Connect with us

ದಿನದ ಸುದ್ದಿ

ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಶೇಕಡಾ 88% ಭಾರತೀಯರ ಒಲವು

Published

on

 

ಕೋಟ್ಪಾ ತಿದ್ದುಪಡಿ ಮಸೂದೆ 2020ರ ಪ್ರಸ್ತಾವಿತ ಸುಧಾರಣೆಗಳಿಗೆ ರಾಷ್ಟ್ರ ಯ ಸಮೀಕ್ಷೆಯಲ್ಲಿ ಭಾರೀ ಸಾರ್ವಜನಿಕ ಬೆಂಬಲ ವ್ಯಕ್ತವಾಗಿದೆ.

ಸುದ್ದಿದಿನ,ಬೆಂಗಳೂರು: ದೇಶದ 10 ರಾಜ್ಯಗಳ ವಯಸ್ಕರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 80ಕ್ಕೂ
ಹೆಚ್ಚು ಭಾರತೀಯರು ಸಿಗರೇಟ್‌, ಬೀಡಿ ಮತ್ತು ಹೊಗೆರಹಿತ ತಂಬಾಕು ಬಳಕೆ ಬಹಳ ಗಂಭೀರ ಸಮಸ್ಯೆ ಎಂದು
ನಂಬಿದ್ದಾರೆ ಹಾಗೂ ಈ ಸಮಸ್ಯೆಯನ್ನು ನಿವಾರಿಸಲು ಪ್ರ ಪ್ರಸ್ತುತ ಚಾಲ್ತಿಯಲ್ಲಿರುವ ತಂಬಾಕು ನಿಯಂತ್ರಣ ಕಾನೂನನ್ನು
ಬಲಪಡಿಸಲು ಶೇ. 88% ಮಂದಿ ಪ್ರಬಲವಾಗಿ ಬೆಂಬಲಿಸುತ್ತಾರೆ.

ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದು
ಆರೋಗ್ಯಕ್ಕೆ ಅತೀ ಹಾನಿಕಾರಕ ಎಂದು ಶೇ. 72 ಜನರು ನಂಬಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ,
ವಿಮಾನ” ನಿಲ್ದಾಣ, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಧೂಮಪಾನ ಪ್ರದೇಶಗಳ ತೆರವು ಹಾಗೂ
ಮಾರಾಟ ಕೇಂದ್ರ ಗಳಲ್ಲಿ ಸಿಗರೇಟ್‌ ಮತ್ತು ದೀಡಿಗಳ ಬಿಡಿ ಮಾರಾಟ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತಿನ
ಮೇಲೆ ನಿಷೇಧಕ್ಕೆ ಸಿಕ್ಕ ಬೆಂಬಲ ಅಭೂತಪೂರ್ವ.

ಕನ್ಸ್ಯುಮರ್‌ ವಾಯ್ಸ್‌ 10 ರಾಜ್ಯಗಳಲ್ಲಿ ದೂರವಾಣಿ ಮುಖಾಂತರ ನಡೆಸಿದ 18 ವರ್ಷ ಮೇಲ್ಪಟ್ಟ 1,476
ವಯಸ್ಕರನ್ನೊಳಗೊಂಡ ವಿವರವಾದ ಸಮೀಕ್ಷೆಯ ಅಂಶಗಳಿವು. ಹತ್ತು ಭಾಷೆಗಳಲ್ಲಿ (ಕನ್ನಡ, ಹಿಂದಿ, ಗುಜರಾತಿ,
ಪಂಜಾಬಿ, ಒರಿಯಾ, ಮರಾಠಿ, ತಮಿಳು, ಬೆಂಗಾಲಿ, ತೆಲುಗು ಮತ್ತು ಮಲಯಾಳಂ) ನಡೆಸಲಾದ ಈ ಆಳವಾದ
ಸಂದರ್ಶನಗಳಿಗೆ ಕಂಪ್ಯೂಟರ್‌ ಅಸಿಸ್ಲೆಡ್‌ ಟೆಲಿಫೋನ್‌ ಇಂಟರ್ವ್ಯೂಯಿಂಗ್‌ (ಸಿಎಟಿಐ) ಮತ್ತು ರಾಂಡಮ್‌ ಡಿಜಿಟ್‌
ಡಯಲ್‌ (ಆರ್‌ ಡಿಡಿ) ಕ್ರಮಶಾಸ್ತ್ರವನ್ನು ಬಳಸಲಾಯಿತು.

ಸಮೀಕ್ಷೆಯ ಪ್ರಮುಖಾಂಶಗಳು

1. ತಂಬಾಕುಬಳಕೆಯನ್ನುಬಹುತೇಕ ಭಾರತೀಯರು ಗಂಭೀರ ಸಮಸ್ಯೆಯಾಗಿ ನೋಡುತ್ತಾರೆ

ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕರು ತಂಬಾಕು ಬಳಕೆಯ ವಿವಿಧ ಬಗೆಗಳನ್ನು ಬಹಳ ಗಂಭೀರ ಸಮಸ್ಯೆಗಳಿಂದ ಪರಿಗಣಿಸುತ್ತಾರೆ. ಶೇಕಡ 82ರಷ್ಟು ಮಂದಿ
ಹೊಗೆರಹಿತ ತಂಬಾಕು ಬಳಕೆ ತೀವ್ರ ಗಂಭೀರ ಸಮಸ್ಯೆ ಎಂದು ನಂಬುತ್ತಾರೆ; “ಶೇಕಡಾ 80ರಷ್ಟು ಮಂದಿ ಸಿಗರೇಟ್‌ ಸೇವಸೆ ಬಗ್ಗೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದರೆ, ಶೇಕಡ
77ರಷ್ಟು ಮಂದಿ ಬೀಡಿ ಬಳಕೆ ಬಹಳ ಗಂಭೀರ ಸಮಸ್ಯೆ ಎಂದು ಹೇಳುತ್ತಾರೆ.

2. ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ

ಧೂಮಪಾನದ ಹೊಗೆಗೆ ತಮ್ಮನ್ನು ಒಡ್ಡಿಕೊಳ್ಳುವುದು ಕಳವಳಕಾರಿ ಎಂದು ಶೇಕಡ 72 ರಷ್ಟು ಮಂದಿ, ಅಂದರೆ ಪ್ರತಿ ಹತ್ತು ಭಾರತೀಯರಲ್ಲಿ ಏಳು ಮಂದಿ ಎಂದು ಹೇಳುತ್ತಾರೆ.

3. ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಭಾರತೀಯರ ತೀವ್ರ ಒಲವು

ಪ್ರಸಕ್ತ ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಶೇಕಡ 88ರಷ್ಟು ಮಂದಿ ಇದಕ್ಕೆ ಬೆಂಬಲ ನೀಡುವ ಮೂಲಕ ಹತ್ತು
ಭಾರತೀಯರಲ್ಲಿ 9 ಮಂದಿ ಕಾನೂನನ್ನು ಬಲಪಡಿಸುವ ಪರವಾಗಿದ್ದಾರೆ. ವಯಸ್ಸು ಮತ್ತು ಲಿಂಗ ಸೇರಿದಂತೆ ಎಲ್ಲ ಸಾಮಾಜಿಕ ‘ಮತ್ತು ಭೌಗೋಳಿಕ ಸ್ತರಗಳನ್ನೂ ಮೀರಿ’ ಇದಕ್ಕೆ ಬೆಂಬಲ ವ್ಯಕ್ತವಾಗಿದೆ. ತಂಬಾಕು ಬಳಕೆದಾರರು ಸಹ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

‘”ಪ್ರಸಕ್ತ ಜಾರಿಯಲ್ಲಿರುವ ತಂಬಾಕು ನಿಯಂತಣ ಕಾನೂನನ್ನು ಬಲಪಡಿಸಲು ಜನರಿಂದ ವ್ಹಕ್ತವಾಗಿರುವ ಬೆಂಬಲ ಆಶಾದಾಯಕವಾಗಿದೆ. ಭಾರತ ಸರ್ಕಾರವು ಈಗಾಗಲೇ ತಂಬಾಕು ನಿಯಂತಣ ಕಾನೂನು
ಕೋಟಾ-2003ಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಇದು ಸಾರ್ವಜನಿಕ ಆರೋಗ್ಯವನ್ನು
ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಮಾರಾಟ
ಕೇಂದ್ರಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶನ ಹಾಗೂ ಸಿಗರೇಟ್‌ ಮತ್ತು ಬಿಡಿಗಳ ಬಿಡಿ ಮಾರಾಟ ಪ್ರಸಕ್ತ ಜಾರಿಯಲ್ಲಿರುವ ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಜನರಿಂದ ವ್ಯಕ್ತವಾಗಿರುವ
ಅಭೂತಪೂರ್ವ ಬೆಂಬಲ ಆಶಾದಾಯಕವಾಗಿದೆ.

ಭಾರತ ಸರ್ಕಾರವು ಈಗಾಗಲೇ ತಂಬಾಕು ನಿಯಂತ್ರಣ ಕಾನೂನು ಕೋಟಾ-2003ಕ್ಕೆ ತಿದುಪಡಿ ತರುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಇದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ತದ ಹೆಜ್ಜೆಯಾಗಿದೆ. ಸಾರ್ವಜನಿಕ ಸಳಗಳಲ್ಲಿ ಧೂಮಪಾನ ನಿಷೇಧ, ಮಾರಾಟ ಕೇಂದ್ರಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶನ ಹಾಗೂ ಸಿಗರೇಟ್‌ ಮತ್ತು ಬಿಡಿಗಳ ಬಿಡಿ ಮಾರಾಟ ನಿಷೇಧಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಬಲಪಡಿಸುವುದರ ಜೊತೆಗೆ ಹೆಚ್ಚಿನ ದಂಡವನ್ನೂ ವಿಧಿಸಲು ಸರ್ಕಾರ ‘ಯೋಜಿಸಿದೆ.’ ಎಂದು ಶ್ರೀ ಆಶಿಮ್‌ ಸನ್ಯಾಲ್‌, ಮುಖ್ಯ ನಿರ್ವಹಣಾಧಿಕಾರಿ, ಕನ್ಸ್ಯುಮರ್‌ ವಾಯ್ಟ್‌ ತಿಳಿಸಿದ್ದಾರೆ.

“ಕನ್ಸ್ಯುಮರ್‌ ವಾಯ್ಸ್‌ ನಡೆಸಿರುವ ಸಮೀಕ್ಷೆಯಲ್ಲಿ ಶೇಕಡ 80ಕ್ಕೂ ಹೆಚ್ಚು ಮಂದಿ ತಂಬಾಕು ನಿಯಂತ್ರಣ
ಕಾನೂನುಗಳನ್ನು ಬಲಪಡಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಭಾರಿ ಜನಬೆಂಬಲವನ್ನು ಗಣನೆಗೆ
ತೆಗೆದುಕೊಂಡರೆ, ಧೂಮಪಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವುದಿಲ್ಲದೆ ರೆಸ್ಟೋರೆಂಟ್‌ ಪಬ್‌
ಹೋಟೆಲ್‌ ಮತ್ತು ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ಪ್ರದೇಶವನ್ನು ಸರ್ಕಾರ ಕೂಡಲೇ ನಿಷೇಧಿಸುವ
ಸಮಯ ಬಂದಿದೆ ಎಂದೇ ಅರ್ಥ.

ಅಲ್ಲದೆ, ತಂಬಾಕು ನಿಯಂತ್ರಣ ಕಾಸೂಸುಗಳ ಉಲ್ಲಂಘನೆಗೆ ಹೆಚ್ಚಿನ ದಂಡ ವಿಧಿಸುವುದು ಹಾಗೂ ಸಿಗರೇಟ್‌ ಮತ್ತು ಬೀಡಿಗಳ ಬಿಡಿ ಮಾರಾಟದ ಮೇಲಿನ ನಿಷೇಧದ
ಕಟ್ಟುನಿಟ್ಟಿನ ಜಾರಿ ಈ ಕ್ಷಣದ ತುರ್ತಾಗಿದೆ” ಎಂದು ಡಾ. ತ್ರಿವೇಣಿ ಸಾರ್ವಜನಿಕ ಆರೋಗ್ಯ ತಜ್ಞೆ ಮತ್ತು
ಪ್ರಾಜೆಕ್ಟ್‌ ಲೀಡರ್‌ ಸ್ಮೋಕ್‌ ಪ್ರೀ ಬೆಂಗಳೂರು ಹೇಳಿದ್ದಾರೆ.

ಜಾಗತಿಕವಾಗಿ ರೋಗ ಮತ್ತು ಅಕಾಲಿಕ ಮರಣಗಳಿಗೆ ತಂಬಾಕು ಬಳಕೆ ಪ್ರಮುಖ ಮತ್ತು ತಡೆಯಬಹುದಾದ
ಕಾರಣವಾಗಿದ್ದು, ಭಾರತದಲ್ಲಿ ತಂಬಾಕು ಸಂಬಂಧಿತ ಕಾಯಿಲೆಗಳಿಂದ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಜನ ಮರಣ
ಹೊಂದುತ್ತಿದ್ದಾರೆ. ಭಾರತದಲ್ಲಿ ಸಾಮಾಜಿಕ, ಆರ್ಥಿಕ, ಲಿಂಗ ಮುಂತಾದ ಎಲ್ಲ ಸ್ತರಗಳನ್ನೂ ಮೀರಿ 26 ಕೋಟಿಗೂ
ಹೆಚ್ಚು ತಂಬಾಕು ಬಳಕೆದಾರರಿದ್ದಾರೆ. 2017-18ರಲ್ಲಿ ಎಲ್ಲ ತಂಬಾಕು ಉತ್ಪನ್ನಗಳ ವಾರ್ಷಿಕ ಆರ್ಥಿಕ ವೆಚ್ಚ ರೂ.
177,341 ಕೋಟಿ ಎಂದು ಅಂದಾಜಿಸಲಾಗಿತ್ತು ಮತ್ತು ಇದು ಭಾರತದ ಜಿಡಿಪಿಯ ಶೇಕಡ ಒಂದರಷ್ಟಿತ್ತು.

ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ತಂಬಾಕಿನ ಎಲ್ಲ ರೀತಿಯ ಬಳಕೆಗೂ, ಅದು ಧೂಮಪಾನವಾಗಲಿ ಅಥವ ಜಗಿಯುವುದಾಗಲಿ, ಕೋವಿಡ್‌ ಸಂಬಂಧಿ ಸಾವು-ನೋವುಗಳಿಗೂ ಗಮನಾರ್ಹ ನಂಟಿದೆ.

ವಾಲೆಂಟರಿ ಆರ್ಗನೈಸೇಷನ್‌ ಇನ್‌ ಇಂಟ್ರೆಸ್ಟ್‌ ಆಫ್‌ ಕನ್ಸ್ಹುಮರ್‌ ಎಜುಕೇಶನ್‌ (voluntary organisation in interest of consumer education )-(voice) ನವದೆಹಲಿ ಮೂಲದ ಸರ್ಕಾರೇತರ ಸಂಸ್ಥೆಯಾಗಿದ್ದು,
ಭಾರತದಾದ್ಯಂತ ತಂಬಾಕು ನಿಯಂತ್ರಣ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಆರೋಗ್ಯ ವಿಷಯಗಳ ಕುರಿತು
ಕಾರ್ಯನಿರ್ವಹಿಸುತ್ತಿದೆ.

ಇದೊಂದು ರಾಷ್ಟ್ರೀಯ ಮಟ್ಟದ ಗ್ರಾಹಕ ಸಂಘಟನೆಯಾಗಿದ್ದು, 1983ರಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ನೀತಿ ರಚನೆ ಮತ್ತು ನಿಯಂತ್ರಕ ಸಂಸ್ಥೆಗಳಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತೇವೆ ಎಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ರಾಘವೇಂದ್ರ ಎನ್ ಬಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ..

ದಾವಣಗೆರೆ ನಗರದ ಜಿಎಫ್ ಜಿಸಿ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದಿಂದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಆಯ್ಕೆ ಗಳು ನಡೆದವು, ಕಾಲೇಜಿನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿರುವ ರಾಘವೇಂದ್ರ, ಹಳೇ ಕುಂದುವಾಡದ ಬಸವರಾಜ್, ಲಕ್ಷ್ಮಿದೇವಿ ದಂಪತಿಯ ಪುತ್ರನಾಗಿದ್ದು, ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ದೇಹ ಪ್ರದರ್ಶಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾನೆ.

ಓದಿನ ಜೊತೆಗೆ ತನ್ನ ತಂದೆಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಬಿಡುವಿನ‌ ವೇಳೆಯಲ್ಲಿ ಕೋಚ್ ಮಧು ಪೂಜಾರ್ ಮಾರ್ಗದರ್ಶನದಲ್ಲಿ ದೇಹ ಹುರಿಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾನೆ, ಸ್ಪರ್ಧೆಯಲ್ಲಿ ಬೈಸಿಪ್ಸ್, ಲ್ಯಾಟ್ ಸ್ಟ್ರೈಡ್ ಪೋಸ್ ಕೊಟ್ಟು ನೋಡುಗರನ್ನು, ತೀರ್ಪುಗಾರರನ್ನು ಬೆರಗುಗೊಳಿಸಿದ್ದಾನೆ.

ಇನ್ನೂ ರಾಘವೇಂದ್ರನ ದೇಹ ಪ್ರದರ್ಶನ ವೇಳೆ ಶಿಳ್ಳೆ, ಚಪ್ಪಾಳೆ ಕೇಳಿ ಬಂದವು, ರಾಘವೇಂದ್ರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಬರುವ ಫೆಬ್ರುವರಿಯಲ್ಲಿ ಮಂಗಳೂರಿನಲ್ಲಿ ಸ್ಪರ್ಧೆ ನಡೆಯಲಿದೆ, ಇನ್ನೂ ಚಿನ್ನದ ಪದಕ ಗಳಿಸಿರುವ ರಾಘವೇಂದ್ರನಿಗೆ ಜಿಎಫ್ ಜಿಸಿ ಕಾಲೇಜು ಆಡಳಿತ ಮಂಡಳಿ, ಮಾರ್ಗದರ್ಶಕರು, ಹಳೇ ಕುಂದುವಾಡ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಅದ್ವಿತೀಯ 2024ರಲ್ಲಿ ಜಿಎಂಐಟಿ ಕಾಲೇಜಿನ ಸಿಎಸ್ಇ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನ

Published

on

ಸುದ್ದಿದಿನ,ದಾವಣಗೆರೆ:ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (ಸಿ.ಎಸ್.ಇ) ವಿಭಾಗದ 5ನೇ ಸೆಮಿಸ್ಟರ್ ‘ಎ’ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್ ಯು. ಮತ್ತು ಅಫ್ರಿದ್ ಆರ್.ಕೆ. ಈ ಇಬ್ಬರು ಇತ್ತೀಚಿಗೆ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ಸಂಸ್ಥೆಯಲ್ಲಿ ನಡೆದ ಅದ್ವಿತೀಯ 2024ರಲ್ಲಿ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎನ್. ವೀರಪ್ಪ, ಇನ್ಫಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ನೀಲಾಂಬಿಕೆ, ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಉಪ ನಿರ್ದೇಶಕರಾದ ಎಂ. ಸಂತೋಷ ಕುಮಾರ್, ಜಿಎಂ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಸ್. ಓಂಕಾರಪ್ಪ ಸೇರಿದಂತೆ ಆಡಳಿತ ಮಂಡಳಿ, ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending