Connect with us

ದಿನದ ಸುದ್ದಿ

ಚನ್ನಗಿರಿ | ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ; ಬಹುಮಾನ ವಿತರಣೆ

Published

on

ಸುದ್ದಿದಿನ,ಚನ್ನಗಿರಿ:ಕರ್ನಾಟಕ ಏಕೀಕರಣವಾಗಿ 17 ವರ್ಷಗಳ ನಂತರ ರಾಜ್ಯದ ಮರುನಾಮಕರಣ ಮತ್ತು ಅದರ ಸ್ಮರಣೆಯ ಭಾಗವಾಗಿ ಹಲವು ವಿಚಾರಗಳ ಬಗ್ಗೆ ಮೆಲುಕು ಹಾಕಬೇಕಿದೆ ಎಂದು ಪ್ರಾಂಶುಪಾಲರಾದ ಡಾ.ಅಮೃತೇಶ್ವರ ಬಿ.ಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಪಟ್ಟಣದ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ನುಡಿ ಸಂಭ್ರಮ -50ರ ಅಭಿಯಾನ ಕಾರ್ಯಕ್ರಮದಲ್ಲಿ
ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಪ್ರಜ್ಞೆ ಯನ್ನು ಹುಟ್ಟು ಹಾಕುವ ಪ್ರಯತ್ನ ಈಡೇರಿದೆಯೇ ಎಂಬ ಪ್ರಶ್ನೆ ಸುವರ್ಣ ಸಂಭ್ರಮ-50 ಅಂತಿಮ ಘಟ್ಟದಲ್ಲಿ ಚರ್ಚೆಯ ವಿಷಯವಾಗಿದೆ ಭಾಷಾವಾರು ಪ್ರಾಂತ ವಾಗಿ ಸುಮಾರು ಏಳು ದಶಕಗಳು ಕಳೆದರೂ ರಾಷ್ಟ್ರಪ್ರಜ್ಞೆ ಯ ಜೊತೆಗೆ ಪ್ರಾದೇಶಿಕ ಪ್ರಜ್ಞೆ ಅವಶ್ಯಕ ಎಂದರು.

ಕರ್ನಾಟಕ ಎಂದರೆ ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಯ ಸ್ವಂತಿಕೆ ಹಾಗೂ ಶತಶತಮಾನಗಳಿಂದ ನಮ್ಮ ನೆಲದ ಭಾಗವಾಗಿರುವ ಸಹಬಾಳ್ವೆಯ ಸೌಹಾರ್ದದ ಆಶಯಗಳನ್ನು ಉಳಿಸಿಕೊಂಡೇ ಇಲ್ಲಿನ ಸಾಮಾಜಿಕ ರಾಜಕೀಯ ಮತ್ತು ಆರ್ಥಿಕತೆಯನ್ನು ಕಟ್ಟಬೇಕೆಂಬ ಛಲ ಕನ್ನಡಿಗರ ಅಂತರಾಳದಿಂದ ಮೂಡಬೇಕಿದೆ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಚೆನ್ನವೀರ ಕಣವಿ ಅವರ ಮಾತು ಈ ಹಿನ್ನಲೆಯಲ್ಲಿ ಕಟ್ಟಿರುವಂತಿದೆ ಎಂದು ನುಡಿದರು.

ಕರ್ನಾಟಕದ ಮೇಲೆ ರಾಜಕೀಯವಾಗಿ ಸಾಂಸ್ಕೃತಿಕವಾಗಿ ನಿರಂತರ ದಾಳಿ ನಡೆಯುತ್ತಿದೆ ಇದಕ್ಕೆ ಪ್ರತಿರೋಧ ತೋರಿಸುವ ಇಚ್ಛಾ ಶಕ್ತಿ ಕ್ಷೀಣಿಸಿದೆ. ರಾಜ್ಯ ಮರುನಾಮಕರಣವಾದಾಗ ಅಧಿಕಾರದಲ್ಲಿದ್ದ ಅರಸು ಸರ್ಕಾರವು ದೇಶವೇ ಮೆಚ್ಚುವ ಸಾಮಾಜಿಕ ನ್ಯಾಯದ ಮಾದರಿಯನ್ನು ಜಾರಿಗೆ ತಂದಿತ್ತು ಅಂತಹ ಧೀಮಂತ ವ್ಯಕ್ತಿತ್ವದ ಪ್ರಾತಸ್ಮರಣೀಯರ ಕೊಡುಗೆಗಳನ್ನು ನೆನಪಿಸಿ ಕೊಳ್ಳುತ್ತಾ ನಾವು ಮುಂದಣ ಹೆಜ್ಜೆ ಇಡಬೇಕಿದೆ ಎಂದು ಕಿವಿಮಾತು ಹೇಳಿದರು.

ತಂತ್ರಜ್ಞಾನ ಆಧಾರಿತ ಉದ್ದಿಮೆಗಳಲ್ಲಿ ಕರ್ನಾಟಕ ಜಾಗತಿಕವಾಗಿ ಗಮನ ಸೆಳೆದಿದೆ, ಆದರೆ ಇಂತಹ ಶ್ರೀಮಂತಿಕೆ ಜನಜೀವನದ ನೆಮ್ಮದಿಗೆ ಕಾರಣವಾಗಬೇಕೆಂದರೆ ತನ್ನಂತೆ ಪರರ ಬಗೆವ ಕರ್ನಾಟಕದ ಮಣ್ಣಿನ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಪೂರ್ಣ ಪ್ರಮಾಣದ ಉದ್ಯೋಗಾವಕಾಶಗಳು ಲಭಿಸಬೇಕು, ಕನ್ನಡ ಒಂದು ಶಾಸ್ತ್ರೀಯ ಭಾಷೆ ವಿಶ್ವ-ರಾಷ್ಟ್ರ ಮಟ್ಟದ ವಿದ್ಯಾಮಾನಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಕನ್ನಡಿಗರಿಗೆ ಲಭಿಸಬೇಕು ಗಡಿನಾಡ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವುದು ಇಂತಹ ಜ್ವಲಾಂತ ವಿಚಾರಗಳ ಬಗ್ಗೆ ಕನ್ನಡಿಗರಿಗೆ ಅರಿವು-ಜಾಗ್ರತಿ ಮೂಡಿಸುವ ಪ್ರಯತ್ನ ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗರು ಕೈಗೊಳ್ಳಬೇಕು ಎಂದರು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಕೆ.ಎಚ್. ಷಣ್ಮುಖಪ್ಪ ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿ ಕನ್ನಡ ರಾಜ್ಯೋತ್ಸವದ ಹಾಗೂ ನುಡಿ ಸಂಭ್ರಮ 50ರ ಆಚರಣೆಯ ಅಗತ್ಯತೆಯನ್ನು,ಕನ್ನಡಕ್ಕಿರುವ ಭವಿಷ್ಯದ ಸವಾಲುಗಳನ್ನು ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹಲವು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.

ಅಂತಿಮ ಪದವಿಯ ಶಬ್ದಮಣಿ ದರ್ಪಣ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಕು ಲಕ್ಷ್ಮಿ ಅವರಿಗೆ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರವಿ ರೂ1,000 ನಗದು ಬಹುಮಾನ ಮತ್ತು ನೆನಪಿನ ಕಾಣಿಕೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಶಕೀಲ್ ಅಹಮದ ಅವರು ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿ ವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಕಾನೂನು ಬಾಹಿರವಾಗಿ ಮಕ್ಕಳ ಮಾರಾಟ ಕುರಿತು ಅರಿವು ಜಾಥ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಮಕ್ಕಳ ಪಾಲನಾ ಕೇಂದ್ರಗಳು ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ನವಂಬರ್ 13 ರಂದು ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಕಾನೂನು ಬಾಹಿರವಾಗಿ ಮಕ್ಕಳ ಮಾರಾಟ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಜಾಥಕ್ಕೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ್ ಮಾ.ಕರೆಣ್ಣವರ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಜಾಥವು ಜಯದೇವ ವೃತ್ತದಿಂದ ಪ್ರಾರಂಭಗೊಂಡು ಡಾ.ಬಿ.ಆರ್ ಅಂಬೆಡ್ಕರ್ ರಸ್ತೆ ಹಾಗೂ ವಿದ್ಯಾರ್ಥಿ ಭವನ ರಸ್ತೆ ಮೂಲಕ ಸಾಗಿ ಗುಂಡಿಮಹಾದೇವಪ್ಪ ವೃತ್ತದಲ್ಲಿ ಮುಕ್ತಾಯವಾಯಿತು.

ಜಾಥದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ್ ಕುಮಾರ್ ಎಂ.ಸಂತೋಷ್, ಉಪವಿಭಾಗಧಿಕಾರಿ ಸಂತೋಷ್ ಪಾಟೀಲ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ರಾಜನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತ ಟಿ.ಎನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಹೊಸದಾಗಿ ಮಂಜೂರಾಗಿರುವ ಅಲ್ಪಸಂಖ್ಯಾತರ 1 ಮೊರಾರ್ಜಿ ದೇಸಾಯಿ ಶಾಲೆ ಹಾಗೂ 3 ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಆಂಗ್ಲ ಮಾಧ್ಯಮದಲ್ಲಿ ಭೋಧಿಸಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ನವಂಬರ್ 16 ರೊಳಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಚನ್ನಗಿರಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕನ್ನಡ ಶಿಕ್ಷಕರು, ವಿದ್ಯಾರ್ಹತೆ ಬಿ.ಎ, ಬಿ.ಇಡಿ, ಹುದ್ದೆ ಸಂಖ್ಯೆ-4, ದಾವಣಗೆರೆಯ ವಿನೋಬನಗರದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗೆ ಇಂಗ್ಲೀಷ್ ಶಿಕ್ಷಕರು, ಸಮಾಜ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ ಬಿ.ಎ, ಬಿ.ಇಡಿ, ಹುದ್ದೆ ಸಂ: 4, ಕೆ.ಟಿ.ಜೆ ನಗರದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗೆ ಗಣಿತ ಶಿಕ್ಷಕರು, ಸಾಮಾನ್ಯ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ ಬಿ.ಎಸ್ಸಿ, ಬಿ.ಇಡಿ ಹುದ್ದೆ ಸಂ: 4, ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಅಲ್ಪಸಂಖ್ಯಾತರ ಮೌಲಾನಾ ಅಜಾದ್ ಮಾದರಿ ಶಾಲೆಗೆ ಉರ್ದು ಶಿಕ್ಷಕರು ವಿದ್ಯಾರ್ಹತೆ ಬಿ. ಎ, ಬಿ.ಇಡಿ, ಹುದ್ದೆ ಸಂ:4 ಹೆಚ್ಚಿನ ಮಾಹಿತಿಗಾಗಿ ದೂ.ಸಂ:08192-250022 ನ್ನು ಸಂಪರ್ಕಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಈ ವರ್ಷದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಡಿ.ಬಿ.ಟಿ ಮುಖಾಂತರ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು https://ssp.postmatric.karnataka.gov.in/ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ:080-22261789 ಹಾಗೂ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜಗಳೂರು ದೂ.ಸಂ: 08192-277029 ನ್ನು ಸಂಪರ್ಕಿಸಬಹುದೆಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending