ದಿನದ ಸುದ್ದಿ
ಚಂದನ ನಾಡಿನ ಹೊಸ ಬೆಳಗು ಚೈತ್ರಾ ಭವಾನಿಗೆ ‘ರಂಗ ಸಂಸ್ಕೃತಿ ಸಿರಿ’ ಪ್ರಶಸ್ತಿ

ಸುದ್ದಿದಿನ ವಿಶೇಷ : ಬಹುಮುಖ ಪ್ರತಿಭೆ ಚೈತ್ರಾ ಭವಾನಿ ಅವರಿಗೆ ಇತ್ತೀಚೆಗೆ ರಂಗ ಸಂಸ್ಕೃತಿ ಸಂಸ್ಥೆಯಿಂದ 2018ನೇ ಸಾಲಿನ “ರಂಗ ಸಂಸ್ಕೃತಿ ಸಿರಿ” ಪ್ರಶಸ್ತಿನೀಡಿ ಗೌರವಿಸಲಾಯಿತು.
ಬೆಂಗಳೂರಿನ ಉದಯ ಭಾನು ಕಲಾಸಂಘದ ಸಭಾಂಗಣದಲ್ಲಿ ಆಯೋಜಸಿದ್ದ ರಂಗಸಂಸ್ಕøತಿ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೈತ್ರಾ ಭವಾನಿ ಅವರ ರಂಗಭೂಮಿ, ಮಾಧ್ಯಮ ಮತ್ತು ಅವರ ಸಾಮಾಜಿಕ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಅಂದಹಾಗೆ ಈ ಚೈತ್ರಾ ಭವಾನಿ ಅವರು ಮೂಲತಃ ಮೈಸೂರು ಜಿಲ್ಲೆಯ ತಿರುಮಕೊಡಲು ನರಸೀಪುರ ಗ್ರಾಮದವರು. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಮೈಸೂರು ವಿಶ್ವ ವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ (ಎಂ.ಎ) ಪದವೀಧರೆ. ಚೈತ್ರಾ ಭವಾನಿ ವಿದ್ಯಾರ್ಥಿದೆಸೆಯಿಂದಲೇ ಸ್ಥಳೀಯ ಟಿ.ವಿ ಮತ್ತು ಪತ್ರಿಕೆಯಲ್ಲಿ ಹಾಗೇ ರೆಡ್ ಎಫ್.ಎಂ ನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸುತ್ತಾ, ಸ್ವಾವಲಂಬಿಯಾಗಿ ; ಸ್ವಾಭಿಮಾನದ ಸೀಮೆಯಲ್ಲಿ ಜೀವನ ನಿರ್ವಹಿಸುತ್ತಾ ಬಂದಿದ್ದಾರೆ.
ನಂತರ ಕರ್ನಾಟಕದ ಮೊದಲ ಕನ್ನಡ ನ್ಯೂಸ್ ಚಾನೆಲ್ ಟಿ.ವಿ 9 ನಲ್ಲಿ ಇವರ ‘ಹಳ್ಳಿ ಕಟ್ಟೆ’ ಎಂಬ ರಾಜಕೀಯ ವಿಡಂಬನಾತ್ಮ ಕಾರ್ಯಕ್ರಮದಲ್ಲಿ ಚೈತ್ರಾ ಭವಾನಿ ನಿರ್ವಹಿಸಿದ ‘ನಿಂಗಿ’ ಎಂಬ ಪಾತ್ರದ ಮೂಲಕ ಕರ್ನಾಟಕದ ಪ್ರೇಕ್ಷಕರ ಮನ-ಮನೆ ಗೆಲ್ಲುವುದರಲ್ಲಿ ಯಶಸ್ವಿಯಾದರು . ಅಷ್ಟೇ ಅಲ್ಲದೆ ಹಳ್ಳಿ ಕಟ್ಟೆ ಕಾರ್ಯಕ್ರಮವನ್ನು ವಿದೇಶಗಳಲ್ಲಿಯೂ ಕೂಡ ಪ್ರದರ್ಶನ ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ. ಹಾಗೇನೆ ಚೈತ್ರಾ ಭವಾನಿ ಟೈಮ್ಸ್ ಗ್ರೂಪ್ ನ ವಿಜಯ ನೆಕ್ಸ್ಟ್, ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ ಅಂಕಣಕಾರರಾಗಿ ತಮ್ಮ ವಿಶಿಷ್ಟ ಬರಹದ ಮೂಲಕ ಬರಹಗಾರ್ತಿಯಾಗಿಯೂ ತಮ್ಮನ್ನು ಗುರುತಿಸಿಕೊಡಿದ್ದಾರೆ. ಇಷ್ಟಕ್ಕೆ ಇವರ ಪ್ರತಿಭೆ ಮೊಟಕು ಗೊಳ್ಳುವುದಿಲ್ಲ, ಚೈತ್ರಾ ಭವಾನಿ ಗಾಯಕಿ,ಭಾಷಣಗಾರ್ತಿ, ವಿವಿಧ ವೇಶಗಳ ಸ್ಫರ್ಧೆ, ಮಿಮಿಕ್ರಿ ಮತ್ತು ರಂಗಕರ್ಮಿಯಾಗಿ, ಉಪನ್ಯಾಸಕರಾಗಿ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ.
ಚೈತ್ರಾ ಭವಾನಿ ದೂರದರ್ಶನ ಚಂದನವಾಹಿನಿಯಲ್ಲಿ ವಿವಿಧ ಕ್ಷೇತ್ರದಲ್ಲಿನ ಸಾಧಕರೊಂದಿಗಿನ ಸಂದರ್ಶನ ಕಾರ್ಯಕ್ರಮವಾದ’ ಬೆಳಗು’ ವಿನಲ್ಲಿ ನಿರೂಪಕಿಯಾಗಿ, ಹಾಗೂ 2008ರಲ್ಲಿ ಮೈಸೂರಿನ ಯುವರಂಗೋತ್ಸವದ ಮೂಲಕ ಹಲವು ನಾಟಕಗಳಲ್ಲಿ ನಟಿಸಿರುವ ಇವರು ಪುಟ್ಟ ದೇವರ ಹೂಗಳು, ಬದುಕಲು ಕಲಿಯಿರಿ, ನಾಟ್ಯರಾಣಿ ಶಾಂತಲಾ, ಟೀ ಹೌಸ್, ರೋಮಿಯೋ-ಜೂಲಿಯೆಟ್ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ರಂಗ ಭೂಮಿಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಹೊರ ರಾಜ್ಯಗಳಲ್ಲಿಯೂ ಸಹ ತಮ್ಮ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ನಾಟಕದ ಜೊತೆಗೆ ಸಿನೆಮಾದ ನಂಟನ್ನೂ ಬೆಳೆಸಿ ಕೊಂಡಿರುವ ಇವರು ಕನ್ನಡದ ಸಿನೆಮಾಗಳಲ್ಲಿಯ್ಯೂ ಕೂಡ ಅಭಿನಯಿಸಿದ್ದಾರೆ.
ಪ್ರಸ್ತುತ ಚೈತ್ರಾ ಭವಾನಿ ‘ದಿಗ್ವಿಜಯಾ 24*7 ನ್ಯೂಸ್ ಚಾನೆಲ್’ ನ ಕಾರ್ಯಕ್ರಮ ನಿರ್ಮಾಪಕಿ( ಪ್ರೋಗ್ರಾಂ ಪ್ರೋಡ್ಯೂಸರ್) ಯಾಗಿ ಹಾಗೂ ಇದೇ ಚಾನೆಲ್ ನಲ್ಲಿ ‘ಊರ ಉಸಾಬರಿ’ ಎಂಬ ರಾಜಕೀಯ ವಿಡಂಬನಾತ್ಮಕ ಕಾರ್ಯಕ್ರಮದಲ್ಲಿ ಅಭಿನಯಿಸುವುದರ ಜೊತೆಗೆ ಸ್ಕ್ರಿಪ್ಟ್ ರೈಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಕಲೆಗಳನ್ನು ಅವಾಹಿಸಿಕೊಂಡಿರುವ ಚೈತ್ರಾ ಭವಾನಿಯವರನ್ನು ‘ಬಹುಮುಖ ಪ್ರತಿಭೆ’; ‘ಸಕಲಕಲಾವಲ್ಲಭೆ’ ಎಂದರೆ ತಪ್ಪಾಗಲಾರದು.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ದಿನದ ಸುದ್ದಿ
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. “ಪ್ರವೇಶ ಪತ್ರ” ತೋರಿಸಿ, ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನ್ನಡ ಸಾಹಿತ್ಯ ಪರಿಷತ್ | ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟ

ಸುದ್ದಿದಿನ, ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು 2022ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಪ್ರಶಸ್ತಿಯು 51 ಸಾವಿರ ರೂಪಾಯಿ ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ಸುದ್ದಿದಿನ ಡೆಸ್ಕ್ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಮಿತಿ ಅನುಮೋದಿಸಿದೆ.
ಸಾಮಾನ್ಯ ದರ್ಜೆ ಭತ್ತಕ್ಕೆ ಕ್ವಿಂಟಲ್‌ಗೆ 2 ಸಾವಿರದ 40 ರೂಪಾಯಿಯಿಂದ 2ಸಾವಿರದ 183 ರೂಪಾಯಿಗೆ ಹಾಗೂ ’ಎ’ ದರ್ಜೆ ಭತ್ತಕ್ಕೆ 2 ಸಾವಿರದ 60 ರಿಂದ 2 ಸಾವಿರದ 203 ರೂಪಾಯಿಗೆ ಹೆಚ್ಚಿಸಲಾಗಿದೆ.
ರಾಗಿಗೆ ಪ್ರತಿ ಕ್ವಿಂಟಲ್‌ಗೆ 3 ಸಾವಿರದ 578 ರೂಪಾಯಿಯಿಂದ 3 ಸಾವಿರದ 846 ರೂಪಾಯಿಗೆ ಹೆಚ್ಚಿಸಲಾಗಿದೆ. ತೊಗರಿಗೆ ಪ್ರತಿ ಕ್ವಿಂಟಲ್‌ಗೆ 6 ಸಾವಿರದ 600 ರಿಂದ 7 ಸಾವಿರ ರೂಪಾಯಿಗೆ, ಹೆಸರು ಕಾಳಿಗೆ ಪ್ರತಿ ಕ್ವಿಂಟಲ್‌ಗೆ 7 ಸಾವಿರದ 755 ರಿಂದ 8 ಸಾವಿರದ 558 ರೂಪಾಯಿಗೆ, ಪ್ರತಿ ಕ್ವಿಂಟಲ್ ಉದ್ದಿಗೆ 6 ಸಾವಿರದ 600 ರಿಂದ 6 ಸಾವಿರದ 950 ರೂಪಾಯಿಗೆ ಹೆಚ್ಚಿಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ 2022-23ನೇ ಸಾಲಿಗೆ 330.5 ದಶಲಕ್ಷ ಟನ್‌ನಷ್ಟು ಆಹಾರ ಧಾನ್ಯ ಉತ್ಪಾದನೆ ಅಂದಾಜಿಸಲಾಗದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಇಲ್ಲಿದೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಂಪ್ಲೀಟ್ ಡೀಟೆಲ್ಸ್
-
ದಿನದ ಸುದ್ದಿ6 days ago
ಐದು ಗ್ಯಾರಂಟಿ | ಫಲಾನುಭವಿಗಳ ಆಯ್ಕೆ ಮಾನದಂಡ
-
ಲೈಫ್ ಸ್ಟೈಲ್4 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ6 days ago
ಈ ವರ್ಷವೇ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಚಿಂತನೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
-
ದಿನದ ಸುದ್ದಿ6 days ago
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ
-
ದಿನದ ಸುದ್ದಿ6 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ದಾವಣಗೆರೆ | ಶತಮಾನದ ಕೆ.ಆರ್.ಪೇಟೆ ಸರ್ಕಾರಿ ಶಾಲೆಗೆ ಡಿಸಿ ಶಿವಾನಂದ ಕಾಪಶಿ ಭೇಟಿ ; ಕಟ್ಟಡದ ಗುಣಮಟ್ಟದ ವರದಿ ನೀಡಲು ಇಂಜಿನಿಯರ್ಗೆ ಸೂಚನೆ