ದಿನದ ಸುದ್ದಿ
ಬಿಎಂಎಸ್ ಕಾಲೇಜಿನ ತರಗತಿಗಳು ಆರಂಭ
ಸುದ್ದಿದಿನ ಡೆಸ್ಕ್:ಯಲಹಂಕದ ಆವಲಹಳ್ಳಿಯಲ್ಲಿರುವ ಬಿಎಂಎಸ್ ತಾಂತ್ರಿಕ ಮಹಾ ವಿದ್ಯಾಲಯ ಮತ್ತು ಬಿಎಂಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿ ಪ್ರಥಮ ವರ್ಷದ ಬಿಇ ಮತ್ತು ಬಿಆರ್ಕ್ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು ಅತಿಥಿಗಳಾದ ಡಾ. ಎಸ್.ಕೆ. ಶಿವಕುಮಾರ, ಟ್ರಸ್ಟಿ ಬಿಎಂಎಸ್‍ಇಟಿ ಮತ್ತು ಚೇರ್ಮನ್, ಬಿಓಜಿ ಬಿಎಂಎಸ್‍ಐಟಿ ಮತ್ತು ಬಿಎಂಎಸ್‍ಎಸ್‍ಎ, ಬೆಂಗಳೂರು (ನಿವೃತ್ತ ನಿರ್ದೇಶಕರು, ಇಸ್ರೋ ಉಪಗ್ರಹ ಕೇಂದ್ರ) ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರು. ಮತ್ತು ಅಧ್ಯಕ್ಷರಾಗಿ ಡಾ. ಪಿ. ದಯಾನಂದ ಪೈ, ಟ್ರಸ್ಟಿ, ಬಿ.ಎಂ.ಎಸ್.ಇ.ಟಿ ಮತ್ತು ಚೇರ್ಮನ್, ಬಿಎಂಎಸ್‍ಸಿಇ, ಗೌರವ ಅತಿಥಿಗಳಾಗಿ ಶ್ರೀ. ಎಂ. ಮದನ್À ಗೋಪಾಲ್, ಐಎಎಸ್(ನಿವೃತ್ತ), ಮತ್ತು ಶ್ರೀ ಜೈಸಿಮ್ ಕೆ. ರಾವ್, ಸಂಸ್ಥಾಪಕರು, ಫೌಂಟೇನ್ ಹೆಡ್, ಬೆಂಗಳೂರು, ಮತ್ತು ಶ್ರೀ ಗೌತಮ್ ಕಲತ್ತೂರ್, ಬಿಎಂಎಸ್ ಇನ್ನೋಲ್ಯಾಬ್ಸ್ ಮತ್ತು ಡಾ. ಸಪನಾÀ ಪಾಪು, ನಿರ್ದೇಶಕರು, ಬಿಎಂಎಸ್‍ಎಸ್‍ಎ ಇವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಅತಿಥಿಗಳು ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು. ಸ್ವಾಗತ ಭಾಷಣವನ್ನು ಬಿಎಂಎಸ್‍ಐಟಿ&ಎಂ. ನ ಪ್ರಾಂಶುಪಾಲರಾದ ಡಾ. ಮೋಹನ್ ಬಾಬು ಜಿ.ಎನ್. ಮಾಡಿದರು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮೂರು ವಾರಗಳ ಇಂಡೆಕ್ಷನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ವಿವರಿಸಿದರು. ಡಾ. ಎಸ್.ಕೆ. ಶಿವಕುಮಾರ ಉದ್ಘಾಟಣ ಭಾಷಣದಲ್ಲಿ ಸಂಸ್ಥೆಯನ್ನು ಸ್ವಯತ್ತ ಸ್ಥಾನ ಪಡೆಯಲು ಮತ್ತು ವಿಶ್ವವಿದ್ಯಾಲಯವನ್ನಾಗಿ ಮಾಡಲು ಶ್ರಮಿಸೋಣ ಎಂದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಹಕಾರವನ್ನು ಕೋರಿದರು. ಅತಿಥಿಗಳಿಂದ ವಿಟಿಯು ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ವಿತರಿಸಲಾಯಿತು. ಶ್ರೀ ಎಂ. ಮದನ್ ಗೋಪಾಲ್ ಅವರು ಪ್ರಪಂಚದ ತಾಂತ್ರಿಕ ಕ್ಷೇತ್ರದಲ್ಲಿನ ಬದಲಾವಣೆಯ ವೇಗಕ್ಕನುಗುಣವಾಗಿ ವೈವಿದ್ಯತೆಯ ಆಲೋಚನೆಗಳನ್ನು ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರಲು ಕರೆನೀಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಡಾ. ಪಿ. ದಯಾನಂದ ಪೈ ಅವರು, ವಿದ್ಯಾರ್ಥಿಗಳನ್ನುದ್ದೇಶಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಆಸಕ್ತಿ, ಸುಲೋಚನೆ, ಸಮಯದ ಸದುಪಯೋಗ ಪಡಿಸಿಕೊಂಡು ಉತ್ತಮ ತಂತ್ರಜ್ಞರಾಗಲು ಹಿತವಚನ ನುಡಿದರು. ವಿದ್ಯಾರ್ಥಿಗಳು ಅವರ ಉತ್ತಮ ಜೀವನಕ್ಕಾಗಿ ಮಾದರಿ ವ್ಯಕ್ತಿಗಳ ಅನುಕರಿಸಿ, ಅವರಂತೆಯೇ ಉತ್ತಮ ಪ್ರಜೆಗಳಾಗಿ ಮುಂದೆಬರಲು ಕರೆನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಸಪನಾ ಪಾಪು, ವಂದನಾರ್ಪಣೆ ಅರ್ಪಿಸಿದರು. ಕೊನೆಯದಾಗಿ ರಾಷ್ಟ್ರಗೀತೆಯೊಂದಿಗೆ ಕಾಂiÀರ್iಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ದಿನದ ಸುದ್ದಿ
ಹೊಲಿಗೆ, ವೀಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಹೊಲಿಗೆ ಹಾಗೂ ವಿಡಿಯೋಗ್ರಾಫಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೊಲಿಗೆ ತರಬೇತಿಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿ 18 ರಿಂದ 40 ವರ್ಷದೊಳಗಿರಬೇಕು. ವಿಡಿಯೋಗ್ರಾಫಿ ತರಬೇತಿಗೆ ಎಸ್.ಎಸ್.ಎಲ್.ಸಿ ಉತ್ತೀರ್ಣ, ಅನುತ್ತೀರ್ಣರಾಗಿದ್ದು 18 ರಿಂದ 40 ವರ್ಷ ವಯೋಮಾನದವರಾಗಿರಬೇಕು.
ಅರ್ಜಿಯನ್ನು ಕಚೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 25 ರೊಳಗೆ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ 08192-237480 ದೂರವಾಣಿಗೆ ಸಂಪರ್ಕಿಸಲು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಅಧಿಸೂಚನೆ ರದ್ದು
ಸುದ್ದಿದಿನ,ಚನ್ನಗಿರಿ:ತಾಲ್ಲೂಕಿನಲ್ಲಿ ಖಾಲಿ ಇದ್ದ 16 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 52 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು ಇದನ್ನು ರದ್ದುಪಡಿಸಲಾಗಿದೆ. ಮುಂದೆ ನಡೆಯುವ ನೇಮಕಾತಿ ಬಗ್ಗೆ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ರಾಜಾನಾಯ್ಕ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಸ್ಕಾಂನಿಂದ ಉಚಿತ ಡಿಜಿಟಲ್ ಮೀಟರ್ ಅಳವಡಿಕೆ
ಸುದ್ದಿದಿನ,ದಾವಣಗೆರೆ:ಜಗಳೂರು ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಹಳೇ ವಿದ್ಯುತ್ ಮೀಟರ್ಗಳನ್ನು ತೆಗೆದು ಉಚಿತವಾಗಿ ಹೊಸ ಡಿಜಿಟಲ್ ಮೀಟರ್ಗಳನ್ನು ಅಳವಡಿಸಲಾಗುತ್ತಿದ್ದು ಬೆಸ್ಕಾಂ ಗ್ರಾಹಕರ ಬಳಿ ಹಳೆ ಮಾಪಕ ಎಲೆಕ್ಟ್ರೋ ಮೆಕ್ಯಾನಿಲ್ ಬದಲಾಗಿ ಎಲೆಕ್ಟ್ರೋ ಸ್ಟ್ಯಾಟಿಕ್ ಡಿಜಿಟಲ್ ಮಾಪಕ ಅಳವಡಿಸಿಕೊಳ್ಳಲು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಜನ್ಮದಿನ ; ದೇಶದೆಲ್ಲೆಡೆ ಸ್ಮರಣೆ
-
ದಿನದ ಸುದ್ದಿ6 days ago
ಬಾಪೂಜಿ ಪ್ರಬಂಧ ಸ್ಪರ್ಧೆ ; ಸಚಿವರಿಂದ ವಿಜೇತರಿಗೆ ನಗದು ಬಹುಮಾನ ವಿತರಣೆ
-
ದಿನದ ಸುದ್ದಿ4 days ago
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ6 days ago
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಪ್ರಾರಂಭ ; 2027 ಕ್ಕೆ ಜನವರಿಯೊಳಗೆ ರೈಲು ಸಂಚಾರಕ್ಕೆ ಕ್ರಮ : ಸಚಿವರಾದ ವಿ.ಸೋಮಣ್ಣ
-
ದಿನದ ಸುದ್ದಿ2 days ago
ಗುರುಕುಲ ಶಾಲೆಯ ಮಕ್ಕಳೊಂದಿಗೆ ಬೆರೆತ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ7 days ago
KEA | ನಾಳೆ ಪಿಎಸ್ಐ ಪರೀಕ್ಷೆ, ದಾವಣಗೆರೆಯಲ್ಲಿ ಸುಗಮ ಪರೀಕ್ಷೆ ನಡೆಸಲು ಕಟ್ಟೆಚ್ಚರ ; ಇಲ್ಲಿದೆ ಸಂಪೂರ್ಣ ಮಾಹಿತಿ, ಮಿಸ್ ಮಾಡ್ದೆ ಓದಿ
-
ದಿನದ ಸುದ್ದಿ4 days ago
ಇನ್ನು ನಾಲ್ಕು ದಿನಗಳಲ್ಲಿ ಎರಡು ಕಂತಿನ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ
-
ದಿನದ ಸುದ್ದಿ4 days ago
ಗ್ರಂಥಾಲಯ ಇಲಾಖೆಯಿಂದ 2021 ರ ಮೊದಲ ಆವೃತಿಯಲ್ಲಿ ಆಯ್ಕೆಯಾದ ಪುಸ್ತಕಗಳ ಪ್ರಕಟ