Connect with us

ಲೈಫ್ ಸ್ಟೈಲ್

ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವ ಒಂದು ತಿಂಗಳ ವ್ರತಾಚರಣೆಯೇ ರಂಜಾನ್

Published

on

  • ಕೆ.ಶ್ರೀಧರ್ (ಕೆ.ಸಿರಿ)

ರಂಜಾನ್ ಮುಸ್ಲಿಂ ಸಮುದಾಯದ ಒಂದು ಪವಿತ್ರವಾದ ಧಾರ್ಮಿಕ ಹಬ್ಬವಾಗಿದೆ. ರಮದಾನ್ ಅಂತಲೂ ಈದ್-ಉಲ್-ಫಿತರ್(ಧಾನ್ಯ ದಾನದ ಹಬ್ಬ) ಎಂತಲೂ ಕರೆಯುತ್ತಾರೆ. ಮಾನವ ಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್ ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರಾನ್ ಉದ್ಭವಗೊಂಡಿತು ಇದರ ಪೂಜ್ಯಭಾವಾರ್ಥವಾಗಿ ಪ್ರತೀ ವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯಗೊಳಿಸಲಾಗಿದೆ.

ಈ ಒಂದು ತಿಂಗಳು ಪ್ರಭಾತ ಕಾಲದಿಂದ ಸೂರ್ಯಾಸ್ತಮದವರೆಗೂ ಧರ್ಮಸಮ್ಮತವಾದ ಯಾವುದೇ ರೀತಿಯ ಊಟ ಉಪಚಾರಗಳನ್ನು ಒಂದು ತೊಟ್ಟು ನೀರನ್ನೂ ಕುಡಿಯದೆ ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಂನಲ್ಲಿ ‘ರೋಜ಼ಾ”ಉಪವಾಸ’ ಅಥವಾ ‘ವ್ರತಾಚರಣೆ’ ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.

ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವ್ರತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮಾನವರೆಲ್ಲರೂ ಸಮಾನರು. ಅಲ್ಲಿ ಬಡವ – ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವ್ರತಾಚರಣೆಯಲ್ಲಿ ತೊಡಗಿ ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್-ಉಲ್-ಫಿತರ್ ಬರುತ್ತದೆ ಇದು ದಾನದ ಹಬ್ಬ.

ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತು ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಝಕಾತ್-ಝಕಾತ್(ದಾನ) ಮೂಲಕ ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆ ರಾತ್ರಿಯ ಖರ್ಚಿಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಕಡ್ಡಾಯವಾಗಿ ದಾನ ನೀಡ ತಕ್ಕದ್ದು.

ಆ ದಿನ ಏನೂ ಇಲ್ಲವಾದರೂ ಮನೆಯಲ್ಲಿರುವ ಪಾತ್ರೆಯನ್ನಾದರೂ ಮಾರಿ ದಾನ ನೀಡಬೇಕೆಂಬುದು ಈ ಹಬ್ಬದ ಉದ್ದೇಶ. ರಂಜಾನ್ ಈ ಹಬ್ಬದ ಬಗ್ಗೆ ನನಗೆ ಪ್ರಮುಖ ಆಕರ್ಷಣೆಯಾಗಿದ್ದು ನನ್ನ ಕರ್ತವ್ಯದ ಅವಧಿಯಲ್ಲಿ ದಿನದಿಂದ ದಿನಕ್ಕೆ ಈ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವ ಸಲುವಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು ಇಲ್ಲಿಗೆ ಹಾಸಿಗೆಯನ್ನು ಮುನ್ನ ಎಂಬ ಒಬ್ಬ ವ್ಯಕ್ತಿ ಹಾಸಿಗೆಗಳನ್ನು ತಮ್ಮ ಅಂಗಡಿಯಿಂದ ನೀಡುತ್ತಿದ್ದರು ಆ ಒಂದು ದಿನ ಮಧ್ಯಾಹ್ನ 30 ಹಾಸಿಗೆಯುಳ್ಳ ಆಟೋ ರಿಕ್ಷಾವನ್ನು ತೆಗೆದುಕೊಂಡು ಬಂದು ಹಾಸಿಗೆಯನ್ನು ಹಾಕುತ್ತಿದ್ದಾಗ ನಾನು ಸಾಮಾನ್ಯವಾಗಿ ಈ ರೀತಿಯಾಗಿ ಕೇಳಿದೆ.

“ಇನ್ನೂ ಎಷ್ಟು ಬೆಡ್ ಬರಬೇಕು ಸ್ವಲ್ಪ ಬೇಗ ಬೇಗ ವ್ಯವಸ್ಥೆ ಮಾಡಿ” “ಆಯ್ತು ಸರ್ ಈಗ 40 ಬೆಡ್ ಗೆ ಬಂದಿವೆ ಇನ್ನೂ 40 ಬೆಡ್ ಆನ್ದೀ ವೇ ಜಭೀ ಆಟೋದಲ್ಲಿ ಹಾಕೊಂಡು ಬರ್ತಿದ್ದಾನೆ.” “ಹೂಂ ಆಯ್ತು ಇವತ್ತೆ ಎಲ್ಲಾ ವ್ಯವಸ್ಥೆ ಮಾಡಿ.”ಆ ವ್ಯಕ್ತಿ ಮುಗುಳ್ನಗುತ್ತಾ ಒಂದು ಸಾಧಾರಣ ಲುಂಗಿ ಟೀಂ ಶರ್ಟ್ ಧರಿಸಿದ್ದ ಆ ವ್ಯಕ್ತಿ ಮುಗುಳ್ನಗುತ್ತಾ ಈ ರೀತಿ ಹೇಳಿದರು.

“ಆಯ್ತು ಬಿಡಿ ಸರ್ ನಮ್ಗೆ ಎಷ್ಟು ಸಾಧ್ಯ ಆಗ್ತದೋ ಅಷ್ಟು ಜಲ್ದೀ ನಿಮ್ಮ ಕೆಲಸ ಮುಗಿಸಿಕೊಡ್ತೀವಿ” ಎಂದು ತಲೆಯ ಮೇಲೆ ಮಣಭಾರದ ಬೆಡ್ ಹೊತ್ತು ಮುಗುಳ್ನಗೆ ಬೀರುತ್ತಾ ಮೆಟ್ಟಿಲೇರಿ ಒಂದನೆಯ ಮಹಡಿಗೆ ಹೊರಟರು ಅಷ್ಟರಲ್ಲಿಯೇ ಜಭೀರವರು ಆಟೋ ಇಂದ ಇಳಿದರು ಮುನ್ನ ಮತ್ತು ಜಬೀರವರು ಹಿಂದಿಯಲ್ಲಿ ಏನೋ ಕೆಲಸದ ಬಗ್ಗೆ ಮಾತನಾಡುತ್ತಿದ್ದರು ನನಗೆ ಅರ್ಥವಾಗಲಿಲ್ಲ ಅಷ್ಟೊತ್ತಿಗಾಗಲೇ ಊಟದ ಸಮಯವಾಗಿತ್ತು ಊಟಕ್ಕೆ ಹೋಗೋಣವೆಂದು ನಿರ್ಧರಿಸಿ ಹೊರಟೆ.

” ಮುನ್ನ ಅವರೇ ನಿಮ್ದು ಊಟ ಆಯ್ತಾ ಆಗಿಲ್ಲ ಅಂದ್ರೆ ಇಲ್ಲೇ ಊಟ ಮಾಡಿ”. ಸ್ವಲ್ಪ ಹೊತ್ತು ಸುಮ್ಮನಿದ್ದು ಆಟೋದ ಮೇಲಿದ್ದ ಜಭೀರವರು ಪ್ರತ್ಯುತ್ತರಿಸಿದರು.

” ಪರವಾಗಿಲ್ಲ ಸರ್ ನಮ್ದುಕೇ ರೋಜ್ ಗೆ ಇದೀವಿ ನೀವು ಮಾಡಿ” “ಅಯ್ಯೋ ಸಾರಿ ಕೇಳಬಾರದಿತ್ತೇನು” “ಹೇ ಹಾಗೆನಿಲ್ಲ ಸರ್ ಪರವಾಗಿಲ್ಲ ತಪ್ಪೇನಿಲ್ಲ ಬಿಡಿ” ಆ ಕ್ಷಣಕ್ಕೆ ನನಗೆ ಬೇಜಾರಾದಂತೆನಿಸಿತು ಹಾಗೆಯೇ ರಂಜಾನ್ ಹಬ್ಬದ ಬಗ್ಗೆ ತಿಳಿದುಕೊಳ್ಳೋಣವೆಂದಿನಿಸಿ ಮಾತಿಗಿಳಿದೆ.

“ಬಯ್ಯ ಈ ರಂಜಾನ್ ಹಬ್ಬದ ವಿಶೇಷತೆ ಏನು”?
“ಸರ್ ಒಂದು ವರ್ಷದಲ್ಲಿ 11 ತಿಂಗಳು ನಮಗೆ ಇನ್ನೂ 1 ತಿಂಗಳು ನಮ್ಮ ದೇವರಾದ ಅಲ್ಲಾಹು ಗೆ.” “ಅಂದ್ರೆ ಯಾವ ರೀತಿ.?”

“ನಮ್ಗೆ ಈ ಒಂದು ತಿಂಗಳು ಸೂರ್ಯೋದಯ ಆದ್ಮೇಲೆ ಸೂರ್ಯ ಮುಳುಗುವರೆಗೂ ಒಂದನಿ ನೀರು ಕುಡಿದೆ,ಕೆಟ್ಟ ಮಾತನಾಡದೆ, ಕೆಟ್ಟದು ಯೋಚನೆ ಮಾಡದೆ, ಯಾವುದೇ ರೀತಿ ಊಟ ಮಾಡದೇ ಉಪವಾಸ ಇರಬೇಕು ಮಸೀದಿಲೀ ಹೇಳಿದ ಮೇಲೆ ಉಪವಾಸ ಬಿಟ್ಟಿ ನಮಾಝ್ ಮಾಡಬೇಕು.”

“ಇಷ್ಟೇನಾ ಇನ್ನೂ ಏನಾದರೂ ಇದೆಯಾ”?
“ಇನ್ನೂ ಇದೆ ಸರ್ ಈ ಹಬ್ಬ ಅಂದ್ರೆ ಯಾವುದೇ ಜಾತಿ ಧರ್ಮ ನೋಡದೆ ನಮ್ಮ ಕೈಲಾದ ಧಾನ ಧರ್ಮ ಮಾಡಬೇಕು”
“ಯಾಕೆ ಈ ಒಂದು ತಿಂಗಳು ಉಪವಾಸ ಮಾಡಬೇಕು”?

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ( ವಿ.ಐ.ಎಸ್.ಎಲ್)

“ಸರ್ ಮನುಷ್ಯ ಒಂದ್ವರ್ಷದಲ್ಲಿ 1 ತಿಂಗಳು ಉಪವಾಸ ಇದ್ದು ಹಸಿವಿನ ಬಗ್ಗೆ ಬಡತನದ ಬಗ್ಗೆ ನಮಗೆ ಅರಿವಾಗಬೇಕು ಅಂತ ನಿಮ್ಮಲ್ಲಿ ಮಾಲೆ ಹಾಕಿದವರು ಹೇಗೆ ಸ್ವಾಮಿ ಅಂತ ಮಾತಾಡಿಸ್ತಾರೋ ನಾವು ಕೂಡ ಕಟ್ಟು ನಿಟ್ಟಾಗಿ ಇರಬೇಕು”
“ಧಾನ ಅಂದ್ರೆ ಏನ್ ಮಾಡ್ತೀರಾ?” “ನಮ್ಮ ಮನೆಯಲ್ಲಿ ಇವಾಗ 50 ಸಾವಿರ ಚಿನ್ನ ಇದೆ ಅಂತಿಟ್ಕೋಳಿ ಅದರಲ್ಲಿ 2.5% ಯಾರಿಗಾದ್ರೂ ಸಹಾಯ ಮಾಡಬೇಕು ನಮ್ಗೆ ಯಾವುದೇ ಜಾತಿ ಧರ್ಮ ಅಂತಿಲ್ಲ ಸರ್ ಇತ್ತೀಚೆಗೆ ಧರ್ಮಕ್ಕೆ ರಾಜಕಾರಣ ಸೇರಿ ಹಾಳಾಗಿದೆ ಸರ್ ಅವರವರ ಧರ್ಮ ಅವರವರ ಇಷ್ಟ ಸುಮ್ಮನೆ ಜಗಳ ಮಾಡೋದ್ರಲ್ಲೇನಿದೆ ಹೇಳಿ”

“ಸರಿ ದಿನ ಪೂರ್ತಿ ಉಪವಾಸ ಇದ್ದು ಒಂದನಿ ನೀರು ಕುಡಿದೆ ಇಷ್ಟು ಕಠಿಣ ಕೆಲಸ ಮಾಡ್ತೀರಲ್ಲ ನಿಮಗೆ ಆಯಾಸ ಆಗೋದಿಲ್ವ?” “ಸರ್ ಈ ಹಬ್ಬದಲ್ಲಿ ನಾವು ಕೆಲಸ ಮಾಡೋ ಹಾಗಿಲ್ಲ ಆದರೆ ಈ ಕೋರೋನ ಇಂದಾಗಿ ಎಷ್ಟೆಲ್ಲ ಕಷ್ಟ ಇದೆ ಅಲ್ವಾ ಇಂತ ಟೈಂ ಲಿ ಕೆಲಸ ಮಾಡ್ಬೇಕು ನಮಗೆ ಯಾವುದೇ ರೀತಿಯ ಸುಸ್ತಾಗೋಲ್ಲ ಹಂಗ ನೋಡಿದ್ರೆ ಈ ರಂಜಾನ್ ದಿನಗಳಿಗಿಂತ ಬೇರೆ ಟೈಂ ಲೇ ನಮಗೆ ಆಯಾಸ ಆಗುತ್ತದೆ ಈ ರಂಜಾನ್ ಟೈಂ ಲಿ ನಮಗೆ ಎಂತದ್ದೇ ಊಟ ಇದ್ರು ಊಟ ಮಾಡಬೇಕು ಅನಿಸೊಲ್ಲ ನೀರು ಕುಡಿಯಬೇಕು ಅನಿಸೋಲ್ಲ ನಿಮ್ಮಲ್ಲೂ ಕೂಡ ಒಂದತ್ತು(ಉಪವಾಸ) ಮಾಡ್ತೀರಲ್ಲಾ ನಮ್ದು ಕೂಡ ಹಾಗೆ”

ಎಂದು ಮಾತನಾಡುತ್ತಾ ಮಾತನಾಡುತ್ತಾ ಎಲ್ಲಾ ಹಾಸಿಗೆಗಳನ್ನು ಕಾಟದ ಮೇಲಿರಿಸಿ ಒಂದು ಘಳಿಗೆ ಸುಮ್ಮನೆ ಕೂತು ರಂಜಾನ್ ಹಬ್ಬದ ಬಗ್ಗೆ ತಿಳಿಸಿದರು. ಈ ಭೂಮಿ ಮೇಲಿರುವ ಎಲ್ಲಾ ಧರ್ಮಗಳು ಕೂಡ ಹೇಳುವುದು ಧಾನ ಧರ್ಮ ಮಾಡಿ ಅಂತಲೇ ಎಲ್ಲಾ ಧರ್ಮಗಳಿಗಿಂತಲೂ ಈ ಮಾನವ ಧರ್ಮ ಮುಖ್ಯ “ಒಬ್ಬರ ನೋವಿಗೆ ಇನ್ನೊಬ್ಬರ ಹೃದಯ ಮಿಡಿಯುವುದೇ ನಿಜವಾದ ಮನುಷ್ಯ ಧರ್ಮ” ವ್ಯಕ್ತಿ ಯಾವುದೇ ಧರ್ಮವಾಗಿರಲಿ ನೋವಿಗೆ ಮಿಡಿಯುವ, ಭಾವನೆಗಳಿಗೆ ಸ್ಪಂದಿಸುವ ಧರ್ಮವೇ ನಿಜವಾದ ಮನುಕುಲದ ಧರ್ಮ ಎಂಬುದು ನನ್ನ ಒಲವ ಅಭಿಮತ.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.

54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

Published

on

ಸುದ್ದಿದಿನ,ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ ರೆಸ್ಟೋರೆಂಟ್‌ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.

ಬೆಂಗಳೂರಿನ #NativeCooks ಫುಡ್‌ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

ಹೌದು, ಹೆಬ್ಬಾಳ, ಆರ್‌ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್‌ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್‌ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್‌ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್‌ಬಾಕ್ಸ್‌ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.

ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್‌ ಕುಕ್ಸ್‌ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್‌ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್.‌ ವೆಜ್‌ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್‌ವೆಜ್‌ ಊಟವನ್ನು 135 ರೂಪಾಯಿಗೆ ಹಾಗೂ ಎಕ್‌ ಮೀಲ್‌ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.

ಸದ್ಯಕ್ಕೆ ಹೆಬ್ಬಾಳ, ಆರ್‌ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

Published

on

~ಡಾ. ಪುಷ್ಪಲತ ಸಿ ಭದ್ರಾವತಿ

ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು

ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.

ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.

ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.

ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.

ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending