Connect with us

ದಿನದ ಸುದ್ದಿ

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೇಂದ್ರದಲ್ಲಿ ಒಂದು ವರ್ಷದ ಅವಧಿಗೆ ಅತಿಥಿ ಉಪನ್ಯಾಸಕರಾಗಿ ನೇಮಕಗೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಿ.ಇ/ಎಂ.ಟೆಕ್‍ನ ಮೆಕ್ಯಾನಿಕಲ್/ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹಾಗೂ ಕನಿಷ್ಠ ಎರಡು ವರ್ಷಗಳ ಅನುಭವವುಳ್ಳ ಅಭ್ಯರ್ಥಿಗಳು ಸ್ವವಿವರ ಮತ್ತು ವಿದ್ಯಾರ್ಹತೆಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ 22 ಸಿ&ಡಿ, ಕೆಐಏಡಿಬಿ ಇಂಡಸ್ಟ್ರೀಯಲ್ ಏರಿಯಾ, ಹರ್ಲಾಪುರ, ಹರಿಹರ-577601 ದೂ.ಸಂ: 08192-243937 ನ್ನು ಇವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿ.21 ಕೊನೆಯ ದಿನವಾಗಿರುತ್ತದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಜುಲೈ 1 ಕನ್ನಡ ಪತ್ರಿಕ್ಯೋದ್ಯಮದ ಐತಿಹಾಸಿಕ ದಿನ

Published

on

ಪ್ರತಿ ವರ್ಷ ಕರ್ನಾಟಕದಲ್ಲಿ ಜುಲೈ 1 ರಂದು ‘ಪತ್ರಿಕಾ ದಿನ’ವನ್ನು ಆಚರಿಸಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಗೊಂಡ ದಿನವಾಗಿದ್ದು ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ, ಕಾಲಕ್ಕೆ ತಕ್ಕಂತೆ ಅದು ಬದಲಾದ ವೈಖರಿ ಬಗ್ಗೆ ಜನಸಾಮಾನ್ಯರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈ ದಿನ ಕರ್ನಾಟದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ.

ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ 1843 ರ ಜುಲೈ 1 ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್‍ನವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು. ಜರ್ಮನ್‍ನ ಮತ ಪ್ರಚಾರಕರಾದ ಮೋಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.

ಮಂಗಳೂರು ಸಮಾಚಾರ ಪತ್ರಿಕೆ 8 ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ವರ್ತಮಾನಗಳು, ಸರಕಾರಿ ನಿರೂಪಗಳು ಕಾನೂನು, ಸುಬುದ್ಧಿಯನ್ನು ಹೇಳುವ ಸಾಮತಿಗಳು, ಹಾಡುಗಳು, ಕತೆಗಳು, ಅಂತರಾಜ್ಯ ವರ್ತಮಾನಗಳು, ವಾಚಕರ ವಾಣಿಗಳು ಅಂಕಣಗಳಾಗಿದ್ದವೆಂದು ಮಂಗಳೂರು ದರ್ಶನ ದಾಖಲಿಸಿದೆ. ಬಳಿಕ ಈ ಪತ್ರಿಕೆಯ ಹೆಸರನ್ನು ಕನ್ನಡ ಸಮಾಚಾರ ಎಂದು ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಲು ಆರಂಭಿಸಿದರು.

ಮಂಗಳೂರ ಸಮಾಚಾರ ಪತ್ರಿಕೆ: ಮೋಗ್ಲಿಂಗ್ ಅವರು ಯುರೋಪಿಯನ್ ಪತ್ರಿಕೆಯ ಕುರಿತು ಅಪಾರ ಜ್ಞಾನ ಹೊಂದಿದ್ದರಿಂದ ಕನ್ನಡದ ಮೊದಲ ಪತ್ರಿಕೆಯು ವೃತ್ತಿಪರ ಸ್ಪರ್ಶವನ್ನು ಪಡೆಯಿತು. ಅವರು ಹಲವಾರು ಯುರೋಪಿಯನ್ ಭಾμÉಗಳ ಮೇಲೆ ಪಾಂಡಿತ್ಯವನ್ನು ಹೊಂದಿದ್ದರು. 1840 ರಲ್ಲಿ ಮಂಗಳೂರಿಗೆ ಬಂದಿಳಿದ ಕೂಡಲೇ ತುಳು, ಕೊಂಕಣಿ, ಕನ್ನಡ ಕಲಿತರು. ಅವರು ಮಿಷನರಿಯಾಗಿದ್ದರೂ, ಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದರು.

ಮಂಗಳೂರ ಸಮಾಚಾರ ಓದುಗರ ಮೇಲೆ ಪ್ರಭಾವ ಬೀರಿತು. ಹೆಚ್ಚಿನ ಸುದ್ದಿಗಳನ್ನು ವಿದೇಶಿ ಮತ್ತು ಭಾರತೀಯ ಪತ್ರಿಕೆಗಳಿಂದ ಸಂಗ್ರಹಿಸಲಾಗುತ್ತಿತ್ತು. ಇದು ಕಲ್ಲಚ್ಚಿನಲ್ಲಿ ಹದಿನೈದು ದಿನಗಳಿಗೊಮ್ಮೆ ಮಂಗಳೂರಿನಿಂದ ಪ್ರಕಟವಾಗುತ್ತಿತ್ತು. ನಾಲ್ಕು ಪುಟಗಳನ್ನೊಳಗೊಂಡ ಪತ್ರಿಕೆಯ ಬೆಲೆ ಒಂದು ಪೈಸೆ ನಿಗದಿ ಮಾಡಲಾಗಿತ್ತು. ಸಂಪಾದಕರಾಗಿ, ಮೋಗ್ಲಿಂಗ್ ಅವರೇ ಸುದ್ದಿಗಳನ್ನು ಆಯ್ಕೆ ಮಾಡುತ್ತಿದ್ದರು. ಇದರಲ್ಲಿ ಸ್ಥಳೀಯ ಸುದ್ದಿಗಳು, ಸರ್ಕಾರಿ ಅಧಿಸೂಚನೆಗಳು, ಕಾನೂನು ವಿಷಯಗಳು, ಹಾಡುಗಳು, ಕಥೆಗಳು ಮತ್ತು ಇತರ ರಾಜ್ಯಗಳ ಸುದ್ದಿಗಳು ಪ್ರಕಟವಾಗುತ್ತಿತ್ತು. ಭಾರತದ ವಿವಿಧ ಭಾಗಗಳನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಮಾಡುತ್ತಿದ್ದ ಪ್ರಯತ್ನಗಳ ಕುರಿತು ಅವರು ವ್ಯಾಪಕವಾಗಿ ಪ್ರಕಟಿಸಿದರು. ಜೊತೆಗೆ ಅಪರಾಧಗಳನ್ನು ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ ಎಂಬ ತಿಳಿವಳಿಕೆ ಜನರಲ್ಲಿ ಉಂಟಾಗಬೇಕೆಂಬ ಉದ್ದೇಶದಿಂದ ಕೋರ್ಟಿನ ಪ್ರಕರಣಗಳಿಗೆ ಸಂಬಂಧಿಸಿದ ಸಮಾಚಾರಗಳನ್ನು ಹೆಚ್ಚಾಗಿ ಪ್ರಕಟಿಸಲಾಗುತ್ತಿತ್ತು.
:ಮೋಗ್ಲಿಂಗ್ ಅವರು ಒಬ್ಬ ಮಿಷನರಿಯಾಗಿದ್ದರೂ, ಕೂಡ ಶಿಕ್ಷಣ, ಸಾಹಿತ್ಯಿಕ ಚಟುವಟಿಕೆಗಳು ಮತ್ತು ಪತ್ರಿಕೆ ಪ್ರಕಟಣೆಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಟ್ಟರು. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕಾಗಿ ಅವರು ಮಾಡಿದ ಶ್ಲಾಘನೀಯ ಕೆಲಸಕ್ಕಾಗಿ, ಟ್ಯೂಬಿಂಗೆನ್‍ನ ಎಬರ್‍ಹಾರ್ಡ್ ಕಾಲ್ರ್ಸ್ ವಿಶ್ವವಿದ್ಯಾನಿಲಯವು 1858 ರಲ್ಲಿ ಮೋಗ್ಲಿಂಗ್‍ಗೆ ಗೌರವ ಡಾಕ್ಟರೇಟ್ ಅನ್ನು ನೀಡಿದ್ದು ಕನ್ನಡಕ್ಕಾಗಿ ಮಾಡಿದ ಕಾರ್ಯಕ್ಕಾಗಿ ಅಂತಹ ಗೌರವವನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.

ಆಗಿನ ಬರಹದ ವ್ಯಾಕರಣ – ಪದ ಬಳಕೆಯ ಶೈಲಿಯಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಸುಮಾರು 8 ತಿಂಗಳ ಕಾಲ ಸತತವಾಗಿ ಪ್ರಕಟವಾಯಿತು. ಮಂಗಳೂರು ಸಮಾಚಾರ ಪತ್ರಿಕೆಯೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗ ಇಂದು ಅಧುನಿಕ ತಂತ್ರಜ್ಞಾನದೊಂದಿಗೆ ಬೆಳೆದಿದ್ದು ಈಗ ಅನೇಕ ಪತ್ರಿಕೆಗಳು, ಸ್ಯಾಟಲೈಟ್ ಚಾನೆಲ್‍ಗಳು, ದೇಶದಲ್ಲೇ ಗರಿಷ್ಠ ಎಂಬಂತೆ ಬಹುಭಾಷಾ ಪ್ರಾದೇಶಿಕ ಚಾನೆಲ್‍ಗಳು, ಆನ್‍ಲೈನ್ ಆವೃತ್ತಿಗಳು, ವೆಬ್‍ಸೈಟ್‍ಗಳು, ಸಂಜೆ ಪತ್ರಿಕೆಗಳು, ವೆಬ್ ಪತ್ರಿಕೆಗಳು, ಫೇಸ್‍ಬುಕ್- ವಾಟ್ಸ್ಪ್‍ಪ್ ಮಾಹಿತಿ- ಇಂಟರ್‍ನೆಟ್ ವಿನಿಮಯ ಗ್ರೂಪ್‍ಗಳು, ನೇರ ಪ್ರಸಾರ ನೀಡುವ ಸುದ್ದಿವಾಹಿನಿಗಳು… ಹೀಗೆ ಮಾಧ್ಯಮದ ಕ್ಷಣಕ್ಷಣದ ಸುದ್ದಿಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ಒಂದಾಗಿದೆ. ಪತ್ರಿಕ್ಯೋದಮದಲ್ಲಿ ಉದ್ಯೋಗ ಅವಕಾಶವೂ ಸೃಷ್ಠಿಯಾಗಿ ಅನೇಕ ಪತ್ರಕರ್ತರು ರಾಜ್ಯ- ದೇಶ – ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಕನ್ನಡದ ಪತ್ರಿಕ್ಯೋದ್ಯಮದ ವಿಷಯದಲ್ಲಿ ಇಂದು ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ವೃತ್ತಪರ ಕೋರ್ಸ್ ರೂಪದಲ್ಲಿ ಪತ್ರಿಕ್ಯೊದ್ಯಮ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‍ಡಿ ಸೇರಿದಂತೆ ಪಿಜಿ ಡಿಪ್ಲೋಮಾ ಕೋಸ್ರ್ಗಳನ್ನು ಸಹ ಆರಂಭಿಸಲಾಗಿದ್ದು ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡಿ ಪತ್ರಿಕೋದ್ಯಮದಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದು, ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. (ಬರಹ-ರಘು ಆರ್.
ಅಪ್ರೆಂಟಿಸ್, ವಾರ್ತಾ ಇಲಾಖೆ ಶಿವಮೊಗ್ಗ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜನನ ಮರಣ ನೋಂದಣಿ ಪ್ರಕ್ರಿಯೆ ಅನುಷ್ಟಾನ ; ಇಂದಿನಿಂದ ಜಾರಿ

Published

on

ಸುದ್ದಿದಿನಡೆಸ್ಕ್:ಇಂದಿನಿಂದ ಜಾರಿಗೆ ಬರುವಂತೆ ಗ್ರಾಮ ಪಂಚಾಯತಿಗಳಲ್ಲಿ ಜನನ ಮರಣ ನೋಂದಣಿ ಪ್ರಕ್ರಿಯೆ ಅನುಷ್ಟಾನಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಎಂಬಿಬಿಎಸ್ ಸೀಟು

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಅನಿವಾಸಿ ಭಾರತೀಯ ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಪತ್ರ ಬರೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಗ್ಯಾಸ್ ಸಿಲಿಂಡರ್‌ಗಳ ಬೆಲೆ ಇಳಿಕೆ

Published

on

ಸುದ್ದಿದಿನಡೆಸ್ಕ್:ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 30 ರೂಪಾಯಿ ಕಡಿತಗೊಳಿಸಿವೆ. 19 ಕಿಲೋಗ್ರಾಂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಬದಲಾವಣೆ ಇಂದಿನಿಂದ ಜಾರಿಗೆ ಬರಲಿದೆ.

ಎನ್ ಟಿ ಎ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ ಇಂದು 1ಸಾವಿರದ 563ಅಭ್ಯರ್ಥಿಗಳ ಪರಿಷ್ಕೃತ ಫಲಿತಾಂಶವನ್ನು ಮತ್ತು ಮರು-ಪರೀಕ್ಷೆಯ ನಂತರ ನೀಟ್ ಪರೀಕ್ಷೆಯ ಎಲ್ಲಾ ಅಭ್ಯರ್ಥಿಗಳ ಶ್ರೇಣಿಯನ್ನು ಪ್ರಕಟಿಸಿದೆ. ಎಲ್ಲಾ ಅಭ್ಯರ್ಥಿಗಳ ಪರಿಷ್ಕೃತ ಸ್ಕೋರ್ ಕಾರ್ಡ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending