ಲೈಫ್ ಸ್ಟೈಲ್
ಮೊಗುತಿ ಹಾಕಿ ಬೀಗೋ ಹುಡುಗೀರಾ ಎಲ್ಲಾರು ಕಂಡಿರಾ..!
ಮೂಗುತಿ ಸುಂದರಿಯರು
ಮೂಗುತಿ ಎಂದರೆ “ಓಲ್ಡ್ ಫ್ಯಾಷನ್ ” ಎಂದು ಮೂಗು ಮುರಿಯುತ್ತಿದ್ದ ಹೆಂಗಳೆಯರು, ಇಂದು ಸಮಯದೂಂದಿಗೆ ಬದಲಾದ ಮೂಗುತಿಯ ಹೂಸ ರೂಪಕ್ಕೆ ಮಾರುಹೋಗಿದ್ದಾರೆ. “ಓಲ್ಡ್ ಈಸ್ ಗೋಲ್ಡ್ ” ಎಂಬ ನಾಣ್ನುಡಿಯಂತೆ.. ಈ ಹಿಂದೆ ಆಧುನೀಕರಣದ ಹೆಸರಲ್ಲಿ ತಿರಸ್ಕೃತ ಗೊಂಡಿದ್ದ ಮೂಗುತಿ ಮಾನಿನಿಯರ ಮೂಗನ್ನು ಅಲಂಕರಿಸಿದೆ.
ಭಾರತೀಯ ಸಂಸ್ಕೃತಿ ಯಲ್ಲಿ’ಮೂಗುತಿ’ ವಿಶೇಷ ಸ್ಥಾನ ಪಡೆದಿದೆ. ಮುತ್ತೈದೆಯರ ಐದು ಮುತ್ತುಗಳಲ್ಲಿ ಇದೂ ಒಂದು. ಈ ಹಿಂದೆ ,ಮದುವೆ ನಿಶ್ಚಯ ವಾದ ಮೇಲೆ ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸುವ ಪ್ರತೀತಿ ಇತ್ತು . ಈಗಲೂ ಕೆಲ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಈ ವಾಡಿಕೆ ಮುಂದುವರೆದಿದೆ.
ಮೂಗುತಿ ಏಕೆ ಧರಿಬರಬೇಕು ?
1. ಮೂಗುತಿ ಧರಿಸುವುದರಿಂದ ಋಣಾತ್ಮಕ ಶಕ್ತಿ ತಗ್ಗಿಸುತ್ತದೆ. ಮೂಗಿನ ಬಿಂದುವಿನ ಮೇಲೆ ಒತ್ತಡ ನಿರ್ಮಾಣ ವಾಗುವುದರಿಂದ ಕೆಟ್ಟ ಶಕ್ತಿ ನಿರ್ನಾಮ ವಾಗುತ್ತದೆ.
2. ಮೂಗುತಿ ಧಾರಣೆ ಶ್ವಾಸಮಾರ್ಗ ಹಾಗೂ ಉಸಿರಾಟದಮಾರ್ಗವನ್ನು ರಕ್ಷಿಸುತ್ತದೆ.
3. ಮೂಗುತಿಯು ಚೈತನ್ಯ ದಾಯಕವಾಗಿದ್ದು ಮೂಗಿನ ಸುತ್ತಲಿನ ವಾಯುಮಂಡಲವನ್ನು ಶುದ್ಧಗೊಳಿಸುತ್ತದೆ.
4. ಸ್ತ್ರೀ ಮನಸ್ಸು ಚಂಚಲ. ಮೂಗುತಿ ಧರಿಸುವುದರಿಂದ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಹಿಡಿತಕ್ಕೆ ಬರುತ್ತದೆ.
ಸ್ಯಾಂಡಲ್ ವುಡ್ ನ ಅಪ್ರತಿಮ ಮೂಗುತಿ ಸುಂದರಿಯರಮೂಗುತಿ ಫ್ಯಾಷನ್
ಈಗಂತೂ ಸ್ಯಾಂಡಲ್ ವುಡ್ ಬ್ಯೂಟಿ ಗಳು ಮೂಗುತಿ ಗೆ ಫುಲ್ ಫಿದಾ ಆಗಿದ್ದಾರೆ. ಸಂಪ್ರದಾಯಿಕ ಅಥವಾ ಪಾಶ್ಚಾತ್ಯ ಶೈಲಿಯ ಸ್ಟೈಲ್ ಆಗಿರಲಿ, ಅದರೊಂದಿಗೆ ಮೂಗುತಿ ಇರಲೇ ಬೇಕು. ಇತ್ತೀಚೆಗೆ ಮೂಗುತಿ ಫ್ಯಾಷನ್ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ.
ರಾಧಿಕಾ ಪಂಡಿತ್ ತಮ್ಮ ನಿಶ್ಚಿತಾರ್ಥ ಕ್ಕೆ ತೊಟ್ಟ ಮೂಗುತಿ ಸೋಷಿಯಲ್ ಮೀಡಿಯಾ ದಲ್ಲಿ ಎಷ್ಟರಮಟ್ಟಕ್ಕೆ ವೈರಲ್ ಆಗಿತ್ತೆಂದರೇ.. ಮಾರುಕಟ್ಟೆಯಲ್ಲಿ ರಾಧಿಕಾ ಪಂಡಿತ್ ಮೂಗುತಿ ಎಂದೇ ಆ ಡಿಸೈನ್ ಮೂಗುತಿ ಫೇಮಸ್ ಆಗಿ ಹೋಯಿತು. ಸ್ಯಾಂಡಲ್ ವುಡ್ ಕಂಡ ಅಪ್ರತಿಮ ಮೂಗುತಿ ಸುಂದರಿ ಯರಲ್ಲಿ ಇವರೂ ಒಬ್ಬರು.
ಮೂಗುತಿ ಸುಂದರಿ ಎಂದೇ ಹೆಸರಾಗಿರುವ ಬಿಗ್ ಬಾಸ್ ಮತ್ತು ಅಕ್ಕ ಖ್ಯಾತಿಯ ಅನುಪಮಾ ಗೌಡ ರ ಮೂಗುತಿ ಸ್ಟೈಲ್ ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್! ಈ ಸುಂದರಿಯ ಸೊಬಗಿಗೆ ಕನ್ನಡಿ ಹಿಡಿದಂತಿದೆ ಮೂಗುತಿ. ಇವರ ಸೋಷಿಯಲ್ ಪ್ರೊಫೈಲ್ ನಲ್ಲಿ ಇವರ ಮೂಗುತಿ ಕ್ರೇಜ್ ಕಾಣಿಸುತ್ತದೆ. ದೊಡ್ಡ ಗಾತ್ರದ ಮೂಗುತಿ, ಚಿಕ್ಕ ಮೂಗುತಿ, ಬ್ಲಾಕ್ ಹೀಗೆ ಹಲವಾರು ಬಗೆಯ ಬಗೆಯ ಮೂಗುತಿ ಗಳಲ್ಲಿ ಮಿಂಚುತ್ತಿದ್ದಾರೆ” ಆ ಕರಾಳ ರಾತ್ರಿ” ಚಿತ್ರದ ನಾಯಕಿ ಅನುಪಮಾ ಗೌಡ.
ಇನ್ನು ನಮ್ಮ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಮೂಗುತಿ ಸುಂದರಿ ಯರ ಸಾಲಿಗೆ ಸೇರಿದವರೇ. ಇತ್ತೀಚಿನ ಫೋಟೋ ಶೂಟ್ ಒಂದರಲ್ಲಿ ಈಕೆ ಧರಿಸಿರುವ ಕಪ್ಪು ಲೋಹದ ಮೂಗುತಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸ್ಯಾಂಡಲ್ ವುಡ್ ನ ಮೂಗುತಿ ಸುಂದರಿ ಯರ ಸಾಲಿಗೆ ಸೇರಿದ ಮತ್ತೊಬ್ಬ ನಟಿ ಶೃತಿ ಹರಿಹರನ್. ಊರ್ವಿ ಖ್ಯಾತಿಯ ಈ ಚೆಲುವೆ ಅತ್ಯುತ್ತಮ ಅಭಿನೇತ್ರಿ ಅಷ್ಟೇ ಅಲ್ಲದೆ, ತಮ್ಮ ವಿಶಿಷ್ಟ ಸ್ಟೈಲ್ ಮತ್ತು ಫ್ಯಾಷನ್ ಗೆ ಹೆಸರಾಗಿರುವ ನಟಿ.ಮೂಗುತಿ ಎಂದರೆ ನನಗಿಷ್ಟ ಎಂದು ತಮ್ಮ ಸೋಷಿಯಲ್ ಮೀಡಿಯಾ ದ ಪ್ರೊಫೈಲ್ ನಲ್ಲಿ ಹಂಚಿಕೊಂಡಿದ್ದಾರೆ ಕೂಡ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ
-
ರಾಜಕೀಯ4 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ4 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ