ದಿನದ ಸುದ್ದಿ
ಪವಿತ್ರ ರಂಜಾನ್ ನ ವಿಶೇಷತೆ
ರಂಜಾನ್ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕ್ಕೆ ,ಐಕತ್ಯೆಯನ್ನು ಸಾರುವ ಹಬ್ಬ. ತನು ಮನ ಧನ ಧಾನ್ಯ ದೇವರಿಗೆ ಅರ್ಪಿಸುವ ಮೂಲಕ ಪಾಪವನ್ಮು ದೂರಮಾಡುವ ಮುಸ್ಲಿಂ ಧರ್ಮದ ಶ್ರೇಷ್ಠ ಹಬ್ಬ ಪವಿತ್ರ ಶ್ರದ್ಧಾ ಭಕ್ತಿಯ ಅಲ್ಲಾನ ನಾಮ ಸ್ಮರಣೆಯ ಹಬ್ಬ ಈ ರಂಜಾನ್. ಉಪವಾಸ ವೃತ್ತ ಜಪವನ್ನು ಮಾಡುತ್ತಾ. ರಂಜಾನ ತಿಂಗಳಲ್ಲಿ ಮುಸ್ಲಿಂ ಭಾಂದವರು ಉಪವಾಸ ಇದು ಪ್ರಾರ್ಥನೆ ಮಾಡ್ತಾರೆ. ಸದ್ಕಾ ಫಿತ್ರಾ ಜಕಾತ್ ಎಂಬ ಅನೇಕ ನಿಯಮಗಳನ್ನು ಪಾಲಿಸುವ ಮೂಲಕ ಒಳ್ಳೆಯ ಮಾರ್ಗದಲ್ಲಿ ಸಾಗಲು ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಲು ಸಂಪ್ರಾದಯಿಕವಾಗಿ ಆಚರಿಸುವ ಹಬ್ಬವೇ ಈ ರಂಜಾನ್.
ಪ್ರತಿಯೊಬ್ಬ ಮುಸ್ಲಿಂ ಸ್ನೇಹಿತರು ತನ್ನ ಇಂದ್ರಿಯಗಳನ್ನು ಬಲಪಡಿಸಿಕೊಳಲು ಅಂಗಾಗಳನ್ನು ನಿಯಂತ್ರಣದಲ್ಲಿಟುಕೊಳ್ಳಲು ಮುಸ್ಲಿಂ ಬಾಂಧವರು ದಿನನಿತ್ಯ ರೋಜಾ ಎಂಬ ಹೆಸರಿನಲ್ಲಿ ಕಡ್ಡಯವಾಗಿ ಉಪವಾಸ ಇರುತ್ತಾರೆ. ಕೇವಲ ದೇಹವನ್ನು ಮಾತ್ರ ಉಪವಾಸ ಮಾಡುದಲ್ಲದೆ ಶಾರೀಕವಾಗಿ ಮಾನಸಿಕವಾಗಿಯು ಸಹ ಮನಸ್ಸಲಿ ಯಾವುದೇ ಕಲ್ಮಶಗಳಿಲ್ಲದೆ. ಕೆಟ್ಟದನ್ನು ನೋಡದೆ ಕೆಟ್ಟದನ್ನು ಮಾತನಾಡದೇ ಕೆಟ್ಟದನ್ನು ಆಲೋಚಿಸದೆ .ತಪ್ಪು ಮಾರ್ಗವನ್ನು ಮೂಲೆಗೆ ಕಟ್ಟಿ.ತಮ್ಮ ಎಲ್ಲಾ ಅಂಗಾಗಗಳನ್ನು ಸಹ ಪರಿಪೂರ್ಣವಾಗಿ ಶುದ್ಧವಾಗಿಟುಕೊಂಡು ರೋಜಾ ಎಂಬ ಪದಕ್ಕೆ ಭಾವಪೊರ್ಣವಾಗಿ ಜೀವ ತುಂಬುತ್ತಾರೆ.
ರಂಜಾನ್ ತಿಂಗಳಿನಲ್ಲಿ ರೋಜಾ ಮಾಡುವಾಗ ದಿನನಿತ್ಯ ಸೊರ್ಯ ಹುಟ್ಟವ ಮುಚಿಂತವಾಗಿ 4 ಘಂಟೆ ಗೆ ಎದ್ದು ಉಪವಾಸ ಪ್ರಾರಂಭಿಸುವ ಮೂಲಕ ಸಂಜೆ 7 ಘಂಟೆ ವರೆಗು ಒಂದು ತೊಟ್ಟು ನೀರು ಕುಡಿಯದೇ ಭಕ್ತಿಯಿಂದ ಅಲ್ಲಾಹುವಿನ ಜಪ ಮಾಡುತ್ತಾರೆ. ನೀರಷ್ಟೆ ಅಲ ಬಾಯಲಿರುವ ಉಗಳನ್ನು ಸಹ ನುಂಗದೆ ಧಾರ್ಮಿಕ ವಿಧಿ ವಿಧಾನ ಗಳಿಂದ ಪ್ರಾರ್ಥನೆ ಮಾಡುವ ಮೂಲಕ ನಿರಂತರವಾಗಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ದೊಡ್ಡವರುವಚಿಕ್ಕವರು ಮಹಿಳೆಯರು ಸೇರಿದಂತೆ ಎಂತಹ ಕಷ್ಟ ಬಂದರು ಅಂದಿನ ಉಪವಾಸ ಪರಿಪೂರ್ಣಗೊಳಿಸುತ್ತಾರೆ. ಎಷ್ಟೋ ಬಾರಿ ರೋಜಾ ಹೊತ್ತಿನಲ್ಲಿರುವಾಗ ಉಪವಾಸ ಮುರಿಯದ್ದೆ ಪ್ರಾಣ ಬಿಟ್ಟಿದ್ದಾರೆ ಮತ್ತು ಪ್ರಾಣ ಉಳಿಸ್ಸಿದ್ದಾರೆ.ಇವರು ದಿನ ನಿತ್ಯ 5 ಹೊತ್ತು ನಮಾಜ್ (ಪ್ರಾರ್ಥನೆ)
ಮಾಡುತ್ತಾರೆ. ವಿಶೇಷ ಅಂದರೆ ಹಬ್ಬದ ಕೊನೆಯದಿನಗಳ ಮುಂಚಿತವಾಗಿ ಪ್ರತಿಯೊಬ್ವರು ಗೋಧಿ ಅಕ್ಕಿ ಅಥವಾ ಧನ ಸಹಾಯ ನೀಡುವುದು ಕಡ್ಡಾಯ ವಾಗಿರುತ್ತದೆ.
ಜಕಾತ್ ಹೆಸರಿನಲ್ಲಿ ಆರ್ಥಿಕವಾಗಿ ಮುಂದಿರುವ ವ್ಯಕ್ತಿ ನ್ಯಾಯಮಾರ್ಗದಲ್ಲಿ ಸಂಪಾದನೆ ಮಾಡಿದ ಹಣದಲ್ಲಿ ಕಡುಬಡವರಿಗೆ ಸಹಾಯ ಮಾಡುವುದು. ಇಸ್ಲಾಂ ಧರ್ಮದಲ್ಲಿ ಕಡ್ಡಾಯ. ಅಲ್ಲಾನ ಅದೇಶದಂತೆ “ಜೆವರಿಲ” ಎಂಬ ದೇವದೊತನ ಮುಖಾಂತರ ಮಹ್ಮದ್ ಪೈಗಂಬರರ ಮೇಲೆ ರಂಜಾನ್ ತಿಂಗಳು ಪ್ರತಿಷ್ಟಿತ ರಾತ್ರಿಯಂದು ಮುಸ್ಲಿಂ ಪವಿತ್ರ ಗ್ರಂಥ ಖುರಾನ್ ಅವತೀರ್ಣವಾಗುತ್ತದೆ.ಈ ರಾತ್ರಿಗೆ ಮುಸ್ಲಿಂ ಮೇಧಾವಿಗಳು ಇದನ್ನು ” ಶಬ್ – ಏ- ಕದರ್” ಪ್ರತಿಷ್ಟಿತ ರಾತ್ರಿ ಎಂದು ಕರೆಯುತ್ತಾರೆ. ಲೋಕ ಕಲ್ಯಾಣಕ್ಕಾಗಿ ರಾತ್ರಿ ಇಡೀ ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಹೀಗೆ ತಮ್ಮಪವಿತ್ರ ರಂಜಾನ್ ರೋಜವನ್ಮು ಮಾಡಿ ಹಬ್ಬದ ದಿನಸಲದಲಿ ಎಲ್ಲರ ಮನೆಯಲ್ಲಿಯು ಸಹ ಹೊಸ ಬಟ್ಟೆ ಹೊಸ ವಸ್ತು ಹೊಸ ಅಡುಗೆ ಅಲಂಕಾರ ಮಾಡಿ .ಅಂದಿನ ಕೊನೆಯ ದಿನ ಭಕ್ತಿಪೂರ್ವಕವಾಗಿ ರೋಜ್ ವನ್ಮು ಮುರಿದು ಅಲ್ಲನ ಪಾದಕ್ಕೆ ನಮೀಸುತ್ತಾರೆ.ಹಿಂದೊ ಮುಸ್ಲಿಂ ಎಂಬ ಬೇಧ ಭಾವ ಇಲ್ಲದೆ ಹೃದಯ ಪೂರ್ವಕವಾಗಿ ಅಪೂಗೆ ಕೊಡುತ್ತಾ ಮನೆಗೆ ಸ್ವಾಗತಿಸುತ್ತಾರೆ.ಇದು ಪವಿತ್ರ ರಂಜಾನ್ ನ ವಿಶೇಷ ತೆ .

ದಿನದ ಸುದ್ದಿ
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. “ಪ್ರವೇಶ ಪತ್ರ” ತೋರಿಸಿ, ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನ್ನಡ ಸಾಹಿತ್ಯ ಪರಿಷತ್ | ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟ

ಸುದ್ದಿದಿನ, ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು 2022ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಪ್ರಶಸ್ತಿಯು 51 ಸಾವಿರ ರೂಪಾಯಿ ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ಸುದ್ದಿದಿನ ಡೆಸ್ಕ್ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಮಿತಿ ಅನುಮೋದಿಸಿದೆ.
ಸಾಮಾನ್ಯ ದರ್ಜೆ ಭತ್ತಕ್ಕೆ ಕ್ವಿಂಟಲ್‌ಗೆ 2 ಸಾವಿರದ 40 ರೂಪಾಯಿಯಿಂದ 2ಸಾವಿರದ 183 ರೂಪಾಯಿಗೆ ಹಾಗೂ ’ಎ’ ದರ್ಜೆ ಭತ್ತಕ್ಕೆ 2 ಸಾವಿರದ 60 ರಿಂದ 2 ಸಾವಿರದ 203 ರೂಪಾಯಿಗೆ ಹೆಚ್ಚಿಸಲಾಗಿದೆ.
ರಾಗಿಗೆ ಪ್ರತಿ ಕ್ವಿಂಟಲ್‌ಗೆ 3 ಸಾವಿರದ 578 ರೂಪಾಯಿಯಿಂದ 3 ಸಾವಿರದ 846 ರೂಪಾಯಿಗೆ ಹೆಚ್ಚಿಸಲಾಗಿದೆ. ತೊಗರಿಗೆ ಪ್ರತಿ ಕ್ವಿಂಟಲ್‌ಗೆ 6 ಸಾವಿರದ 600 ರಿಂದ 7 ಸಾವಿರ ರೂಪಾಯಿಗೆ, ಹೆಸರು ಕಾಳಿಗೆ ಪ್ರತಿ ಕ್ವಿಂಟಲ್‌ಗೆ 7 ಸಾವಿರದ 755 ರಿಂದ 8 ಸಾವಿರದ 558 ರೂಪಾಯಿಗೆ, ಪ್ರತಿ ಕ್ವಿಂಟಲ್ ಉದ್ದಿಗೆ 6 ಸಾವಿರದ 600 ರಿಂದ 6 ಸಾವಿರದ 950 ರೂಪಾಯಿಗೆ ಹೆಚ್ಚಿಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ 2022-23ನೇ ಸಾಲಿಗೆ 330.5 ದಶಲಕ್ಷ ಟನ್‌ನಷ್ಟು ಆಹಾರ ಧಾನ್ಯ ಉತ್ಪಾದನೆ ಅಂದಾಜಿಸಲಾಗದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಇಲ್ಲಿದೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಂಪ್ಲೀಟ್ ಡೀಟೆಲ್ಸ್
-
ದಿನದ ಸುದ್ದಿ6 days ago
ಐದು ಗ್ಯಾರಂಟಿ | ಫಲಾನುಭವಿಗಳ ಆಯ್ಕೆ ಮಾನದಂಡ
-
ಲೈಫ್ ಸ್ಟೈಲ್4 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ6 days ago
ಈ ವರ್ಷವೇ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಚಿಂತನೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
-
ದಿನದ ಸುದ್ದಿ6 days ago
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ
-
ದಿನದ ಸುದ್ದಿ4 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ6 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ