ಕ್ರೀಡೆ
ರಾಜ್ಯದ ಯುವ ವೇಗಿಗಳಿಗೆ ಮಿಚೆಲ್ ಜಾನ್ಸನ್ ಬೌಲಿಂಗ್ ಪಾಠ

ಸುದ್ದಿದಿನ,ಮೈಸೂರು: ಆಸ್ಟ್ರೇಲಿಯಾದ ಮಾಜಿ ಎಡಗೈ ವೇಗದ ಬೌಲರ್ ಮಿಚೆಲ್ ಜಾನ್ಸನ್, ಸದ್ಯ ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್-7 ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಈ ಸಂದರ್ಭದಲ್ಲಿ ಕಾಂಗರೂ ನಾಡಿನ ದಿಗ್ಗಜ ವೇಗದ ಬೌಲರ್ ಜಾನ್ಸನ್, ಕರ್ನಾಟಕದ ಯುವ ವೇಗದ ಬೌಲರ್ಗಳಿಗೆ ಬೌಲಿಂಗ್ ಪಾಠ ಹೇಳಿಕೊಟ್ಟಿದ್ದಾರೆ.
ಶನಿವಾರ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಜಾನ್ಸನ್, ರಾಜ್ಯದ 12 ವೇಗದ ಬೌಲರ್ಗಳಿಗೆ ಬೌಲಿಂಗ್ ಟಿಪ್ಸ್ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಟೆಸ್ಟ್ ಕ್ರಿಕೆಟಿಗ ಹಾಗೂ ರಾಜ್ಯ ಹಿರಿಯರ ತಂಡದ ಆಯ್ಕೆ ಸಮಿತಿಯ ಸದಸ್ಯ, ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಉಪಸ್ಥಿತರಿದ್ದರು.
ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ 36 ವರ್ಷದ ಜಾನ್ಸನ್, ಆಸ್ಟ್ರೇಲಿಯಾ ಪರ ಆಡಿರುವ 73 ಟೆಸ್ಟ್ ಪಂದ್ಯಗಳಿಂದ 313 ವಿಕೆಟ್ಸ್, 153 ಏಕದಿನ ಪಂದ್ಯಗಳಿಂದ 239 ವಿಕೆಟ್ಸ್ ಹಾಗೂ 30 ಟಿ20 ಪಂದ್ಯಗಳಿಂದ 38 ವಿಕೆಟ್ ಪಡೆದಿದ್ದಾರೆ.
ಕ್ರೀಡೆ
ಪ.ಜಾತಿ/ಪ.ಪಂಗಡಕ್ಕೆ ಸಹಾಯಧನ ಮತ್ತು ಕ್ರೀಡಾಗಂಟಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಜನ ಸಂಘ ಸಂಸ್ಥೆಗಳಿಗೆ ನೋಂದಾವಣೆ ಮಾಡಲು ಸಹಾಯಧನ ಮತ್ತು ಕ್ರೀಡಾಗಂಟನ್ನು ನೀಡುವ ಹೊಸ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ತಾಲ್ಲೂಕಿನಲ್ಲಿ 02 ಪರಿಶಿಷ್ಟ ಜಾತಿ ಮತ್ತು 01 ಪರಿಶಿಷ್ಟ ಪಂಗಡದ ಯುವಜನ ಸಂಘವನ್ನು ನೋಂದಾಯಿಸಲು ಸಹಾಯಧನ ಹಾಗೂ ಕ್ರೀಡಾಗಂಟನ್ನು ನೀಡಲಾಗುವುದು. ಜಿಲ್ಲೆಯ 15 ರಿಂದ 35 ವರ್ಷ ವಯೋಮಾನದೊಳಗಿನ ಪ.ಜಾತಿ/ಪ.ಪಂಗಡಕ್ಕೆ ಸೇರಿರುವ ಯುವಕ/ಯುವತಿಯರು ಯುವಜನ ಸಂಘವನ್ನು ರಚಿಸಿಕೊಳ್ಳಲು ಸದವಕಾಶವಿರುವದರಿಂದ ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ನೋಂದಾವಣೆ ಕಾಯಿದೆ 1960 ರ ಅಡಿಯಲ್ಲಿ ಯುವಜನ ಸಂಘಗಳ ನೋಂದಣಿ ಮಾಡಿಸಿ, ಜ.28 ರೊಳಗಾಗಿ ಮಾನ್ಯತೆಗಾಗಿ ಈ ಕಚೇರಿಗೆ ಸಲ್ಲಿಸಲು ಕೋರಿದೆ. ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಕಚೇರಿ ವೇಳೆಯಲ್ಲಿ ಮೊ.ಸಂ: 9620796970 ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ಕ್ರಿಕೆಟಿಗ ಸುರೇಶ್ ರೈನಾ ಬಂಧನ ; ಬಿಡುಗಡೆ : ಕಾರಣ..!?

ಸುದ್ದಿದಿನ,ಮುಂಬೈ: ಮುಂಬೈನ ವಿಮಾನ ನಿಲ್ದಾಣದ ಹತ್ತಿರ ಡ್ರಾಗನ್ ಫ್ಲೈ ಕ್ಲಬ್ ಗೆ ದಿಢೀರ್ ದಾಳಿ ನಡೆಸಿದ ಪೊಲೀಸರು ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಹಾಗೂ ಗಾಯಕ ಗುರು ರಾಂಧವ ಅವರನ್ನು ಬಂಧಿಸಿದರು.
ಕೋವಿಡ್ -19 ನಿಯಾಮಾವಳಿಗಳ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಕ್ರಿಕೆಟಿಗ ಸುರೇಶ್ ರೈನಾ, ಗುರು ರಾಂಧವ ಸೇರಿದಂತೆ 34 ಜನರನ್ನು ಪೊಲೀಸರು ಬಂಧಿಸಿದ್ದು, ಇವರಲ್ಲಿ ಏಳು ಮಂದಿ ಕ್ಲಬ್ ನ ಉದ್ಯೋಗಿಗಳಿದ್ದಾರೆ.
ಬಂಧಿತರ ಮೇಲೆ ಮೇಲೆ ಐಪಿಸಿ ಸೆಕ್ಷನ್ 188, 269, 34 ಅಡಿಯಲ್ಲಿ ಕೇಸು ದಾಖಲು ಮಾಡಿದ್ದು, ಸದ್ಯ ಬಂಧಿತ ಆರೋಪಿಗಳನ್ನು ಜಾಮೀನಿ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿ ಮಾಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗೆ ಹೃದಯಾಘಾತ..!

ಸುದ್ದಿದಿನ, ದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಹೃದಯಾಘಾತವಾಗಿದ್ದು, ಅವರು ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಪಿಲ್ ದೇವ್ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿರು ಮಾಹಿತಿ ದೊರೆತಿದೆ. ಅವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳು ಇನ್ನು ಲಭ್ಯವಾಗಬೇಕಾಗಿದೆ. ಮಾಜಿ ನಾಯಕ ಕಪಿಲ್ ದೇವ್ ಅವರು 1983ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ತಂದು ಕೊಟ್ಟಿದ್ದರು. ಕಪಿಲ್ ದೇವ್ 131 ಟೆಸ್ಟ್ ಪಂದ್ಯದಲ್ಲಿ 434 ವಿಕೆಟ್ ಪಡೆದ ಭಾರತದ ಕ್ರಿಕೆಟ್ ತಂಡದ ಮುಖ್ಯ ವೇಗಿಯಾಗಿದ್ದರು.
Legendary cricketer Kapil Dev @therealkapildev suffers heart attack, undergoes angioplasty at a hospital in Delhi. Wishing him a speedy recovery.
— Teena Thacker (@Teensthack) October 23, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ
-
ದಿನದ ಸುದ್ದಿ6 days ago
ದಾವಣಗೆರೆ | ಜ.18 ರಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣದ ಉದ್ಘಾಟನೆ
-
ಭಾವ ಭೈರಾಗಿ6 days ago
ಕವಿತೆ | ಎದೆಯಾಚೆಗಿನ ತಲ್ಲಣ
-
ದಿನದ ಸುದ್ದಿ5 days ago
ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ನಿತೇಶ ಪಾಟೀಲ
-
ದಿನದ ಸುದ್ದಿ5 days ago
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಸಂಗೀತ ನೃತ್ಯ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಜಗಳೂರು | ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಮಿತಿಯಿಂದ ದೇವರ ಎತ್ತುಗಳಿಗೆ ಮೇವು ಸಂಗ್ರಹಣೆ
-
ದಿನದ ಸುದ್ದಿ5 days ago
ಸಂತೇಬೆನ್ನೂರು | ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತ ನಿವೃತ್ತ ಎ.ಸಿ.ಪಿ ರುದ್ರಪ್ಪ ಎಮ್ ಎನ್. ಅವರಿಗೆ ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ
-
ದಿನದ ಸುದ್ದಿ4 days ago
ದಾವಣಗೆರೆ | 120 ಕೋಟಿ ವೆಚ್ಚದಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ಸಂಸದ ಜಿ.ಎಂ.ಸಿದ್ದೇಶ್ವರ