ದಿನದ ಸುದ್ದಿ
ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಸ್ಥಿತಿ-ಗತಿಗಳ ವಿವರವುಳ್ಳ ಬುಲೆಟಿನ್ ಬಿಡುಗಡೆಗೆ ಸೂಚನೆ : ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್‍ಡೆಸ್ಕ್ ಪ್ರಾರಂಭಿಸಿ : ಸಚಿವ ಭೈರತಿ ಬಸವರಾಜ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರುವ ಬೆಡ್‍ಗಳು, ವೆಂಟಿಲೇಟರ್, ಐಸಿಯು ಹಾಗೂ ಖಾಲಿ ಇರುವ ಬೆಡ್‍ಗಳ ಸಂಖ್ಯೆ ಸೇರಿದಂತೆ ಎಲ್ಲ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಎಲ್ಲ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್‍ಡೆಸ್ಕ್ ಪ್ರಾರಂಭಿಸುವಂತೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಕೈಗೊಳ್ಳಲಾಗಿರುವ ಹಾಗೂ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಸೋಂಕಿತರು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಎಡತಾಕುತ್ತಿದ್ದು, ಅಲ್ಲಿ ಲಭ್ಯವಿರುವ ಬೆಡ್‍ಗಳ ವಿವರದ ಮಾಹಿತಿ ಸಮರ್ಪಕವಾಗಿ ದೊರೆಯದೆ, ಅಥವಾ ಜವಾಬ್ದಾರಿಯುತ ಅಧಿಕಾರಿಗಳಿಂದ ಮಾಹಿತಿ ಪಡೆಯದೆ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ರೋಗಿಗಳು ಅಲೆದಾಡುತ್ತಿದ್ದಾರೆ, ಆಸ್ಪತ್ರೆಗಳ ಪರಿಚಾರಕರು, ಗ್ರೂಪ್-ಡಿ ಸಿಬ್ಬಂದಿಗಳು, ಕಾವಲುಗಾರರೇ ಸಾರ್ವಜನಿಕರಿಗೆ ಇಲ್ಲಿ ಬೆಡ್ ಖಾಲಿ ಇಲ್ಲ ಎಂದು ರೋಗಿಗಳನ್ನು ಸಾಗಹಾಕುತ್ತಿದ್ದಾರೆ, ಆಂಬುಲೆನ್ಸ್ ವ್ಯವಸ್ಥೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರು, ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಹೀಗಾಗಿ ಆಸ್ಪತ್ರೆಗಳಲ್ಲಿ ಭರ್ತಿಯಾಗಿರುವ ಹಾಗೂ ಖಾಲಿ ಇರುವ ಬೆಡ್‍ಗಳ ವಿವರ ನಿಖರವಾಗಿ ಸಮಪರ್ಕವಾಗಿ ಸಾರ್ವಜನಿಕರಿಗೆ ದೊರೆಯುವಂತಾಗಲು, ಸರ್ಕಾರಿ ಹಾಗೂ ಎಲ್ಲ ಖಾಸಗಿ ಆಸ್ಪತ್ರೆಗಳ ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಬೇಕು. ಆಸ್ಪತ್ರೆವಾರು ಬೆಡ್‍ಗಳ ಭರ್ತಿ ಹಾಗೂ ಲಭ್ಯತೆ ಕುರಿತ ವಿವರವುಳ್ಳ ಬುಲೆಟಿನ್ ಅನ್ನು ನಿತ್ಯ ಜಿಲ್ಲಾಧಿಕಾರಿಗಳು ಪ್ರಕಟಿಸಬೇಕು.
ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕ ಹಾಗೂ ರೆಮ್‍ಡೆಸಿವರ್ ಔಷಧ ಸಮರ್ಪಕ ಪೂರೈಕೆ ಹಾಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಇದನ್ನೂ ಓದಿ | ದಾವಣಗೆರೆ |ಆಮ್ಲಜನಕ ಪೂರೈಕೆ ಕಾರ್ಖಾನೆಗೆ ಉಸ್ತುವಾರಿ ಸಚಿವರ ಭೇಟಿ
13 ಕೆ.ಎಲ್. ಸಾಮಥ್ರ್ಯದ ಆಮ್ಲಜನಕ ಘಟಕ : ಸದ್ಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 06 ಕೆ.ಎಲ್. ಸಾಮಥ್ರ್ಯದ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದ್ದು, ಇದರಿಂದ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. 13 ಕೆ.ಎಲ್. ಸಾಮಥ್ರ್ಯದ ಇನ್ನೊಂದು ಆಮ್ಲಜನಕ ಘಟಕ ಸ್ಥಾಪನೆಗೆ ಮಂಜೂರಾತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಮಂಜೂರಾತಿ ಪತ್ರಕ್ಕಾಗಿ ಕಾಯದೆ, 13 ಕೆ.ಎಲ್ ಸಾಮಥ್ರ್ಯದ ಆಮ್ಲಜನಕ ಘಟಕ ಸ್ಥಾಪನೆಗೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ನೀವು ಪ್ರಾರಂಭಿಸಿ. ಇದಕ್ಕೆ ಸಂಪೂರ್ಣ ಅಧಿಕಾರವನ್ನು ನಿಮಗೇ ಕೊಡುತ್ತಿದ್ದೇನೆ ಎಂದರು. ಜಿಲ್ಲಾಧಿಕಾರಿಗಳು ಉತ್ತರಿಸಿ, 13 ಕೆ.ಎಲ್. ಸಾಮಥ್ರ್ಯದ ಘಟಕ ತಕ್ಷಣದಲ್ಲಿ ದೊರೆಯುವುದು ಕಷ್ಟ.
ಇವು ಗುಜರಾತ್‍ನಲ್ಲಿ ಮಾತ್ರ ಉತ್ಪಾದನೆಯಾಗುತ್ತವೆ, ಆದರೂ ಸಂಬಂಧಪಟ್ಟವರಿಂದ ಮಾಹಿತಿ ಪಡೆದು, ಆದಷ್ಟು ಶೀಘ್ರ ಘಟಕ ಸ್ಥಾಪನೆಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದರು. ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಪ್ರತಿಕ್ರಿಯಿಸಿ, 13 ಕೆ.ಎಲ್. ಸಾಮಥ್ರ್ಯದ ಘಟಕ ದೊರೆಯುವುದು ಕಷ್ಟವಿದ್ದಲ್ಲಿ, 06 ಕೆ.ಎಲ್. ಸಾಮಥ್ರ್ಯದ ಎರಡು ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಲಾಕ್‍ಡೌನ್ ಜಾರಿಗೆ ಒಕ್ಕೊರಲ ಮನವಿ : ಜಿಲ್ಲೆಯಲ್ಲಿ ಈವರೆಗೆ ಒಟ್ಟು 27222 ಕೋವಿಡ್ ಸೋಂಕು ಪತ್ತೆಯಾಗಿದ್ದು, ಈವರೆಗೆ ಒಟ್ಟಾರೆ 290 ಜನ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2534 ಸಕ್ರಿಯ ಪ್ರಕರಣಗಳಿವೆ. ಈ ವರ್ಷ ಏಪ್ರಿಲ್‍ನಿಂದ ಈವರೆಗೆ ಕೋವಿಡ್‍ನ 3485 ಪ್ರಕರಣ ಪತ್ತೆಯಾಗಿದ್ದು, 26 ಮರಣ ದಾಖಲಾಗಿದೆ.
ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ್ದ ಜನತಾ ಕಫ್ರ್ಯೂ ಪರಿಣಾಮಕಾರಿಯಾಗಿಲ್ಲ. ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ, ಜನತಾ ಕಫ್ರ್ಯೂಗೆ ಸಾರ್ವಜನಿಕರ ಸಹಕಾರ ದೊರೆಯುತ್ತಿಲ್ಲ. ಹಳ್ಳಿಗಳಲ್ಲಿ ಇಸ್ಪೀಟ್ ಆಡಲು ಜೂಜು ಅಡ್ಡೆಗಳು ಪ್ರಾರಂಭವಾಗಿವೆ.
ಜನರು ತಮ್ಮ ಸ್ವಭಾವ ಬದಲಿಸಿಕೊಳ್ಳದಿದ್ದರೆ ಸರ್ಕಾರ ಮತ್ತು ಅಧಿಕಾರಿಗಳು ಏನೂ ಮಾಡಲು ಆಗಲ್ಲ. ಜನರ ಪ್ರಾಣದ ಹಿತದೃಷ್ಟಿಯಿಂದ ಕೋವಿಡ್ ಸರಪಳಿಯನ್ನು ತುಂಡರಿಸುವುದು ತೀವ್ರ ಅಗತ್ಯವಾಗಿದ್ದು, ಲಾಕ್‍ಡೌನ್ ಜಾರಿಗೊಳಿಸುವುದು ಅನಿವಾರ್ಯವಾಗಿದೆ.
ಹೀಗಾಗಿ ಮೇ. 31 ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ರೇಣುಕಾಚಾರ್ಯ, ಶಾಸಕರುಗಳಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ. ರವೀಂದ್ರ, ಪ್ರೊ. ಲಿಂಗಣ್ಣ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಒಕ್ಕೊರಲ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಮ್ಮ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸೋಂಕು ಮುಚ್ಚಿಡಬೇಡಿ
ಜನರು ತಮ್ಮಲ್ಲಿ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್‍ನ ಯಾವುದೇ ರೋಗಲಕ್ಷಣಗಳು ಇದ್ದರೂ, ಪರೀಕ್ಷೆಗೆ ಒಳಗಾಗಲು ಮುಂದಾಗುತ್ತಿಲ್ಲ. ಜ್ವರ, ಕೆಮ್ಮಿಗೆ ಗುಳಿಗೆಗಳನ್ನು ನುಂಗಿ ಸುಮ್ಮನಾಗುವ ಪ್ರವೃತ್ತಿ ತೋರಿಸುತ್ತಿದ್ದಾರೆ. ಗ್ರಾಮಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಇವರಿಗೂ ಸಹಕಾರ ನೀಡುತ್ತಿಲ್ಲ. ತೀವ್ರ ಉಸಿರಾಟ ತೊಂದರೆ ಪ್ರಾರಂಭವಾದಾಗ ಆಸ್ಪತ್ರೆಗೆ ಬರುತ್ತಾರೆ.
ರೋಗ ತೀವ್ರ ಉಲ್ಬಣವಾದಾಗ ಆಸ್ಪತ್ರೆಗೆ ಬಂದರೆ ಅವರಿಗೆ ಚಿಕಿತ್ಸೆ ದೊರಕುವುದು ಕಷ್ಟಸಾಧ್ಯ. ಹೀಗಾಗಿ ಸಾರ್ವಜನಿಕರು ರೋಗ ಮುಚ್ಚಿಡುವುದರಿಂದ ಆ ರೋಗಿಗೆ ಮಾತ್ರವಲ್ಲ ತಮ್ಮ ಕುಟುಂಬ, ಅಕ್ಕಪಕ್ಕದವರು, ಇಡೀ ಗ್ರಾಮವೇ ತೊಂದರೆಗೆ ಸಿಲುಕುತ್ತದೆ ಎಂಬ ಅಂಶವನ್ನು ಅರಿತು ಜವಾಬ್ದಾರಿಯಿಂದ ವರ್ತಿಸಬೇಕು. ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಬೇಕು.
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅನಗತ್ಯವಾಗಿ ಮನೆಯಿಂದ ಹೊರಗೆ ಅಡ್ಡಾಡುವುದನ್ನು ಬಿಡಬೇಕು ಎಂದು ಸಚಿವರು, ಸಂಸದರು ಒಳಗೊಂಡಂತೆ ಎಲ್ಲ ಶಾಸಕರುಗಳು, ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.
ವಾರದೊಳಗೆ ಕೋವಿಡ್ ಇಳಿಮುಖವಾಗಬೇಕು
ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ್ದ ಜನತಾ ಕಫ್ರ್ಯೂ ಪರಿಣಾಮಕಾರಿಯಾಗಿ ಜಾರಿಗೊಂಡಿಲ್ಲ. ಜನರು ಹಾಗೂ ವಾಹನಗಳು ನಿಗದಿತ ಅವಧಿಯ ಬಳಿಕವೂ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ತರಕಾರಿ ಮತ್ತಿತರ ಸಾಮಗ್ರಿ ಖರೀದಿ ಸ್ಥಳದಲ್ಲಿ ಈಗಲೂ ಜನಸಂದಣಿ ಕಂಡುಬರುತ್ತಿದೆ.
ಹೀಗಾದಲ್ಲಿ ಕೋವಿಡ್ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗುತ್ತದೆ. ಸದ್ಯ ಜಿಲ್ಲೆಯಲ್ಲಿ 2534 ಸಕ್ರಿಯ ಪ್ರಕರಣಗಳಿವೆ. ಬರುವ ಒಂದು ವಾರದ ಒಳಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇನ್ನಷ್ಟು ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಜರುಗಿಸಲು ಮುಂದಾಗಬೇಕು. ತಹಸಿಲ್ದಾರರು, ಪೊಲೀಸ್ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಿ.
ಯಾವುದೇ ಕಠಿಣ ಕ್ರಮಗಳಿಗೆ ನಾವು ಬೆಂಬಲ ನೀಡುತ್ತೇವೆ ಎಂದು ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಸಂಸದರು, ಶಾಸಕರುಗಳೂ ಕೂಡ ಬೆಂಬಲಿಸುವುದಾಗಿ ಭರವಸೆ ನೀಡಿದರು.
ಸಮರ್ಪಕ ಲಸಿಕೆ ದೊರಕಿಸಲು ಕ್ರಮ
ಜಿಲ್ಲೆಯಲ್ಲಿ ಈವರೆಗೆ 14697 ಆರೋಗ್ಯ ಕಾರ್ಯಕರ್ತರು, 5916 ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ. 45 ವರ್ಷ ಮೇಲ್ಪಟ್ಟ 153130 ಜನರಿಗೆ ಮೊದಲ ಡೋಸ್, 25571 ಜನರಿಗೆ ಎರಡನೆ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ.
ಈವರೆಗೆ ಚನ್ನಗಿರಿ ತಾಲ್ಲೂಕಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಸೇರಿದಂತೆ ಒಟ್ಟು 39700 ಡೋಸ್, ಹೊನ್ನಾಳಿ-32610, ಹರಿಹರ-29250, ಜಗಳೂರು-16270, ಹಾಗೂ ದಾವಣಗೆರೆ ತಾಲ್ಲೂಕಿಗೆ 67520 ಡೋಸ್ ಲಸಿಕೆ ಪೂರೈಸಲಾಗಿದೆ. ಈವರೆಗೆ ಒಟ್ಟು 1.84 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ 22620 ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಮಾಡಲಾಗಿದೆ.
ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗುತ್ತಿದ್ದು, ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗುತ್ತಿಲ್ಲ. ಕೋವ್ಯಾಕ್ಸಿನ್‍ನ 850 ಜನ ಎರಡನೆ ಡೋಸ್ ಪಡೆಯುವುದು ಬಾಕಿ ಉಳಿದಿದ್ದು, ಕೋವ್ಯಾಕ್ಸಿನ್ ಲಸಿಕೆ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಸದ್ಯ ಜಿಲ್ಲೆಯಲ್ಲಿ ಕೋವಿಶೀಲ್ಡ್‍ನ 2ನೇ ಡೋಸ್ ಬಾಕಿ ಇರುವವರಿಗೆ ಮಾತ್ರ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರ್.ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದರು.
ಸಂಸದರು ಪ್ರತಿಕ್ರಿಯಿಸಿ ಜಿಲ್ಲೆಗೆ ನಿತ್ಯ 40 ರಿಂದ 50 ಸಾವಿರ ಡೋಸ್ ಲಸಿಕೆ ಪೂರೈಕೆಯಾಗಬೇಕು. ಅಂದಾಗ ಮಾತ್ರ ಲಸಿಕಾಕರಣ ಪರಿಣಾಮಕಾರಿಯಾಗಿಸಲು ಸಾದ್ಯ. ಈ ನಿಟ್ಟಿನಲ್ಲಿ ಸಚಿವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು. ಉತ್ತರಿಸಿದ ಸಚಿವರು ಸರ್ಕಾರ 3 ಕೋಟಿ ಲಸಿಕೆ ಖರೀದಿಗೆ ಕ್ರಮ ಕೈಗೊಂಡಿದೆ ಅಲ್ಲದೆ, 1.20 ಕೋಟಿ ರೆಮ್‍ಡೆಸಿವರ್ ಔಷಧಿ ಖರೀದಿಗೂ ಮುಂದಾಗಿದೆ. ಬರುವ ಒಂದು ವಾರದೊಳಗೆ ಲಸಿಕೆ ಪೂರೈಕೆ ಸಮರ್ಪಕವಾಗಲಿದೆ ಎಂದು ಭರವಸೆ ನೀಡಿದರು.
ಕೋವಿಡ್ ಕೇರ್ ಸೆಂಟರ್‍ಗೆ ಕರೆತನ್ನಿ
ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲ್ಲೂಕುಗಳಲ್ಲಿಯೂ ಹಾಸ್ಟೆಲ್ ಮುಂತಾದೆಡೆ ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಿ ಉತ್ತಮ ಊಟೋಪಹಾರ, ವೈದ್ಯಕೀಯ ನೆರವು ಕಲ್ಪಿಸಲಾಗುತ್ತಿದೆ. ರೋಗಲಕ್ಷಣ ರಹಿತ ಹಾಗೂ ಕಡಿಮೆ ತೀವ್ರತೆಯ ಕೋವಿಡ್ ಸೋಂಕಿತರಿಗೆ ಮನೆಗಳಲ್ಲಿ ಪ್ರತ್ಯೇಕವಾದ ಮೂಲಭೂತ ಸೌಕರ್ಯ ಇಲ್ಲದಿದ್ದಲ್ಲಿ, ಹೋಂ ಐಸೋಲೇಷನ್‍ಗೆ ಯಾವುದೇ ಕಾರಣಕ್ಕೂ ಅವಕಾಶ ನೀಡದೆ ಅವರನ್ನು ಆದಷ್ಟು ಕೋವಿಡ್ ಕೇರ್ ಸೆಂಟರ್‍ಗೆ ಕರೆತರುವ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು.
ಸದ್ಯ ಜಿಲ್ಲೆಯಲ್ಲಿ 1095 ಜನ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್‍ನಲ್ಲಿ ಉತ್ತಮ ಊಟೋಪಹಾರ, ವೈದ್ಯಕೀಯ ನೆರವು ಸೇರಿದಂತೆ ಸಮರ್ಪಕ ವ್ಯವಸ್ಥೆ ದೊರಕಿಸುವ ವಿಶ್ವಾಸವನ್ನು ಅಧಿಕಾರಿಗಳು ರೋಗಿಗಳಿಗೆ ನೀಡಬೇಕು. ಸಮರ್ಪಕ ವ್ಯವಸ್ಥೆ ಇಲ್ಲದೆ ಹೋಂ ಐಸೋಲೇಷನ್‍ಗೆ ಒಳಗಾಗುವವರು, ಸೋಂಕನ್ನು ವ್ಯಾಪಕವಾಗಿ ಹರಡಲು ಕಾರಣಕರ್ತರಾಗುತ್ತಾರೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.
ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರುಗಳಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕುಗಳ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್

ಸುದ್ದಿದಿನ,ಚನ್ನಗಿರಿ:ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನ ಮೀರಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ (ಏ.14ರಂದು) ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಈಗಲೂ ಜಾರಿಯಲ್ಲಿರುವ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯಿಂದ ನಡೆಯುತ್ತಿರುವ ಅಮಾನವೀಯವಾದ ಕೃತ್ಯಗಳು ಹಾಗೂ ದೇಶದಲ್ಲಿ ಅನುಸೂಚಿತ ಜಾತಿಗಳು, ಬುಡಕಟ್ಟುಗಳು, ಆದಿವಾಸಿಗಳು ಎದುರಿಸುತ್ತಿರುವ ಸವಾಲುಗಳು, ಹಿಂದುಳಿದ ವರ್ಗದ ಜನರ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿರುವಿಕೆಯ ಬಗ್ಗೆ ಚರ್ಚೆ ಆಗಬೇಕಾಗಿದೆ ಎಂದರು.
ಭಾರತ ದೇಶ ಸ್ವಾತಂತ್ರ್ಯಗೊಂಡು 76 ವರ್ಷಗಳು ಕಳೆದರೂ ಗ್ರಾಮೀಣ ಹಾಗೂ ನಗರ ಪ್ರದೇಶದ ಕೊಳಗೇರಿಗಳಲ್ಲಿ ಇಂದಿಗೂ ಕೂಡ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಆಗದೇ ಇರುವುದು ಒಂದು ವಿಪರ್ಯಾಸವೇ ಸರಿ. ಈ ಕಾರಣದಿಂದಲೇ ಇಂದಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ದೇಶದಲ್ಲಿನ ಎಲ್ಲಾ ಸರ್ಕಾರಗಳು ಈ ನಿಟ್ಟಿನಲ್ಲಿ ತಾವು ರೂಪಿಸುವ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಳಿಸಿದಾಗ ಮಾತ್ರ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಿದಂತಾಗುತ್ತದೆ ಹಾಗೂ ಪ್ರಗತಿಪರ ದೇಶವಾಗುತ್ತದೆ ಎಂದು ನುಡಿದರು.
ಪ್ರಾಂಶುಪಾಲರಾದ ಅಮೃತೇಶ್ವರ್ ಬಿಜಿ ಅವರು
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಹಾಯಕ ಪ್ರಾಧ್ಯಾಪಕ ಪ್ರಸನ್ನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕ ದೇವರಾಜು ಸ್ವಾಗತಿಸಿದರು. ವಿದ್ಯಾರ್ಥಿ ಸಂಜಯ್ ಟಿಪಿ ಆಶಯ ಗೀತೆ ಹಾಡಿದರು. ಪವನ್ ಕುಮಾರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ

ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ವಿವಾಹೇತರ ಸಂಬಂಧದ ಆರೋಪದ ಮೇಲೆ ಜಾಮಿಯಾ ಮಸೀದಿಯ ಹೊರಗೆ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತರನ್ನು ಮೊಹಮ್ಮದ್ ನಯಾಜ್ (32), ಮೊಹಮ್ಮದ್ ಗೌಸ್ ಪೀರ್ (45), ಚಾಂದ್ ಬಾಷಾ (35), ಇನಾಯತ್ ಉಲ್ಲಾ (51), ದಸ್ತಗೀರ್ (24), ಮತ್ತು ರಸೂಲ್ ಟಿಆರ್ (42) ಎಂದು ಗುರುತಿಸಲಾಗಿದೆ. ಅವರು ತಾವರೆಕೆರೆ ಗ್ರಾಮದಲ್ಲಿ ಸಣ್ಣ ಅಂಗಡಿಗಳನ್ನು ನಡೆಸುತ್ತಿದ್ದರು.
ಈ ಜನರು ಜಮೀಲ್ ಅಹ್ಮದ್ ಅವರ ಪತ್ನಿ ಶಬೀನಾ ಬಾನು ಅವರ ಮೇಲೆ ವಿವಾಹೇತರ ಸಂಬಂಧದ ಆರೋಪದ ಮೇಲೆ ಹಲ್ಲೆ ನಡೆಸಿದರು. ಏಪ್ರಿಲ್ 7 ರಂದು ಶಬೀನಾ ಬಾನು (38) ತನ್ನ ಮಕ್ಕಳು ಮತ್ತು ಸ್ನೇಹಿತೆ ನಸ್ರೀನ್ ಜೊತೆ ಒಂದು ಸಣ್ಣ ಬೆಟ್ಟಕ್ಕೆ ಹೋಗಿ ಅದೇ ದಿನ ಮನೆಗೆ ಮರಳಿದ್ದರು ಎಂದು ಹೇಳಲಾಗುತ್ತದೆ. ವೈದ್ಯರ ನಿರ್ದೇಶನದಂತೆ ಮಾತ್ರೆ ತೆಗೆದುಕೊಂಡು ಮಲಗಿದ್ದರು.
ಈ ಮಧ್ಯೆ, ಆಕೆಯ ಸ್ನೇಹಿತೆ ನಸ್ರೀನ್, ತಾನು ಮನೆಗೆ ಹೋಗುವುದಾಗಿ ಹೇಳಿದ್ದರೂ, ಯಾವುದೋ ಕಾರಣಕ್ಕೆ ಅಲ್ಲಿಯೇ ಉಳಿದಳು. ನಂತರ, ನಸ್ರೀನ್ ಸಂಬಂಧಿ ಫ್ಜಯಾಜ್ ಎಂಬ ವ್ಯಕ್ತಿ ಶಬೀನಾ ಬಾನು ನಿವಾಸಕ್ಕೆ ಬಂದ. ಜಮೀಲ್ ತನ್ನ ಮನೆಗೆ ಬಂದು ನಸ್ರೀನ್ ಮತ್ತು ಫಯಾಜ್ ರನ್ನು ನೋಡಿದಾಗ, ತನ್ನ ಹೆಂಡತಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸಿದನು. ನಂತರ, ಅವರು ಮಸೀದಿಯಲ್ಲಿ ಧಾರ್ಮಿಕ ಮುಖಂಡರಿಗೆ ದೂರು ನೀಡಿದರು. ಶಬೀನಾ ಬಾನು ಮತ್ತು ಅವರ ಸ್ನೇಹಿತೆ ನಸ್ರೀನ್ ಮತ್ತು ಅವರ ಸಂಬಂಧಿ ಫಯಾಜ್ ಅವರನ್ನು ಏಪ್ರಿಲ್ 9 ರಂದು ತಾವರೆಕೆರೆ ಮಸೀದಿಯೊಳಗೆ ಕರೆದೊಯ್ಯಲಾಯಿತು. ಅಂದು ಮಹಿಳೆಯ ಮೇಲೆ ಹಲ್ಲೆ ನಡೆಸಲಾಯಿತು. ಎ.11 ರಂದು ಠಾಣೆಗೆ ಬಂದು ಮಹಿಳೆ ದೂರು ನೀಡಿದ್ದರು. ಈ ಸಂಬಂಧ ವಿಡಿಯೋ ಭಾರೀ ವೈರಲ್ ಆಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ

- ಗಿರೀಶ್ ಕುಮಾರ್ ಗೌಡ,ಬಳ್ಳಾರಿ
ಸುದ್ದಿದಿನಡೆಸ್ಕ್:ಗೇಟ್ ಗೆ ಡಿಕ್ಕಿ ಹೊಡೆದು ಟನ್ ಗಟ್ಟಲೇ ಹೆಚ್ಚಿನ ಕಬ್ಬಿಣ ಬಿಸಾಕಿ ಓಡಿ ಹೋಗಿದ್ದಾರೆ ಪ್ರಭಾವಿ ರಾಜಕೀಯ ನಾಯಕನ ಹಿಂಬಾಲಕರು ಎನ್ನುವ ಮಾಹಿತಿ ಲಭ್ಯವಾಗಿದೆ.
ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಡಿಸಿ ನಗರದ ಹತ್ತಿರ ತುಂಗಭದ್ರಾ ಬೋರ್ಡ್ ಗೆ ಸಂಭಂದಿಸಿದ ಸೇತುವೆ ನಿರ್ಮಾಣ ಮಾಡಲು ಕಬ್ಬಿಣ ಹಾಕಿದ್ದರೆ ಅದನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ ದುರ್ಘಟನ ನಡೆದಿತ್ತು. ಆದರೆ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಠಾಣೆಯ ಮುಂದೆ ಅಧಿಕಾರಿಗಳು ಕೇಸ್ ಮಾಡಲು ಸಿದ್ದರಾಗಿದ್ದರು, ಆದರೆ ಈ ಕಬ್ಬಿಣವನ್ನು ಪ್ರಭಾವಿ ರಾಜಕೀಯ ಹಿಂಬಾಲಕರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ವಿಚಾರ ಸುದ್ದಿಯಾಗುತ್ತೇ ರಾತ್ರೋರಾತ್ರಿ ಕಳ್ಳತನ ಮಾಡಿದ ವ್ಯಕ್ತಿ ವಾಟರ್ ಹೌಸ್ ನಲ್ಲಿ ಹಾಕಿ ಓಡಿ
ಹೋಗಿದ್ದಾರೆ.
ಮಹಾದೇವತತಾನ ಮಠದ ಎದುರುಗಡೆ ಇರುವ ವಾಟರ್ ಹೌಸ್ ನಲ್ಲಿ ರಾತ್ರಿ 1 ಗಂಟೆ 22 ನಿಮಿಷಕ್ಕೆ ಒಂದು ಲಾರಿ ಮತ್ತು ಕ್ರೇನ್ ಉಪಯೋಗಿ ಕೊಂಡು 10 ರಿಂದ 15 ನಿಮಿಷದ ಒಳಗೆ ಉಳಿಸಿ ಪರಾಯಿಯಾಗಿದ್ದಾರೆ ಎನ್ನುವ ಮಾಹಿತಿಯನ್ನು ಸ್ಥಳೀಯ ಸಿಬ್ಬಂದಿಗಳು ತಿಳಿಸಿದ್ದಾರೆ.
ಇನ್ನು ಈ ಕಬ್ಬಿಣ ಹಾಕಲು ಬಂದವರಲ್ಲಿ ಈ ವ್ಯಕ್ತಿಗಳು ಮೈಮೇಲೆ ದಪ್ಪ ದಪ್ಪ ಬಂಗಾರದ ಆಭರಣಗಳನ್ನು ಹಾಕಿಕೊಂಡು ಕಾರುಗಳಲ್ಲಿ ಬಂದಿದ್ದಾರೆ. ಅಧಿಕಾರಿಗಳು ಹೇಳಿದ್ದಾರೆ ಯಾವ ಅಧಿಕಾರಿ ? ಎನ್ನುವ ಮಾಹಿತಿಯನ್ನು ಇಲ್ಲಿಯ ಸಿಬ್ಬಂದಿಗೆ ನೀಡದೇ ಕಾಲು ಕಿತ್ತಿದ್ದಾರೆ. ಈ ಲಾರಿ ಹಾಗೂ ಕ್ರೇನ್ ಬಂದಿರುವುದು ಮಹಾದೇವ ತಾತನ ಮಠದ ಹೊರಗಡೆ ಇರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಅದರಲ್ಲಿ ತುಂಗಭದ್ರಾ ಬೋರ್ಡ್ ನಲ್ಲಿ ಕಳ್ಳತನ ಮಾಡಿದ ಕಬ್ಬಿಣವನ್ನು ಭಯದ ವಾತಾವರಣದಲ್ಲಿ ವಾಟರ್ ಬೋಸ್ಟ್ ನಲ್ಲಿ ಹಾಕು ಓಡಿಹೋಗಿದ್ದಾರೆ.
ವಾಟರ್ ಬೂಸ್ಟ್ ನ ಗೇಟ್ ಗೆ ಡಿಕ್ಕಿ ಹೊಡೆದು ಗೇಟ್ ಮುರಿದು ಮೂರು ತಾಸುಗಳಲ್ಲಿ ಇಳಿಸಬೇಕಾದ ಕಬ್ಬಿಣ ಬರಿ 10 ರಿಂದ 15 ನಿಮಿಷದಲ್ಲಿ ಬಿಸಾಕಿ ಓಡಿಹೋಗಿದ್ದಾರೆ. ಇನ್ನು ತುಂಗಭದ್ರಾ ಬೋರ್ಡ್ ಸಿಬ್ಬಂದಿಗೆ ಕೇಳಿದ್ರೇ ಇಲ್ಲ ನನಗೆ ಏನು ? ಗೊತ್ತಿಲ್ಲ ನಮ್ಮ ಅಧಿಕಾರಿ ಕೆಂಚಪ್ಪ ಕಬ್ಬಿಣ ಕಳ್ಳತನ ಅವರಿಗೆ ಗೊತ್ತಿದೆ ಎನ್ನುವ ಮಾಹಿತಿ ನೀಡಿದರು. ಆದರೆ ಕಬ್ಬಿಣಕ್ಕೆ ತುಂಗಭದ್ರಾ ಬೋರ್ಡ್ ಎನ್ನುವ ಬರಹವನ್ನು ಹಳದಿ ಬಣ್ಣದಿಂದ ಬರದ ವ್ಯಕ್ತಿ ನಾನು ಎಂದರು.
ಭರತ್ ರೆಡ್ಡಿ ಆಪ್ತ ಸಿಂಧನೂರಿನ ಶಶಿ
ಕಾಂಗ್ರೇಸ್ ಮುಖಂಡ ಶಶಿ ಎನ್ನುವ ವ್ಯಕ್ತಿ ಕಾಂಗ್ರೆಸ್ ಪಕ್ಷದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ಎನ್ನುವ ಅಂಶ ದೊರೆತಿದೆ. ಇನ್ನು ಈ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಸರ್ಕಾರ ನೀಡುವ ಅನ್ನ ಭಾಗ್ಯದ ಸಾರ್ವಜನಿಕರಿಗೆ ಉಚಿತವಾಗಿ ನೀಡಿದರೇ, ಶಶಿ ಎನ್ನುವ ಕಾಂಗ್ರೇಸ್ ಮುಖಂಡ ಶಶಿ ಅಕ್ಕಿ ದಂದೆಯಲ್ಲಿ ನಿಂತು ಶಾಸಕ ಹೆಸರು ಹೇಳಿಕೊಂಡು ಹಗಲು ದರೋಡೆ ಮಾಡುತ್ತಿದ್ದಾನೆ.
ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಏಕೆ ? ಮೌನರಾಗಿದ್ದಾರೆ ಅವರಿಗೆ ಶಾಸಕರ ಒತ್ತಡ ಇದೆಯೇ ?
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸಹಾಯಕ ‘ಲಕ್ಷ್ಮೀ ನಾರಾಯಣ ಶಾಸ್ತ್ರಿ’ ಸಹ ಈ ಕಬ್ಬಿಣ ಕಳ್ಳತನ ವ್ಯವಹಾರದಲ್ಲಿ ಭಾಗಿಯಾಗಿ ಶಶಿ ಎನ್ನುವ ಮುಖಂಡನಿಗೆ ಸಹಕಾರ ನೀಡುತ್ತಿದ್ದಾನೆ. ರಾತ್ರೋರಾತ್ರಿ ಕಬ್ಬಿಣವನ್ನು ಬಿಸಾಡಲು ಸಹ ಸಹಕಾರ ನೀಡಿದ್ದಾನೆ. ಇನ್ನು ಈ ವಿಚಾರವಾಗಿ ‘ಸುದ್ದಿದಿನ’ ವೆಬ್ ನಲ್ಲಿ ವಿಶೇಷ ವರದಿಗಾರರು ದೂರವಾಣಿ ಮೂಲಕ ಕರೆ ಮಾಡಿದ್ರೇ ಅವರು ಸ್ವೀಕರಿಸಲಿಲ್ಲ.
ಇನ್ನು ಗ್ಯಾಸ್ ವೆಲ್ಡರ್ ಬಶೀರ್ ನನ್ನು ನಾರಾ ಭರತ್ ರೆಡ್ಡಿ ಆಪ್ತ ಕಾಂಗ್ರೇಸ್ ಯುವ ಮುಖಂಡ ಕೊಳಗಲ್ಲು ಧರ್ಮರೆಡ್ಡಿ ಗ್ರಾಮೀಣ ಠಾಣೆಗೆ ಬಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದ್ದಾರೆ ಅವರನ್ನು ಬಿಟ್ಟು ಕಳಿಸಿ ಎನ್ನುವ ಮಾಹಿತಿಯ ಪೊಲೀಸ್ ಠಾಣೆಯ ಎಸ್.ಬಿ ( spacial Branch) ಅವರ ಮೂಲಕ ಹೋಗಿದ್ದಾರೆ. ಇನ್ನು ಪೋಲೀಸರು ಧರ್ಮರೆಡ್ಡಿ ಮತ್ತು ಬಶೀರ್ ಇಬ್ಬರು ನಿಲ್ಲಿಸಿ ಪೋಟೊ ತೆಗೆಸಿ ಪತ್ರ ಬರೆಸಿಕೊಂಡು,ಸಹಿ ಮಾಡಿಸಿ ಕಳಿಸಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರ ಅವರು ತುಂಗಭದ್ರಾ ಬೋರ್ಡ್ ಅಧಿಕಾರಿ ಕೆಂಚಪ್ಪ ಹಾಗೂ ಸರ್ಕಾರಿ ಪಿಎ ಲಕ್ಷ್ಮೀ ನಾರಾಯಣಶಾಸ್ತ್ರಿ ವಿರುದ್ಧ ಯಾವ ? ರೀತಿಯ ಕ್ರಮ ತೆಗದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಒಟ್ಟಾರೆಯಾಗಿ “ಸುದ್ದಿದಿನ” ವೆಬ್ ಪ್ರಕಟಿಸಿ ವರದಿಗೆ ಫಲಶೃತಿ ದೊರೆತಿದೆ. ಇನ್ನು ಈ ರಾಜಕೀಯ ವ್ಯಕ್ತಿಯ ಬೆಂಬಲಿಗರು ಯಾರು ? ಅವರ ವಿರುದ್ಧ ಕೇಸ್ ಮಾಡುತ್ತಾರೋ ಇಲ್ಲವೋ ಎನ್ನುವ ಅಂಶ ಪೊಲೀಸ್ ಇಲಾಖೆ ಉತ್ತರಿಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ
-
ದಿನದ ಸುದ್ದಿ7 days ago
ದೇಶಾದ್ಯಂತ ಇಂದು ಮಹಾವೀರ ಜಯಂತಿ ಆಚರಣೆ ; ಗಣ್ಯರ ಶುಭಾಶಯ
-
ದಿನದ ಸುದ್ದಿ6 days ago
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ | ಕೇಂದ್ರ ಕೊಡದಿದ್ದರೂ ರಾಜ್ಯ ಸರ್ಕಾರ ನೀಡಲಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
-
ದಿನದ ಸುದ್ದಿ6 days ago
ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಶಂಕುಸ್ಥಾಪನೆ
-
ದಿನದ ಸುದ್ದಿ6 days ago
ದಾವಣಗೆರೆ | ಮಕ್ಕಳ ಬೇಸಿಗೆ ರಜೆಗೆ ಶುಭ ಕೋರಿದ ತಿಂಗಳ ಅಂಗಳ
-
ದಿನದ ಸುದ್ದಿ7 days ago
ರುದ್ರಪ್ಪ ಹನಗವಾಡಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ
-
ದಿನದ ಸುದ್ದಿ5 days ago
ದಾವಣಗೆರೆ | ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು : ನೀಲಾನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ
-
ದಿನದ ಸುದ್ದಿ6 days ago
ದಾವಣಗೆರೆ | ಏಪ್ರಿಲ್ 16, 17 ರಂದು ಸಿಇಟಿ ಪರೀಕ್ಷೆ : ಜಿಲ್ಲೆಯ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು