ದಿನದ ಸುದ್ದಿ
ಆತ್ಮಕತೆ | ಕೇಂದ್ರದಲ್ಲಿ ಮೂಡಿ ಮಡಿದವರು
- ರುದ್ರಪ್ಪ ಹನಗವಾಡಿ
ಮನಸ್ಸಿನಲ್ಲಿ ಉಳಿದು ಹೋದ ಆರೋಗ್ಯವಂತ ವಿದ್ಯಾರ್ಥಿಗಳ ಕಿರುಚಿತ್ರಣ
ಯಶೋದ
ಈಗ್ಗೆ ಸುಮಾರು 8 ವರ್ಷಗಳಿಂದ ಅಧ್ಯಾಪಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದೇನೆ. ಈ ಅವಧಿಯಲ್ಲಿ ನಾವು ಸಂಪರ್ಕಿಸಿದ ವಿದ್ಯಾರ್ಥಿಗಳು ಹಲವು ನೂರು ಸಂಖ್ಯೆಗಳಿಗೆ ಮೀರಬಹುದು. ಹಲ ಕೆಲವರು ನಮ್ಮಿಂದ ಕಲಿತವರಿದ್ದರೆ, ಮತ್ತೆ ಕೆಲವರು ಇವರದೇನು ಎಂಬ ಮಾತಿರಬಹುದು. ಹೀಗೆ ಪ್ರತಿವರ್ಷವೂ ಬಂದು ಹೋಗುವ, ಹಲವು ಹತ್ತಾರು ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಅವರ ವಿಶೇಷ ಗುಣಗಳಿಗೆ, ಸಾಮರ್ಥ್ಯಕ್ಕೆ ಹೆಸರಾಗಿ ಹಲವರು ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಹಾಗೆ ಉಳಿದು ನಿಜ ಬದುಕಿನಲ್ಲಿ ಅಳಿದು ಹೋದ ಕೆಲವು ವಿದ್ಯಾರ್ಥಿಗಳ ನೆನಪು ಮಾಡಿಕೊಳ್ಳುವುದೇ ಈ ಲೇಖನದ ಉದ್ದೇಶ.
1981ನೇ ವರ್ಷ ನನ್ನ ಬದುಕಿನಲ್ಲಿ ಅನೇಕ ಘಟನಾವಳಿಗಳಿಂದ ಕೂಡಿದ ವರ್ಷ. ಮೇ ತಿಂಗಳಲ್ಲೊಂದು ದಿನ ನಮ್ಮ ಊರಿಗೆ ಹೋಗಿ, ಅಲ್ಲಿನ ತರಲೆಗಳನ್ನೆಲ್ಲ ತಲೆಯಲ್ಲಿ ತುಂಬಿಕೊAಡು ಅವ್ವ ಕೊಟ್ಟ ಸಣ್ಣಪುಟ್ಟ ಸಾಮಾನುಗಳನ್ನು ಕಟ್ಟಿಕೊಂಡು ಮೂರು ಮೈಲು ನಡೆದು. ಶಿವಮೊಗ್ಗದ ಬಸ್ಸು ಹಿಡಿದು ಪ್ರಾಜೆಕ್ಟ್ ತಲುಪುವ ವೇಳೆಗೆ ನನಗೆ ಸಾಕೋ ಸಾಕಾಗಿ ಹೋಗಿತ್ತು. ಹಲವು ಆತಂಕಗಳನ್ನು ಪಾರುಮಾಡಿಕೊಂಡು ನಮಗಾಗಿದ್ದ ಮಗ, ಹೆಂಡತಿಯನ್ನು ನೋಡೋ ಕಾತರದಲ್ಲಿ ದಣಿವು ಕರಗುತ್ತಿತ್ತು. ಮನೆಯೊಳಗೆ ಕಾಲಿಡುತ್ತಿದ್ದಂತೆ ಮಗನ ಆಟ-ಪಾಟ, ತನ್ನ ನೌಕರಿ ವಿಷಯ ಹೇಳುತ್ತಿದ್ದೆ.
ನನ್ನಾಕೆ `ಶಿವಮೊಗ್ಗದಲ್ಲೇನಾದರು ಕಾಫಿ ಕುಡಿದಿದ್ದೀರಾ?’ ಎಂದು ಕೇಳಿದಳು. ನನಗೆ ಅದ್ಯಾವ ದೊಡ್ಡ ಪ್ರಶ್ನೆ ಎಂದು ಉತ್ತರಿಸುವ ಗೋಜಿಗೆ ಹೋಗದೆ ಆರಾಮವಾಗಿ ಕೂರುವ ಹಂಚಿಕೆಯಲ್ಲಿದ್ದೆ. ಇಪ್ಪತ್ನಾಲ್ಕು ಗಂಟೆಗಳೂ ತಾನೊಬ್ಬಳೇ ಸಹಿಸಿಕೊಂಡು ಹಿಂಸೆಪಟ್ಟುದನ್ನು ಒಮ್ಮೆಲೆ ಕಣ್ಣೀರ ಕೋಡಿಯಲ್ಲಿ ಉಸುರಿದಳು. `ಯಶೋದÀ ಬೆಂಗಳೂರಲ್ಲಿ ತೀರಿ ಹೋದಳಂತೆ, ನಿಮಗೆ ಫೋನ್ ಮಾಡಿದ್ದರು’ ಎಂದಾಗ ನನಗೆ ಅಸಾಧ್ಯ ಸಂಕಟದೊಡನೆ ದಿಗ್ಭçಮೆಯಾಯಿತು. ಹತ್ತಿರದ ಮನೆಯವರಿಂದ ಸೈಕಲ್ ಪಡೆದು ಅವಳ ಶವ ತಂದ ಹಳ್ಳಿಯ ಕಡೆಗೆ ವೇಗವಾಗಿ ಹೊರಟೆ.
1977-78ರ ಈ ಕೇಂದ್ರದ ಪ್ರಾರಂಭದ ದಿನಗಳಲ್ಲಿ ಅಭಿನಯಿಸಲಾದ ಅನೇಕ ನಾಟಕಗಳಲ್ಲಿ ಸ್ಫೂರ್ತಿಯನ್ನು ವೈವಿಧ್ಯತೆಯನ್ನು ತಂದು ಕೊಟ್ಟ ಇವಳು ಅಭಿನಯ ಕಲೆಯಲ್ಲಿ ನಿಷ್ಣಾತಳಾಗಿದ್ದಳು. ಅರ್ಥಶಾಸ್ತçದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಕರ್ನಾಟಕದ ಮುಖ್ಯ ಸಂಶೋಧನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದ ಇವಳ ಸಾವು, ನಮ್ಮ ಕೇಂದ್ರದಿAದ ಹಾರಿಬಿಟ್ಟ ಹಕ್ಕಿಯ ರೆಕ್ಕೆ ಮುರಿದು ಬೆಂಕಿಗೆ ಬಿದ್ದಷ್ಟು ನೋವು ತಂದಿತ್ತು.
ವಿದ್ಯಾರ್ಥಿ ದೆಸೆಯಿಂದಲೂ ಉದಾತ್ತ ಗುಣಗಳನ್ನು ಬೆಳೆಸಿಕೊಂಡಿದ್ದ ಯಶೋದ ನ್ಯಾಯಕ್ಕಾಗಿ ಯಾರ ನಿಷ್ಠುರವನ್ನೂ ಲೆಕ್ಕಿಸದ, ನೇರ ಮನಸ್ಸಿನ ಸರಳ ಸುಂದರ ಹುಡುಗಿ. ನಮ್ಮ ಅನೇಕ ಹುಡುಗ-ಹುಡುಗಿಯರಲ್ಲಿ ಕಾಣಸಿಗದ, ಆರೋಗ್ಯಕರ ಮನಸ್ಸಿನ ಈ ಹುಡುಗಿಗೆ ಅನಾರೋಗ್ಯವು ಇಷ್ಟು ಬೇಗ ಸಾವು ತರುವುದೆಂದು ಯಾರು ತಾನೆ ಊಹಿಸಿದ್ದರು? ನನ್ನ ಮಗನನ್ನು ನೋಡಲು ಬರುವೆ ಎಂದು ಕಾಗದ ಬರೆದಿದ್ದು, ಇವಳು ಕೊನೆಗೆ ಮಾಂಸದ ಮುದ್ದೆಯಾಗಿ ಅವಳ ಊರಲ್ಲಿ ನೋಡಿ, ನನ್ನ ವಿದ್ಯಾರ್ಥಿನಿಯಾಗಿ ಓಡಾಡುತ್ತಿದ್ದವಳು ಇವಳೇ ಎಂದು ಯೋಚನೆಯಲ್ಲಿ ಮುಳುಗುವಂತೆ ಮಾಡಿ ಮರೆಯಾದಳು.
ಬಷೀರ್ ಅಹಮದ್
ಬಷೀರ್ ಅಹಮದ್ ಎಂಬ ವಿದ್ಯಾರ್ಥಿ ಓದು ಮುಗಿಸಿ ಹೋದ ನಂತರ, ಆತನ ಶಿಸ್ತನ್ನು ಹೋಲುವ ವಿದ್ಯಾರ್ಥಿಗಳು ನಮ್ಮ ಕೇಂದ್ರಕ್ಕೆ ಬಂದಿಲ್ಲವೆಂದೇ ಹೇಳಬೇಕು. ವಿನಯ ವಿದ್ಯಾಭ್ಯಾಸದ ಲಕ್ಷಣ ಎನ್ನುವ ರೀತಿಯಂತೆ ಈತನ ನಡವಳಿಕೆ.
ಕನ್ನಡವನ್ನು ಸರಾಗವಾಗಿ ಮಾತನಾಡಲಾರದವನಾಗಿದ್ದ ಈತ ನನ್ನನ್ನು ಹಲವು ಬಾರಿ ಕಾಡಿ ಕನ್ನಡವನ್ನು ಕಲಿತದ್ದುಂಟು. ಅವನ ಮಧುರವಾದ ಕಂಠದಿಂದ ಕನ್ನಡ ಹಾಡುಗಳನ್ನು ಹಾಡಿಸಲು ನಾನು ಕನ್ನಡ ಪದ್ಯಗಳನ್ನು ವಿವರಿಸಿ ಬರೆದುಕೊಡುತ್ತಿದ್ದೆ. ಅವನಿಗೆ ಇದ್ದ ಅಪಾರ ಶ್ರದ್ಧೆಯಿಂದಾಗಿ ಸುಲಲಿತವಾಗಿ ಕನ್ನಡ ಮಾತಾಡುವುದರ ಜೊತೆಗೆ, ಕನ್ನಡ ಹಾಡುಗಳನ್ನು ಹಾಡಿ ನಮ್ಮ ಕೇಂದ್ರದ ಮತ್ತು ನಮ್ಮ ಈ ಪರಿಸರದ ಜನರ ಹೃದಯದಲ್ಲಿ ಈಗಲೂ ಗುಂಯ್‌ಗುಡುತ್ತಿದ್ದಾನೆ.
ಕೇಂದ್ರದಿಂದ ಎಂ.ಎ., ಪಾಸು ಮಾಡಿಕೊಂಡು ಹೋದ ಮೇಲೆ ಬೆಂಗಳೂರಿನಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿರುವಾಗ ಮತ್ತೆ ಪ್ರಾಜೆಕ್ಟ್ಗೆ ಬಂದಿದ್ದನು. ಆತನ ಕಂಠ ಮಾಧರ‍್ಯವನ್ನು ಸವಿಯಲು, ಮನೆಗೆ ತಿಂಡಿ ತಿನ್ನಲು ಬನ್ನಿ ಎಂದು ಆಹ್ವಾನಿಸಿದೆ. ಆತ, ತಿಂಡಿ ತಿನ್ನಲು ಬೇರೊಬ್ಬ ಅಧ್ಯಾಪಕರು ಕರೆದಿದ್ದಾರೆ, ನಿಮ್ಮ ಮನೆಗೆ ಊಟಕ್ಕೇನೆ ಬರುವೆ ಸಾರ್, ಅಂದಾಗ ಸಂತೋಷದಿAದ ಕರೆದೊಯ್ದೆ. ಜೊತೆಗೆ ಮಾತುಕತೆ ಹೀಗೆ ನಡೆದಿತ್ತು. ಪುಳಿಚಾರು ಊಟ ಕಣಯ್ಯಾ ಎಂದಾಗ, ಮುಂದಿನ ಸಾರಿ ನಾನೆ ಬಂದು ಬಿರಿಯಾನಿ ಮಾಡುವೆ ಎಂದು ಹೇಳಿದ. ಬಿರಿಯಾನಿ ಮಾಡಿ ಉಣ್ಣುವ ದಿನ ಬರುವ ಮುನ್ನವೇ ಜಾಂಡೀಸ್ ಬಂದು ಬಷೀರ್ ಇನ್ನಿಲ್ಲವಾದ. ಸತ್ತ ಹಲವು ದಿನಗಳ ನಂತರ ಬಂದ ಪತ್ರದಿಂದ ಸಂಕಟವಾಯಿತು.
ಈಗ ಯಾವ ಸಭೆ ಸಮಾರಂಭಗಳಲ್ಲಿ ಯಾರು ಹಾಡು ಹೇಳಿದರೂ ಬಷೀರ್‌ನ ನೆನಪು ಬಂದು ಕಣ್ಣು ತೇವವಾಗುತ್ತದೆ. ಕಡುಬಡತನದಿಂದ ಬಂದು ಅಪಾರ ಸ್ವಾಭಿಮಾನಿಯಾಗಿ ಬೆಳೆದು ಅಧ್ಯಾಪಕರೆಲ್ಲರ ವಿಶ್ವಾಸ ಗಳಿಸಿ ನಿಗರ್ವಿಯಾಗಿದ್ದ ಬಷೀರ್ ಅಹಮದ್ ಹಲವು ಆಸೆಗಳನ್ನಿಟ್ಟುಕೊಂಡು ಹಗಲಿರುಳು ದುಡಿಯುತ್ತಿದ್ದ. ಸಾಮಾನ್ಯ ರೋಗವೊಂದು ಅವನ ಆಸೆಗಳಿಗೆ, ಅವನ ಸಾಮರ್ಥ್ಯಗಳಿಗೆ ಇತಿಶ್ರೀ ಹಾಡುವುದೆಂದು ಯಾರು ತಾನೆ ನಂಬಿದ್ದರು?
ಗೋಪಾಲಸ್ವಾಮಿ
ಈತ ನಮ್ಮ ಕೇಂದ್ರಕ್ಕೆ ಬಂದಾಗಲೇ ನನಗೆ, ಹೊಸ ಶಕ್ತಿಯುಳ್ಳ ಯುವಕನೊಬ್ಬ ಬಂದಿದ್ದಾನೆ ಎಂಬ ಆಸೆ ಹುಟ್ಟಿತ್ತು, ಗೋಪಾಲಸ್ವಾಮಿ ನೋಡಲು ಪೀಚಲು. ಇವನೆಂತಹ ಹುಡುಗ ಎಂದು ಯಾರಾದರೂ ಕಡೆಗಣಿಸಬಹುದಾಗಿದ್ದ ಈತ ಮನದೊಳಗೆ ಅಗಾಧ ಬಾಂಬನ್ನೇ ಇಟ್ಟುಕೊಂಡಿದ್ದು ಸಿಡಿಸಲಾಗುವ ಮುನ್ನವೇ ನೆನಪಾಗಿ ಹೋದನು.
ಕನ್ನಡ ಎಂ.ಎ., ಗೆ ಬಂದು ಸೇರಿದಾಗ ಸಂಘಟನೆ, ಬಂಡಾಯ ಎಂದು ಹಲವು ಹತ್ತು ರೀತಿಯ ಹೋರಾಟದಲ್ಲಿ ಹಲವು ಬಾರಿ ಪೋಲೀಸ್ ಏಟು ತಿಂದು ಈ ದೇಶದ ಜಡ್ಡುಗಟ್ಟಿದ ಸಮಾಜದ ನಿರ್ಲಜ್ಜ ಅಸಮಾನತೆಯನ್ನು ಧಿಕ್ಕರಿಸಿದ ಈತನಿಗೆ ಸ್ವಂತ ಆಸೆಗಳು ದೂರ. ಈತ ನಮ್ಮ ಕೇಂದ್ರಕ್ಕೆ ಬಂದಾಗಲೇ ನನಗೆ, ಹೊಸ ಶಕ್ತಿಯುಳ್ಳ ಯುವಕನೊಬ್ಬ ಬಂದಿದ್ದಾನೆ ಎಂಬ ಆಸೆ ಹುಟ್ಟಿತ್ತು. ಆದರೆ ಅದು ಬಹಳ ದಿನ ಉಳಿಯಲಿಲ್ಲ.
ಸಾಮಾನ್ಯ ಖಾಯಿಲೆಯೆಂದು ಮೆಗ್ಗಾನ್ ಆಸ್ಪತ್ರೆ ಸೇರಿದ. ಈತನ ಹಣಕಾಸಿನ ಸಮಸ್ಯೆಗೆ ವಿದ್ಯಾರ್ಥಿಗಳು ಅಧ್ಯಾಪಕರು ಹಣ ಸೇರಿಸಿಕೊಟ್ಟರು. ವಿದ್ಯಾರ್ಥಿ ಜೀವನದುದ್ದಕ್ಕೂ ಹೋರಾಟದ ಬದುಕಿನಲ್ಲಿ ಏಟು ತಿಂದು ಅಪರೂಪದ ವ್ಯಕ್ತಿಯ ಬದುಕು ಬೆಳಗುವ ಮುನ್ನವೇ ನಂದಿಹೋಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



