ಲೈಫ್ ಸ್ಟೈಲ್
‘ಹಾವಿನ ದ್ವೇಷ ಹನ್ನೆರಡು ವರ್ಷ’ ಎಂಬ ನುಡಿ ಸುಳ್ಳು | ಹಾವಿನ ಬಗೆಗೆ ನೀವಿಷ್ಟು ತಿಳಿಯಲೇ ಬೇಕು..!
ವರದಿಯೊಂದರ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷಕ್ಕೆ ಸರಿ ಸುಮಾರು 2,50,000 ಜನಗಳು ಹಾವುಗಳಿಂದ ಕಡಿತಕ್ಕೊಳಗಾಗುತ್ತಾರೆ. ಇದರಲ್ಲಿ 50,000 ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಇದರಲ್ಲಿ 725 ಜನ ಹಾವು ಕಚ್ಚಿದೆ ಎಂಬ ಭಯಕ್ಕೆ ಸಾಯುತ್ತಾರೆ.ಮೊದಲು ಸ್ವಲ್ಪ ಹಾವಿನ ಬಗ್ಗೆ ತಿಳಿಯೋಣ.
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ : ಪ್ರಾಣಿಗಳು
ವಿಭಾಗ : ಕಾರ್ಡೇಟ
ಉಪವಿಭಾಗ: ಕಶೇರುಕ
ವರ್ಗ : ಸರೀಸೃಪಗಳು
ಗಣ : ಸ್ಕ್ವಾಮಾಟ
ಹಾವು ಅಥವಾ ಉರಗ. ನೆಲದ ಮೇಲೆ ಹರಿದಾಡುತ್ತ, ಹೊರಳುತ್ತ, ಅಂಕು ಡೊಂಕಾಗಿ ಚಲಿಸುವ ಈ ಉರಗಕ್ಕೆ ಎದೆಮೂಳೆಗಳಿಲ್ಲ. ಬೆನ್ನು ಮೂಳೆ ಹಾಗು ಪಕ್ಕೆಲುಬುಗಳಿವೆ. ಎದೆ ಮೂಳೆ ಇಲ್ಲದ ಕಾರಣ ಪಕ್ಕೆಲುಬು ಸಡಿಲವಾಗಿದೆ. ತಲೆ ಬುರುಡೆ ಮೂಳೆಗಳು ಅಳ್ಳಕವಾಗಿದೆ. ಹಾಗಾಗಿ ಅವು ತಲೆಯನ್ನು ಸುಲಭವಾಗಿ ಆಡಿಸಬಹುದು. ಹಾವಿನ ಮಿದುಳಿನ ರಚನೆ ಸರಳವಾಗಿದ್ದು ಇನ್ನಿತರ ಸರೀಸೃಪಗಳ ಮಿದುಳನ್ನೆ ಹೋಲುತ್ತದೆ. ಹಾವಿಗೆ ವಿವೇಚನೆಯಾಗಲೀ ಸ್ಮರಣಶಕ್ತಿಯಾಗಲೀ ಇಲ್ಲ. ‘ಹಾವಿನ ದ್ವೇಷ ಹನ್ನೆರಡು ವರ್ಷ’ ಎಂಬ ನುಡಿ ಸತ್ಯವಲ್ಲ. ಹಾವು ಘಟನೆಗಳನ್ನು ನೆನಪಿನಲ್ಲಿಟ್ಟು ಕೊಳ್ಳಲಾಗುವುದಿಲ್ಲ. ಹಾವುಗಳ ಆಯಸ್ಸು 20 ರಿಂದ 30 ವರ್ಷಗಳೆಂದು ಅಂದಾಜು.
ಹಾವುಗಳ ಬಣ್ಣ ವರ್ಣರಂಜಿತ ಮತ್ತು ವೈವಿಧ್ಯಮಯ. ಮೇಲ್ಭಾಗದಲ್ಲಿ ಕಪ್ಪು,ಕಂದು,ಹಳದಿ ಅಥವಾ ಗೋಧಿ ಬಣ್ಣ, ಕೆಳಭಾಗದಲ್ಲಿ ಬಿಳಿ ಇಲ್ಲವೆ ತಿಳಿಹಳದಿ ಬಣ್ಣ. ಕೆಲ ಹಾವುಗಳು ಬಣ್ಣ ಅವು ವಾಸಿಸುವ ಪರಿಸರದ ಬಣ್ಣವನ್ನೇ ಹೋಲುತ್ತದೆ.
ಹಾವಿನ ಹುಟ್ಟು
ಹಾವುಗಳ ಪಳೆಯುಳಿಕೆಗಳು ದೊರೆಯುವುದು ಅಪರೂಪ. ದೊರತ ಪಳೆಯುಳಿಕೆಗಳಲ್ಲಿ ಅತ್ಯಂತ ಹಳೆಯದು ಎಂದರೆ ಸುಮಾರು 112 ರಿಂದ 94 ಮಿಲಿಯನ್ ವರ್ಷಗಳಷ್ಟು ಪ್ರಾಚೀನವಾದುದು. ಶರೀರಶಾಸ್ತ್ರದ ಅಧ್ಯಯನದಿಂದ ಹಾವುಗಳು ಹಲ್ಲಿಗಳ ಜಾತಿಯಿಂದ ಉಗಮವಾಗಿರುತ್ತವೆ ಎಂದು ತಿಳಿದು ಬಂದಿದೆ.
ಉದ್ದ ಮತ್ತು ತೂಕ
ಸುಮಾರು 20 ಕುಟುಂಬಕ್ಕೆ ಸೇರಿದ 3600ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಅಂಟಾರ್ಟಿಕವನ್ನು ಹೊರತುಪಡಿಸಿ ಉಳಿದ ಎಲ್ಲಾ ಖಂಡಗಳಲ್ಲಿಯೂ ಸಮುದ್ರ ಹಾಗೂ ಸುಮಾರು 16000ಅಡಿ ಎತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕೂಡಾ ಹಾವುಗಳು ಕಾಣಸಿಗುತ್ತವೆ. ಹಾವಿನ ಶರೀರ ಉರುಳೆ ಆಕಾರದಲ್ಲಿದೆ. ಉದ್ದ 12ಸೆಂಮೀ-10ಮೀ ವರೆಗೂ ಇರುವುದು. ಅದರೆ ಪಳೆಯುಳಿಕೆ ಸಿಕ್ಕಿರುವ ಪ್ರಕಾರ species Titanoboa cerrejonenis ಎಂಬುದು 12.8ಮೀ [42feet] ಉದ್ದ ಇತ್ತು.
ಶರೀರ ರಚನೆ ಮತ್ತು ಪೊರೆ ಕಳುಚುವಿಕೆ
ಹಾವಿನ ಶರೀರದ ಹೊರಭಾಗದಲ್ಲಿ ಕೈ ಕಾಲುಗಳು ಇಲ್ಲದಿರುವ ಕಾರಣ ಅವು ತಮ್ಮ ಕೆಳಭಾಗದಿಂದ ತೆವಳುತ್ತ ಮುಂದೆ ಸಾಗುತ್ತದೆ. ಕೈ ಕಾಲುಗಳಿಲ್ಲದಿದ್ದರೂ ಬೆನ್ನುಮೂಳೆ, ಪಕ್ಕೆಲುಬುಗಳು ವಿಭಿನ್ನವಾಗಿ ಮಾರ್ಪಾಡಾಗಿರುವುದರಿಂದ, ಶರೀರದ ಮುಂದಿನ ಅರ್ಧಭಾಗವನ್ನು ನೆಲದಿಂದ ಮೇಲಕ್ಕೆ ಎತ್ತಬಲ್ಲವು.ಬೆಳೆವಣಿಗೆಯಿಲ್ಲದ ಹೊರಚರ್ಮದ ಭಾಗವನ್ನು ಆಗಾಗ್ಗೆ ಹಾವು ಕಳಚಿ ಹೊಸ ಚರ್ಮವನ್ನು ಪಡೆಯುತ್ತದೆ. ಇದನ್ನು ಪೊರೆ ಕಳಚುವುದು ಎನ್ನುತ್ತಾರೆ. ಹಾವು ಬೆಳೆಯುವ ವರ್ಷಗಳಲ್ಲಿ ಹೆಚ್ಚು ಬಾರಿಯೂ, ವೃದ್ದ್ಯಾಪಕ್ಕೆ ಕಾಲಿರುಸುತ್ತಿದ್ದಂತೆ ಕಡಿಮೆ ಬಾರಿ ಪೊರೆ ಕಳಚುತ್ತದೆ. ಪೊರೆ ಕಳಚಿದ ಬಳಿಕ ಹೊಸ ಚರ್ಮ ಹಳೆ ಚರ್ಮಕ್ಕಿಂತ ಸ್ವಲ್ಪ ವಿಸ್ತಾರವಿರುವುದರಿಂದ ಮತ್ತೆ ಶರೀರದ ಒಳಭಾಗದ ಅಂಗಗಳು ಬೆಳೆಯಲು ಅವಕಾಶವಾಗುತ್ತದೆ.
ದೃಷ್ಟಿ ಮತ್ತು ಶಬ್ಧ ಗ್ರಹಿಸುವಿಕೆ
ಹಾವಿನ ರೆಪ್ಪೆಗಳು ಒಂದಕ್ಕೊಂದು ಕೂಡಿಕೊಂಡಿರುತ್ತವೆ. ಅವು ಅಲುಗಾಡುವುದಿಲ್ಲ. ಕಣ್ಣಿನ ಹೊರಭಾಗದಲ್ಲಿ ಪಾರದರ್ಶಕ ತೊಪ್ಪಿಯಂತಿರುವ ವಸ್ತು ಆವರಿಸಿರುತ್ತದೆ. ಅದರಿಂದ ಅವು ಯಾವಾಗಲೂ ಕಣ್ಣು ತೆರೆದಿರುವಂತೆ ಕಾಣಿಸುತ್ತದೆ. ಹೀಗಾಗಿ ಹಾವು ನಿದ್ರಿಸುತ್ತಿದೆಯೋ ಅಥವಾ ಎಚ್ಚರದಿಂದ ಇದೆಯೋ ಎಂದು ತಿಳಿಯುವುದಿಲ್ಲ. ಹಾವುಗಳ ದೃಷ್ಟಿ ಮಂದ. ಮುಂದೆ ಇರುವ ವಸ್ತುಗಳನ್ನು ಸರಿಯಾಗಿ ಗುರುತಿಸಲಾರವು ಮತ್ತು ಬಣ್ಣಗಳು ಕಾಣುವುದಿಲ್ಲ.ಹಾವುಗಳಿಗೆ ಹೊರ ಕಿವಿಗಳಿಲ್ಲ, ಕಿವಿ ತಮಟೆಯೂ ಇಲ್ಲ. ಅವುಗಳಿಗೆ ಕೇವಲ ಒಳಕಿವಿ ಮಾತ್ರ ಇರುತ್ತದೆ. ಆದ್ದರಿಂದ ಹಾವುಗಳಿಗೆ ಗಾಳಿಯ ಮೂಲಕ ಪ್ರಸಾರವಾಗುವ ಯಾವ ಶಬ್ದವೂ ಕೇಳಿಸಲಾರದು. ಅವಕ್ಕೆ ಭೂಮಿಯ ಮೇಲುಂಟಾಗುವ ಕಂಪನಗಳನ್ನು ಅವು ಗ್ರಹಿಸಬಲ್ಲವು.
ನಾಲಿಗೆ ಮತ್ತು ಆಹಾರನ್ವೇಷಣೆ
ಹಾವಿನ ನಾಲಿಗೆ ಉದ್ದವಿದ್ದು ಮುಂಭಾಗದಲ್ಲಿ ಸೀಳುಗಳಿವೆ. ಮೇಲಿನ ತುಟಿ ಪುಟ್ಟ ಕಮಾನಿನಾಕಾರದಲ್ಲಿದ್ದು ಬಾಯಿ ಮುಚ್ಚಿಕೊಂಡಾಗ ಚಿಕ್ಕ ರಂಧ್ರವೇರ್ಪಡುತ್ತದೆ. ಈ ರಂಧ್ರದ ಮೂಲಕ ಹಾವು ಆಗಾಗ ನಾಲಿಗೆಯನ್ನು ಹೊರಚಾಚುತ್ತಿರುತ್ತದೆ. ಎರಡು ಸೀಳುಗಳು ಪ್ರತ್ಯೇಕವಾಗಿರುವಂತೆ ಕಾಣುವುದರಿಂದ ಹಾವಿಗೆ ಎರಡು ನಾಲಿಗೆಗಳಿವೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ ಈ ನಾಲಿಗೆ ವಾಸನೆಯನ್ನು ಕಂಡುಹಿಡಿಯಲು ಬಳುಸುತ್ತವೆ. ಮೇಲ್ದವಡೆಯಲ್ಲಿ ಎರಡು ಪುಟ್ಟ ಕುಳಿಗಳಿವೆ. ಜಕೋಬ್ಸನ್ ಅಂಗ ಎಂದು ಅದರ ಹೆಸರು. ನಾಲಗೆಯು ಈ ಅಂಗಕ್ಕೆ ಗಾಳಿಯಲ್ಲಿರುವ ರಾಸಾಯಾನಿಕಗಳನ್ನು ತಲಪಿಸುತ್ತದೆ. ಆಗ ಇದು ವಾಸನೆಯನ್ನು ಗ್ರಹಿಸುತ್ತದೆ. ವಾತಾವರಣದಲ್ಲಿನ ಅನೇಕ ಏರಿಳಿತವನ್ನು ಕೂಡ ನಾಲಿಗೆ ಗ್ರಹಿಸಬಲ್ಲದು. ಕಾಳಿಂಗ ಸರ್ಪ 100ಮೀಟರ್ ದೂರದಲ್ಲಿ ಚಲಿಸುತ್ತಿರುವ ತನ್ನ ಬೇಟೆಯನ್ನು ಪತ್ತೆ ಹಚ್ಚುತ್ತದೆ. ಇಲಿ, ಹೆಗ್ಗಣಗಳಂಥ ಪುಟ್ಟ ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು, ಕಪ್ಪೆ, ಮೀನುಗಳು, ಕೀಟಗಳು ಇತ್ಯಾದಿ ಹಾವಿನ ಆಹಾರ. ಕೆಲವು ಹಾವುಗಳು ವಿವಿಧ ಪ್ರಾಣಿ, ಪಕ್ಷಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಸಸ್ಯಹಾರೀ ಹಾವು ಇಲ್ಲವೇ ಇಲ್ಲ.
ವಿಷಗ್ರಂಥಿ ಮತ್ತು ಹಲ್ಲುಗಳು
ವಿಷದ ಹಾವುಗಳ ತಲೆ ಎರಡೂ ಪಕ್ಕದಲ್ಲಿ ಒಂದೊಂದರಂತೆ ವಿಷ ಸ್ರವಿಸುವ ಒಂದು ಜೊತೆ ಗ್ರಂಥಿ ಇದೆ. ಹಾವಿನ ವಿಷದ ಗ್ರಂಥಿಗಳಂದರೆ ಮಾರ್ಪಾಡಾಗಿರುವ ಎಂಜಲು ಗ್ರಂಥಿಗಳು. ಕಣ್ಣಿನ ಕೆಳಭಾಗ ಹಾಗೂ ಮೇಲ್ದವಡೆಗಳ ನಡುಭಾಗದಲ್ಲಿ ಇವುಗಳ ನೆಲೆ. ಗ್ರಂಥಿಯ ಮುಂಭಾಗದಲ್ಲಿ ನಾಳವಿದ್ದು ಬಾಯಿಯ ಭಾಗದಲ್ಲಿ ವಿಷದ ಹಲ್ಲಿಗೆ ಜೋಡಿಕೊಂಡಿರುತ್ತದೆ. ವಿಷದ ಹಲ್ಲುಗಳಿಗಿಂತ ದೊಡ್ಡವು ಮತ್ತು ಚೂಪು. ಕೆಲವು ಹಾವುಗಳಲ್ಲಿ ವಿಷದ ಹಲ್ಲುಗಳು ಕೊಳವೆಯಂತಿರಬಹುದು, ಇನ್ನು ಕೆಲವು ಹಾವುಗಳಲ್ಲಿ ಒಂದು ಕಡೆ ತೆರೆದಿದ್ದು ಕಮಾನಿನಂತಿರಬಹುದು. ಆದ್ದರಿಂದ ಕೆಲವು ಪರಿಣಿತರು ಕಡಿತದ ಗಾಯ ನೋಡಿಯೇ ಕಚ್ಚಿದ ಹಾವಿನ ಪ್ರಭೇದ ಊಹಿಸಬಲ್ಲರು. ವಿಷರಹಿತ ಹಾವುಗಳಲ್ಲಿ ವಿಷಗ್ರಂಥಿಗಳ ಬೆಳೆವಣಿಗೆ ಅಪೂರ್ಣ ಅಥವಾ ಬೆಳೆವಣಿಗೆಯೇ ಇರುವುದಿಲ್ಲ. ಇನ್ನು ಕೆಲವು ಹಾವುಗಳಲ್ಲಿ ವಿಷದ ಹಲ್ಲುಗಳು ಮೇಲ್ದವಡೆಯ ಮುಂಭಾಗದಲ್ಲಿಯೇ ಇರುತ್ತದೆ. ವಿಷಗ್ರಂಥಿಯ ನಳ ಈ ಹಲ್ಲಿನ ಕೆಳಭಾಗದಲ್ಲಿ ಜೋಡಿಕೊಂಡಿರುತ್ತದೆ. ಈ ಹಲ್ಲುಗಳನ್ನು ಕಿತ್ತರೆ, ಕೆಲವೇ ದಿನಗಳಲ್ಲಿ ಅವುಗಳ ಪಕ್ಕದ ಹಲ್ಲುಗಳೂ ವಿಷದ ಹಲ್ಲುಗಳಾಗಿ ಮಾರ್ಪಡುತ್ತವೆ.
ಭಾರತದಲ್ಲಿ ಎಷ್ಟು ವಿಷಪೂರಿತ ಹಾವುಗಳು..?
ನಮ್ಮ ದೇಶದಲ್ಲಿ 4 ಜಾತಿಯ ಹಾವುಗಳು ಮಾತ್ರ ವಿಷಪೂರಿತ. ಈ ಜಾತಿಯ ಹಾವು ಕಚ್ಚಿದರೆ ಮಾತ್ರ ಮನುಷ್ಯ ಸಾಯುತ್ತಾನೆ ಹೊರೆತು[ಅಗತ್ಯ ಚಿಕಿತ್ಸೆ ಕೊಡಿಸದಿದ್ದಾಗ] ಬೇರೆ ಎಲ್ಲಾ ಹಾವುಗಳು ವಿಷರಹಿತ.
ಈ 4 ಜಾತಿಯ ಹಾವುಗಳು ಯಾವುವುವೆಂದರೆ
1. King Cobra ಅಥವಾ ಕಾಳಿಂಗ
2. Cobra ಅಥವಾ ನಾಗರ ಹಾವು
3. Viper ಅಥವಾ ಕನ್ನಡಿ ಹಾವು ಅಥವಾ ಕೊಳಕು ಮಂಡಲ
4. Common krait ಅಥವಾ ಕಡಂಬಳ ಅಥವಾ ಕಟ್ಟು ಹಾವು
ಈ ವಿಷಪೂರಿತ ಹಾವುಗಳು ಕೂಡ ಯಾರಿಗೂ ಸುಮ್ಮನೆ ಸುಮ್ಮನೆ ಕಚ್ಚುವುದಿಲ್ಲ. ನಾವು ಅಚಾನಕ್ಕಾಗಿ ಅವುಗಳನ್ನು ತುಳಿದಾಗ ಅಥವಾ ಬೇಕೆಂದೇ ಹಿಂಸೆ ಮಾಡಿದಾಗ ಮಾತ್ರ ಅವುಗಳ ಪ್ರಾಣ ಉಳಿಸಿಕೊಳ್ಳಲು ಅವು ಕಚ್ಚುತ್ತವೆ. ಪ್ರಕೃತಿಯಲ್ಲಿ ವಿಷರಹಿತ ಹಾವುಗಳಿಗೂ, ವಿಷಪೂರಿತ ಹಾವುಗಳಿಗೂ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಅವುಗಳದ್ದೇ ಆದ ಒಂದು ರಕ್ಷಣಾ ತಂತ್ರವು ಇರುತ್ತದೆ. ಯಾವಾಗ ತಮ್ಮ ಪ್ರಾಣಕ್ಕೆ ಸಂಚಕಾರ ಬಂದಿದೆ ಎಂದು ಅನ್ನಿಸಿದಾಗ ಮಾತ್ರ ಅವು ರಕ್ಷಣ ತಂತ್ರವನ್ನು ಬಳಸಿಕೊಳ್ಳುತ್ತವೆ.
ಹಾವುಗಳಿಂದ ಮನುಷ್ಯನಿಗೆ ಆಗುವ ಉಪಯೋಗಗಳು
ಹಾವುಗಳು ವಿಷಯುಕ್ತ ಪ್ರಾಣಿಗಳೆನೋ ನಿಜ ಜೊತೆಗೆ ಇದು ಮಾನವನಿಗೆ ಮಾತ್ರವಲ್ಲ ಬೇರೆ ಪ್ರಾಣಿಗಳಿಗೂ ಜೀವಹಾನಿಯಾಗುತ್ತದೆ. ಆದರೆ ಇದಿಷ್ಟೇ ಕಾರಣದಿಂದ ಹಾವುಗಳೆಲ್ಲವೂ ಹಾನಿಕಾರಕ ಎಂದು ಪರಿಗಣಿಸಬಾರದು. ವಿಷರಹಿತ ಹಾಗೂ ವಿಷಯುಕ್ತ ಹಾವು ಎಲ್ಲವುಗಳಿಂದಲೂ ನಮಗೆ ಸಾಕಷ್ಟು ಉಪಯೋಗಗಳಿವೆ.
1. ಪರಿಸರದ ಸಮತೋಲನ ಸಾಧಿಸುವಲ್ಲಿ ಹಾವುಗಳ ಪಾತ್ರ ತುಂಬಾನೇ ಮುಖ್ಯ. ಇಲಿ, ಹೆಗ್ಗಣ, ಕೀಟ, ಪಕ್ಷಿ ಮುಂತಾದವನ್ನು ಹಾವುಗಳು ಆಹಾರವಾಗಿ ಸೇವಿಸುವುದರಿಂದ ಇದು ನಮ್ಮ ದವಸ ಧಾನ್ಯಗಳಿಗೆ ಉಂಟಗುವ ಹಾನಿಯನ್ನು ಕಡಿಮೆಗೊಳಿಸುತ್ತವೆ ಅಲ್ಲದೆ, ಈ ಹಾವುಗಳೇ ಇತರೆ ಕೆಲವು ಜೀವಿಗಳಿಗೆ [ಉದಾ: ಕೆಲವು ಪಕ್ಷಿಗಳಿಗೆ] ಆಹಾರವಾಗುವುದರಿಂದ ನಿಸರ್ಗದ ಆಹಾರ ಸರಪಳಿಯಲ್ಲಿ ಒಂದು ಕೊಂಡಿಯೂ ಆಗಿದೆ.
2. ಹಾವಿನ ವಿಷದಲ್ಲಿ ಫಾಸ್ಫೊಡೈಯೆಸ್ಟಿರೇಸ್ ಎಂಬ ಕಿಣ್ವವಿದೆ. ಇದನ್ನು ಕೆಲವು ಸರಳ ರಾಸಾಯನಿಕ ಕ್ರಿಯೆಗಳಿಂದ ಬೇರ್ಪಡಿಸಬಹುದು. ಈ ಕಿಣ್ವ ಜೀವಿಗಳ ಅನುವಂಶೀಯತೆಗೆ ಕಾರಣವಾಗುವ ಜೈವಿಕ ವಸ್ತು ಡಿಎನ್‍ಎಯ ತಂತುಗಳನ್ನು ಬೇರ್ಪಡಿಸುತ್ತದೆ. ಇದನ್ನು ಬಳಸಿ ಡಿಎನ್‍ಎಯ ರಚನೆ ಹಾಗೂ ಕಾರ್ಯವಿಧಾನಗಳನ್ನು ಅರಿಯಲು ಸಾಧ್ಯವಾಗಿದೆ.
3. ನರಕೋಶಗಳನ್ನು ನಿಷ್ಕ್ರಿಯಗೊಳಿಸುವ ವಿಷವನ್ನು ಬಳಸಿ ಪಾರ್ಶ್ವವಾಯು ಅಥವಾ ನರಮಂಡಲ ಸಂಬಂಧೀ ರೋಗಗಳಿಗೆ ಔಷಧಿ ತಯಾರಿಸಲಾಗುತ್ತದೆ. ವೈಜ್ಞಾನಿಕವಾಗಿ ಈ ಪ್ರಯತ್ನ ಇನ್ನೂ ಸಫಲವಾಗಿಲ್ಲದಿದ್ದರೂ ಕೆಲವೂ ಸ್ಥಳೀಯ ವೈದ್ಯ ಪದ್ಧತಿಯಲ್ಲಿ ಈ ತಂತ್ರ ಬಳಕೆಯಲ್ಲಿದೆ.
4. ವಿಷದ ಘಟಕವಾದ ಆ್ಯಂಕ್ರೊಡ್ ಎಂಬ ವಸ್ತುವನ್ನು ಬೇರ್ಪಡಿಸಿ ಅದನ್ನು ನರರೋಗ ಚಿಕಿತ್ಸೆಗೆ ಬಳಸುವ ಪ್ರಯತ್ನವೂ ನಡೆಯುತ್ತಿದೆ. ಕ್ರೀಡಾಪಟುಗಳ ಕಾಲಿನ ಅಥವಾ ಶರೀರದ ಕೆಲವು ಮಾಂಸಖಂಡಗಳು ಆಟದ ಒತ್ತಡದಿಂದ ಕ್ರೀಯಾಹೀನವಾಗುತ್ತವೆ. ಆಫ್ರಿಕ ದೇಶದ ಕೆಲ ಹಾವುಗಳ ವಿಷದಿಂದ ಇಂಥ ರೋಗಗಳಿಗೆ ಚಿಕಿತ್ಸೆ ನಡೆಸಲಾಗುತ್ತದೆ.
5. ಹಾವಿನ ಚರ್ಮದಿಂದ ನಾವು ಧರಿಸುವ ಸೊಂಟದ ಪಟ್ಟಿ [ಬೆಲ್ಟ್] ಹಾಗೂ ಸ್ತ್ರಿಯರು ಬಳಸುವ ಚೀಲ [ವ್ಯಾನಿಟಿ ಬ್ಯಾಗ್] ಮುಂತಾದವನ್ನು ತಯಾರಿಸುತ್ತಾರೆ.
6. ಆಫ್ರಿಕ, ಚೀನಾದಂಥ ರಾಷ್ಟ್ರಗಳಲ್ಲಿ ಕೆಲವು ಪ್ರಭೇದದ ಹಾವುಗಳ ಮಾಂಸವನ್ನು ತಿನ್ನುತ್ತಾರೆ.
7. ಕಡಲ ಹಾವಿನ ವಿಷದ ನಂಜು ನರಗಳ ಮೇಲೆ ಪರಿಣಾಮಕಾರಿಯಾಗಿದೆ. ಮುಂಬೈಯ ಹಾಫ್ಕಿನ್ ಇನ್ಸ್ಟಿಟ್ಯೂಟಿನಲ್ಲಿ ಇದರ ನಂಜನ್ನು ಶಮನಗೊಳಿಸುವ ಆಂಟಿವೆನೊಮ್ ಅಥವಾ ಪ್ರತಿವಿಷವನ್ನು ಅಭಿವೃಧ್ಧಿಪಡಿಸಲಾಗುತ್ತಿದೆ.
ಹಾವುಗಳನ್ನು ರಕ್ಷಿಸಿ
ನಾವು ನಮ್ಮ ಜಾಗ್ರತೆಯಲ್ಲಿದ್ದರೆ ಹಾವುಗಳಿಂದ ಕಡಿತಕ್ಕೊಳಗಾಗುವ ಸಂದರ್ಭವೇ ಬರುವುದಿಲ್ಲ. ಅಕಸ್ಮಾತ್ ಹಾವುಗಳು ದಾರಿ ತಪ್ಪಿ ನಿಮ್ಮ ಮನೆಯ ಸುತ್ತ ಮುತ್ತ ಕಾಣಿಸಿಕೊಂಡರೆ ನೀವು ಹೆದರಿ ಹಿಂಸೆ ಮಾಡದೆ ಉರಗ ರಕ್ಷಕರನ್ನು ಸಂಪರ್ಕಿಸಿ ಅವುಗಳನ್ನು ಸುರಕ್ಷಿತ ಪ್ರದೇಶಕ್ಕೆ ಬಿಡಿಸಿ. ಜೊತೆಗೆ ಆಹಾರ ಸರಪಳಿಯ ಒಂದು ಕೊಂಡಿಯಾದ ಕಾರಣಕ್ಕಾಗಿ ಹಾವುಗಳು ಅಳಿವಿನಂಚಿಗೆ ಬಂದು ನಿಂತಿದೆ. ಹಲವಾರು ಪ್ರಭೇದದ ಹಾವುಗಳನ್ನು ಕಳೆದ ನೂರು ವರ್ಷಗಳಿಂದ ಜೀವಂತವಾಗಿ ಯಾರೂ ಕಂಡಿಲ್ಲ. ಇವನ್ನು ಉಳಿಸಲು ಇವುಗಳ ಆವಾಸ ಸ್ಥಾನವಾದ ಕಾಡುಗಳನ್ನು ಉಳಿಸುವುದು ಅತಿ ಮುಖ್ಯ. ಜೊತೆಗೆ ಹಾವುಗಳ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ತೊಲಗಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಹಾವುಗಳನ್ನು ಉಳಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!
ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ನೀರಿನ ಹರಿವನ್ನು ನಿಯಂತ್ರಿಸುವ ವಿಶೇಷ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಸುಮಾರು 65 ಕಿ.ಮೀ. ಉದ್ದದ ನೀರಿನ ಮಾರ್ಗ ನಿರ್ಮಿಸುವ ಚಿಂತನೆ ನಡೆದಿದೆ.
ನಗರದಲ್ಲಿ ಮಳೆ ಸುರಿದಾಗ ರಸ್ತೆಗಳು ಜಲಾವೃತವಾಗುವುದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀರಿನ ಹರಿವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ.
http://Visit : www.suddidina.com
ಮೆಟ್ರೋ ಮಾರ್ಗದ ಸಮೀಪ ವಿಶೇಷ ವ್ಯವಸ್ಥೆ
ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ಮಧ್ಯದಲ್ಲಿರುವ ಓಲ್ಡ್ ಮದ್ರಾಸ್ ಗರ್ದನ್‌ಸೇತುವೆಯಲ್ಲಿ ಪ್ರಸಕ್ತ ನೀರು ಹರಿವಿಗೆ ಸಂಬಂಧಿಸಿದ ನಿಯಂತ್ರಣ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ತಂಡದ ಪರಿಶೀಲನೆ ಬಳಿಕ ಗರ್ದನ್‌ಸೇತುವೆ ಸುರಕ್ಷತಾ ತಪಾಸಣೆ ನಡೆಸಲಾಗಿದ್ದು, ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸುವುದರಿಂದ ಜಲಾವೃತ ಸಮಸ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ಉಂಟಾಗುವ ಸಮಸ್ಯೆಗಳಿಗೆ ಇದು ಪ್ರಮುಖ ಪರಿಹಾರ ಕ್ರಮವಾಗಬಹುದು.
ರೈಲು ಸಂಚಾರಕ್ಕೂ ಸುರಕ್ಷತೆ
ರೈಲು ಸುರಕ್ಷತಾ ನಿಯಮಗಳ ಪ್ರಕಾರ ತಾಂತ್ರಿಕ ಮೇಲ್ವಿಚಾರಣೆ ನಡೆಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಿರಂತರ ಮಳೆ ಸುರಿದ ಸಂದರ್ಭದಲ್ಲೂ ರೈಲು ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲಾಗಿದೆ.
ರೈಲು ಸಂಪರ್ಕ ಇರುವ ಪ್ರದೇಶಗಳಲ್ಲಿ ನೀರು ಸಂಗ್ರಹವಾಗುವುದರಿಂದ ಹಳಿಗಳ ಸುರಕ್ಷತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ನೀರು ಹರಿವಿನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ರೈಲು ಮೂಲಸೌಕರ್ಯದ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಲಾಗುತ್ತಿದೆ.
ಮುಂದಿನ ಹಂತದಲ್ಲಿ ದೊಡ್ಡ ಯೋಜನೆ
ಈ ನೀರಿನ ನಿರ್ವಹಣಾ ಕಾಮಗಾರಿಯ ಆಚ್ಚೋಬಲದಂದೇ ವಾರದೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ಬಳಿಕ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಮುಂದಿನ ಹಂತದಲ್ಲಿ ಮಳೆ ನೀರು ಸಂಗ್ರಹಣೆ ಹಾಗೂ ನೀರಿನ ಹರಿವಿನ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳೂ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ನಗರದ ವೇಗದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ವಿಸ್ತರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಳೆ ನೀರು ನಿರ್ವಹಣೆ ಬೆಂಗಳೂರಿಗೆ ಅತ್ಯಂತ ಅಗತ್ಯವಾಗಿದೆ. 65 ಕಿ.ಮೀ. ನೀರು ಮಾರ್ಗದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ, ಮಳೆಗಾಲದ ಜಲಾವೃತ ಸಮಸ್ಯೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ.

ದಿನದ ಸುದ್ದಿ
ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!
ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಹೆಚ್ಚಿದ ಕುತೂಹಲ; ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ
ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಜಕೀಯ ಪ್ರವೇಶದ ಕುರಿತು ಇದೀಗ ಚರ್ಚೆ ಜೋರಾಗಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ರವಿಚಂದ್ರನ್ ಭೇಟಿಯಾಗಿದ್ದು, ಈ ಭೇಟಿಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಕುತೂಹಲ ರಾಜಕೀಯ ಹಾಗೂ ಚಿತ್ರರಂಗದ ವಲಯದಲ್ಲಿ ಮೂಡಿದೆ.
ರವಿಚಂದ್ರನ್ ಮತ್ತು ಡಿಕೆ ಶಿವಕುಮಾರ್ ಬಾಲ್ಯದ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳು ಎಂಬುದು ವಿಶೇಷ. ಹೀಗಾಗಿ ಇಬ್ಬರ ಭೇಟಿಯನ್ನು ಕೇವಲ ಸ್ನೇಹಪೂರ್ವಕ ಭೇಟಿ ಎಂದೇ ನೋಡಬೇಕೇ ಅಥವಾ ಇದರ ಹಿಂದೆ ಮತ್ತೇನಾದರೂ ರಾಜಕೀಯ ಬೆಳವಣಿಗೆ ಇದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
http://Visit : www.suddidina.com
ನಾಲ್ಕು ದಶಕಗಳ ಸಿನಿಮಾ ಪಯಣ
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿದ್ದಾರೆ. ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕರಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ, ಇದೀಗ ಅವರಿಗೆ ರಾಜಕೀಯ ಕ್ಷೇತ್ರದಲ್ಲೂ ಅವಕಾಶ ನೀಡುವ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶೇಷವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರದಿಂದ ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ವಿಚಾರ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಡಿಕೆಶಿ ಭೇಟಿಗೆ ಹೊಸ ಅರ್ಥ?
ರವಿಚಂದ್ರನ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಬಾಲ್ಯದ ಗೆಳೆಯನನ್ನು ಭೇಟಿಯಾದ ಸಂತಸವನ್ನು ಡಿಕೆ ಶಿವಕುಮಾರ್ ಹಂಚಿಕೊಂಡಿದ್ದರೂ, ಭೇಟಿಯ ರಾಜಕೀಯ ಆಯಾಮದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸದ್ಯಕ್ಕೆ ಹೊರಬಿದ್ದಿಲ್ಲ.
ಆದರೆ ರವಿಚಂದ್ರನ್ ಅವರನ್ನು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಕರೆತರುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ಅಧಿಕೃತಗೊಂಡರೆ, ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಪ್ರವೇಶಿಸುವ ಮತ್ತೊಬ್ಬ ಪ್ರಮುಖ ವ್ಯಕ್ತಿಯಾಗಿ ರವಿಚಂದ್ರನ್ ಗುರುತಿಸಿಕೊಳ್ಳಲಿದ್ದಾರೆ.
ಅಧಿಕೃತ ಘೋಷಣೆಗಾಗಿ ಕಾಯುವಿಕೆ
ರವಿಚಂದ್ರನ್ ಅವರ ರಾಜಕೀಯ ಪ್ರವೇಶದ ವಿಚಾರ ಸದ್ಯಕ್ಕೆ ಚರ್ಚೆ ಹಾಗೂ ನಿರೀಕ್ಷೆಯ ಹಂತದಲ್ಲಿದೆ. ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬಂದ ಬಳಿಕವಷ್ಟೇ ಈ ಬೆಳವಣಿಗೆಗೆ ಸ್ಪಷ್ಟತೆ ಸಿಗಲಿದೆ.
ಚಿತ್ರರಂಗದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ರವಿಚಂದ್ರನ್ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರೆ, ಅದು ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ರಾಜಕೀಯ ಎರಡರಲ್ಲೂ ಗಮನಾರ್ಹ ಬೆಳವಣಿಗೆಯಾಗಲಿದೆ. ಹೀಗಾಗಿ ಡಿಕೆ ಶಿವಕುಮಾರ್-ರವಿಚಂದ್ರನ್ ಭೇಟಿ ಇದೀಗ ಕುತೂಹಲದ ಕೇಂದ್ರಬಿಂದುವಾಗಿದೆ.

ದಿನದ ಸುದ್ದಿ
ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!
ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ ಕಡಿವಾಣ ಬೀಳುತ್ತಿಲ್ಲ. ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸುವಿಕೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದಾರೆ.
http://Visit : www.suddidina.com
ಕಳೆದ ನಾಲ್ಕು ವರ್ಷಗಳ ಅಂಕಿ-ಅಂಶ ಗಮನಿಸಿದರೆ ರಾಜ್ಯದಲ್ಲಿ ಒಟ್ಟು 5.67 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಬರೋಬ್ಬರಿ ₹2,361.75 ಕೋಟಿ ದಂಡ ಸಂಗ್ರಹಿಸಲಾಗಿದೆ. ಈ ಅಂಕಿ-ಅಂಶಗಳು ರಾಜ್ಯದ ರಸ್ತೆಗಳಲ್ಲಿ ನಿಯಮ ಪಾಲನೆಯ ಸವಾಲು ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸುತ್ತವೆ.
2024ರಲ್ಲಿ ಗರಿಷ್ಠ ಪ್ರಕರಣಗಳ ದಾಖಲು
ವರ್ಷವಾರು ಪ್ರಕರಣಗಳನ್ನು ಗಮನಿಸಿದರೆ, 2023ರಲ್ಲಿ 1.27 ಕೋಟಿ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1.61 ಕೋಟಿಗೆ ಏರಿಕೆಯಾಗಿದೆ. 2025ರಲ್ಲಿ 1.60 ಕೋಟಿ ಪ್ರಕರಣಗಳು ದಾಖಲಾಗಿವೆ. 2026ರಲ್ಲಿ ಇದುವರೆಗೆ 1.17 ಕೋಟಿ ಪ್ರಕರಣಗಳು ದಾಖಲಾಗಿವೆ.
ದಂಡ ಸಂಗ್ರಹದಲ್ಲೂ ವರ್ಷದಿಂದ ವರ್ಷಕ್ಕೆ ದೊಡ್ಡ ಮೊತ್ತ ದಾಖಲಾಗಿದೆ. 2023ರಲ್ಲಿ ₹684.76 ಕೋಟಿ, 2024ರಲ್ಲಿ ₹915.95 ಕೋಟಿ ದಂಡ ಸಂಗ್ರಹವಾಗಿದೆ. 2025 ಮತ್ತು 2026ರ ಅಂಕಿ-ಅಂಶಗಳಲ್ಲೂ ಗಮನಾರ್ಹ ಮೊತ್ತ ದಾಖಲಾಗಿದೆ.
ನಿಯಮ ಉಲ್ಲಂಘನೆಗೆ ಕಠಿಣ ಕಾನೂನು ಕ್ರಮ
ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಅಧಿನಿಯಮದ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾಗದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದರ ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು, ಕೆಎಸ್‌ಆರ್‌ಟಿಸಿ, ಖಾಸಗಿ ಹಾಗೂ ಶಾಲಾ ಬಸ್ ಚಾಲಕರು ಸೇರಿದಂತೆ ವಿವಿಧ ವರ್ಗದ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣವೂ ಜಾಗೃತಿಯ ವೇದಿಕೆ
ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಮೂಲಕವೂ ಸಂಚಾರ ನಿಯಮ ಪಾಲನೆಯ ಮಹತ್ವವನ್ನು ಜನರಿಗೆ ತಲುಪಿಸಲಾಗುತ್ತಿದೆ. ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳ ಕುರಿತು ಪೋಸ್ಟರ್‌ಗಳು ಹಾಗೂ ಜಾಗೃತಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.
ದಂಡದ ಹಣ ಎಲ್ಲಿ ಹೋಗುತ್ತದೆ?
ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗುವ ದಂಡದ ಮೊತ್ತ ಸರ್ಕಾರದ ಸಂಬಂಧಿತ ಲೆಕ್ಕ ಶೀರ್ಷಿಕೆಗೆ ಜಮೆಯಾಗುತ್ತದೆ. ಸಂಚಾರ ಪೊಲೀಸ್ ವಿಭಾಗಕ್ಕೆ ಈ ಹಣವನ್ನು ಸ್ವತಂತ್ರವಾಗಿ ಬಳಸುವ ಅಧಿಕಾರವಿಲ್ಲ. ಸರ್ಕಾರದ ಆದೇಶದಂತೆ ಸಂಗ್ರಹವಾಗುವ ದಂಡದ ಶೇ.50ರಷ್ಟು ಅನುದಾನವನ್ನು ರಸ್ತೆ ಸುರಕ್ಷತಾ ಕಾರ್ಯಗಳಿಗೆ ಬಳಸಲಾಗುತ್ತಿದೆ.

-
ಅಂತರಂಗ7 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ4 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ5 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ4 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ5 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ5 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ5 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ






