ರಾಜಕೀಯ
ಆಲಮಟ್ಟಿ ಡ್ಯಾಂಗೆ ಸಿಎಂ ಬಾಗೀನ ಇಂದು

ಸುದ್ದಿದಿನ ಡೆಸ್ಕ್: ಸಿಎಂ ಹೆಚ್. ಡಿ. ಕುಮಾರಸ್ವಾಮಿ ಇಂದು ವಿಜಯಪುರಕ್ಕೆ ಭೇಟಿ ನೀಡಲಿದ್ದು, ಆಲಮಟ್ಟಿಯ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ.ಮುಖ್ಯಮಂತ್ರಿಯಾದ ಬಳಿಕ ವಿಜಯಪುರ ಜಿಲ್ಲೆಗೆ ಅವರ ಮೊದಲ ಬಾರಿಗೆ ಹೆಚ್. ಡಿ. ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
ಆಲಮಟ್ಟಿಯ ಡ್ಯಾಂ ತುಂಬಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಸಿಎಂ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಿದ್ದಾರೆ. ಸಿಎಂ ಜತಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಸಚಿವರಾದ ಶಿವಾನಂದ ಪಾಟೀಲ್, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸ್ಥಳೀಯ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ದಿನದ ಸುದ್ದಿ
ರಾಜ್ಯಪಾಲರಿಗೆ ತಪ್ಪು ಮಾಹಿತಿ; ತನ್ನ ವೈಫಲ್ಯ ಮುಚ್ಚಲು ಬಿಜೆಪಿ ಸುಳ್ಳು ಹೇಳಿಸಿದೆ : ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು : ಒಂದಷ್ಟು ಸುಳ್ಳು, ಇನ್ನೊಂದಿಷ್ಟು ತಪ್ಪು ಮಾಹಿತಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹತಾಶ ಪ್ರಯತ್ನ ನಡೆಸಿದೆ ಎಂದು ಸಿದ್ದರಾಮಯ್ಯ ಗುಡುಗಿದರು.
ವಿಧಾನ ಮಂಡಲ ಅಧಿವೇಶನ ಗುರುವಾರ ಆರಂಭವಾಗಿದ್ದು, ಅಧಿವೇಶನದಲ್ಲಿ ಮಾತನಾಡಿದ ಅವರು, ಕೊರೊನಾದಂತಹ ಮಾರಕ ರೋಗವನ್ನು ಬ್ರಹ್ಮಾಂಡ ಭ್ರಷ್ಟಚಾರವೆಸಗಲು ದುರುಪಯೋಗ ಪಡಿಸಿಕೊಂಡ ಯಡಿಯೂರಪ್ಪ ಸರ್ಕಾರ, ರೋಗ ನಿಯಂತ್ರಣದಲ್ಲಿನ ವೈಫಲ್ಯಗಳನ್ನು ಸುಳ್ಳು ಅಂಕಿ ಅಂಶಗಳ ಮೂಲಕ ಮರೆಮಾಚಲು ಪ್ರಯತ್ನಿಸಿದೆ ಎಂದರು.
ತೆರಿಗೆಯಲ್ಲಿ ಪಾಲು, 15ನೇ ಹಣಕಾಸು ಆಯೋಗದ ಅನುದಾನ ಮತ್ತು ಜಿಎಸ್ ಟಿ ಪರಿಹಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿವರವನ್ನು ರಾಜ್ಯಪಾಲರ ಭಾಷಣದಲ್ಲಿ ನೀಡಿದ್ದರೆ ಯಡಿಯೂರಪ್ಪನವರ ಸರ್ಕಾರದ ಬಣ್ಣ ಸಂಪೂರ್ಣ ಬಯಲಾಗುತ್ತಿತ್ತು ಎಂದು ಕಿಡಿಕಾರಿದರು.
ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶವೂ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಿದ್ದ ರಾಜ್ಯ ಸರ್ಕಾರ, ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.24,941 ಕೋಟಿ ಪರಿಹಾರವನ್ನಷ್ಟೇ ಕೇಳಿ ರಾಜ್ಯಕ್ಕೆ ದ್ರೋಹ ಬಗೆದಿದೆ.
ಕಳೆದ ವರ್ಷ 25,518 ಕೋಟಿ ಪರಿಹಾರ ಕೇಳಿದರೂ ಕೇಂದ್ರದಿಂದ ಕೇಳಿದರೂ ಸಿಕ್ಕಿರುವುದು ಮಾತ್ರ 1,634 ಕೋಟಿ ರೂಪಾಯಿ ಮಾತ್ರ. ರಾಜ್ಯ ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ.
ಮಳೆ ಮತ್ತು ಪ್ರವಾಹದ ನಷ್ಟಕ್ಕೆ ರಾಜ್ಯ ಸರ್ಕಾರ ಇಲ್ಲಿಯ ವರೆಗೆ ನೀಡಿರುವ ಪರಿಹಾರ ಕೇವಲ ರೂ.36.57 ಕೋಟಿ ಮಾತ್ರ. ಎರಡನೇ ಹಂತದಲ್ಲಿ ಗುರುತಿಸಲಾದ ಸಂತ್ರಸ್ತರಲ್ಲಿ ಯಾರೊಬ್ಬರಿಗೂ ಸೂಕ್ತ ಪರಿಹಾರಧನ ಈ ವರೆಗೆ ತಲುಪಿಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
https://twitter.com/siddaramaiah/status/1354723493061955592?s=19
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹರಿಹರ – ಹೊನ್ನಾಳಿ ತಾಲೂಕಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಟ್ಟಿ

ಸುದ್ದಿದಿನ,ದಾವಣಗೆರೆ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯ್ತಿಯ ಮೊದಲನೇ 30 ತಿಂಗಳ ಅವಧಿಗೆ ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಕೆಳಕಂಡ ಪಟ್ಟಿಯನ್ವಯ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಯಿತು.
ಹರಿಹರ ತಾಲ್ಲೂಕು
ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಬ’ ಸಾಮಾನ್ಯ ವರ್ಗ24(12) 4(2) 3(2) 4(2) 1(1) 12(5)
ಸಂಖ್ಯೆ | ಗ್ರಾಮ ಪಂಚಾಯಿತಿ ಹೆಸರು | ಅಧ್ಯಕ್ಷ |ಉಪಾಧ್ಯಕ್ಷ
- ಸಾರಥಿ : ಸಾಮಾನ್ಯ(ಮಹಿಳೆ), ಅನುಸೂಚಿತ ಪಂಗಡ
- ಕೊಂಡಜ್ಜಿ : ಸಾಮಾನ್ಯ ಸಾಮಾನ್ಯ(ಮಹಿಳೆ)
- ಗುತ್ತೂರು : ಅನುಸೂಚಿತ ಜಾತಿ(ಮಹಿಳೆ) ಸಾಮಾನ್ಯ
- ಹನಗವಾಡಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ರಾಜನಹಳ್ಳಿ : ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
- ನಂದಿಗಾವಿ : ಹಿಂದುಳಿದ ‘ಅ’ ವರ್ಗ, ಅನುಸೂಚಿತ ಪಂಗಡ(ಮಹಿಳೆ)
- ಬೆಳ್ಳೂಡಿ: ಸಾಮಾನ್ಯ(ಮಹಿಳೆ), ಸಾಮಾನ್ಯ
- ಬನ್ನಿಕೋಡು: ಅನುಸೂಚಿತ ಪಂಗಡ(ಮಹಿಳೆ), ಹಿಂದುಳಿದ ಅ ವರ್ಗ
- ಸಾಲಕಟ್ಟೆ: ಸಾಮಾನ್ಯ , ಸಾಮಾನ್ಯ
- ದೇವರಬೆಳೆಕೆರೆ : ಅನುಸೂಚಿತ ಜಾತಿ , ಸಾಮಾನ್ಯ(ಮಹಿಳೆ)
- ಕುಣಿಬೆಳಕೆರೆ : ಹಿಂದುಳಿದ ಅ ವರ್ಗ(ಮಹಿಳೆ), ಅನುಸೂಚಿತ ಜಾತಿ(ಮಹಿಳೆ)
- ಭಾನುವಳ್ಳಿ: ಹಿಂದುಳಿದ ಬ ವರ್ಗ(ಮಹಿಳೆ), ಸಾಮಾನ್ಯ
- ಸಿರಿಗೆರೆ : ಅನುಸೂಚಿತ ಪಂಗಡ(ಮಹಿಳೆ) , ಹಿಂದುಳಿದ ಬ ವರ್ಗ(ಮಹಿಳೆ)
- ಕಡರನಾಯ್ಕನಹಳ್ಳಿ : ಸಾಮಾನ್ಯ , ಹಿದುಳಿದ ಅ ವರ್ಗ(ಮಹಿಳೆ)
- ಉಕ್ಕಡಗಾತ್ರಿ : ಅನುಸೂಚಿತ ಜಾತಿ, ಹಿಂದುಳಿದ ಅ ವರ್ಗ(ಮಹಿಳೆ)
- ಯಲವಟ್ಟಿ : ಸಾಮಾನ್ಯ, ಅನುಸೂಚಿತ ಜಾತಿ
- ಕುಂಬಳೂರು : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
- ಜಿಗಳಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಕೊಕ್ಕನೂರು : ಸಾಮಾನ್ಯ , ಅನುಸೂಚಿತ ಜಾತಿ(ಮಹಿಳೆ)
- ವಾಸನ : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
- ಹರಳಹಳ್ಳಿ : ಹಿಂದುಳಿದ ಅ ವರ್ಗ(ಮಹಿಳೆ), ಸಾಮಾನ್ಯ(ಮಹಿಳೆ)
- ಹಾಲಿವಾಣ : ಹಿಂದುಳಿದ ‘ಅ ವರ್ಗ, ಅನುಸೂಚಿತ ಪಂಗಡ(ಮಹಿಳೆ)
- ಎಳೆಹೊಳೆ : ಸಾಮಾನ್ಯ ,ಸಾಮಾನ್ಯ(ಮಹಿಳೆ)
- ಕೆ.ಬೇವಿನಹಳ್ಳಿ : ಸಾಮಾನ್ಯ, ಹಿಂದುಳಿದ ಅ ವರ್ಗ
ಹೊನ್ನಾಳಿ ತಾಲ್ಲೂಕು
ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಬ’ ಸಾಮಾನ್ಯ ವರ್ಗ29(15) 5(3) 2(1) 6(3) 1(1) 15(7)
ಸಂಖ್ಯೆ | ಗ್ರಾಮ ಪಂಚಾಯಿತಿ ಹೆಸರು | ಅಧ್ಯಕ್ಷ | ಉಪಾಧ್ಯಕ್ಷ
- ಕತ್ತಿಗೆ : ಸಾಮಾನ್ಯ, ಅನುಸೂಚಿ ಪಂಗಡ(ಮಹಿಳೆ)
- ಹತ್ತೂರು : ಸಾಮಾನ್ಯ, ಅನುಸೂಚಿ ಪಂಗಡ
- ಹೆಚ್ ಗೋಪಗೊಂಡನಹಳ್ಳಿ: ಹಿಂದುಳಿದ ‘ಅ’ ವರ್ಗ, ಸಾಮಾನ್ಯ
- ಹನುಮಸಾಗರ: ಅನುಸೂಚಿ ಪಂಗಡ, ಸಾಮಾನ್ಯ(ಮಹಿಳೆ)
- ಸೊರಟೂರು : ಹಿಂದುಳಿದ ‘ಅ’ ವರ್ಗ (ಮಹಿಳೆ), ಹಿಂದುಳಿದ ‘ಬ’ ವರ್ಗ(ಮಹಿಳೆ)
- ಹೆಚ್ ಕಡದಕಟ್ಟೆ : ಅನುಸೂಚಿತ ಜಾತಿ , ಸಾಮಾನ್ಯ(ಮಹಿಳೆ)
- ಅರಬಗಟ್ಟ ಸಾಮಾನ್ಯ(ಮಹಿಳೆ) ಹಿಂದುಳಿದ ‘ಅ’ ವರ್ಗ (ಮಹಿಳೆ)
- ಹರಳಹಳ್ಳಿ : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
- ಹಿರೇಗೋಣಿಗೆರೆ : ಸಾಮಾನ್ಯ(ಮಹಿಳೆ) , ಸಾಮಾನ್ಯ
- ಬೇಲಿಮಲ್ಲೂರು : ಹಿಂದುಳಿದ ‘ಅ’ ವರ್ಗ (ಮಹಿಳೆ) ಅನುಸೂಚಿತ ಜಾತಿ
- ಅರಕೆರೆ : ಸಾಮಾನ್ಯ ಹಿಂದುಳಿದ, ‘ಅ’ ವರ್ಗ (ಮಹಿಳೆ)
- ಮಾಸಡಿ : ಸಾಮಾನ್ಯ ಹಿಂದುಳಿದ, ‘ಅ’ ವರ್ಗ (ಮಹಿಳೆ)
- ಕಮ್ಮಾರಗಟ್ಟೆ : ಸಾಮಾನ್ಯ, ಸಾಮಾನ್ಯ(ಮಹಿಳೆ)
- ತಿಮ್ಲಾಪುರ : ಸಾಮಾನ್ಯ(ಮಹಿಳೆ) , ಅನುಸೂಚಿ ಜಾತಿ(ಮಹಿಳೆ)
- ಕುಂಬಳೂರು : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
- ಕುಂದೂರು ಹಿಂದುಳಿದ ‘ಅ’ ವರ್ಗ ಸಾಮಾನ್ಯ(ಮಹಿಳೆ)
- ಯಕ್ಕನಹಳ್ಳಿ , ಸಾಮಾನ್ಯ, ಸಾಮಾನ್ಯ(ಮಹಿಳೆ)
- ಕೂಲಂಬಿ : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
- ಮುಕ್ತೇನಹಳ್ಳಿ : ಹಿಂದುಳಿದ ‘ಅ’ ವರ್ಗ (ಮಹಿಳೆ), ಸಾಮಾನ್ಯ
- ಬನ್ನಿಕೋಡು : ಸಾಮಾನ್ಯ(ಮಹಿಳೆ), ಹಿಂದುಳಿದ ‘ಅ’ ವರ್ಗ
- ಬೆನಕನಹಳ್ಳಿ : ಅನುಸೂಚಿತ ಪಂಗಡ(ಮಹಿಳೆ) , ಸಾಮಾನ್ಯ
- ಬೀರಗೊಂಡನಹಳ್ಳಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ರಾಂಪುರ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಸಾಸ್ವೇಹಳ್ಳಿ : ಹಿಂದುಳಿದ ‘ಬ’ ವರ್ಗ (ಮಹಿಳೆ), ಅನುಸೂಚಿತ ಜಾತಿ(ಮಹಿಳೆ)
- ಕುಳಗಟ್ಟೆ: ಹಿಂದುಳಿದ ‘ಅ’ ವರ್ಗ , ಸಾಮಾನ್ಯ(ಮಹಿಳೆ)
- ಕ್ಯಾಸನಕೆರೆ : ಸಾಮಾನ್ಯ, ಸಾಮಾನ್ಯ((ಮಹಿಳೆ)
- ಹೊಸಹಳ್ಳಿ : ಅನುಸೂಚಿತ ಜಾತಿ(ಮಹಿಳೆ), ಹಿಂದುಳಿದ ‘ಅ’ ವರ್ಗ
- ಲಿಂಗಾಪುರ : ಅನುಸೂಚಿತ ಜಾತಿ, ಸಾಮಾನ್ಯ
- ಹುಣಸಘಟ್ಟೆ : ಅನುಸೂಚಿತ ಜಾತಿ(ಮಹಿಳೆ), ಹಿಂದುಳಿದ ‘ಅ’ ವರ್ಗ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ

ಸುದ್ದಿದಿನ,ದಾವಣಗೆರೆ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ರ ಚುನಾವಣೆಯ ನಂತರ ಮೊದಲನೇ 30 ತಿಂಗಳ ಅವಧಿಗೆ ಜಿಲ್ಲೆಯ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳ ಗ್ರಾ.ಪಂಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯು ಬುಧವಾರ ಜಿಲ್ಲಾಡಳಿತ ಭವನದ ತುಂಗ ಭದ್ರ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚುನಾವಣಾ ತಹಶೀಲ್ದಾರ್ ಪ್ರಸಾದ್ ಇತರೆ ಅಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಸಿನಿಮಾ ಪಯಣಕ್ಕೆ ರೀ ಎಂಟ್ರಿ ಕೊಟ್ಟ ಮಂದಹಾಸ ಬೆಡಗಿ : ಬಿಂದುಶ್ರೀ
-
ದಿನದ ಸುದ್ದಿ2 days ago
ದಾವಣಗೆರೆ | ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ, 26 ಸಾವಿರ ದಂಡ
-
ಬಹಿರಂಗ2 days ago
ಸಂವಿಧಾನ ದಿನಾಚರಣೆ ಹೇಗೆ ಗಣರಾಜ್ಯೋತ್ಸವವಾಯಿತು..?
-
ಬಹಿರಂಗ4 days ago
ನುಡಿದ ಸತ್ಯವನ್ನು ಬಂಧಿಸಲಾಗದು
-
ದಿನದ ಸುದ್ದಿ3 days ago
ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆತ್ಮಹತ್ಯೆ ; ಕಾರಣ ಏನು ಗೊತ್ತಾ..!?
-
ಅಂತರಂಗ2 days ago
ಭಾರತದ ಸಂವಿಧಾನ : ಪ್ರಜೆಗಳ ಓದು
-
ದಿನದ ಸುದ್ದಿ2 days ago
ರೈತ ಹೋರಾಟವೆಂಬ ಸಾಗರ ; ಇದು ಬರೀ ಪಂಜಾಬಿನದ್ದಲ್ಲ, ಇಡೀ ದೇಶದ ಹೋರಾಟ
-
ದಿನದ ಸುದ್ದಿ2 days ago
ಹೊಲಿಗೆ ಯಂತ್ರ ಸೌಲಭ್ಯ ನೀಡುವ ಅರ್ಜಿ ಅವಧಿ ವಿಸ್ತರಣೆ