Connect with us

ದಿನದ ಸುದ್ದಿ

ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ನೇರ ಸಾಲಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗಳ ಅನುಷ್ಟಾನಕ್ಕೆ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದ ಜನರ ಅರ್ಥಿಕ ಅಭಿವೃದ್ಧಿಗಾಗಿ, ಸಾಲ ಹಾಗೂ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಗಸ್ಟ್.03 ಕೊನೆಯ ದಿನಾಂಕವಾಗಿದ್ದು, ಅರ್ಜಿಗಳನ್ನು ಸುವಿಧಾ ತಂತ್ರಾಂಶದ https://suvidha.karnataka.gov.in/
ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ/ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಯನ್ನು ಅಥವಾ ನಿಗಮದ ಸಹಾಯವಾಣಿ ಸಂಖ್ಯೆ: 08192-230934 ವೆಬ್‍ಸೈಟ್ https://dbcdc.karnataka.gov.in ಅನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ಡಿ.ಬಿ.ಸಿ.ಡಿ.ಸಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವೆಂಕಟೇಶ್ ಜಿ.ಎಂ. ಅವರಿಗೆ ಪಿಎಚ್‌.ಡಿ ಪದವಿ

Published

on

ಸುದ್ದಿದಿನ,ಬೆಂಗಳೂರು:ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್. ಪುಟ್ಟಸ್ವಾಮಯ್ಯ ರವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್ ಇನ್ ಕರ್ನಾಟಕ: ಎ ಕೇಸ್ ಸ್ಟಡಿ ಆಫ್ ತುಮಕೂರು ಡಿಸ್ಟ್ರಿಕ್ಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ.

ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಗುಜ್ಜನಹಳ್ಳಿ ಗ್ರಾಮದ ನಿವಾಸಿಯಾದ ದಿವಂಗತ ಗಡ್ಡೂರು ಮುನಿಯಪ್ಪ, ದಾಸನ್ನನವರ ವೆಂಕಟಮ್ಮ ಎಂಬ ದಂಪತಿಗಳ ಪುತ್ರ ವೆಂಕಟೇಶ್ ಜಿ.ಎಂ.ರವರು ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್ ಇನ್ ಕರ್ನಾಟಕ: ಎ ಕೇಸ್ ಸ್ಟಡಿ ಆಫ್ ತುಮಕೂರು ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯವು ಪದವಿಯನ್ನು ಪ್ರಧಾನ ಮಾಡುವ ಮೂಲಕ ಗೌರವಿಸಿದೆ. ವೆಂಕಟೇಶ್ ಜಿ.ಎಂ. ಅವರಿಗೆ ಪಿಎಚ್‌.ಡಿ ಪದವಿ ಲಭಿಸಿರುವ ಹಿನ್ನಲೆ ಶಿಕ್ಷಕರು, ಸ್ನೇಹಿತ ಬಳಗ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೇಣುಕಸ್ವಾಮಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆಯಾಗಲಿ : ಜಂಗಮ ಸಮಾಜ ಪ್ರತಿಭಟನೆ

Published

on

ಸುದ್ದಿದಿನ,ಮಸ್ಕಿ:ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಮಸ್ಕಿ ಜಂಗಮ ಸಮಾಜ ವತಿಯಿಂದ ನಮ್ಮ ಸಮುದಾಯದ ಚಿತ್ರದುರ್ಗದ ರೇಣುಕ ಸ್ವಾಮಿಯನ್ನು ಕೊಲೆಗೈದ ಕೊಲೆಗಡಕರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಗಚ್ಚಿನ ಹಿರೇಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಂಗಮ ಸಮಾಜದ ಅಧ್ಯಕ್ಷ ಕರಿಬಸಯ್ಯಸ್ವಾಮಿ ಸಿಂಧನೂರು ಮಠ ಸಗರೇಶ ಬಳಗಾನೂರ್ ಶಿವಕುಮಾರ್ ಕಡಮುಡಿ ಮಠ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಚಂದ್ರಶೇಖರ್ ಕ್ಯಾತನಟ್ಟಿ ಡಾಕ್ಟರ್ ಪಂಚಾಕ್ಷರಯ್ಯ ಕಂಬಳಿ ಮಠ ಸಮಾಜದ ಮುಖಂಡರು ಶ್ರೀಮಠದಲ್ಲಿ ಸಭೆಯಲ್ಲಿ ನಮ್ಮ ಸಮಾಜದ ಮೇಲೆ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿದ್ದು .ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಾವನ್ನಪ್ಪಿದ ಸಮಾಜದ ರೇಣುಕಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ರೇಣಿಕಾಸ್ವಾಮಿ ಪತ್ನಿ ತುಂಬಿದ ಬಸುರಿ ಅವರಿಗೆ ಪರಿಹಾರ ನೀಡಬೇಕು. ದುಡ್ಡು ಇದೆ ಎಂಬ ಅಹಂಕಾರದಿಂದ .ಯಾರನ್ನು ಬೇಕಾದರೂ ಕೊಲೆ ಮಾಡುವ ಕೊಲೆಗಡಕರನ್ನು ಗಡಿ ಪಾರು ಮಾಡಬೇಕೆಂದು ಖಂಡನೆಯ ಎಂದು ಹೋರಾಟದೊಂದಿಗೆ ಸಭೆಯಲ್ಲಿ ಮಾತನಾಡಿದರು.

ಜಂಗಮಬಾಂಧವರು ಬಸವೇಶ್ವರ ಸರ್ಕಲ್ ತಹಸಿಲ್ ಆಫೀಸುವವರಿಗೆ ದಂಡಾಧಿಕಾರಿಗಳು ಮುಖಾಂತರ ..ಗ್ರಹ ಇಲಾಖೆ ಸರಕಾರಕ್ಕೆ ತಶೀಲ್ದಾರ್ ಸಿರಸ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜಂಗಮ ಸಮಾಜದ ಮುಖಂಡ ತಾಲೂಕು ಅಧ್ಯಕ್ಷ .ಘನ ಮಠದಯ್ಯ ಸ್ವಾಮಿ ಸಾಲಿಮಠ. ಮಾತನಾಡಿ ಸಮಾಜದ ರೇಣುಕಾ ಸ್ವಾಮಿ ಅವರಿಗೆ ಅನ್ಯಾಯವಾಗಿದೆ ಪದೇ ಪದೇ ಸಮಾಜದಲ್ಲಿ ಇಂಥ ಘಟನೆ ನಡೆಯುತ್ತಿದ್ದು ಕೊಲೆ ಮಾಡಿದ ಆರೋಪಿಗಳಿಗೆ ಉಗ್ರ ಕಠಿಣ ಶಿಕ್ಷೆ ವಿಧಿಸಬೇಕು .ಹಾಗೂ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಕೊಲೆಯಾಯಿತು. ಇದೇ ತರ ನಮ್ಮ ಸಮಾಜದವರ ಮೇಲೆ ಘಟನೆಗಳ ಮರುಕಳಿಸುತ್ತವೆ. ಗಂಭೀರವಾಗಿ ಸರ್ಕಾರ ಪರಿಗಣಿಸಿ ಅನ್ಯಾಯವಾದ ರೇಣುಕಾ ಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅವರಿಗೆ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ ಪಕಡದಿನ್ನಿ ಹಿರೇಮಠ ಆದಯ್ಯ ಸ್ವಾಮಿ ಸಿದ್ದಲಿಂಗಯ್ಯ ಸೊಪ್ಪಿಮಠ ಶಿವಪುತ್ರಯ್ಯ ಸ್ವಾಮಿ ಮಾಲಿ ಮಠ ಮೆದಿಕಿನಾಳ ಬಸವರಾಜ್ ಸ್ವಾಮಿ ಹಿರೇಮಠ ಅಸಮಕಲ್ ಯುವ ಘಟಕದ ಅಧ್ಯಕ್ಷರು ಶಿವಕುಮಾರ್ ಕಡಾಮುಡಿ ಮಠ ವೀರೇಶ್ ಶಂಭು ಕಂಬಳಿ ಮಠ ಶಿವು ಮಹೇಶ್ ಕೊಟ್ಟೂರು ಮಠ ಹಾಗೂ ನಿರಂಜನ್ ವಟಗಲ್ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಗಳೂರು | ವ್ಯಕ್ತಿ ಮೇಲೆ ನಾಲ್ಕು ಕರಡಿದಾಳಿ

Published

on

ಸುದ್ದಿದಿನ,ಜಗಳೂರು : ಜಮೀನಿಗೆ ಹೋಗಿದ್ದ ವ್ಯಕ್ತಿ ಮೇಲೆ ನಾಲ್ಕು ಕರಡಿಗಳ ದಾಳಿ‌ ಮಾಡಿ ಹಿಗ್ಗಾಮುಗ್ಗಾ ಕಡಿದು ಗಂಭೀರ ಗಾಯಗೊಳಿಸಿರುವ ಘಟನೆ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಬೈರನಾಯಕನಹಳ್ಳಿಯ ರೈತ ಹನುಮಂತಪ್ಪ ಗಂಭೀರ ಗಾಯಗೊಂಡಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈಗಾಗಲೇ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಹಾಗಾಗಿ ಕರಡಿ, ಹಂದಿಗಳು ಜಮೀನುಗಳತ್ತಾ ಮುಖ ಮಾಡುತ್ತಿವೆ.

ಹನುಮಂತಪ್ಪ ಸಂಜೆ ತಮ್ಮ ಜಮೀನಿಗೆ ತೆರಳಿದ್ದಾರೆ. ಆದರೆ ಕರಡಿ ಮತ್ತು ಮೂರು ಮರಿಗಳು ಹಿಂಭಾಗದಿಂದ ಬಂದು ಏಕ ಕಾಲದಲ್ಲಿ ಮೇಲೆ ಎಗರಿ ಮನಸ್ಸಿಗೆ ಬಂದಂತೆ ಕಡಿದಿವೆ. ರೈತ ಎಷ್ಟೆ ಕಿರುಚಾಡಿದರು ಯಾರಿಗೂ ಕೇಳಿಸಿಲ್ಲ. ಕೊನೆ ಕಡಿದು ಬಿಟ್ಟು ಹೋದ ಮೇಲೆ ಪಕ್ಕದ ಜಮೀನಿನ ರೈತರು ಬಂದು‌ನೋಡಿದಾಗ ರಕ್ತದ ಮಡುವಿನಲ್ಲಿ ಮಲಗಿರುವುದು ಕಂಡು ತಕ್ಷಣ ಜಗಳೂರಿನ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಆದರೆ ಪ್ರಥನ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳಿಸಿದ್ದಾರೆ. ಆಸ್ಪತ್ರೆಗೆ ಅರಣ್ಯಾಧಿಕಾರಿಗಳು‌ವಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending