಳರ ಆಟವಾಡಿದ್ದಾರೆ ಎನ್ನುವ ಅನುಮಾನ ಮೂಡಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆ ಆಗಿಯಾಗಿ ಉಳಿದಿದೆ.


  • ಜನರು ಕಳ್ಳತನ ಮಾಡಿದ್ರೇ, ಮತ್ತೆ ವಾಪಾಸ್ಸು ತಂದು ಕೊಡುತ್ತೇವೆ ಎಂದರೆ ಪೊಲೀಸರು ಕೇಸ್ ಮಾಡದೇ ಇರುತ್ತಿರಾ ಎನ್ನುವ ಪ್ರಶ್ನೆ ಜನ ಸಾಮಾನ್ಯರಿಗೆ ಕಾಡುತ್ತದೆ. ಇಲ್ಲಿ ಶಾಸಕರು ಅವರ ಮುಖಂಡರು ಮಧ್ಯ ಪ್ರವೇಶ ಮಾಡಿದಕ್ಕೆ ಕೇಸ್ ಮಾಡಲಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

25 ವರ್ಷಗಳ ನಂತರ ಸಾಕಾರಗೊಂಡ ಡಾ. ಬಿ.ಆರ್.ಅಂಬೇಡ್ಕರ್ ಭವನ ; ಅನುದಾನದ ಕೊರತೆ ಇಲ್ಲ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ ಅನೇಕ ಕಡೆ ಡಾ; ಬಿ.ಆರ್.ಅಂಬೇಡ್ಕರ್ ಭವನಗಳಿದ್ದರೂ ಜಿಲ್ಲಾ ಮಟ್ಟದಲ್ಲಿ ಭವನ ನಿರ್ಮಾಣ ಮಾಡಲು 25 ವರ್ಷಗಳ ಹಿಂದೆ ಪ್ರಯತ್ನಿಸಿದರೂ ಸಾಕಾರಗೊಂಡಿರಲಿಲ್ಲ. ಇದು ಡಾ;ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿ ಸಂದರ್ಭದಲ್ಲಿ ಸಾಕಾರಗೊಂಡಿದ್ದು ಸುಸಜ್ಜಿತ ಭವನ ನಿರ್ಮಾಣವಾಗಿ ಎಲ್ಲರಿಗೂ ಇಲ್ಲಿ ಕಾರ್ಯಕ್ರಮ ಮಾಡಲು ಅವಕಾಶಗಳು ಸಿಗುವಂತಾಗಬೇಕೆಂದು ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಸೋಮವಾರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಕ್ರ್ಯೂಟ್‍ಹೌಸ್ ಪಕ್ಕದಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲಾ ಮಟ್ಟದಲ್ಲಿ ಡಾ;ಬಿ.ಆರ್.ಅಂಬೇಡ್ಕರ್ ರವರ ಭವನ ನಿರ್ಮಾಣ ಮಾಡುವುದು ಬಹಳ ದಿನಗಳ ಬೇಡಿಕೆಯಾಗಿತ್ತು. ಮುಖಂಡರ ಒಮ್ಮತದ ನಿರ್ಣಯದ ಕೊರತೆಯಿಂದ ಭವನ ನಿರ್ಮಾಣ 2000 ಇಸವಿಯಿಂದಲೂ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ಇದಕ್ಕೆ ಕಾಲಕೂಡಿಬಂದಿತು. ಸಕ್ರ್ಯೂಟ್‍ಹೌಸ್ ಪಕ್ಕದಲ್ಲಿ ಡಿಸಿಸಿ ಬ್ಯಾಂಕ್‍ಗೆ ಹಂಚಿಕೆಯಾದ 20 ಗುಂಟೆ ಜಾಗವನ್ನು ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ದೊರಕಿಸಿ, ಈ ಜಾಗಕ್ಕಾಗಿ ಡಿಸಿಸಿ ಬ್ಯಾಂಕ್ ನಿಂದ ಭರಿಸಲಾಗಿದ್ದ 78 ಲಕ್ಷವನ್ನು ವಾಪಸ್ ಮಾಡಿಸುವ ಮೂಲಕ ಡಿಸಿಸಿ ಬ್ಯಾಂಕ್‍ಗೆ ಎಪಿಎಂಸಿ ಆವರಣದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ ಎಂದರು.

ಸರ್ಕಾರವು ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ರೂ.5 ಕೋಟಿಗೆ ಮಂಜೂರಾತಿ ನೀಡಿ ರೂ.1.5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ ಈ ಅನುದಾನ ಸಾಕಾಗದಿರುವುದರಿಂದ, ಇನ್ನೂ ಹೆಚ್ಚಿನ ಅನುದಾನ ತಂದು ಅತ್ಯಾಧುನಿಕ ಸೌಲಭ್ಯವುಳ್ಳ ಭವನ ನಿರ್ಮಾಣ ಮಾಡುವ ಮೂಲಕ, ಎಲ್ಲರೂ ಇಲ್ಲಿ ಕಾರ್ಯಕ್ರಮ ಮಾಡುವ ನಿಟ್ಟಿನಲ್ಲಿ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು.

ಈ ಹಿಂದೆ ಶಾಮನೂರು, ಬೇತೂರಿನಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಅಲ್ಲಿ ಎಲ್ಲಾ ಸಮುದಾಯದವರು ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಈ ನಿಟ್ಟಿನಲ್ಲಿ ಭವನಗಳು ಉಪಯುತ್ತವಾಗಿದೆ. ಆದರೆ ನಗರದಲ್ಲಿನ ಬಾಬು ಜಗಜೀವನ್ ರಾಂ ಭವನ ಉಪಯೋಗಿಸಲು ಸಾಧ್ಯವಾಗದಿರುವುದರಿಂದ ಇಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಆರಂಭಿಸಬೇಕೆಂದು ತಿಳಿಸಿದರು.

ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಬಹು ದಿನಗಳ ಬೇಡಿಕೆಯಾಗಿದ್ದ ಡಾ; ಬಿ.ಆರ್.ಅಂಬೇಡ್ಕರ್ ಭವನ ಆದಷ್ಟು ಬೇಗ ನಿರ್ಮಾಣವಾಗಬೇಕು. ಬೆಂಗಳೂರಿನ ವಸಂತ ನಗರದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದಂತೆ ಈ ಭವನ ನಿರ್ಮಾಣವಾಗಬೇಕು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗುವುದರಿಂದ ಸರ್ವಋತು ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತೆ ರೇಣುಕಾ, ಮುಖಂಡರಾದ ಡಿ.ಬಸವರಾಜು, ಸಿ.ಉಮೇಶ್, ಮಲ್ಲೇಶಪ್ಪ, ಮಂಜುನಾಥ್, ರವಿನಾರಾಯಣ್, ಅಣ್ಣಪ್ಪ, ಹಾಲೇಶಪ್ಪ, ಎಂ.ನೀಲಗಿರಿಯಪ್ಪ, ಹನುಮಂತಪ್ಪ, ದುಗ್ಗಪ್ಪ, ಹೆಚ್.ಸಿ.ಮಲ್ಲಪ್ಪ, ಹೆಗ್ಗೆರೆ ರಂಗಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಕೆ ಸ್ವಾಗತಿಸಿದರು. ಕೌಶಲ್ಯಾಭಿವೃದ್ದಿ ಅಧಿಕಾರಿ ಶಿವಕುಮಾರ್ ವಂದಿಸಿದರು. ರವಿಚಂದ್ರ ನಿರೂಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending