Connect with us

ದಿನದ ಸುದ್ದಿ

ಪ್ರೀತಿ-ಆರೈಕೆ ಫೌಂಡೇಶನ್ ಮೂಲಕ ಜನಸೇವೆ ; ಡಾ.ರವಿ

Published

on

ಸುದ್ದಿದಿನ,ದಾವಣಗೆರೆ : ನಾವು ಬೆಳೆಯುತ್ತಿದ್ದೇವೆ ಅಂದ್ರೆ, ನಮ್ಮ ಬೆಳವಣಿಗೆ ನೋಡಿ ತುಳಿಯೋರೇ ಜಾಸ್ತಿ….ಇಂತಹವರ ನಡುವೆ ವೈದ್ಯರೊಬ್ಬರು ಎಲೆ ಮರೆ ಕಾಯಿಯಂತೆ ಕೆಲಸ ಮಾಡಿ ಈಗ ಹೊರ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ.

ಇದು…ಬೇರೆ ಯಾರೋದ್ದೋ ಕಥೆಯಿಲ್ಲ…ನಮ್ಮ ಜತೆಯೇ ಇದ್ದು, ನಮ್ಮಗಳ ಕಷ್ಟ, ಕಾರ್ಪಣ್ಯ ಕೇಳುವ ಜತೆ ರೋಗಿಗಳಿಗೆ ದೇವರಾಗಿ ಕೆಲಸ ಮಾಡುತ್ತಿರುವ ವೈದ್ಯ ಡಾ.ರವಿ.

ಡಾ.ರವಿ ಮೂಲತಃ ಜಗಳೂರಿನವರಾಗಿದ್ದು, ಇಲ್ಲಿನ ಮಾಜಿ ಶಾಸಕ ಗುರುಸಿದ್ಧನಗೌಡರವರ ಹಿರಿಯ ಪುತ್ರ…ತಂದೆಯಂತೆ ಡಾ.ರವಿ ಕೂಡ ಸಮಾಜ ಸೇವಕರು..ಎಲ್ಲದಕ್ಕೂ ಹೊರತಾಗಿ ಪ್ರಾಣಿ ಪ್ರಿಯರಾಗಿದ್ದು, ಈ ಭಾಗದಲ್ಲಿನ ಕೊಂಡು ಕುರಿ ಉಳಿವಿಗೆ ಹೋರಾಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ರೋಗಿಗಳ ಪಾಲಿನ ಆರಾಧ್ಯ ದೈವ.

ಇಂತಹ ವ್ಯಕ್ತಿ ಈಗ ಇನ್ನಷ್ಟು ಸಮಾಜ ಸೇವೆ ಮಾಡಲು ಹೊರಟಿದ್ದು, ಇದೇ ಏ.28 ಕ್ಕೆ ಪ್ರೀತಿ-ಆರೈಕೆ ಫೌಂಡೇಶನ್ ಎಂಬ ಕೂಸನ್ನು ಸಮಾಜಕ್ಕಾಗಿ ಹೊರತರುತ್ತಿದ್ದಾರೆ. ಈ ಕೂಸು ಯಾವ ಜಾತಿ, ಮತ, ಪಂಥ, ಸಮುದಾಯದ ಪರ ಕೆಲಸ ಮಾಡೋದಿಲ್ಲ…ಬದಲಾಗಿ ಶೋಷಿತರ, ದಮನಿತರ, ಕಾಲ್ತುತಳಿತಕ್ಕೆ ಒಳಗಾದ ಕಷ್ಟದಲ್ಲಿರುವ ಜನರ ಸೇವೆ ಮಾಡಲಿದೆ.

ಈಗಾಗಲೇ ಸಾಕಷ್ಟು ಫೌಂಡೇಶನ್ ಇದ್ದರೂ, ಎಲ್ಲರಂತಲ್ಲ ಈ ಪ್ರೀತಿ- ಆರೈಕೆ ಫೌಂಡೇಶನ್ ಇದೊಂದು ತತ್ವ-ಸಿದ್ದಾಂತಗಳನ್ನೋಳಗೊಂಡು, ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತದೆ…ಸಮಾಜ ಸೇವೆಗಾಗಿ ಹುಟ್ಟಿರುವ ಪ್ರೀತಿ-ಆರೈಕೆ ಫೌಂಡೇಶನ್ ಜನರ ಸೇವೆಗೆ ಮೊದಲ ಆದ್ಯತೆ ನೀಡಿದೆ…ಜನರಿಂದ, ಜನರಿಗಾಗಿ ಜನರಿಗೋಸ್ಕರ ಇರುವ ಈ ಫೌಂಡೇಶನ್ ತನ್ನ ಕೈಲಾದಷ್ಟು ಕೆಲಸ ಮಾಡಲಿದೆ.

ಡಾ.ರವಿ ಮೊದಲಿನಿಂದಲೂ ಸಮಾಜಸೇವೆಯಿಂದ ಬಂದವರಾಗಿದ್ದು, ಇವರ ಈ ಕಾರ್ಯಕ್ಕೆ ಪತ್ನಿ ಪ್ರೀತಿ ಕೈ ಜೋಡಿಸಿದ್ದರು. ನಾನು ಕೂಡ ಜನರ ನಡುವೆ ಇರಬೇಕು, ಅವರ ಕಷ್ಟ ಕಾರ್ಪಣ್ಯ ಕೇಳಬೇಕೆಂದು ಪತ್ನಿ ಪಾಲಿಕೆ ಚುನಾವಣೆಗೆ ನಿಂತರು..ಆದರೆ ಕಡಿಮೆ ಮತದ ಅಂತರದಲ್ಲಿ ಸೋತರು..ಆದರೂ ಪತ್ನಿ ಪ್ರೀತಿ ಸುಮ್ಮನೆ ಇರೋ ಹೆಣ್ಣುಮಗಳು ಅಲ್ಲ…ಏನಾದ್ರೂ ಸಾಧನೆ ಮಾಡಬೇಕೆಂದು, ತನ್ನ ಸುತ್ತಮುತ್ತ ಇರುವವರ ಕಷ್ಟ ಕೇಳುತ್ತಿದ್ದರು.

ಗಂಡನಿಗೆ ಹೆಗಲಾಗಿ ಮಾವನಿಗೆ ಮಗಳಾಗಿ ಮನೆಗೆ ಮಹಾಲಕ್ಷ್ಮೀಯಾಗಿ ಸಮಾಜಕ್ಕೆ ದೇವತೆಯಾಗಿ ಇದ್ದರು..ಅಷ್ಟೋರೊಳಗೆ ಹುಬ್ಬಳ್ಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದೈವಾಧೀನರಾದರು.. ಅಲ್ಲೂ ಕೂಡ ಡಾ.ರವಿ.ಸುಮ್ಮನೆ ಇರಲಿಲ್ಲ…ತನ್ನ ಪತ್ನಿ ಕಳೆದುಕೊಂಡ ನೋವಿದ್ದರೂ, ಸ್ಥಳಕ್ಕೆ ಹೋಗಿ ರಸ್ತೆ ಕಾಮಗಾರಿ ನಡೆಯಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ಮಾಡಿದರು. ನನ್ನ ಹೆಂಡತಿ ಸಾವಿನಂತೆ, ಬೇರೆಯವರ ಸಾವು ಆಗಬಾರದು ಎಂಬ ದೂರದೃಷ್ಟಿ ಡಾ.ರವಿಯರದ್ದಾಗಿತ್ತು…ಅದಕ್ಕಾಗಿ ಇಲ್ಲಿಂದ ಜನರನ್ನು ಕರೆದುಕೊಂಡು, ಸ್ಥಳೀಯರನ್ನು ಸೇರಿಸಿ ಇಡೀ ಕರುನಾಡೇ ತನ್ನತ್ತ ತಿರುಗುವಂತೆ ಪ್ರತಿಭಟಿಸಿದ್ದರು..ಅವರ ಈ ಕಾಳಜಿಯಿಂದ ಇಂದು ಹುಬ್ಬಳ್ಳಿಯಲ್ಲಿ ಎಷ್ಟೋ ಜೀವಗಳು ಉಳಿದಿವೆ…ಇಂತಹ ಕೆಲಸ ಮಾಡೋದು ಪ್ರೀತಿ-ಆರೈಕೆ ಫೌಂಡೇಶನ್ ಉದ್ದೇಶ.

ಪತ್ನಿ ಕಳೆದುಕೊಂಡರೂ ಡಾ.ರವಿ ಎದೆಗುಂದಲಿಲ್ಲ…ಕೊರೊನಾ ಕಾಲದಲ್ಲಿ ತನ್ನ ಜೀವ ಒತ್ತೆಯಿಟ್ಟು ರೋಗಿಗಳ ಸೇವೆ ಕೈಗೊಂಡರು..ಇವರ ಜತೆಗೆ ಡಾ.ಹಾಲಸ್ವಾಮಿ ಕೈ ಜೋಡಿಸಿದರು..ರಾಮನ ಭಂಟ ಆಂಜನೇಯ ಇದ್ದ ಹಾಗೆ…ಡಾ.ರವಿ ಕೆಲಸ ಕಾರ್ಯಗಳಿಗೆ ಡಾ.ಹಾಲಸ್ವಾಮಿ ಬೆನ್ನಲುಬಾಗಿ ಕೊರೊನಾ ಕಾಲದಲ್ಲಿ ಸೇವೆ ಮಾಡಿದ್ರೂ, ಎಷ್ಟೋ ಅಮೂಲ್ಯ ಜೀವಗಳನ್ನು ಉಳಿಸುವ ಮೂಲಕ ಎಲ್ಲರ ಬಾಯಲ್ಲಿ ಸೈ ಎನಿಸಿಕೊಂಡ್ರು. ಈ ರೀತಿಯಲ್ಲಿ ಪ್ರೀತಿ- ಫೌಂಡೇಶನ್ ಜನರನ್ನು ತನ್ನ ಎದೆಗೂಡಿನಲ್ಲಿ ಇಟ್ಟುಕೊಂಡು ಸಂಸ್ಥೆ ಕೆಲಸ ಮಾಡುತ್ತದೆ.

ಎರಡನೇ ಹಂತದ ಕೊರೊನಾ ಕಾಲದಲ್ಲಿ ಇಡೀ ದಾವಣಗೆರೆಯಲ್ಲಿನ ಆಸ್ಪತ್ರೆ ತುಂಬಿತ್ತು…ಕಡಿಮೆ ಸಂಖ್ಯೆ ವೈದ್ಯರು…ಇತರೆ ಜಿಲ್ಲೆಗಳಿಂದ ಇಲ್ಲಿನ ಆಸ್ಪತ್ರೆಗಳಿಗೆ ರೋಗಿಗಳು ದಾಖಲಾಗಿದ್ದರು.ಈ ನಡುವೆ ಆ್ಯಕ್ಸಿಜನ್ ಕೊರತೆ, ಸಿಬ್ಬಂದಿಗಳಿಗೆ ಕೊರೊನಾ ಅಟ್ಯಾಕ್, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಿತ್ತು.

ರೋಗಿಗಳನ್ನು ಮುಟ್ಟೋಕೆ ವೈದ್ಯರಿಗೆ ಭಯ…ಹೀಗಿದ್ದಾಗ ಎಲ್ಲ ಕಡೆ ಆ್ಯಕ್ಸಿಜನ್ ಅಭಾವ…ಆಗ ರಾಜನಂತೆ ಧಾವಿಸಿದ್ದೇ ಡಾ.ರವಿ…ಹೆಚ್ಚು ಹಣ ಕೊಟ್ಟು ಆ್ಯಕ್ಸಿಜನ್ ಸ್ಟಾಕ್ ಮಾಡಿ ಉಚಿತವಾಗಿ ನೀಡಿದ್ದು ಈ ಮಹಾನ್ ನಾಯಕ…ಆಗ ಹಣ ಮುಖ್ಯವಾಗಿರಲಿಲ್ಲ. ಜೀವ ಮುಖ್ಯವಾಗಿತ್ತು…ಭಯದ ನಡುವೆಯೂ ಜನರ ಜೀವಕ್ಕಾಗಿ ಡಾ.ರವಿ.ಹೋರಾಟ ಮಾಡಿದ್ರು.

ಇದು ಡಾ.ರವಿ ಅವರ ಸಮಾಜ ಸೇವೆಯ ಒಂದು ಸ್ಯಾಂಪಲ್ ಅಷ್ಟೇ….ಕಣ್ಣಿಗೆ ಕಾಣದಂತೆ ಮಾಡಿದ್ದು ಬಹಳಷ್ಟಿದೆ…ಅದನ್ನು ನೀವೆ ಮುಂದೆ ನೋಡ್ತೀರಾ…ಒಟ್ಟಾರೆ ಒಂಟಿಯಾಗಿರುವ ಡಾ.ರವಿ. ತನ್ನ ನೋವನ್ನು ಮರೆಯಲು ಬೆಳಗ್ಗೆಯಿಂದ ರಾತ್ರಿಯವರೆಗೂ ರೋಗಿಗಳ ಜತೆ ಕಾಲ ಕಳೆಯುತ್ತಿದ್ದಾರೆ…ಹಾಗಾದ್ರೆ
ಇಷ್ಟೇಲ್ಲ ಕತೆ ಹೇಳಿದ್ದು ಯಾಕೆ ಅಂತ ನೀವೆಲ್ಲ ಅಂದು ಕೊಂಡಿರಬಹುದು….ಇದಕ್ಕೂ ಕಾರಣವಿದೆ…..ಏ.28 ಕ್ಕೆ ಅವರ ಕನಸಿನ ಕೂಸು ಹೊರಬರುತ್ತಿದೆ..ಅದುವೇ ಪ್ರೀತಿ – ಫೌಂಡೇಶನ್…ನೀವು ಬನ್ನಿ…ನಮ್ಮ ಜತೆ ಕೈ ಜೋಡಿಸಿ…ಶಕ್ತಿ ತುಂಬಿ ಎನ್ನುತ್ತಾರೆ ಡಾ.ರವಿ….ಹಾಗಾದ್ರೆ ನೀವು ಅವರಿಗೆ ವಿಶ್ ಮಾಡಿ, 98455 74143, 9826915042.

 

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending